ಹೂಡಿಕೆಯು ಸಂಪತ್ತಿನ ಗಳಿಕೆಯ ಪ್ರಮುಖ ಭಾಗವಾಗಿದೆ, ಇದು ಹಣದುಬ್ಬರವನ್ನು ಎದುರಿಸಿ ನಿಮ್ಮ ಹಣಕಾಸಿನ ಗುರಿಗಳನ್ನು ತಲುಪಲು ಮತ್ತು ನಿಮ್ಮ ಹಣಕಾಸಿನ ಭವಿಷ್ಯವನ್ನು ಸ್ಥಿರವಾಗಿರಿಸಲು ಸಹಾಯ ಮಾಡುತ್ತದೆ. ನೀವು ವಿವಿಧ ಮಾರ್ಗಗಳಾದ ಸ್ಟಾಕ್ಗಳು, ಇಕ್ವಿಟಿಗಳು, ಮ್ಯೂಚುಯಲ್ ಫಂಡ್ಗಳು, ಫಿಕ್ಸೆಡ್ ಡೆಪಾಸಿಟ್ ಅಥವಾ ಇನ್ನೂ ಅನೇಕವುಗಳಲ್ಲಿ ಹೂಡಿಕೆ ಮಾಡಬಹುದು.
ನಿಮ್ಮ ಹೂಡಿಕೆ ಗುರಿಗಳು, ಲಿಕ್ವಿಡಿಟಿ ಅವಶ್ಯಕತೆಗಳು, ಹೂಡಿಕೆ ವ್ಯಾಪ್ತಿ ಮತ್ತು ರಿಸ್ಕ್ ಅಪೇಕ್ಷೆ ಆಧರಿಸಿ ನೀವು ಹೂಡಿಕೆ ಮಾರ್ಗಗಳನ್ನು ಆಯ್ಕೆ ಮಾಡಬಹುದು. ಇವುಗಳನ್ನು ಹೊರತುಪಡಿಸಿ, ವಿಶೇಷವಾಗಿ ಇಂದಿನ ಪರಿಸ್ಥಿತಿಯಲ್ಲಿ, ರಿಸ್ಕ್ ಅಪೇಕ್ಷೆ ಪರಿಗಣಿಸಬೇಕಾದ ಪ್ರಮುಖ ವಿಚಾರವಾಗಿದೆ. ಸರಿಯಾದ ಆಯ್ಕೆಯನ್ನು ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ, ನಿಮ್ಮ ರಿಸ್ಕ್ ಅಪೇಕ್ಷೆಯ ಆಧಾರಿತವಾಗಿ ಇಲ್ಲಿ ನಿಮಗೆ ಸೂಕ್ತವಾಗುವ ಹೂಡಿಕೆಗಳ ವಿವರವಿದೆ.
ಹೆಚ್ಚಿನ ಹೂಡಿಕೆಗಳು ನಿರ್ದಿಷ್ಟ ಮಟ್ಟದ ಅಪಾಯ ಮತ್ತು ಅಸ್ಥಿರತೆಯನ್ನು ಹೊಂದಿರುತ್ತವೆ, ಅದು ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಅಪಾಯದ ಮಟ್ಟಗಳು ಹೆಚ್ಚಾಗಿರುವಾಗ ಹೂಡಿಕೆಯ ಮೇಲಿನ ಆದಾಯವು ಹೆಚ್ಚಾಗಿರುತ್ತದೆ. ಆದಾಗ್ಯೂ, ಅಂತಹ ಹೂಡಿಕೆಗಳಲ್ಲಿ ಹೆಚ್ಚಿನ ನಷ್ಟದ ಅಪಾಯ ಕೂಡ ಇರುತ್ತದೆ.
ಹೀಗಾಗಿ, ಹೂಡಿಕೆದಾರರ ಅಪಾಯದ ಮಟ್ಟದ ಆಧಾರದ ಮೇಲೆ ಹೂಡಿಕೆಯ ನಿರ್ಧಾರಗಳನ್ನು ಪಡೆಯಬಹುದು ಮತ್ತು ನಾವು ವಿವಿಧ ಅಪಾಯದ ಮಟ್ಟಗಳ ಆಧಾರದ ಮೇಲೆ ಹೂಡಿಕೆಗಳನ್ನು ವರ್ಗೀಕರಿಸಬಹುದು. ವಿವಿಧ ಅಪಾಯದ ಮಟ್ಟಗಳ ಆಧಾರದ ಮೇಲೆ ವಿವಿಧ ಹೂಡಿಕೆಗಳನ್ನು ಇಲ್ಲಿ ನೋಡಿ
ಕಡಿಮೆ ಅಪಾಯದ ನಿರ್ವಹಣೆ ಹೊಂದಿರುವ ಹೂಡಿಕೆದಾರರು, ತಮ್ಮ ಹೂಡಿಕೆಯ ಪೋರ್ಟ್ಫೋಲಿಯೋಗಳಲ್ಲಿ ಅಸ್ಥಿರತೆಯನ್ನು ಬಯಸದವರು, ಕಡಿಮೆ-ಅಪಾಯದ ಹೂಡಿಕೆಯ ಆಯ್ಕೆಗಳಿಗಾಗಿ ನೋಡುತ್ತಾರೆ. ಸಾಮಾನ್ಯವಾಗಿ, ಒಂದು ದೊಡ್ಡ ಮೊತ್ತದ ಸಂಗ್ರಹಕ್ಕೆ ದಶಕಗಳನ್ನು ಕಳೆದ ನಿವೃತ್ತರು ಈ ಕೆಟಗರಿಯಲ್ಲಿ ಬರುತ್ತಾರೆ. ಬಾಂಡ್ಗಳು, ಡಿಬೆಂಚರ್ಗಳು, ಫಿಕ್ಸೆಡ್ ಡೆಪಾಸಿಟ್ ಮತ್ತು ಸರ್ಕಾರಿ ಉಳಿತಾಯ ಯೋಜನೆಗಳಂತಹ ಸ್ಥಿರ-ಆದಾಯದ ಇನ್ಸ್ಟ್ರುಮೆಂಟ್ಗಳು ಈ ಹೂಡಿಕೆ ವಿಭಾಗಗಳ ಅಡಿಯಲ್ಲಿ ಬರುತ್ತವೆ ಮತ್ತು ಕಡಿಮೆ-ಅಪಾಯದ ಹೂಡಿಕೆದಾರರ ಅಗತ್ಯಗಳಿಗೆ ಸರಿಹೊಂದುತ್ತವೆ
ಕಡಿಮೆ ಅಪಾಯದ ಹೂಡಿಕೆದಾರರು ಸ್ಟಾಕ್ ಮಾರ್ಕೆಟ್ ಏರುಪೇರುಗಳಿಗೆ ಲಿಂಕ್ ಆಗಿರುವುದಿಲ್ಲ ಮತ್ತು ಸಾಮಾನ್ಯವಾಗಿ ಫೈನಾನ್ಷಿಯರ್ಗಳ ಬಡ್ಡಿದರದ ಏರುಪೇರಿನ ಮೇಲೆ ನಿರ್ವಹಿಸಲ್ಪಡುತ್ತವೆ ಮತ್ತು ಈ ಹೂಡಿಕೆ ಮಾರ್ಗದಲ್ಲಿ ಹೆಚ್ಚುವರಿ ಆದಾಯಕ್ಕಾಗಿ ನೀವು ನಿಮ್ಮ ಹೂಡಿಕೆಯನ್ನು ದೀರ್ಘ ಕಾಲದವರೆಗೆ ಲಾಕ್ ಇನ್ ಮಾಡಬೇಕಾಗಬಹುದು.
ಫಿಕ್ಸೆಡ್ ಆದಾಯದ ಇನ್ಸ್ಟ್ರುಮೆಂಟಿಗೆ ಹೋಲಿಸಿದರೆ ಅಧಿಕ ಆದಾಯ ನೀಡುವ, ಮಧ್ಯಮ ಮಟ್ಟದ ಅಪಾಯವನ್ನು ಬಯಸುವ ಹೂಡಿಕೆದಾರರು, ಮಧ್ಯಮ ರಿಸ್ಕಿನ ಹೂಡಿಕೆ ಆಯ್ಕೆಗಳನ್ನು ನೋಡಿ. ಈ ಹೂಡಿಕೆಗಳು ಕೆಲವು ಮಟ್ಟದ ರಿಸ್ಕ್ ಅನ್ನು ಹೊಂದಿರಬಹುದು ಆದರೆ ಈ ಹೂಡಿಕೆಗಳಲ್ಲಿನ ಆದಾಯ ಕೂಡ ಅಧಿಕವಾಗಿರುತ್ತದೆ. ಡೆಟ್ ಫಂಡ್ಗಳು, ಸಮತೋಲಿತ ಮ್ಯೂಚುಯಲ್ ಫಂಡ್ಗಳು, ಮತ್ತು ಇಂಡೆಕ್ಸ್ ಫಂಡ್ಗಳು ಕೆಟಗರಿಯಲ್ಲಿ ಬರುತ್ತವೆ.
ಈ ಇನ್ಸ್ಟ್ರುಮೆಂಟ್ಗಳು ಡೆಟ್ ಮತ್ತು ಸ್ಥಿರತೆಯನ್ನು ಅಂಶವನ್ನು ಹೊಂದಿದೆ, ಅದರ ಆದಾಯಕ್ಕೆ ಸಂಬಂಧಿಸಿದ ಏರುಪೇರುಗಳು ಅಸಲಿನ ಮೊತ್ತದಲ್ಲಿನ ನಷ್ಟಕ್ಕೆ ಕೂಡ ದಾರಿ ಮಾಡಿಕೊಡಬಹುದು. ಈ ಇನ್ಸ್ಟ್ರುಮೆಂಟಿನಲ್ಲಿನ ಗಳಿಕೆಗಳಲ್ಲಿರುವ ಅನಿಯಮಿತತೆಗಳಿಂದಾಗಿ, ಈ ಇನ್ಸ್ಟ್ರುಮೆಂಟ್ಗಳಿಂದ ನಿಯಮಿತ ಫಿಕ್ಸೆಡ್ ಆದಾಯ ಪಡೆಯುವುದು ಅಸಾಧ್ಯವಾಗಿದೆ.
ಸೆಕ್ಯುರಿಟೀಸ್ ಬಗ್ಗೆ ಆಳವಾಗಿ ತಿಳಿದುಕೊಂಡವರು, ಮತ್ತು ರಿಸ್ಕನ್ನು ಅಧಿಕವಾಗಿ ಸಹಿಸಿಕೊಳ್ಳಬಲ್ಲ ಮಾರುಕಟ್ಟೆಯ ಜಾಣ್ಮೆಯ ಹೂಡಿಕೆದಾರರಿಗೆ ಈ ಅಧಿಕ ರಿಸ್ಕಿನ ಹೂಡಿಕೆಗಳು ಉತ್ತಮವಾಗಿದೆ. ಈ ಹೂಡಿಕೆಗಳಲ್ಲಿ, ಗಳಿಕೆಗಳಿಗೆ ಯಾವುದೇ ಮಿತಿ ಇರುವುದಿಲ್ಲ, ಆದರೆ ರಿಸ್ಕಿನ ಮಟ್ಟ ಕೂಡ ತುಂಬಾ ಅಧಿಕವಾಗಿರುತ್ತದೆ. ಬಹುಬೇಗ ಬದಲಾಗಬಹುದಾದ ಹೂಡಿಕೆ ಇನ್ಸ್ಟ್ರುಮೆಂಟ್ಗಳಾದಂತಹ ಸ್ಟಾಕ್ಗಳು, ಇಕ್ವಿಟಿ ಮ್ಯೂಚುಯಲ್ ಫಂಡ್ಗಳು ಮತ್ತು ಉತ್ಪನ್ನಗಳು ಈ ಕೆಟಗರಿಯಲ್ಲಿ ಬರುತ್ತವೆ.
ಈ ಇನ್ಸ್ಟ್ರುಮೆಂಟ್ಗಳಲ್ಲಿನ ಆದಾಯವು ದೊಡ್ಡ ಆದಾಯವನ್ನು ನೀಡಬಹುದು, ಆದರೆ ಯಾವಾಗ ನಿಮ್ಮ ಹಣವನ್ನು ಈ ಬಹು ಬೇಗನೆ ಬದಲಾವಣೆ ಕಾಣುವ ಹೂಡಿಕೆಗಳಲ್ಲಿ ಹಾಕಬಹುದು ಮತ್ತು ಯಾವಾಗ ನಿಲ್ಲಿಸಬಹುದು ಮತ್ತು ಅಧಿಕ ಆದಾಯದೊಂದಿಗೆ ನಿಮ್ಮ ಹಣವನ್ನು ಯಾವಾಗ ಹೊರತೆಗೆಯಬಹುದು ಎಂಬ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ, ಈ ಇನ್ಸ್ಟ್ರುಮೆಂಟ್ನಲ್ಲಿ ಆದಾಯದ ಪ್ರಮಾಣ ಮತ್ತು ಸಮಯ ಫಿಕ್ಸೆಡ್ ಆಗಿರುವುದಿಲ್ಲ.
ನಿಮ್ಮ ಅಪಾಯದ ಮಟ್ಟದ ಹೊರತಾಗಿಯೂ, ನಿಮ್ಮ ಉಳಿತಾಯವನ್ನು ಬೆಳೆಸಲು ಸರಿಯಾದ ಇನ್ಸ್ಟ್ರುಮೆಂಟ್ಗಳನ್ನು ಆಯ್ಕೆ ಮಾಡುವುದು ಮುಖ್ಯ. ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನು ಯೋಜಿಸಲು ನಿಮಗೆ ಸಹಾಯ ಮಾಡಲು, ಭಾರತದಲ್ಲಿ ಹೂಡಿಕೆದಾರರು ಆಯ್ಕೆ ಮಾಡಿದ ಪ್ರಮುಖ 10 ಹೂಡಿಕೆ ಇನ್ಸ್ಟ್ರುಮೆಂಟ್ಗಳನ್ನು ಇಲ್ಲಿ ನೋಡಿ.
ಅಪಾಯ, ಕಾಲಾವಧಿ, ಲಿಕ್ವಿಡಿಟಿ ಮತ್ತು ನೀವು ಪಡೆಯಬಹುದಾದ ಆದಾಯದ ಆಧಾರದ ಮೇಲೆ ಈ ಹೂಡಿಕೆಗಳ ಸಾರಾಂಶ ಇಲ್ಲಿದೆ:
ಭಾರತದಲ್ಲಿ ಟಾಪ್ 10 ಹೂಡಿಕೆ ಆಯ್ಕೆಗಳು |
||||
---|---|---|---|---|
ರಿಸ್ಕ್ | ಅವಧಿ | ಲಿಕ್ವಿಡಿಟಿ | ಲಾಭ | |
ಸ್ಟಾಕ್ಗಳು | ಅಧಿಕ | ಯಾವುದೇ ಸಮಯದಲ್ಲಿ ಮಾರಾಟ ಮಾಡಬಹುದು | ಅಧಿಕ | ಮಾರುಕಟ್ಟೆ-ಲಿಂಕ್ ಮಾಡಿದ |
ಫಿಕ್ಸೆಡ್ ಡೆಪಾಸಿಟ್ | ಕಡಿಮೆ | 7 ದಿನಗಳಿಂದ 10 ವರ್ಷಗಳವರೆಗೆ | ಮೆಚ್ಯೂರ್ಗಿಂತ ಮೊದಲೇ ತೆಗೆಯುವುದು | ಖಚಿತ |
ಮ್ಯೂಚುಯಲ್ ಫಂಡ್ | ಮಧ್ಯಮ-ಹೆಚ್ಚು | ಮುಕ್ತಾಯದ ಕೊನೆಯಲ್ಲಿ* | ಅಧಿಕ | ಮಾರುಕಟ್ಟೆ-ಲಿಂಕ್ ಮಾಡಿದ |
ಹಿರಿಯ ನಾಗರೀಕರ ಉಳಿತಾಯ ಯೋಜನೆ | ಕಡಿಮೆ | 5 ವರ್ಷಗಳು | ಕಡಿಮೆ | 7.4% |
ಪಿಪಿಎಫ್ (PPF) | ಕಡಿಮೆ | 15 ವರ್ಷಗಳು | ಭಾಗಶಃ ವಿತ್ಡ್ರಾವಲ್ಗಳು** | 7.1% |
*ELSS 3 - ವರ್ಷದ ಲಾಕಿನ್ ಜೊತೆಗೆ ಬರುತ್ತದೆ **ಷರತ್ತುಗಳಿಗೆ ಒಳಪಟ್ಟಿರುತ್ತದೆ |
ವಿವಿಧ ಆಯ್ಕೆಗಳನ್ನು ನೋಡುತ್ತಿದ್ದರೆ, FD ಎಲ್ಲಾ ಜನರಿಗೂ ಹೂಡಿಕೆಯ ಪ್ರಿಯವಾದ ಮಾರ್ಗವಾಗಿದೆ. ಸುಲಭ, ಫ್ಲೆಕ್ಸಿಬಿಲಿಟಿ ಮತ್ತು ವಿವಿಧ ಆಯ್ಕೆಗಳಿಂದ, ಎಲ್ಲಾ ವಯಸ್ಸಿನ ಗುಂಪುಗಳು ಮತ್ತು ಎಲ್ಲಾ ಆದಾಯ ಮಟ್ಟಗಳ ಹೂಡಿಕೆದಾರರಿಗೆ FD ಸರಳವಾಗಿದೆ. ಇತ್ತೀಚಿನ ರೆಪೋ ದರಗಳ ಕುಸಿತದಿಂದಾಗಿ ಅನೇಕ ಬ್ಯಾಂಕ್ಗಳಲ್ಲಿ FD ದರಗಳನ್ನು ಕಡಿಮೆ ಮಾಡಲಾಗಿದೆ, ಆದರೆ ನೀವು ಅಧಿಕ ಬಡ್ಡಿ ದರಗಳನ್ನು ನೋಡುತ್ತಿದ್ದರೆ, ನೀವು NBFC ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡಬಹುದು. ಈ NBFC FD ಗಳು ಬ್ಯಾಂಕ್ FD ಗಳಿಗಿಂತ ಅಧಿಕ ಬಡ್ಡಿ ದರಗಳನ್ನು ಆಫರ್ ಮಾಡುತ್ತವೆ. ಬಜಾಜ್ ಫೈನಾನ್ಸ್ ಆ ರೀತಿಯ ಒಂದು NBFC ಆಗಿದ್ದು ಅದು ನಿಮ್ಮ ಉಳಿತಾಯಕ್ಕೆ ಸ್ಥಿರ ಮತ್ತು ಸುರಕ್ಷಿತ ಬೆಳವಣಿಗೆಯ ಭರವಸೆಯೊಂದಿಗೆ ಲಾಭದಾಯಕ 7.25% ವರೆಗಿನ ಬಡ್ಡಿ ದರಗಳನ್ನು ಆಫರ್ ಮಾಡುತ್ತದೆ.
ನಿಮ್ಮ ರಿಸ್ಕ್ ಪ್ರಕಾರವನ್ನು ಪರಿಗಣನೆಗೆ ತೆಗೆದುಕೊಳ್ಳದೆ, ನೀವು ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಬಹುದು ಮತ್ತು ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು:
ರೂ. 5 ಕೋಟಿಯವರೆಗಿನ ಡೆಪಾಸಿಟ್ಗಳಿಗೆ ವಾರ್ಷಿಕ ಬಡ್ಡಿ ದರ ಮಾನ್ಯ (01 ಫೆಬ್ರವರಿ 2021 ರಿಂದ ಅನ್ವಯ) |
||||||
---|---|---|---|---|---|---|
ತಿಂಗಳುಗಳಲ್ಲಿ ಕಾಲಾವಧಿ | ಕನಿಷ್ಠ ಡೆಪಾಸಿಟ್ (ರೂ. ಗಳಲ್ಲಿ) | ಒಟ್ಟುಗೂಡಿಸಿದ | ಒಟ್ಟುಗೂಡಿಸದ | |||
ಮಾಸಿಕ | ತ್ರೈಮಾಸಿಕ | ಅರ್ಧ ವಾರ್ಷಿಕ | ವಾರ್ಷಿಕ | |||
12 – 23 | 25,000 | 6.15% | 5.98% | 6.01% | 6.06% | 6.15% |
24 – 35 | 6.60% | 6.41% | 6.44% | 6.49% | 6.60% | |
36 - 60 | 7.00% | 6.79% | 6.82% | 6.88% | 7.00% |
+ 0.25%ಹಿರಿಯ ನಾಗರೀಕರಿಗೆ
+ ಆನ್ಲೈನ್ ವಿಧಾನದ ಮೂಲಕ FD ತೆರೆಯುವ ಗ್ರಾಹಕರಿಗೆ 0.10%
ಗಮನಿಸಿ: ಬಜಾಜ್ ಫೈನಾನ್ಸ್ ಆನ್ಲೈನ್ FD ಯಲ್ಲಿ ಹೂಡಿಕೆ ಮಾಡುವ ಹಿರಿಯ ನಾಗರಿಕರು ಹೂಡಿಕೆಯ ವಿಧಾನವನ್ನು ಲೆಕ್ಕಿಸದೆ ಕೇವಲ ಒಂದು ಪ್ರಯೋಜನವನ್ನು (0.25% ದರದ ಪ್ರಯೋಜನ) ಮಾತ್ರ ಪಡೆಯುತ್ತಾರೆ
+ಡೆಪಾಸಿಟ್ ನವೀಕರಣ ಸಮಯದಲ್ಲಿ ಅನ್ವಯವಾಗುವ ಬಡ್ಡಿ ದರ/ ಕಾರ್ಡ್ ದರದ ಮೇಲೆ ಮತ್ತು ಅಧಿಕ 0.10%. ಆನ್ಲೈನ್ ನವೀಕರಣದ ಸಂದರ್ಭದಲ್ಲಿ, ಕೇವಲ ಒಂದು ಪ್ರಯೋಜನವನ್ನು (0.10% ನವೀಕರಣದ ಪ್ರಯೋಜನ) ವಿಸ್ತರಿಸಲಾಗುತ್ತದೆ.
ಹೊಸ ಆನ್ಲೈನ್ ಸೌಲಭ್ಯಗಳೊಂದಿಗೆ, ಬಜಾಜ್ ಫೈನಾನ್ಸ್ FD ಯಲ್ಲಿ ಹೂಡಿಕೆ ಮಾಡುವುದು ಎಂದಿಗಿಂತಲೂ ಸುಲಭ. ಈ FD ನೀಡುವ ಆಕರ್ಷಕ ಬಡ್ಡಿ ದರಗಳಿಗೆ ಕೇವಲ ಲಾಕ್-ಇನ್ ಮಾಡಿ ಮತ್ತು ನಿಮ್ಮ ಉಳಿತಾಯವನ್ನು ಬೆಳೆಸಿ.