ಫಾರಂ 15G ಮತ್ತು ಫಾರಂ 15H ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿವರಗಳು

ಫಿಕ್ಸೆಡ್ ಬಡ್ಡಿ ದರ ಮತ್ತು ಆಕರ್ಷಕ ಆದಾಯಗಳೊಂದಿಗೆ, ಅನೇಕ ಹೂಡಿಕೆದಾರರಿಗೆ ಫಿಕ್ಸೆಡ್ ಡೆಪಾಸಿಟ್ ಒಂದು ಪ್ರಮುಖ ಆದ್ಯತೆಯ ಹೂಡಿಕೆಯಾಗಿದೆ. ಆದರೂ, ನೀವು ಫಿಕ್ಸೆಡ್ ಡೆಪಾಸಿಟ್‌‌ ನಿಂದ ಗಳಿಸುವ ಬಡ್ಡಿ ಸಂಪೂರ್ಣ ತೆರಿಗೆಯನ್ನು ಒಳಗೊಂಡಿರುತ್ತದೆ. ಇತ್ತೀಚಿಗಿನ ಮಧ್ಯಂತರ ಬಜೆಟ್ ಪ್ರಕಾರ, ಬ್ಯಾಂಕ್‌‌ಗಳು ಮತ್ತು ಪೋಸ್ಟ್ ಆಫೀಸ್‌‌ ಡೆಪಾಸಿಟ್‌ಗಳಿಗೆ TDS ಮಿತಿ ರೂ. 40,000 ದಿಂದ ರೂ. 10,000 ಹೆಚ್ಚಳಗೊಂಡಿದೆ. ಯಾರ ಬಡ್ಡಿ ಗಳಿಕೆಯು ಈ ಮೊತ್ತಕ್ಕಿಂತ ಅಧಿಕವಾಗಿರುತ್ತದೆಯೋ, ಫಾರಂ 5G ಮತ್ತು Form 15H ಆರಂಭಿಕ ಹಣಕಾಸಿನ ವರ್ಷಗಳಿಂದ ನೀವು TDS ಅನ್ನು ಕಡೆಗಣಿಸಲು ಸಹಾಯ ಮಾಡುತ್ತದೆ,.

ಫಾರಂ 15H ಎಂದರೇನು?

ಫಾರಂ 15H – ನೀವು ಈ ಷರತ್ತುಗಳನ್ನು ಪೂರೈಸಿದರೆ, ನೀವು ಫಿಕ್ಸೆಡ್ ಡೆಪಾಸಿಟ್‌‌ಗಾಗಿ ಫಾರಂ 15H ಅನ್ನು ಒದಗಿಸಬಹುದು:

  • ನೀವು ಒಬ್ಬ ವ್ಯಕ್ತಿ ಮತ್ತು ಭಾರತೀಯ ನಿವಾಸಿಯಾಗಿರಬೇಕು
  • ನೀವು ಕನಿಷ್ಠ 60 ವರ್ಷ ವಯಸ್ಸಿನವರಾಗಿರಬೇಕು
  • ನಿಮ್ಮ ಒಟ್ಟು ಆದಾಯದ ಮೇಲೆ ಲೆಕ್ಕಾಚಾರ ಮಾಡಿದ ತೆರಿಗೆಯು ಶೂನ್ಯವಾಗಿರಬೇಕು

ಫಾರಂ 15G ಅಥವಾ ಫಾರಂ 15H ಅನ್ನು ಭರ್ತಿ ಮಾಡುವುದು ಹೇಗೆ?

ಫಾರಂ 15G ಮತ್ತು 15H ಅನ್ನು ಒದಗಿಸಲು ಒಂದು ಬಾರಿ ಅಗತ್ಯ ಷರತ್ತುಗಳನ್ನು ಪೂರೈಸಿದ ನಂತರ, ನೀವು ಭರ್ತಿ ಮಾಡಲು ಆರಂಭಿಸಬಹುದು. ನೀವು ಫಾರಂ 15G ಮತ್ತು 15H ಅನ್ನು ಭರ್ತಿ ಮಾಡುವುದು ಹೇಗೆ ಎಂದು ಅಂದುಕೊಂಡಿದ್ದೀರಾ? ಅದು ಸುಲಭ. ನೀವು ತೆಗೆದುಕೊಳ್ಳಬೇಕಾದ ಹಂತಗಳು ಇಲ್ಲಿವೆ:

  • ಫಾರಂ 15G ಮತ್ತು ಫಾರಂ 15H ನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಭರ್ತಿ ಮಾಡಿ
  • ಹೇಳಿಕೆಯೊಂದಿಗೆ ನಿಮ್ಮ PAN ಪ್ರತಿಯನ್ನು ಅಟ್ಯಾಚ್ ಮಾಡಿ
  • ನಿಮ್ಮ ಫೈನಾನ್ಷಿಯರ್‌‌ಗೆ ಫಾರಂ ಸಲ್ಲಿಸಿ.

ನೀವು ಉದ್ದದ ಸಾಲುಗಳನ್ನು ಮತ್ತು ಪ್ರಯಾಸಕರ ಪ್ರಕ್ರಿಯೆಗಳನ್ನು ಕಡೆಗಣಿಸುವುದಾದರೆ, ಈ ಫಾರಂಗಳನ್ನು ಆನ್ಲೈನಿನಲ್ಲಿ ಭರ್ತಿ ಮಾಡಲು ಆಲೋಚಿಸಿ.

G ಮತ್ತು H ಎರಡೂ ಫಾರಂಗಳೂ ವರ್ಷಕ್ಕೆ ಮಾನ್ಯವಾಗಿರುತ್ತದೆ, ಮತ್ತು ಇವುಗಳನ್ನು ವರ್ಷದ ಆರಂಭದಲ್ಲಿ ನಿಮ್ಮ ಹಣಕಾಸುದಾರರಿಗೆ ಸಲ್ಲಿಸಬೇಕು. ನೀವು ಫಾರಂಗಳನ್ನು ಸಲ್ಲಿಸುವ ಮೊದಲೇ ನಿಮ್ಮ ಹಣಕಾಸುದಾರರು ತೆರಿಗೆಯನ್ನು ಕಡಿತಗೊಳಿಸಿಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದನ್ನು ಮರಳಿಸಲು ಬ್ಯಾಂಕಿಗೆ ಸಾಧ್ಯವಾಗದೇ ಇರಬಹುದು. ನಿಮ್ಮ ಹಣವನ್ನು ಹಿಂತಿರುಗಿ ಪಡೆಯಲು ನೀವು ನಿಮ್ಮ ITR ಫೈಲ್ ಮಾಡಬೇಕು ನಿಮ್ಮ TDR ಮರುಪಾವತಿಗೆ ಕ್ಲೈಮ್ ಮಾಡಬೇಕು.

ಫಾರಂ 15G ಮತ್ತು ಫಾರಂ 15H PDF ಅನ್ನು ಡೌನ್ಲೋಡ್ ಮಾಡುವುದು ಹೇಗೆ?

ಫಾರಂ 15G ಅಥವಾ ಫಾರಂ 15H ಅನ್ನು ಡೌನ್ಲೋಡ್ ಮಾಡಲು, ನೀವು ಏನು ಮಾಡಬೇಕು ಎಂಬುದು ಇಲ್ಲಿದೆ:

  • ಆದಾಯ ತೆರಿಗೆ ವಿಭಾಗದ ವೆಬ್‌‌ಸೈಟ್ ಅನ್ನು ಭೇಟಿ ನೀಡಿ
  • ನಿಮ್ಮ ಅವಶ್ಯಕತೆಗೆ ತಕ್ಕಂತೆ 'ಆಗಾಗ್ಗೆ ಬಳಸುವ ಫಾರಂಗಳು' ಅಡಿಯಲ್ಲಿ ಫಾರಂ 15G ಅಥವಾ ಫಾರಂ 15H ಗಾಗಿ ನೋಡಿ.
  • ಅದರ ನಂತರದಲ್ಲಿ ಇರುವ PDF ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಫಾರ್ಮ್ ಡೌನ್ಲೋಡ್ ಮಾಡಿ

ಒಂದು ಬಾರಿ ಫಾರಂ ಡೌನ್ಲೋಡ್ ಮಾಡಿದ ಮೇಲೆ, ಅದರ ಪ್ರಿಂಟ್ ಆದ 3 ಪ್ರತಿಗಳನ್ನು ತಯಾರಿಟ್ಟುಕೊಳ್ಳಿ. ಪ್ರಿಂಟೆಡ್ ಡಾಕ್ಯುಮೆಂಟ್ ಅನ್ನು ಸಹಿ ಮಾಡಿ ಮತ್ತು ನಿಮ್ಮ ಫೈನಾನ್ಷಿಯರ್‌‌ಗೆ ಸಲ್ಲಿಸಿ.

ಇನ್ನೂ ಸಂದೇಹವಿದೆಯೇ? ಬಜಾಜ್ ಫೈನಾನ್ಸ್ ಆಗಾಗ ಕೇಳುವ ಪ್ರಶ್ನೆಗಳನ್ನು ನೋಡಿ ಅಥವಾ ನೇರವಾಗಿ ಬಜಾಜ್ ಫಿನ್‌ಸರ್ವ್ ಕಸ್ಟಮರ್ ಕೇರ್ ಸಂಪರ್ಕಿಸಿ.