ಹಕ್ಕುತ್ಯಾಗ

ಕ್ಯಾಲ್ಕುಲೇಟರ್(ಗಳು) ಜನರೇಟ್ ಮಾಡಿದ ಫಲಿತಾಂಶಗಳು ಸೂಚಕವಾಗಿವೆ. ಲೋನ್ ಮೇಲೆ ಅಪ್ಲೈ ಮಾಡಲಾದ ಬಡ್ಡಿ ದರವು ಲೋನ್ ಬುಕಿಂಗ್ ಸಮಯದಲ್ಲಿ ಚಾಲ್ತಿಯಲ್ಲಿರುವ ದರಗಳ ಮೇಲೆ ಅವಲಂಬಿತವಾಗಿರುತ್ತದೆ. ಕ್ಯಾಲ್ಕುಲೇಟರ್ (ಗಳು) ಅದರ ಬಳಕೆದಾರರಿಗೆ/ಗ್ರಾಹಕರಿಗೆ ಬಜಾಜ್ ಫೈನಾನ್ಸ್ ಲಿಮಿಟೆಡ್ ("ಬಿಎಫ್ಎಲ್")ನಿಂದ ಪ್ರಮಾಣೀಕರಿಸಿದ ಫಲಿತಾಂಶಗಳನ್ನು ಅಥವಾ ಯಾವುದೇ ಸಂದರ್ಭಗಳಲ್ಲಿ ಬಿಎಫ್ಎಲ್‌ನಿಂದ ಬಾಧ್ಯತೆ, ಭರವಸೆ, ಖಾತರಿ, ಕೈಗೊಳ್ಳುವುದು ಅಥವಾ ಬದ್ಧತೆ, ಹಣಕಾಸು ಮತ್ತು ವೃತ್ತಿಪರ ಸಲಹೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿಲ್ಲ. ಕ್ಯಾಲ್ಕುಲೇಟರ್(ಗಳು) ಬಳಕೆದಾರರು/ಗ್ರಾಹಕರು ಡೇಟಾ ಇನ್ಪುಟ್‌ನಿಂದ ಜನರೇಟ್ ಮಾಡಲಾದ ವಿವಿಧ ವಿವರಣಾತ್ಮಕ ಸನ್ನಿವೇಶಗಳ ಫಲಿತಾಂಶಗಳನ್ನು ಪಡೆಯುವ ಸಾಧನವಾಗಿದೆ. ಕ್ಯಾಲ್ಕುಲೇಟರ್ ಬಳಕೆಯು ಸಂಪೂರ್ಣವಾಗಿ ಬಳಕೆದಾರ/ಗ್ರಾಹಕರ ಹೊಣೆಯಾಗಿದೆ, ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗುವ ಯಾವುದೇ ಫಲಿತಾಂಶದಲ್ಲಿ ಯಾವುದೇ ದೋಷಗಳಿಗೆ ಬಿಎಫ್ಎಲ್ ಯಾವುದೇ ಕಾರಣಕ್ಕೆ ಜವಾಬ್ದಾರರಲ್ಲ.

ಆಗಾಗ ಕೇಳುವ ಪ್ರಶ್ನೆಗಳು

ಡಾಕ್ಟರ್ ಲೋನ್ ಇಎಂಐ ಎಂದರೇನು?

ಡಾಕ್ಟರ್ ಲೋನ್ ಇಎಂಐ ಎಂದರೆ ಲೋನ್ ಸಂಪೂರ್ಣವಾಗಿ ಮರುಪಾವತಿಯಾಗುವವರೆಗೆ ಪ್ರತಿ ತಿಂಗಳು ಒಂದು ನಿಗದಿತ ದಿನಾಂಕದಂದು ಪಾವತಿಸಬೇಕಾದ ನಿರ್ದಿಷ್ಟವಾದ ಮೊತ್ತವಾಗಿದೆ. ಇಎಂಐ ಅಸಲು ಮತ್ತು ಅದರ ಮೇಲೆ ತಗಲುವ ಬಡ್ಡಿ ಎರಡನ್ನೂ ಒಳಗೊಂಡಿರುತ್ತದೆ. ಈ ಮಾಸಿಕ ಕಂತುಗಳು ನಿಮ್ಮ ಡಾಕ್ಟರ್/ಫಿಸಿಶಿಯನ್ ಲೋನ್ ಮರುಪಾವತಿಸುವ ಸುಲಭ ವಿಧಾನಗಳಾಗಿವೆ, ಏಕೆಂದರೆ ಮರುಪಾವತಿಸಬೇಕಾದ ಹಣವನ್ನು ಸಣ್ಣ, ಅನುಕೂಲಕರ ಮೊತ್ತಗಳಲ್ಲಿ ವಿತರಿಸಲಾಗಿರುತ್ತದೆ.

ಇಷ್ಟೇ ಅಲ್ಲದೆ ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿಬಲ್ ಅವಧಿಗಳನ್ನು ಒದಗಿಸುವ ಮೂಲಕ ಡಾಕ್ಟರ್‌ ಲೋನ್‌ ಮರುಪಾವತಿಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಫಿಸಿಶಿಯನ್ ಲೋನ್ ಕ್ಯಾಲ್ಕುಲೇಟರ್ ಬಳಸಿ ಆಯ್ದ ಮರುಪಾವತಿ ಶೆಡ್ಯೂಲ್‌ನಲ್ಲಿ ನಿಮ್ಮ ಇಎಂಐಗಳು ಹೇಗಿರುತ್ತವೆ ಎಂದು ನೋಡಬಹುದು.

ಫಿಸಿಶಿಯನ್/ ಡಾಕ್ಟರ್ ಲೋನ್ ಕ್ಯಾಲ್ಕುಲೇಟರ್ ಎಂದರೇನು?

ಡಾಕ್ಟರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಒಂದು ಪರಿಣಾಮಕಾರಿ ಮತ್ತು ಬಳಸಲು ಸುಲಭವಾದ ಆನ್‌ಲೈನ್ ಕ್ಯಾಲ್ಕುಲೇಟರ್ ಆಗಿದ್ದು, ಇದು ಫಿಸಿಶಿಯನ್ ಲೋನ್ ಇಎಂಐ ಮೊತ್ತವನ್ನು ಸೆಕೆಂಡುಗಳಲ್ಲಿ ಲೆಕ್ಕ ಹಾಕುತ್ತದೆ. ಇದು ಪಾವತಿಸಬೇಕಾದ ಒಟ್ಟು ಬಡ್ಡಿ ಮತ್ತು ಪೂರ್ಣ ಮೊತ್ತವನ್ನು (ಬಡ್ಡಿ + ಅಸಲು) ಬೇರೆ ಬೇರೆಯಾಗಿ ತೋರಿಸುತ್ತದೆ.

ಡಾಕ್ಟರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಏಕೆ ಪ್ರಯೋಜನಕಾರಿಯಾಗಿದೆ?

ಇಎಂಐ ಕ್ಯಾಲ್ಕುಲೇಟರ್ ಬಳಸಿ ಲೋನ್‌ ಮಾಸಿಕ ಕಂತುಗಳ ಬಗ್ಗೆ ತಿಳಿಯಬಹುದು, ಮುಂದೆ ಅದಕ್ಕೆ ಅನುಗುಣವಾಗಿ ನಿಮ್ಮ ಹಣಕಾಸನ್ನು ಯೋಜಿಸಿಕೊಳ್ಳಲು ಅನುಕೂಲವಾಗುವುದು. ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ಲೋನ್ ಮೊತ್ತ ಮತ್ತು ಅವಧಿಯನ್ನು ಆರಿಸಿಕೊಳ್ಳಲು ಹಾಗೂ ನಿಮ್ಮ ಪ್ರ್ಯಾಕ್ಟಿಸ್‌‌‌‌ಗೆ ಬೇಕಾಗುವ ಅಲ್ಪಾವಧಿ ಹಣಕಾಸು ಅಗತ್ಯತೆಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಇದು ಸಹಾಯ ಮಾಡುತ್ತದೆ.

ಡಾಕ್ಟರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಹೇಗೆ ಕೆಲಸ ಮಾಡುತ್ತದೆ?

ಡಾಕ್ಟರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಮೊದಲೇ ನಿಶ್ಚಿತವಾದ ಗಣಿತ ಸೂತ್ರದ ಆಧಾರದ ಮೇಲೆ ಕೆಲಸ ಮಾಡುತ್ತದೆ:

E = P * r * (1+r)^n/ ((1+r)^n-1)

ಈ ಸೂತ್ರದಲ್ಲಿ, ವೇರಿಯೇಬಲ್‌ಗಳು ಹೀಗಿವೆ:
E = ಇಎಂಐ
P = ಲೋನ್‌ನ ಅಸಲು
R = ಬಡ್ಡಿದರ
N = ಮರುಪಾವತಿ ಅವಧಿ (ತಿಂಗಳುಗಳಲ್ಲಿ)

ಡಾಕ್ಟರ್ ಲೋನ್‌ಗೆ ಇಎಂಐ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

ಈ ಡಾಕ್ಟರ್ ಲೋನ್ ಕ್ಯಾಲ್ಕುಲೇಟರ್ ಬಳಸುವುದು ಸರಳ. ಒಟ್ಟು ಲೋನ್ ಮೊತ್ತ, ಬಡ್ಡಿದರ ಮತ್ತು ನೀವು ಆಯ್ಕೆ ಮಾಡಿದ ಅವಧಿಯನ್ನು ತಿಂಗಳುಗಳಲ್ಲಿ ನಮೂದಿಸಿ. ನೀವು ಒದಗಿಸಿದ ವಿವರಗಳ ಆಧಾರದ ಮೇಲೆ ಕ್ಯಾಲ್ಕುಲೇಟರ್ ತಕ್ಷಣ ಇಎಂಐಗಳನ್ನು ತೋರಿಸುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ