ಮುಂಬರುವ ಇನಿಶಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ)ಗೆ ಅರ್ಜಿ ಸಲ್ಲಿಸುವುದರ ಪ್ರಯೋಜನಗಳು

 • 100% digital process

  100% ಡಿಜಿಟಲ್ ಪ್ರಕ್ರಿಯೆ

  ಕೆಲವೇ ನಿಮಿಷಗಳಲ್ಲಿ 100% ಕಾಗದರಹಿತ ಪ್ರಕ್ರಿಯೆಯೊಂದಿಗೆ ಯಾವುದೇ ಶುಲ್ಕಗಳಿಲ್ಲದೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಿರಿ.

 • Easy apply through UPI

  ಯುಪಿಐ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಿ

  ನಿಮ್ಮ ಯುಪಿಐ ಐಡಿ ಬಳಸಿ ಅರ್ಜಿ ಸಲ್ಲಿಸಿ; ಯಾವುದೇ ದಾಖಲೆ ಅಥವಾ ಬ್ಯಾಂಕ್ ವಿವರಗಳು ಬೇಕಾಗಿಲ್ಲ.
 • Instant form fill

  ತ್ವರಿತ ಫಾರ್ಮ್ ಭರ್ತಿ

  ಬಿಎಫ್ಎಸ್ಎಲ್ ಅಕೌಂಟ್ ಹೋಲ್ಡರ್‌ಗಳ ಐಪಿಒ ಅರ್ಜಿ ಫಾರ್ಮ್‌ನಲ್ಲಿ ವಿವರಗಳು ಮುಂಚಿತವಾಗಿಯೇ ಭರ್ತಿಯಾಗಿರುತ್ತವೆ, ಆದರಿಂದ ಅವರು ತಕ್ಷಣವೇ ಅರ್ಜಿ ಸಲ್ಲಿಸಬಹುದು.

ಐಪಿಒ ಅಂದರೆ ಇನಿಶಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಆಗಿದ್ದು, ಇದರಲ್ಲಿ ಒಂದು ಖಾಸಗಿ ಮಾಲೀಕತ್ವದ ಕಂಪನಿಯ ಷೇರುಗಳನ್ನು ಮೊದಲ ಬಾರಿಗೆ ಸಾರ್ವಜನಿಕರಿಗೆ ಮಾರಾಟಕ್ಕಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದು ಕಂಪನಿಗಳು ತಮ್ಮ ವಿವಿಧ ವ್ಯಾಪಾರ ಕಾರ್ಯಾಚರಣೆಗಳು ಅಥವಾ ವ್ಯಾಪಾರ ವಿಸ್ತರಣೆಗಾಗಿ ಹಣವನ್ನು ಸಂಗ್ರಹಿಸುವ ಮಾಧ್ಯಮವಾಗಿದೆ. ಹೂಡಿಕೆದಾರರು ಬಿಡ್ಡಿಂಗ್ ಮೂಲಕ ಐಪಿಒ ಸಮಯದಲ್ಲಿ ನೇರವಾಗಿ ವಿತರಕ ಕಂಪನಿಯಿಂದ ಷೇರುಗಳನ್ನು ಖರೀದಿಸುತ್ತಾರೆ. ಇನಿಶಿಯಲ್ ಆಫರಿಂಗ್ ನಂತರ, ಷೇರುಗಳನ್ನು ಎರಡನೇ ಮಾರುಕಟ್ಟೆಯಲ್ಲಿ (ಸ್ಟಾಕ್ ಎಕ್ಸ್‌ಚೇಂಜ್) ಲಿಸ್ಟ್ ಮಾಡಲಾಗುತ್ತದೆ ಮತ್ತು ಅವುಗಳನ್ನು ಹೂಡಿಕೆದಾರರು ಟ್ರೇಡ್ ಮಾಡಬಹುದು.

*ಷರತ್ತು ಅನ್ವಯ

ಹೆಚ್ಚುವರಿ ಓದು: ಡಿಮ್ಯಾಟ್ ಅಕೌಂಟ್ ತೆರೆಯಿರಿ

ಇನ್ನಷ್ಟು ಓದಿರಿ ಕಡಿಮೆ ಓದಿ

ಐಪಿಒಗಳಲ್ಲಿ ಹೂಡಿಕೆ ಮಾಡುವುದು ಹೇಗೆ

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ ಜೊತೆಗೆ, ನಿಮ್ಮ ಯುಪಿಐ ಐಡಿ ಬಳಸಿ ಐಪಿಒಗಳಿಗೆ ಅಪ್ಲೈ ಮಾಡಬಹುದು. ಐಪಿಒಗಳಲ್ಲಿ ಹೂಡಿಕೆ ಮಾಡುವ ಹಂತಗಳು ಇಲ್ಲಿವೆ

 1. 1 ಓಪನ್ ಐಪಿಒ ಹೊಂದಿರುವ ಕಂಪನಿಗಳನ್ನು ನೋಡಲು ನಮ್ಮ ಬಜಾಜ್ ಫಿನ್‌ಸರ್ವ್‌ ಸೆಕ್ಯೂರಿಟೀಸ್ ವೆಬ್‌ಸೈಟ್‌ಗೆ ಭೇಟಿ ನೀಡಿ
 2. 2 'ಆನ್‍‍ಲೈನ್‌ನಲ್ಲಿ ಅರ್ಜಿ ಸಲ್ಲಿಸಿ' ಮೇಲೆ ಕ್ಲಿಕ್ ಮಾಡಿ'
 3. 3 ಮುಂದುವರೆಯಲು ನಿಮ್ಮ ಪ್ಯಾನ್ ನಂಬರ್ ಮತ್ತು ಮೊಬೈಲ್ ನಂಬರ್ ಸೇರಿಸಿ
 4. 4 ನೀವು ಬಿಎಫ್ಎಸ್ಎಲ್‍ನಲ್ಲಿ ಅಕೌಂಟ್ ಹೊಂದಿದ್ದರೆ, ಎಲ್ಲಾ ವಿವರಗಳೂ ಮುಂಚಿತವಾಗಿಯೇ ಭರ್ತಿಯಾಗುತ್ತವೆ. ಲಾಟ್ ಸೈಜ್ ಆಯ್ಕೆಮಾಡಿ ಮತ್ತು ಯುಪಿಐ ಐಡಿ ನಮೂದಿಸಿ
 5. 5 ನಿಮ್ಮ ಅರ್ಜಿ ಸಲ್ಲಿಸಿ
 6. 6 ನಿಮ್ಮ ಯುಪಿಐ ಆ್ಯಪ್ ತೆರೆಯಿರಿ ಮತ್ತು ಬ್ಲಾಕ್ ಮ್ಯಾಂಡೇಟ್ ಕೋರಿಕೆಯನ್ನು ಅನುಮೋದಿಸಿ. ಐಪಿಒಗಳಿಗೆ ಅನ್ವಯಿಸಲಾದ ಮೊತ್ತವನ್ನು ನಿಮ್ಮ ಬ್ಯಾಂಕ್ ಅಕೌಂಟ್‍ನಲ್ಲಿ ಬ್ಲಾಕ್ ಮಾಡಲಾಗುತ್ತದೆ

ಗಮನಿಸಿ:

 • ಬ್ಲಾಕ್ ಮ್ಯಾಂಡೇಟ್ ಅನುಮೋದಿಸುವುದು ಕಡ್ಡಾಯವಾಗಿದೆ ಇಲ್ಲದಿದ್ದರೆ ನಿಮ್ಮ ಐಪಿಒ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ
 • ಕೆಲವು ಸಂದರ್ಭಗಳಲ್ಲಿ, ನಿಮ್ಮ ಯುಪಿಐ ಆ್ಯಪ್‌ನಲ್ಲಿ ಕೋರಿಕೆಯು ತಡವಾಗಿ ಕಾಣಿಸಿಕೊಳ್ಳಬಹುದು

ಹೆಚ್ಚುವರಿ ಓದು: ಟ್ರೇಡಿಂಗ್ ಅಕೌಂಟ್ ತೆರೆಯಿರಿ

ಆಗಾಗ ಕೇಳುವ ಪ್ರಶ್ನೆಗಳು

ಐಪಿಒ ಎಂದರೇನು?

ಐಪಿಒ ಎಂದರೆ ಇನಿಶಿಯಲ್ ಪಬ್ಲಿಕ್ ಆಫರಿಂಗ್. ಐಪಿಒನಲ್ಲಿ, ಒಂದು ಖಾಸಗಿ ಕಂಪನಿಯು ತನ್ನ ವಿವಿಧ ವ್ಯಾಪಾರ ಕಾರ್ಯಾಚರಣೆಗಳು ಅಥವಾ ವಿಸ್ತರಣೆಗೆ ಬಂಡವಾಳವನ್ನು ಸಂಗ್ರಹಿಸಲು ಮೊದಲ ಬಾರಿಗೆ ಸಾಮಾನ್ಯ ಜನರಿಗೆ ತನ್ನ ಷೇರುಗಳನ್ನು ಮಾರಾಟ ಮಾಡುತ್ತದೆ.

ಐಪಿಒಗೆ ಅರ್ಜಿ ಸಲ್ಲಿಸಲು ಡಿಮ್ಯಾಟ್ ಅಕೌಂಟ್ ಬೇಕಾಗುತ್ತದೆಯೇ?

ಹೌದು, ಐಪಿಒ ಗೆ ಅಪ್ಲೈ ಮಾಡಲು ನಿಮಗೆ ಡಿಮ್ಯಾಟ್ ಅಕೌಂಟ್ ಅಗತ್ಯವಿದೆ. ಡಿಮ್ಯಾಟ್ ಅಕೌಂಟ್ ನೀವು ಖರೀದಿಸುವ ಷೇರುಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುತ್ತದೆ. ಐಪಿಒ ಗೆ ಅರ್ಜಿ ಸಲ್ಲಿಸಲು ಡಿಮ್ಯಾಟ್ ಅಕೌಂಟ್ ಕ್ಲೈಂಟ್ ಐಡಿ ಮತ್ತು ಡೆಪಾಸಿಟರಿ ಪಾರ್ಟಿಸಿಪೆಂಟ್ ಐಡಿ (ಡಿಪಿಐಡಿ) ಯನ್ನು ನಮೂದಿಸಬೇಕು.

ಲಾಟ್ ಸೈಜ್ ಎಂದರೇನು?

ಲಾಟ್ ಸೈಜ್ ಎಂದರೆ ಐಪಿಒಗಳಲ್ಲಿ ಹೂಡಿಕೆ ಮಾಡುವಾಗ ಹೂಡಿಕೆದಾರರು ಮೊದಲೇ ನಿರ್ಧರಿಸಿದ ಷೇರುಗಳ ಸಂಖ್ಯೆಯಾಗಿದೆ. ಉದಾಹರಣೆಗೆ, ಒಂದು ಐಪಿಒ ಲಾಟ್ ಸೈಜ್ 30 ಆಗಿದ್ದರೆ, ನೀವು 30, 60, 90, 120 (ಹೀಗೆ ಮುಂದುವರೆಯುವ) ಷೇರುಗಳಿಗೆ ಅರ್ಜಿ ಸಲ್ಲಿಸಬಹುದು.

ನಾನು ಎಷ್ಟು ಷೇರುಗಳಿಗೆ ಅರ್ಜಿ ಸಲ್ಲಿಸುತ್ತೇನೆಯೋ ಅಷ್ಟೂ ನನಗೆ ಸಿಗುತ್ತವೆಯೇ?

ಒಂದು ವೇಳೆ ಷೇರುಗಳು ಓವರ್‌ಸಬ್‍ಸ್ಕ್ರೈಬ್ ಆದರೆ, ಅರ್ಜಿ ಸಲ್ಲಿಸಿದ ಸಂಖ್ಯೆಗಿಂತ ಕಡಿಮೆ ಷೇರುಗಳು ಸಿಗಬಹುದು. ಹಾಗಾದಾಗ, ಬ್ಯಾಂಕ್ ಅಕೌಂ‍ಟ್‍ನಲ್ಲಿ ಬ್ಲಾಕ್ ಮಾಡಲಾದ ಮೊತ್ತವನ್ನು ಹಂಚಿಕೆಯಾದಷ್ಟಕ್ಕೆ ಮಾತ್ರ ಡೆಬಿಟ್ ಮಾಡಲಾಗುತ್ತದೆ, ಉಳಿದದ್ದನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ. ಒಂದೇ ಒಂದು ಷೇರೂ ಹಂಚಿಕೆಯಾಗದಿದ್ದರೆ, ಅಷ್ಟೂ ಮೊತ್ತವನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ.

ಹಂಚಿಕೆಯಾದ ಮೇಲೆ ನಾನು ಷೇರುಗಳನ್ನು ಎಲ್ಲಿ ಪಡೆಯುತ್ತೇನೆ?

ಹಂಚಿಕೆಯಾದ ಷೇರುಗಳನ್ನು ಐಪಿಒ ಅಪ್ಲಿಕೇಶನ್ ಫಾರ್ಮ್‍ನಲ್ಲಿ ನೀಡಿರುವ ನಿಮ್ಮ ಡಿಮ್ಯಾಟ್ ಅಕೌಂಟ್‍ನಲ್ಲಿ ಡೆಪಾಸಿಟ್ ಮಾಡಲಾಗುತ್ತದೆ.

ಎಫ್‍ಪಿಒ ಎಂದರೇನು?

ಎಫ್‍ಪಿಒ ಎಂದರೆ ಫಾಲೋ-ಆನ್ ಪಬ್ಲಿಕ್ ಆಫರ್. ಐಪಿಒಗೆ ವ್ಯತಿರಿಕ್ತವಾಗಿ, ಸ್ಟಾಕ್ ಎಕ್ಸ್‌ಚೇಂಜ್‍ನಲ್ಲಿ ಈಗಾಗಲೇ ಲಿಸ್ಟ್ ಆಗಿರುವ ಕಂಪನಿಯು ಬಂಡವಾಳ ಸಂಗ್ರಹಿಸುವ ನಿಟ್ಟಿನಲ್ಲಿ ಹೊಸ ಷೇರುಗಳನ್ನು ಪಬ್ಲಿಕ್ ಸಬ್‍ಸ್ಕ್ರಿಪ್ಷನ್‌ಗಾಗಿ ವಿತರಿಸುವುದಕ್ಕೆ ಎಫ್‍ಪಿಒ ನೀಡಲಾಗುತ್ತದೆ.

ಐಪಿಒನಲ್ಲಿ ವಿತರಣಾ ಬೆಲೆ ಎಂದರೇನು?

ಐಪಿಒನಲ್ಲಿರುವ ಪ್ರತಿ ಇಕ್ವಿಟಿ ಷೇರಿನ ಬೆಲೆಯನ್ನು ವಿತರಣಾ ಬೆಲೆ ಎನ್ನುವರು. ಐಪಿಒನಲ್ಲಿ ಎರಡು ವಿಧಗಳಿವೆ: ಬುಕ್ ಬಿಲ್ಡಿಂಗ್ ಐಪಿಒ ಮತ್ತು ಫಿಕ್ಸೆಡ್ ಪ್ರೈಸ್ ಐಪಿಒ. ಬುಕ್ ಬಿಲ್ಡಿಂಗ್‌ ಐಪಿಒನಲ್ಲಿ, ಹೂಡಿಕೆದಾರರಿಗೆ ಬಿಡ್ ಮಾಡಲು ಬೆಲೆಯ ಶ್ರೇಣಿಯನ್ನು ನೀಡಲಾಗುತ್ತದೆ. ಫಿಕ್ಸೆಡ್ ಪ್ರೈಸ್ ಐಪಿಒನಲ್ಲಿ, ವಿತರಕ ಕಂಪನಿಯು ಪ್ರತಿ ಷೇರ್‌ಗೆ ಬೆಲೆಯನ್ನು ನಿಗದಿಪಡಿಸುತ್ತದೆ ಮತ್ತು ಹೂಡಿಕೆದಾರರು ಆ ಬೆಲೆಯಲ್ಲಿ ಮಾತ್ರ ಷೇರುಗಳನ್ನು ಖರೀದಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ