ಗ್ರೂಪ್ ಹೆಲ್ತ್ ಇನ್ಶೂರೆನ್ಸ್

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಎಂಬುದು ವ್ಯಕ್ತಿಗಳ ಗುಂಪಿಗೆ ಒದಗಿಸುವ ಒಟ್ಟಾರೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಈ ಪ್ಲಾನ್ ಕಂಪನಿಗಳು, ಸಂಸ್ಥೆಗಳು, ಬ್ಯಾಂಕುಗಳು ಮತ್ತು ಹೌಸಿಂಗ್ ಸೊಸೈಟಿಗಳು ತಮ್ಮ ಸಂಪೂರ್ಣ ಸಿಬ್ಬಂದಿ ಅಥವಾ ಸದಸ್ಯರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಅನುಮತಿ ನೀಡುತ್ತದೆ. ಉದ್ಯೋಗದಾತರು ಈ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸುತ್ತಾರೆ, ಹಾಗೆಯೇ ಎಲ್ಲಾ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಪ್ರಯೋಜನಗಳನ್ನು ಪಡೆಯಬಹುದು. ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಉದ್ಯೋಗಿಗಳು ಆರೋಗ್ಯ ಕವರೇಜ್ ಪ್ರಯೋಜನಗಳನ್ನು ಪಡೆದಾಗ, ಉದ್ಯೋಗದಾತರು ಕಂಪನಿಯಲ್ಲಿ ಉದ್ಯೋಗಿಗಳು ಉಳಿದುಕೊಳ್ಳುವ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ, ಉದ್ಯೋಗದಾತರು ತನ್ನ ಉದ್ಯೋಗಿಗಳಿಗೆ ಅಂತಹ ಪಾಲಿಸಿಗಳನ್ನು ಒದಗಿಸುವ ಮೂಲಕ ತೆರಿಗೆ ಪ್ರಯೋಜನಗಳನ್ನು ಕೂಡ ಪಡೆಯುತ್ತಾರೆ

ಫೀಚರ್‌ಗಳು ಮತ್ತು ಪ್ರಯೋಜನಗಳು

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು ಇಲ್ಲಿವೆ:

 • ಸಮಗ್ರ ಕವರೇಜ್

  ತಜ್ಞರು, ಆಂಬ್ಯುಲೆನ್ಸ್, ಔಷಧಿಗಳ ವೆಚ್ಚ ಮತ್ತು ಇನ್ನೂ ಹೆಚ್ಚಿನ ವೆಚ್ಚಗಳನ್ನು ಒಳಗೊಂಡಂತೆ ವೈದ್ಯಕೀಯ ವೆಚ್ಚಗಳಿಗೆ ಈ ಪಾಲಿಸಿಯು ಸಮಗ್ರ ಕವರೇಜನ್ನು ಒದಗಿಸುತ್ತದೆ.

 • ವೈದ್ಯಕೀಯ ಪ್ರಯೋಜನಗಳು

  ಆಕಸ್ಮಿಕ ಆಸ್ಪತ್ರೆ ದಾಖಲಾತಿ ಮತ್ತು ದೈನಂದಿನ ಆಸ್ಪತ್ರೆ ಪ್ರಯೋಜನಗಳನ್ನು ಒಳಗೊಂಡಂತೆ ಹಲವಾರು ಶ್ರೇಣಿಯ ಆರೋಗ್ಯ ಸಮಸ್ಯೆಗಳಿಂದಾಗಿ ಉಂಟಾಗುವ ವೈದ್ಯಕೀಯ ವೆಚ್ಚಗಳ ವಿರುದ್ಧ ಈ ಪಾಲಿಸಿಯು ಸಮಗ್ರ ಕವರೇಜನ್ನು ಒದಗಿಸುತ್ತದೆ.

 • Cover dependents

  ಅವಲಂಬಿತರನ್ನು ಕವರ್ ಮಾಡುತ್ತದೆ

  ಗ್ರೂಪ್/ಎಂಪ್ಲಾಯಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಉದ್ಯೋಗಿಯ ಸಂಗಾತಿ ಮತ್ತು ಮಕ್ಕಳನ್ನು ಸಮಂಜಸವಾದ ಹೆಚ್ಚುವರಿ ವೆಚ್ಚದಲ್ಲಿ ಕವರ್ ಮಾಡುವ ಆಯ್ಕೆಯನ್ನು ಒದಗಿಸುತ್ತದೆ.

 • ಸಮಯ ಮತ್ತು ಹಣವನ್ನು ಉಳಿಸಿ

  ಸಮಯ ಮತ್ತು ಹಣವನ್ನು ಉಳಿಸಲು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಪರಿಪೂರ್ಣವಾಗಿವೆ. ಇದು ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ರೀತಿಯ ಇನ್ಶೂರೆನ್ಸ್‌ನಲ್ಲಿ, ಇನ್ಶೂರ್ ಮಾಡಿದ ಗುಂಪು ರಿಯಾಯಿತಿಗಳು ಮತ್ತು ಮನ್ನಾಗಳನ್ನು ಕೂಡ ಪಡೆಯುತ್ತದೆ.

 • ನಗದು ರಹಿತ ಕ್ಲೈಮ್‌ಗಳು

  ಎಲ್ಲಾ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗಾಗಿ ನಗದುರಹಿತ ಕ್ಲೈಮ್‌ಗಳ ಸೌಲಭ್ಯವನ್ನು ಪಡೆಯಿರಿ.

 • ಫ್ಲೆಕ್ಸಿಬಲ್ ನಿಯಮಗಳು

  ನಿಮ್ಮ ಅಗತ್ಯಗಳು ಮತ್ತು ಗ್ರೂಪ್ ಗಾತ್ರದ ಪ್ರಕಾರ ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿ.

 • Education loan scheme

  ಆನ್ಲೈನ್ ಅಪ್ಲೈ ಮಾಡಿ

  ಕೆಲವು ಸುಲಭ ಹಂತಗಳೊಂದಿಗೆ ನೀವು ಗ್ರೂಪ್/ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದು.

 • ವಿಸ್ತರಿತ ಪ್ರಯೋಜನಗಳು

  ಆ್ಯಡ್-ಆನ್ ಕವರ್ ಮೂಲಕ ಮುಂಚಿತ ಅಸ್ತಿತ್ವದಲ್ಲಿರುವ ರೋಗಗಳಿಗೆ ಅಥವಾ ಹೆರಿಗೆ ವೆಚ್ಚಗಳಿಗೆ ವೈದ್ಯಕೀಯ ಕವರ್ ಪಡೆಯಿರಿ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಒಳಗೊಳ್ಳುವಿಕೆಗಳು

ಒಂದು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಈ ಎಲ್ಲಾ ವಿಷಯಗಳನ್ನು ಕವರ್ ಮಾಡುತ್ತದೆ:

 • ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಸದಸ್ಯರ ಗುಂಪನ್ನು ಕವರ್ ಮಾಡುತ್ತದೆ.
 • ಇದು ಅನಾರೋಗ್ಯಗಳು, ರೋಗಗಳು ಮತ್ತು ಅಪಘಾತಗಳಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ಶುಲ್ಕಗಳನ್ನು ಸಹ ಕವರ್ ಮಾಡುತ್ತದೆ.
 • ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಸದಸ್ಯರ ಸಂಗಾತಿಯನ್ನು ಮತ್ತು ಮೂರು ತಿಂಗಳಿಂದ 25 ವರ್ಷಗಳ ನಡುವಿನ ಮೂರು ಮಕ್ಕಳವರೆಗೆ, ಅಥವಾ ಹೆಚ್ಚುವರಿ ವೆಚ್ಚಕ್ಕಾಗಿ ಇತರ ಅವಲಂಬಿತರನ್ನು ಸೇರಿಸಬಹುದು.
 • ಈ ಪಾಲಿಸಿಯು ನಗದುರಹಿತ ಸೌಲಭ್ಯಗಳನ್ನು ಮತ್ತು ಆಸ್ಪತ್ರೆಯೊಂದಿಗೆ ನೇರ ಖರ್ಚುಗಳನ್ನು ಒದಗಿಸುತ್ತದೆ.
 • ವಾಸ ಸ್ಥಾನದ ವೆಚ್ಚಗಳನ್ನು ಕೂಡ ಪಡೆಯಬಹುದು.
 • ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್ ಅಥವಾ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಪ್ರತಿ ಕಂಪನಿಯು ವಿವಿಧ ಉದ್ಯೋಗಿಗಳ ಶಕ್ತಿಯನ್ನು ಹೊಂದಿರುವುದರಿಂದ ಬೆಲೆಯು ಕಂಪನಿಯಿಂದ ಕಂಪನಿಗೆ ಭಿನ್ನವಾಗಿರುತ್ತವೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಹೊರಗಿಡುವಿಕೆಗಳು

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಹೊರಗಿಡುವಿಕೆಗಳು ಇಲ್ಲಿವೆ:

 • ಮೊದಲೇ ಇರುವ ಅನಾರೋಗ್ಯಗಳನ್ನು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
 • ಕಡ್ಡಾಯ ವೈದ್ಯಕೀಯ ಕಾರ್ಯವಿಧಾನಗಳು ಅಥವಾ ಪರೀಕ್ಷೆಗಳನ್ನು ಒಳಗೊಂಡಿಲ್ಲ.
 • ಮೇಲೆ ತಿಳಿಸಿದ ವಯಸ್ಸಿನ ಗುಂಪುಗಳನ್ನು ಹೊರತುಪಡಿಸಿ ಉದ್ಯೋಗದಾತರ ಹೆಲ್ತ್ ಇನ್ಶೂರೆನ್ಸ್ ಅಥವಾ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒಳಗೊಂಡಿಲ್ಲ.
 • ಯುದ್ಧದಿಂದ ಗಾಯ ಅಥವಾ ಅನಾರೋಗ್ಯವನ್ನು ಕೂಡ ಪರಿಗಣಿಸಲಾಗುವುದಿಲ್ಲ.
 • ಕಂಪನಿಗಳ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ವೈದ್ಯರು ಅದನ್ನು ಶಿಫಾರಸು ಮಾಡಿದರೂ ವೀಲ್‌ಚೇರ್, ಲೆನ್ಸ್‌ಗಳು ಮುಂತಾದ ಬಾಹ್ಯ ಬಾಳಿಕೆ ಬರುವ ವಸ್ತುಗಳನ್ನು ಒಳಗೊಂಡಿಲ್ಲ.
 • ದಂತ ಮತ್ತು ಗರ್ಭಧಾರಣೆ ಸಂಬಂಧಿತ ಚಿಕಿತ್ಸೆಗಳನ್ನು ಕೂಡ ಒಳಗೊಂಡಿಲ್ಲ.

ಬಜಾಜ್ ಫೈನಾನ್ಸ್‌ನಿಂದ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು

ಬಜಾಜ್ ಫೈನಾನ್ಸ್ ದೇಶದ ಅತ್ಯಂತ ವೈವಿಧ್ಯಮಯ ಬ್ಯಾಂಕಿಂಗ್ ಅಲ್ಲದ ಸಂಸ್ಥೆಯಾಗಿದೆ, ಗ್ರಾಹಕ, ವಾಣಿಜ್ಯ ಮತ್ತು SME ಫೈನಾನ್ಸ್‌ನಲ್ಲಿ ಅನೇಕ ಪ್ರಾಡಕ್ಟ್ ಲೈನ್‌ಗಳನ್ನು ಹೊಂದಿದೆ, ಇದು ಕೆಟಗರಿಯಲ್ಲಿನ ಅತ್ಯಂತ ಲಾಭದಾಯಕ ಕಂಪನಿಗಳಲ್ಲಿ ಒಂದಾಗಿದೆ.

ಕ್ಲೈಮ್ ಮಾಡುವುದು ಹೇಗೆ

ನಗದುರಹಿತ ಕ್ಲೈಮ್

 • ದೇಶದಲ್ಲಿ ಎಲ್ಲಿಯಾದರೂ ಪಾಲುದಾರ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಯ ಪ್ರಯೋಜನವನ್ನು ನೀವು ಪಡೆಯಬಹುದು. ಕ್ಲೈಮ್ ಫೈಲ್ ಮಾಡುವ ಪ್ರಕ್ರಿಯೆಯು ಈ ರೀತಿಯಾಗಿದೆ:
 • ಮೊದಲು, ನೀವು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ಬಯಸುವ ನಗರದಲ್ಲಿ ಪಾಲುದಾರರ ನೆಟ್ವರ್ಕ್ ಆಸ್ಪತ್ರೆಯನ್ನು ಹುಡುಕಿ (ಉದಾ: Aditya Birla).
 • 48 ಗಂಟೆಗಳ ಒಳಗೆ (ತುರ್ತು ಆಸ್ಪತ್ರೆ ದಾಖಲಾತಿ) ಮತ್ತು ಯೋಜಿತ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ 3 ದಿನಗಳ ಮೊದಲು ವಿಮಾದಾತರಿಗೆ ತಿಳಿಸಿ.
 • ಆಸ್ಪತ್ರೆಗೆ ಭೇಟಿ ನೀಡುವಾಗ, ರೋಗಿಯ ಇನ್ಶೂರೆನ್ಸ್ ನಗದುರಹಿತ ಕಾರ್ಡ್ ಅಥವಾ ಪಾಲಿಸಿ ವಿವರಗಳನ್ನು ಕೊಂಡೊಯ್ಯಿರಿ.
 • ಆಸ್ಪತ್ರೆಯ ಇನ್ಶೂರೆನ್ಸ್ ಡೆಸ್ಕಿನಲ್ಲಿ ಹೆಲ್ತ್ ಇನ್ಶೂರೆನ್ಸ್ ನಗದುರಹಿತ ಕಾರ್ಡ್ ಮತ್ತು ಮಾನ್ಯ ID ಪುರಾವೆಯನ್ನು ತೋರಿಸಿ.
 • ಆಸ್ಪತ್ರೆಯಲ್ಲಿ ಸರಿಯಾಗಿ ಲಭ್ಯವಿರುವ ಪೂರ್ವ-ಅಧಿಕೃತ ಕೋರಿಕೆಯನ್ನು ಭರ್ತಿ ಮಾಡಿ ಮತ್ತು ಅದನ್ನು ಆಸ್ಪತ್ರೆಗೆ ಸಲ್ಲಿಸಿ.
 • ತ್ವರಿತ ಕ್ರಮಕ್ಕಾಗಿ, ಅಧಿಕೃತ ವೆಬ್‌ಸೈಟ್‌ನಲ್ಲಿ ಮನವಿ ಫಾರ್ಮ್ ಭರ್ತಿ ಮಾಡಿ ಮತ್ತು ವಿಮೆ ಮಾಡಿದವರಿಗೆ ತಿಳಿಸಿ. ನಿಮ್ಮ ಕೋರಿಕೆಯನ್ನು ರಿವ್ಯೂ ಮಾಡಲಾಗುವುದರಿಂದ ನಿರ್ಧಾರಕ್ಕಾಗಿ ಕಾಯಿರಿ.
 • ಕೋರಿಕೆಯನ್ನು ಪಡೆದ ನಂತರ ವಿಮಾದಾತರು 2 ಗಂಟೆಗಳವರೆಗಿನ ಸಮಯವನ್ನು ತೆಗೆದುಕೊಳ್ಳಬಹುದು ಮತ್ತು ಇಮೇಲ್ ಮತ್ತು SMS ಮೂಲಕ ನಿರ್ಧಾರದ ಬಗ್ಗೆ ನಿಮಗೆ ತಿಳಿಸಬಹುದು.
 • ನೀವು ಆನ್ಲೈನ್ ಸ್ಟೇಟಸ್ ಅನ್ನು ಕೂಡ ಪರಿಶೀಲಿಸಬಹುದು. ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.

ಮೊತ್ತ ಮರಳಿಸುವಿಕೆ ಕ್ಲೈಮ್:

 • ತುರ್ತು ದಾಖಲಾತಿ ಸಂದರ್ಭದಲ್ಲಿ, ನೀವು 48 ಗಂಟೆಗಳ ಒಳಗೆ ವಿಮಾದಾತರಿಗೆ ಸೂಚಿಸಬೇಕು ಮತ್ತು ಮುಂಚಿತ-ಅಧಿಕಾರವನ್ನು ನಮ್ಮಿಂದ ನೀಡಲಾಗದಿದ್ದರೆ ಆಸ್ಪತ್ರೆಗೆ ನೇರವಾಗಿ ಶುಲ್ಕಗಳನ್ನು ಪಾವತಿಸಬೇಕು.
 • ಕ್ಲೈಮ್ ಡಾಕ್ಯುಮೆಂಟ್‌ಗಳ ಸಂಗ್ರಹ ಮತ್ತು ಸಲ್ಲಿಕೆ- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 15 ದಿನಗಳ ಒಳಗೆ ಕೆಳಗೆ ನಮೂದಿಸಿದ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಕಳುಹಿಸಿ.
 • ಡಾಕ್ಯುಮೆಂಟ್‌ಗಳನ್ನು ರಿವ್ಯೂ ಮಾಡಿದ ನಂತರ, ವಿಮಾದಾತರು ನಿಯಮ ಮತ್ತು ಪಾಲಿಸಿಯ ಪ್ರಕಾರ ಅದನ್ನು ಅನುಮೋದಿಸುತ್ತಾರೆ ಅಥವಾ ತಿರಸ್ಕರಿಸುತ್ತಾರೆ.
 • ಕೋರಿಕೆಯನ್ನು ಅನುಮೋದಿಸಿದರೆ, ವಿಮಾದಾತರು ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟಿಗೆ NEFT ಮೂಲಕ ಮರುಪಾವತಿ ಮೊತ್ತವನ್ನು ಕಳುಹಿಸುತ್ತಾರೆ.
 • ಕೋರಿಕೆಯನ್ನು ತಿರಸ್ಕರಿಸಿದರೆ, ಅದನ್ನು ನಿಮ್ಮ ನೋಂದಾಯಿತ ಕಾಂಟಾಕ್ಟ್ ಫೋನ್ ನಂಬರ್ ಮತ್ತು ಇಮೇಲ್ id ಗೆ ತಿಳಿಸಲಾಗುತ್ತದೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವುದು ಹೇಗೆ

ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವ ಹಂತಗಳು ಇಲ್ಲಿವೆ:

ಹಂತ1: ಮೇಲ್ಗಡೆ 'ಈಗಲೇ ಅಪ್ಲೈ ಮಾಡಿ' ಬಟನ್ ಕ್ಲಿಕ್ ಮಾಡಿ

ಹಂತ2: ನಿಮ್ಮ ವೈಯಕ್ತಿಕವಾಗಿ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ ಮತ್ತು 'ಸಲ್ಲಿಸಿ' ಬಟನ್ ಮೇಲೆ ಕ್ಲಿಕ್ ಮಾಡಿ

ಹಂತ3: ಲಭ್ಯವಿರುವ ಪಾಲಿಸಿಗಳನ್ನು ಚರ್ಚಿಸಲು ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ಪಡೆಯಲು ಬಜಾಜ್ ಫೈನಾನ್ಸ್ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ

ಹಂತಗಳು4: ಕೆಲವು ಗಂಟೆಗಳ ಒಳಗೆ ನಿಮ್ಮ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಡೆಯಿರಿ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ಗಾಗಿ ಆಗಾಗ್ಗೆ ಕೇಳುವ ಪ್ರಶ್ನೆಗಳು (FAQ ಗಳು)

1 ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಸಂಸ್ಥೆಗಳು, ಬ್ಯಾಂಕುಗಳು, ಬಿಸಿನೆಸ್ ಗುಂಪುಗಳು, ಹೌಸಿಂಗ್ ಸೊಸೈಟಿಗಳು ಮತ್ತು ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ನೀಡುತ್ತಾರೆ ಮತ್ತು ಸಂಸ್ಥೆಯು ಪ್ರೀಮಿಯಂನ ವೆಚ್ಚವನ್ನು ನೀಡುತ್ತದೆ. ಇದನ್ನು ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಎಂದು ಕೂಡ ಕರೆಯಲಾಗುತ್ತದೆ. ಉದ್ಯೋಗದಾತರು ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುವಾಗ, ಉದ್ಯೋಗದಾತರು ಮತ್ತು ಉದ್ಯೋಗಿ ಎರಡೂ ಫಲಾನುಭವಿಯಾಗಿರುತ್ತಾರೆ. ಪ್ರೀಮಿಯಂ ಒಂದು ಇನ್ಶೂರೆನ್ಸ್ ಪಾಲಿಸಿಯಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಅದೇ ರೀತಿ, ಇನ್ಶೂರೆನ್ಸ್ ಕವರೇಜ್, ಪಾವತಿ ಮತ್ತು ಪ್ರೀಮಿಯಂಗಳು ಪ್ರತಿ ಉದ್ಯೋಗಿಗಳಿಗೆ ಭಿನ್ನವಾಗಿರುತ್ತವೆ.

2 ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ನ ಪ್ರಯೋಜನಗಳು ಯಾವುವು?

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಪ್ರಯೋಜನವೆಂದರೆ ಈ ಇನ್ಶೂರೆನ್ಸ್‌ಗಳಿಗೆ ಪಾವತಿಸಲಾದ ಪ್ರೀಮಿಯಂಗಳು ವೆಚ್ಚ-ಪರಿಣಾಮಕಾರಿಯಾಗಿವೆ. ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ಪಾಲಿಸಿದಾರರು ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆಗೆ ಪ್ರವೇಶವನ್ನು ಪಡೆಯುತ್ತಾರೆ.

ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಉದ್ಯೋಗದಾತರು ತಮ್ಮ ತಂಡಕ್ಕೆ ನೀಡಬಹುದಾದ ಪ್ರೋತ್ಸಾಹವಾಗಿ ಕಾರ್ಯನಿರ್ವಹಿಸುತ್ತದೆ. ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ನೀವು ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಹೊಂದಿದ್ದರೆ ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ಕಡಿತಗಳಿಗೆ ಸಹಾಯ ಮಾಡುತ್ತದೆ

3 ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಏಕೆ ಮುಖ್ಯವಾಗಿದೆ?

ಉದ್ಯೋಗಿಗಳು ಮತ್ತು ಅವರ ಅವಲಂಬಿತರಿಗೆ ಸುರಕ್ಷತೆ ಮತ್ತು ರಕ್ಷಣೆಯನ್ನು ಒದಗಿಸುವುದರಿಂದ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ರಮುಖವಾಗಿದೆ. ಗ್ರೂಪ್ ಇನ್ಶೂರೆನ್ಸ್ ಸುರಕ್ಷತೆಯು ಉತ್ತಮ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ನೀಡುತ್ತದೆ.

ಇದಲ್ಲದೆ, ಉದ್ಯೋಗಿಗಳಿಗೆ ಕವರೇಜ್ ನೀಡುವ ಮೂಲಕ, ಉದ್ಯೋಗದಾತರು ಆದಾಯ ತೆರಿಗೆ ಕಾಯ್ದೆಯಡಿ ತೆರಿಗೆ ವಿನಾಯಿತಿಗಳನ್ನು ಪಡೆಯುತ್ತಾರೆ. ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಗ್ರೂಪ್ ಇನ್ಶೂರೆನ್ಸ್ ಪಾಲಿಸಿಯು ಪ್ರಯೋಜನಕಾರಿಯಾಗಿದೆ.

4 ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ತೆರಿಗೆ-ಕಡಿತಕ್ಕೊಳಪಟ್ಟಿದೆಯೇ?

ಹೌದು, ಗ್ರೂಪ್ ಹೆಲ್ತ್ ಇನ್ಶೂರೆನ್ಸ್‌ಗೆ ಪಾವತಿಸಲಾದ ಪ್ರೀಮಿಯಂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಉದ್ಯೋಗದಾತರು ತೆರಿಗೆ ಕಡಿತವನ್ನು ಕ್ಲೈಮ್ ಮಾಡಬಹುದು. ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳಿಗೆ ಮಾತ್ರ ಉದ್ಯೋಗಿಗಳು ಅರ್ಹರಾಗಿರುತ್ತಾರೆ. ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಮೊತ್ತವನ್ನು ತಮ್ಮ ಉದ್ಯೋಗದಾತರು ಪಾವತಿಸಿದರೆ ಉದ್ಯೋಗಿಗಳು ತೆರಿಗೆ ಪ್ರಯೋಜನವನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. ಆದಾಗ್ಯೂ, ಉದ್ಯೋಗಿಯ ಸಂಬಳದಿಂದ ಪ್ರೀಮಿಯಂ ಮೊತ್ತವನ್ನು ಕಡಿತಗೊಳಿಸಿದರೆ, ಉದ್ಯೋಗಿಯು ತೆರಿಗೆ ರಿಯಾಯಿತಿಗಾಗಿ ಕ್ಲೈಮ್ ಮಾಡಬಹುದು.