ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ಸ್ಟಾಕ್ಸ್

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ಸ್ಟಾಕ್ಸ್

ಫಿಕ್ಸೆಡ್‌ ಡೆಪಾಸಿಟ್‌ ಮತ್ತು ಸ್ಟಾಕ್‌ಗಳು ನಮಗೆ ಇಂದು ಲಭ್ಯವಿರುವ ಎರಡು ಹೂಡಿಕೆಯ ಸಾಧನಗಳಾಗಿದೆ. ನಿಮ್ಮ ಅಪಾಯದ ಮಟ್ಟವನ್ನು ಎದುರಿಸುವ ಮನಸ್ಥಿತಿಯನ್ನು ಅನುಸರಿಸಿ ಹಾಗೂ ನೀವು ಎಷ್ಟು ಹೂಡಿಕೆಯನ್ನು ಮಾಡಬಯಸುವಿರಿ ಎಂಬುದರ ಆಧಾರದ ಮೇಲೆ ನೀವು ಸರಿಯಾದ ಆಯ್ಕೆಯನ್ನು ಮಾಡಬಹುದು.


ನೀವು ಹೂಡಿಕೆ ಕ್ಷೇತ್ರದಲ್ಲಿ ಹೊಸಬರಾಗಿದ್ದರೆ, ಆಯ್ಕೆಗಳನ್ನು ಮಾಡುವುದರಲ್ಲಿ ಗೊಂದಲಕ್ಕೊಳಗಾಗಬಹುದು. ಮ್ಯೂಚುಯಲ್ ಫಂಡ್‍ಗಳು, ಮಾರುಕಟ್ಟೆ ಷೇರುಗಳು, ಫಿಕ್ಸೆಡ್‌ ಡೆಪಾಸಿಟ್‌ಗಳು ಮತ್ತು ರಿಕರಿಂಗ್ ಡೆಪಾಸಿಟ್‌ಗಳು ಎಲ್ಲವೂ ಒಂದೇ ತರಹ ಕಾಣುತ್ತದೆ. ವಿವಿಧ ಬಂಡವಾಳ ಆಯ್ಕೆಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಬೇಕು. ನೀವು ಆಯ್ಕೆ ಮಾಡುವ ಮೊದಲು ಸಂಪೂರ್ಣವಾಗಿ ಲಭ್ಯವಿರುವ ಎಲ್ಲಾ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳಬೇಕು.

ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಒಂದು ಮೂಲಭೂತ ಪಕ್ಷಿನೋಟ:

FD (ಫಿಕ್ಸೆಡ್‌ ಡೆಪಾಸಿಟ್‌ಗಳು) ಗಳಲ್ಲಿ ಒಗ್ಗೂಡಿಸಿದ ಮತ್ತು ಒಗ್ಗೂಡಿಸದ ಎಂಬ ಎರಡು ವಿಧಗಳಿವೆ. ಒಗ್ಗೂಡಿಸಿದ FD ಬಡ್ಡಿಯನ್ನು ಒಟ್ಟುಗೂಡಿಸಿ ವರ್ಷಕ್ಕೊಮ್ಮೆ ನೀಡುತ್ತದೆ. ಒಗ್ಗೂಡಿಸದ FD ಯಲ್ಲಿ ಬಡ್ಡಿಯನ್ನು ನಿಯಮಿತ ಅಂತರದಲ್ಲಿ ನೀಡಲಾಗುವುದು, ಈ ಅಂತರಗಳು ತಿಂಗಳಿಗೊಮ್ಮೆ, ತ್ರೈಮಾಸಿಕಕ್ಕೊಮ್ಮೆ, ಅರೆ-ವಾರ್ಷಿಕ ಮತ್ತು ವರ್ಷಕ್ಕೊಮ್ಮೆ ನೀಡಲಾಗುವುದು. ಎರಡೂ ಸಂದರ್ಭಗಳಲ್ಲಿ ನಿಮ್ಮ ಹಣವು ನಿಗದಿತ ಅವಧಿಗೆ ಲಾಕ್‌ ಇನ್ ಆಗಿರುತ್ತದೆ.


ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ದೊರೆಯುವ ಅನುಕೂಲಗಳು ಹೀಗಿವೆ:

ಅವು ಕಡಿಮೆ ಅಪಾಯಕಾರಿ: ಫಿಕ್ಸೆಡ್ ಡೆಪಾಸಿಟ್ ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿರದ ಕಾರಣ ಕಡಿಮೆ ಅಪಾಯದ ಹೂಡಿಕೆಗಳಾಗಿವೆ. ಆದ್ದರಿಂದ, ನಿಮ್ಮ ಹಣವು ಸ್ಥಿರವಾದ ವೇಗದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಅವುಗಳು ಸಾಮಾನ್ಯ ವ್ಯಾಪ್ತಿಯು 7% - 8% ಆಗಿರುತ್ತದೆ ಮತ್ತು ಅವುಗಳು ಪೂರ್ವ ನಿರ್ಧಾರಿತವಾಗಿರುತ್ತದೆ. ಹಾಗೂ ಉತ್ತಮ ದರವನ್ನು ನೀಡುತ್ತವೆ. ಆದರೆ ಮಾರುಕಟ್ಟೆಯಲ್ಲಿ ಆಗುವ ಏರಿಳಿತಗಳಿಂದ ಲಾಭ ಹೊಂದುವ ಅವಕಾಶವನ್ನು ನೀವು ಹೊಂದಿರದಿದ್ದರೂ, ನಿಮ್ಮ ಹಣವು ಸುರಕ್ಷಿತವಾಗಿದೆ ಮತ್ತು ಅವಧಿಯ ಕೊನೆಯಲ್ಲಿ ನೀವು ಒಂದು ನಿರ್ದಿಷ್ಟ ಮೊತ್ತವನ್ನು ಪಡೆಯುತ್ತೀರಿ. ಅದರ ಸ್ಥಿರತೆ ಹೆಚ್ಚಾಗುವುದರಿಂದ ಈ ರೀತಿಯ ಹೂಡಿಕೆಯು ಹೂಡಿಕೆದಾರರ ಒಲವನ್ನು ಪಡೆದುಕೊಂಡಿದೆ.


ನಿಗದಿತ ಅವಧಿ FD ಗಳು ನಿಗದಿತ ಅವಧಿಯನ್ನು ಹೊಂದಿರುತ್ತದೆ ಹಾಗಾಗಿ ನಿಮ್ಮ ಹಣದ ಹೂಡಿಕೆಯು ಒಂದು ಅವಧಿಯ ಸಮಯದವರೆಗೂ ಸುರಕ್ಷಿತವಾಗಿರುತ್ತದೆ. ನಿಮಗೆ 12 ಯಿಂದ 60 ತಿಂಗಳವರೆಗೂ ಅವಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವು ಇರುತ್ತದೆ. ಆದಾಗ್ಯೂ ಇದು ನಿಮಗೆ ಮೆಚ್ಯೂರಿಟಿಗೆ ಮುಂಚೆಯೇ ಹಣವನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ನಿಮಗೆ ಹಣ ಬೇಕಾದಲ್ಲಿ ನಿಮ್ಮ FD ಯನ್ನು ಸುಲಭವಾಗಿ ಮುರಿಯಬಹುದು ಅಥವಾ FDಯ ಮೇಲೆ ಲೋನ್‌ ತೆಗೆದುಕೊಳ್ಳಬಹುದು. ಆದರೆ ಗಮನಿಸಿ ನಿಮ್ಮ ಬಡ್ಡಿಯು ರೂ. 10,000 ಗಳನ್ನು ಮೀರಿದರೆ ಆಗ ಅದು ತೆರಿಗೆಗೆ ಒಳಪಡುವುದು. ಮತ್ತೂ ಹೇಳಬೇಕೆಂದರೆ ನೀವೇನಾದರೂ ಮೆಚ್ಯೂರಿಟಿಗೆ ಮುಂಚೆಯೇ ಹಿಂತೆಗೆದುಕೊಂಡರೆ ಆಗ ನಿಮ್ಮ ಬಡ್ಡಿಯ ಭಾಗವನ್ನು ನೀವು ಕಳೆದುಕೊಳ್ಳುವಿರಿ.

ಷೇರುಗಳ ಹೂಡಿಕೆಯ ಬಗ್ಗೆ ಒಂದು ಸಾಮಾನ್ಯ ಮೇಲ್ನೋಟ:

ಷೇರುಗಳ ಹೂಡಿಕೆಯು ಮಾರುಕಟ್ಟೆ ಶಕ್ತಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ನೀವು ಆಳವಾದ ಮಾರುಕಟ್ಟೆಯ ಜ್ಞಾನವನ್ನು ಹೊಂದಿದ್ದರೂ ಮತ್ತು ಪಕ್ವವಾದ ಮಾರುಕಟ್ಟೆಯ ಅಪಾಯವನ್ನು ಎದಿರಿಸುವ ಸಾಮರ್ಥ್ಯವನ್ನು ಹೊಂದಿದ್ದರೂ ಸಹ ನಿಮಗೆ ಲಾಭ ದೊರೆಯುವುದೆಂಬ ಖಚಿತವಾದ ಭರವಸೆಯು ಇಲ್ಲ. ಆಗೊಮ್ಮೆ ಹೀಗೊಮ್ಮೆ ಲಾಭ ಗಳಿಸಬಹುದಾದರೂ ಅದರಲ್ಲಿ ಖಚಿತತೆಯು ಇರುವುದಿಲ್ಲ. ಆದ್ದರಿಂದ ನೀವು ಈಗ ತಾನೆ ಈ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟಿದ್ದರೆ ಮಾರುಕಟ್ಟೆಯ ಹರಿವನ್ನು ತಿಳಿದುಕೊಳ್ಳಲು ಸಣ್ಣ ಮೊತ್ತವನ್ನು ಹೂಡುವುದು ಜಾಣತನ. ಹೆಚ್ಚುವರಿಯಾಗಿ ಹೇಳುವುದಾದರೆ ಇಂತಹ ಹೂಡಿಕೆಯ ಸಾಧನಗಳು ಹೆಚ್ಚಿನ ಅಪಾಯ ಮಟ್ಟವನ್ನು ಎದಿರಿಸುವ ಎದೆಗಾರಿಕೆಯುಳ್ಳವರಿಗೆ ಹೊಂದುತ್ತದೆ. ನಿಮ್ಮ ಎದೆಗಾರಿಕೆಯು ನೀವು ಎಷ್ಟರ ಮಟ್ಟಿಗೆ ಆರ್ಥಿಕ ನಷ್ಟವನ್ನು ತಡೆದುಕೊಳ್ಳುವಿರಿ ಎಂಬುದನ್ನು ವ್ಯಾಖ್ಯಾನಿಸಲ್ಪಡುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀವು ಸ್ಟಾಕ್ ಮಾರುಕಟ್ಟೆಯಲ್ಲಿ ಮುನ್ನೆಡೆಯುವುದು ಉತ್ತಮ. ಕನಿಷ್ಠ ಪಕ್ಷ ಸದ್ಯದ ಸ್ಥಿತಿಯಲ್ಲಿ.

ನೀವು ಸ್ಟಾಕ್‌ಗಳಲ್ಲಿ ಹೂಡಲು ನಿಶ್ಚಯಿಸಿದರೂ ಕೂಡ ನಿಮ್ಮ ಉಳಿತಾಯದ ಸ್ವಲ್ಪ ಭಾಗವನ್ನು FD ಮಾಡುವುದು ಒಳ್ಳೆಯದು ಅದು ನಿಮ್ಮ ಹೂಡಿಕೆಗೆ ಸುರಕ್ಷಿತೆಯನ್ನು ನೀಡುತ್ತದೆ ಮತ್ತು ಖಾತರಿಯಾದ ಆದಾಯವನ್ನು ನೀಡುತ್ತದೆ. ಅಲ್ಲದೆ ಅದು ಕಡಿಮೆ ಅಪಾಯವನ್ನು ಹೊಂದಿದೆ, ಮತ್ತು ಅದರಲ್ಲಿ ನಿಮ್ಮ ತೊಡಗುವಿಕೆಯು ಇರುವುದಿಲ್ಲ. ನೀವು ಒಮ್ಮೆ FD ತೆರೆದರೆ ಅದರ ಮೇಲ್ವಿಚಾರಣೆ ಮಾಡಬೇಕಿಲ್ಲ.

ನೀವು ಪರಿಗಣಿಸಬಹುದಾದ ಅತ್ಯುತ್ತಮ ಫಿಕ್ಸೆಡ್‌ ಡೆಪಾಸಿಟ್‌ಗಳನ್ನು ಬಜಾಜ್ ಫೈನಾನ್ಸ್ ಒದಗಿಸುತ್ತದೆ. ಸುರಕ್ಷತೆ ಮತ್ತು ಹೆಚ್ಚಿನ ಸ್ಥಿರತೆಯ ದರದ ವಿಷಯಕ್ಕೆ ಬಂದರೆ ಅದು ಎಲ್ಲಾ ಆಯಾಮಗಳಲ್ಲೂ ಉನ್ನತ ಮಟ್ಟದ್ದಾಗಿದೆ ಮತ್ತು 12–60 ತಿಂಗಳುಗಳ ಅನುಕೂಲಕರ ಅವಧಿಯನ್ನು ಹೊಂದಿದೆ. ನೀವು ಕೇವಲ ರೂ. 25,000 ಹೂಡಿಕೆ ಮಾಡಬಹುದು ಹಾಗೂ ಹಿರಿಯ ನಾಗರೀಕರಾಗಿದ್ದರೆ ಮತ್ತು ಹೆಚ್ಚಿನ FD ಬಡ್ಡಿ ದರಗಳನ್ನು ಆನಂದಿಸಬಹುದು. ನಿಮ್ಮ FD ಆದಾಯವನ್ನು ಲೆಕ್ಕ ಹಾಕಲು ಬಳಸಲು ಸುಲಭವಾದ FD ಕ್ಯಾಲ್ಕುಲೇಟರ್ ಅನ್ನು ಬಳಸಬಹುದು. ಇದರ ಹೊರತಾಗಿ, ಇದರ ಜೊತೆಯಲ್ಲಿ ಕೆಲವು ಅನುಕೂಲಗಳಾದ ನಿಮ್ಮ ಹೂಡಿಕೆಯನ್ನು ನೋಡಲು ಆನ್‌ಲೈನ್ ಅಕ್ಸೆಸನ್ನು ನೀಡುತ್ತದೆ.