ಗಂಭೀರ ಅನಾರೋಗ್ಯದ ಹೆಲ್ತ್ ಇನ್ಶೂರೆನ್ಸ್

ಕ್ರಿಟಿಕಲ್ ಇಲ್‌ನೆಸ್ ಎಂಬುದು ಎಂದಿಗೂ ಒಳ್ಳೆಯ ಸಮಾಚಾರವಲ್ಲ. ಹೃದಯಾಘಾತ, ಅಂಗಾಂಗ ಕಸಿ, ಪಾರ್ಶ್ವವಾಯು, ಕ್ಯಾನ್ಸರ್, ಅಥವಾ ಪ್ರಾಣಾಪಾಯವುಂಟಾಗಬಹುದಾದ ಯಾವುದಕ್ಕಾದರೂ ಹೆಚ್ಚಿನ ಕಾಳಜಿ ಮತ್ತು ಗಮನ ಅಗತ್ಯವಿರುತ್ತದೆ. ಆದ್ದರಿಂದ, ಅಂತಹ ಒತ್ತಡದ ಸಮಯದಲ್ಲಿ ದೊಡ್ಡ ಹಣಕಾಸಿನ ವೆಚ್ಚಗಳನ್ನು ಕವರ್ ಮಾಡಲು ಗಂಭೀರ ಅನಾರೋಗ್ಯದ ಇನ್ಶೂರೆನ್ಸ್ ಶಿಫಾರಸು ಮಾಡಲಾಗುತ್ತದೆ.' ಗಂಭೀರ ಅನಾರೋಗ್ಯದ ಇನ್ಶೂರೆನ್ಸ್ ಪ್ಲಾನ್, ಗಂಭೀರ ಅನಾರೋಗ್ಯಗಳ ವೈದ್ಯಕೀಯ ಚಿಕಿತ್ಸೆಗಾಗಿ ರೂ. 50 ಲಕ್ಷದವರೆಗಿನ ದೊಡ್ಡ ಮೊತ್ತವನ್ನು ಪಡೆಯಿರಿ.
 

ಫೀಚರ್‌ಗಳು ಮತ್ತು ಪ್ರಯೋಜನಗಳು

 • education loan

  ರೂ.50 ಲಕ್ಷದವರೆಗೆ ಕವರ್

  ರೂ. 50 ಲಕ್ಷದವರೆಗೆ ಇನ್ಶೂರೆನ್ಸ್ ಮೊತ್ತವನ್ನು ಪಡೆದುಕೊಳ್ಳಿ ಮತ್ತು ಗಂಭೀರ ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆ ಪಡೆಯಿರಿ.

 • ಲಂಪ್‌ಸಮ್ ಮೊತ್ತ

  ಗಂಭೀರವಾದ ಖಯಿಲೆಗಳು ಅಥವಾ ಗಾಯಗಳಿಂದ ಗುರುತಿಸಲ್ಪಟ್ಟರೆ, ಪಾಲಿಸಿಯಲ್ಲಿ ಹೇಳಿರುವ ನಿಶ್ಚಿತ ಮೊತ್ತವನ್ನು ಪಡೆದುಕೊಳ್ಳಿ.

 • ಕಾಂಪ್ರೆಹೆನ್ಸಿವ್ ಯೂಸೇಜ್

  ಔಷಧಿಗಳ ಪಾವತಿಗಾಗಿ ಅಥವಾ ಪರಿಣಿತ ವೈದ್ಯಕೀಯ ಸಲಹೆ, ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಪಾಲಿಸಿ ಕವರ್ ಅನ್ನು ಬಳಸಿ.

 • lap documents required

  ಪ್ರಮುಖ ಕಾಯಿಲೆಗಳನ್ನು ಒಳಗೊಳ್ಳುತ್ತದೆ

  ಹೃದಯಾಘಾತ, ಸ್ಟ್ರೋಕ್, ಕ್ಯಾನ್ಸರ್, ಮೂತ್ರಪಿಂಡದ ವೈಫಲ್ಯ, ಅಂಗಾಂಗ ಕಸಿ, ಪಾರ್ಶ್ವವಾಯು, ಮುಂತಾದ ಪ್ರಮುಖ ಕಾಯಿಲೆಗಳನ್ನು ನಮ್ಮ ಗಂಭೀರ ಅನಾರೋಗ್ಯದ ಇನ್ಶೂರೆನ್ಸ್ ಒಳಗೊಂಡಿದೆ.

 • ತೆರಿಗೆ ವಿನಾಯಿತಿ

  ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ರೂ. 60,000 ವರೆಗೆ ಆದಾಯ ತೆರಿಗೆ ಪ್ರಯೋಜನವನ್ನು ಪಡೆಯಿರಿ.

 • education loan

  ತೊಂದರೆ ಇಲ್ಲದ ಕ್ಲೈಮ್‌ಗಳು

  ಯಾವುದೇ ತೃತೀಯ ಪಕ್ಷಗಳನ್ನು ಒಳಗೊಳಿಸಿಕೊಳ್ಳದೇ ನಿಮ್ಮ ಕ್ಲೈಮ್‌ಗಳನ್ನು ತೊಂದರೆ ಇಲ್ಲದೇ ಪರಿಹರಿಸಿಕೊಳ್ಳಿ.

 • ಸ್ಪರ್ಧಾತ್ಮಕ ಪ್ರೀಮಿಯಂ ದರಗಳು

  ನಮ್ಮ ಗಂಭೀರ ಅನಾರೋಗ್ಯದ ವಾರ್ಷಿಕ ಇನ್ಶೂರೆನ್ಸ್ ಪಾಲಿಸಿಯು ಸ್ಪರ್ಧಾತ್ಮಕ ಪ್ರೀಮಿಯಂ ದರಗಳೊಂದಿಗೆ ಬರುತ್ತದೆ.

 • ಟೇಲರ್- ಮೇಡ್ ಪಾಲಿಸಿ

  ಸಾಮಾನ್ಯ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಆಗದ ವೆಚ್ಚಗಳಾದ ಟ್ರಾನ್ಸ್‌ಪ್ಲಾಂಟ್ ಸರ್ಜರಿಯಲ್ಲಿ ಡೋನರ್ ವೆಚ್ಚಗಳನ್ನು ಈ ಪ್ರಯೋಜನದಿಂದ ನಿರ್ವಹಿಸಬಹುದು.

 • 30 ದಿನಗಳಲ್ಲಿ ಲಾಭದ ಮೊತ್ತ

  ರೋಗ ಪತ್ತೆಯ 30 ದಿನಗಳ ಬಳಿಕ ಇನ್ಶೂರ್ ಅದ ವ್ಯಕ್ತಿಯು ಜೀವಂತ ಇದ್ದಲ್ಲಿಯಂತಹ ವಿಶೇಷ ಮಾನದಂಡಗಳನ್ನು ಪೂರೈಸಿದ ಬಳಿಕ 30 ದಿನಗಳ ಒಳಗೆ ಪ್ರಯೋಜನದ ಹಣವನ್ನು ಪಡೆಯಿರಿ.

ಗಂಭೀರ ಅನಾರೋಗ್ಯಕ್ಕೆ ಅರ್ಹತೆ

ನೀವು ಲೋನ್ ಗ್ರಾಹಕರಾಗಿದ್ದರೆ ಮತ್ತು ಗಂಭೀರ ಅನಾರೋಗ್ಯದ ಹೆಲ್ತ್ ಇನ್ಶೂರೆನ್ಸ್ ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ. ಈ ಪಾಲಿಸಿಯನ್ನು ಲಭ್ಯವಾಗಿಸಿಕೊಳ್ಳಲು, ನೀವು ಹೀಗೆ ಮಾಡಬೇಕು:


• ವಯಸ್ಸು 18 ದಿಂದ 65 ವರ್ಷಗಳ ನಡುವೆ ಇರಬೇಕು.
 

ನಿರಾಕರಣೆಗಳು

ಗಂಭೀರ ಅನಾರೋಗ್ಯ ಪಾಲಿಸಿಯು ಈ ಮುಂದಿನ ಹೊರಗಿಡುವಿಕೆಗಳನ್ನು ಹೊಂದಿದೆ:

• ಮುಂಚಿನಿಂದ ಇದ್ದ ವೈದ್ಯಕೀಯ ಸ್ಥಿತಿಯಿಂದಾಗಿ ಉಂಟಾಗುವ ಗಂಭೀರ ಅನಾರೋಗ್ಯವನ್ನು ಹೊರಗಿಡಲಾಗಿದೆ.
• ತಾವೇ ಮಾಡಿಕೊಂಡ ಗಾಯ ಅಥವಾ ಮಾದಕ ದ್ರವ್ಯ, ಆಲ್ಕೋಹಾಲ್‌ಗಳಂತಹ ಅಮಲೇರಿಸುವ ವಸ್ತುಗಳ ಬಳಕೆ ಅಥವಾ ತಪ್ಪು ಔಷಧಿಗಳ ಬಳಕೆ, ಲೈಂಗಿಕವಾಗಿ ಹರಡುವ ರೋಗಗಳನ್ನು ಸೇರಿಸಲಾಗಿಲ್ಲ.
• ಯುದ್ಧ ಅಥವಾ ನೌಕಾಪಡೆ, ಮಿಲಿಟರಿ, ಅಥವಾ ವಾಯುಪಡೆಯ ಕಾರ್ಯಾಚರಣೆಗಳಲ್ಲಿ ಭಾಗವಹಿಸುವಿಕೆಯ ಪರಿಣಾಮದಿಂದಾಗಿ ಉಂಟಾದ ಕಾಯಿಲೆ
• ಯಾವುದೇ ನೈಸರ್ಗಿಕ ವಿಕೋಪ ಅಥವಾ ಪರಮಾಣು ಮಾಲಿನ್ಯ.
• ಯಾವುದಾದರೂ ಆರ್ಥಿಕ ನಷ್ಟದ ಕಾರಣವಾಗಿ ಹಾಗೂ ನಿರಂತರವಾಗಿ ಒತ್ತಡದಲ್ಲಿರುವ ಕಾರಣದಿಂದ ಉಂಟಾಗುವ ಅನಾರೋಗ್ಯ.
• ಪಾಲಿಸಿಯ ಮೊದಲ 90 ದಿನಗಳೊಳಗಾಗಿ ಪತ್ತೆ ಹಚ್ಚಲ್ಪಟ್ಟ ಗಂಭೀರ ಅನಾರೋಗ್ಯ.
• ಇನ್ಶೂರೆನ್ಸ್ ಮಾಡಿದ ವ್ಯಕ್ತಿಯು ರೋಗನಿರ್ಣಯದ 30 ದಿನಗಳಲ್ಲಿ ಸಾವನ್ನಪ್ಪಿದರೆ.
 

ಹಕ್ಕುತ್ಯಾಗ - *ಷರತ್ತುಗಳು ಅನ್ವಯ. ಬಜಾಜ್ ಫೈನಾನ್ಸ್ ಲಿಮಿಟೆಡ್ ಮಾಸ್ಟರ್ ಪಾಲಿಸಿದಾರರಾಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯಡಿ ಈ ಪ್ರಾಡಕ್ಟ್ ಆಫರ್ ಮಾಡಲಾಗುತ್ತದೆ. ನಮ್ಮ ಪಾಲುದಾರ ಇನ್ಶೂರೆನ್ಸ್ ಕಂಪನಿಯಿಂದ ಇನ್ಶೂರೆನ್ಸ್ ಕವರೇಜನ್ನು ಒದಗಿಸಲಾಗುತ್ತದೆ. ಬಜಾಜ್ ಫೈನಾನ್ಸ್ ಲಿಮಿಟೆಡ್ ಅಪಾಯದ ಹೊಣೆ ಹೊರುವುದಿಲ್ಲ. IRDAI ಕಾರ್ಪೊರೇಟ್ ಏಜೆನ್ಸಿ ನೋಂದಣಿ ನಂಬರ್ CA0101. ಮೇಲೆ ತಿಳಿಸಲಾದ ಪ್ರಯೋಜನಗಳು ಮತ್ತು ಪ್ರೀಮಿಯಂ ಮೊತ್ತವು ವಿಮಾದಾರರ ವಯಸ್ಸು, ಜೀವನಶೈಲಿ ಹವ್ಯಾಸಗಳು, ಆರೋಗ್ಯ ಇತ್ಯಾದಿಗಳಂತಹ ವಿವಿಧ ಅಂಶಗಳಿಗೆ ಒಳಪಟ್ಟಿರುತ್ತದೆ (ಅನ್ವಯವಾದರೆ). ವಿತರಣೆ, ಗುಣಮಟ್ಟ, ಸೇವೆಯ ಸಾಮರ್ಥ್ಯ, ನಿರ್ವಹಣೆ ಮತ್ತು ಮಾರಾಟದ ನಂತರದ ಯಾವುದೇ ಕ್ಲೈಮ್‌ಗಳಿಗೆ BFL ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ಈ ಪ್ರಾಡಕ್ಟ್ ಇನ್ಶೂರೆನ್ಸ್ ಕವರೇಜನ್ನು ಒದಗಿಸುತ್ತದೆ. ಈ ಪ್ರಾಡಕ್ಟ್ ಖರೀದಿ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದೆ. ಯಾವುದೇ ಥರ್ಡ್ ಪಾರ್ಟಿ ಪ್ರಾಡಕ್ಟ್‌ಗಳನ್ನು ಕಡ್ಡಾಯವಾಗಿ ಖರೀದಿಸಲು BFL ತನ್ನ ಯಾವುದೇ ಗ್ರಾಹಕರನ್ನು ಒತ್ತಾಯಿಸುವುದಿಲ್ಲ.”