ಕರೆ, SMS, ಇ-ಮೇಲ್ ಮೂಲಕ ನಮ್ಮನ್ನು ತಲುಪಿ ಅಥವಾ ನಮ್ಮ ಬ್ರಾಂಚ್ ಆಫೀಸಿಗೆ ಭೇಟಿ ನೀಡಿ.

Contact Us FAQ

  1. ನಮ್ಮನ್ನು ಸಂಪರ್ಕಿಸಿ
  2. >
  3. ಮೊರಟೋರಿಯಂ (Covid-19)

ಮೊರಟೋರಿಯಂ ಕುರಿತು FAQ ಗಳು (Covid-19)

ಆಗಾಗ ಕೇಳುವ ಪ್ರಶ್ನೆಗಳು

ಬಜಾಜ್ ಫೈನಾನ್ಸ್ ಲಿಮಿಟೆಡ್ (BFL) ತನ್ನ ಗ್ರಾಹಕರಿಗೆ ಮೊರಟೋರಿಯಂ ಅನ್ನು ಆಫರ್ ಮಾಡುತ್ತದೆಯೇ?

BFL ನಿರಂತರ ಲೋನ್ ಮರುಪಾವತಿ ಟ್ರ್ಯಾಕ್ ರೆಕಾರ್ಡಿನೊಂದಿಗೆ ತನ್ನ ಗ್ರಾಹಕರಿಗೆ ಮೊರಟೋರಿಯಂ ಅನ್ನು ಆಫರ್ ಮಾಡುತ್ತದೆ. ಮೊರಟೋರಿಯಂಗೆ ಅರ್ಹರಾಗಲು, ಫೆಬ್ರವರಿ 29, 2020 ರಂತೆ ಗ್ರಾಹಕರ ತಮ್ಮ ಯಾವುದೇ ಲೋನ್‌ಗಳಲ್ಲಿ 2-EMI ಗಳಿಗಿಂತ ಹೆಚ್ಚು ಬಾಕಿ ಇರಬಾರದು. 31 ಮಾರ್ಚ್ 2020 ನಂತರ ವಿತರಿಸಲಾದ ಯಾವುದೇ ಹೊಸ ಲೋನ್‌ಗಳು ಮೊರಟೋರಿಯಂಗೆ ಅರ್ಹವಾಗುವುದಿಲ್ಲ.

ಯಾವ ತಿಂಗಳ EMI ಗೆ ನಾನು ಮೊರಟೋರಿಯಂ ಅನ್ನು ಕೋರಬಹುದು?

ಜೂನ್, ಜುಲೈ ಮತ್ತು ಆಗಸ್ಟ್ 2020 ತಿಂಗಳಲ್ಲಿ ಬಾಕಿಯಿರುವ ಮತ್ತು ಪಾವತಿಸದ ತಮ್ಮ EMI ಗಳಿಗೆ ಗ್ರಾಹಕರು ಮೊರಟೋರಿಯಂ ಮನವಿ ಮಾಡಬಹುದು.

ನಾನು ಮೊರಟೋರಿಯಂ ಕೋರಿಕೆಯನ್ನು ಯಾವಾಗ ಸಲ್ಲಿಸಬಹುದು?

ನಿಮ್ಮ ಬ್ಯಾಂಕ್ ಅಕೌಂಟಿನಿಂದ EMI ಡೆಬಿಟ್ ಆಗುವ ತಿಂಗಳ ಕನಿಷ್ಠ 26 ನೇ ತಿಂಗಳ ಮೊದಲು ನೀವು ವಿನಂತಿಯನ್ನು ಮಾಡಬೇಕು. ಉದಾಹರಣೆಗೆ, ಜೂನ್ ತಿಂಗಳ EMI ಅನ್ನು ನಿಲ್ಲಿಸಲು, ನೀವು 26 ಮೇ ಗಿಂತ ಮೊದಲು ಕೋರಿಕೆಯನ್ನು ಸಲ್ಲಿಸಬೇಕಾಗುತ್ತದೆ.

ನನ್ನ ಮೊರಟೋರಿಯಂ ಕೋರಿಕೆಯನ್ನು ಅಂಗೀಕರಿಸಲಾಗಿದ್ದರೆ ನನಗೆ ತಿಳಿಸಲಾಗುವುದೇ?

ನಿಮ್ಮ ಕೋರಿಕೆಯನ್ನು ಸ್ವೀಕರಿಸಿದ ನಂತರ, ನಿಮ್ಮ ಕೋರಿಕೆಯನ್ನು ಯಾವುದೇ ಕಾರಣಕ್ಕಾಗಿ ತಿರಸ್ಕರಿಸಿದಲ್ಲಿ ಮಾತ್ರ ನಾವು ಸಂವಹನ ಮಾಡುತ್ತೇವೆ.

BFL ಜತೆಗಿನ ನನ್ನ ಎಲ್ಲಾ ಸಕ್ರಿಯ ಲೋನ್‌ಗಳಿಗೆ ನಾನು ಮೊರಟೋರಿಯಂ ನೀಡಲಾಗುತ್ತದೆಯೇ ಮತ್ತು ನಾನು ಎಲ್ಲಾ ಲೋನ್‌ಗಳಿಗೆ ಪ್ರತ್ಯೇಕ ಮನವಿಯನ್ನು ನೀಡಬೇಕೇ?

ನಿಮ್ಮ EMI ಗಳ ನಿರಂತರ ಮರುಪಾವತಿಯ ಆಧಾರದ ಮೇಲೆ ನೀವು ಮೊರಟೋರಿಯಂಗೆ ಅರ್ಹರಾಗಿದ್ದರೆ ಮತ್ತು BFL ನೊಂದಿಗೆ ನಿಮ್ಮ ಯಾವುದೇ ಲೋನ್‌ಗಳಲ್ಲಿ ನೀವು 2 EMI ಗಳಿಗಿಂತ ಹೆಚ್ಚಿನ ಬಾಕಿಯಿಲ್ಲದಿದ್ದರೆ, BFL ನೊಂದಿಗಿನ ನಿಮ್ಮ ಎಲ್ಲಾ ಸಕ್ರಿಯ ಲೋನ್‌ಗಳಿಗೆ ನಿಮಗೆ ಮೊರಟೋರಿಯಂ ನೀಡಲಾಗುತ್ತದೆ. ನಿಮ್ಮ ಪ್ರತಿಯೊಂದು ಸಕ್ರಿಯ ಲೋನ್‌ಗಳಿಗೆ ಮೊರಟೋರಿಯಂ ಪಡೆಯಲು ನೀವು ಪ್ರತ್ಯೇಕ ಕೋರಿಕೆಗಳನ್ನು ನೀಡಬೇಕು. ಮೊರಟೋರಿಯಂ ಅವಧಿಗೆ ಅನ್ವಯವಾಗುವ ಬಡ್ಡಿಯ ವೆಚ್ಚವನ್ನು ಭರಿಸಲು ನೀವು ಸಿದ್ಧರಿರುವ ನಿಮ್ಮ ಲೋನ್ ಅಕೌಂಟ್ ನಂಬರ್‌ಗಳ ವಿವರಗಳನ್ನು ಮತ್ತು ದೃಢೀಕರಣವನ್ನು ನೀವು ಒದಗಿಸಬೇಕು

ನನ್ನ ಲೋನ್‌ನ ವ್ಯವಹಾರ ಮೊರಟೋರಿಯಂ ಅವಧಿಯ ನಂತರ ಹೇಗೆ ಇರುತ್ತದೆ?

• ನೀವು EMI ಮೊರಟೋರಿಯಂ ಪಡೆದರೆ, ಬಾಕಿ ಲೋನ್ ಮೇಲೆ EMI ಮೊರಟೋರಿಯಂ ಅವಧಿಗೆ ಲೋನಿನ ಒಪ್ಪಂದದ ದರದಲ್ಲಿ ಬಡ್ಡಿಯನ್ನು ವಿಧಿಸಲಾಗುತ್ತದೆ. ಅಂತಹ ಬಡ್ಡಿಯನ್ನು ಅದರ ಪ್ರಕಾರ ಲೋನಿನ ಮೂಲ ಅವಧಿಯನ್ನು ವಿಸ್ತರಿಸುವ ಮೂಲಕ ಸಂಗ್ರಹಿಸಲಾಗುತ್ತದೆ.

• ಈ ಮೊರಟೋರಿಯಂ ಅವಧಿಗೆ ನೋ ಕಾಸ್ಟ್ EMI ಕನ್ಸ್ಯೂಮರ್ ಡ್ಯೂರೇಬಲ್ ಲೋನ್‌ಗಳಿಗೆ ಕೂಡ ಬಡ್ಡಿ ಅನ್ವಯವಾಗುತ್ತದೆ. ನಿಮ್ಮ ಮೊರಟೋರಿಯಂ ಕೋರಿಕೆಗೆ ಅನ್ವಯವಾಗುವ ಬಡ್ಡಿಯ ಮೇಲೆ ನಿಮಗೆ ತಿಳಿಸಲಾಗುವುದು ಮತ್ತು ನಮ್ಮ ಸ್ವಯಂ-ಸೇವಾ ಪೋರ್ಟಲ್ https://customer-login.bajajfinserv.in/customer ಮತ್ತು ಎಕ್ಸ್‌‌ಪೀರಿಯ ಮೊಬೈಲ್ ಆ್ಯಪ್‌ನಲ್ಲಿ ಕೂಡ ನಿಮ್ಮ ಅಕೌಂಟ್ ಸ್ಟೇಟ್ಮೆಂಟ್ ಅನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗುತ್ತದೆ.

ನನಗೆ EMI ಮೊರಟೋರಿಯಂ ಬೇಡವಾದರೆ, ನಾನು ಏನು ಮಾಡಬೇಕು?

• ನಿಮಗೆ EMI ಮೊರಟೋರಿಯಂ ಬೇಡವಾದಲ್ಲಿ, ನಿಮ್ಮ ಕಡೆಯಿಂದ ಮುಂದಿನ ಯಾವುದೇ ಕ್ರಮ ಬೇಕಾಗುವುದಿಲ್ಲ. ನಾವು ನಿಮ್ಮ ಮರುಪಾವತಿ ಸೂಚನೆಗಳ ಬ್ಯಾಂಕ್ ಮಾಡುವುದನ್ನು ಮುಂದುವರೆಸುತ್ತೇವೆ.
• ಹೆಚ್ಚುವರಿ ಬಡ್ಡಿ ಶುಲ್ಕಗಳು ಮತ್ತು ಕಾಲಾವಧಿ ವಿಸ್ತರಣೆಯನ್ನು ತಪ್ಪಿಸಲು ಈ ಅವಧಿಯಲ್ಲಿ ಪಾವತಿಸುವುದನ್ನು ಮುಂದುವರೆಸಲು ಸಾಕಷ್ಟು ಹಣವನ್ನು ಹೊಂದಿರುವ ಗ್ರಾಹಕರಿಗೆ ನಾವು ಪ್ರೋತ್ಸಾಹಿಸುತ್ತೇವೆ.

RBI ಮೊರಟೋರಿಯಂ ಘೋಷಿಸಿದಾಗ ನನ್ನ ಅಕೌಂಟನ್ನು ಏಕೆ ಡೆಬಿಟ್ ಮಾಡಲಾಯಿತು?

ಮೊರಟೋರಿಯಂ ಆರಿಸುವುದು ಸಂಪೂರ್ಣವಾಗಿ ಗ್ರಾಹಕರಿಗೆ ಬಿಟ್ಟ ಆಯ್ಕೆಯಾಗಿದೆ ಮತ್ತು ಕಂಪನಿಯ ಮೊರಟೋರಿಯಂ ನಿಯಮಗಳಿಗೆ ಒಳಪಟ್ಟಿರುತ್ತದೆ. ನಮ್ಮ ಎಲ್ಲಾ ಗ್ರಾಹಕರು ನೀಡಲಾದ ಮೊರಟೋರಿಯಂ ಅನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ನಾವು ಅರ್ಥೈಸಿಕೊಳ್ಳುತ್ತೇವೆ, ಇಲ್ಲಿ ಮೊರಟೋರಿಯಂ ಷರತ್ತುಗಳ ಅಡಿಯಲ್ಲಿ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಮೊರಟೋರಿಯಂ ಪಡೆದ ನೋ ಕಾಸ್ಟ್ EMI ಲೋನ್‌ಗಳಿಗೆ ಬಡ್ಡಿಯನ್ನು ಹೇಗೆ ಮರುಪಡೆಯಲಾಗುತ್ತದೆ?

ನೋ ಕಾಸ್ಟ್ EMI ಲೋನ್‌ಗಳು ಮತ್ತು ಕನ್ಸ್ಯೂಮರ್ ಡ್ಯೂರೇಬಲ್ ಲೋನ್‌ಗಳಿಗಾಗಿ, ಅನ್ವಯವಾಗುವ ಮುಂಗಡ ಬಡ್ಡಿಯನ್ನು ಡೀಲರ್/ರಿಟೇಲರ್ ಖರೀದಿಯ ಸಮಯದಲ್ಲಿ ಭರಿಸುತ್ತಾರೆ ಮತ್ತು ಅದನ್ನು ನಿಮ್ಮ ಅಕೌಂಟ್ ಸ್ಟೇಟ್ಮೆಂಟ್‌ನಲ್ಲಿ ಹಂಚಿಕೊಳ್ಳಲಾಗುತ್ತದೆ. ಆದ್ದರಿಂದ, ಪ್ರಾಡಕ್ಟ್ ಬೆಲೆಯನ್ನು ಒಟ್ಟು ಮೊತ್ತದ ಬದಲಿಗೆ ಕಂತುಗಳಲ್ಲಿ ಪಾವತಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಈಗ ಮೊರಟೋರಿಯಂ ಆಯ್ಕೆ ಮಾಡಿಕೊಂಡರೆ, ನಿಮ್ಮ ಲೋನ್ ಅವಧಿಯನ್ನು ಹೆಚ್ಚಿಸಲಾಗುತ್ತದೆ. ಆದ್ದರಿಂದ, ಬಾಕಿ ಉಳಿದ ಲೋನ್ ಮೊತ್ತಕ್ಕೆ ವಾರ್ಷಿಕ @ 24% ಬಡ್ಡಿ ಅಪ್ಲೈ ಆಗುತ್ತದೆ. ಈ ಮೊತ್ತವನ್ನು ನೀವು ನಮಗೆ ಮಾಡುವ EMI ಮರುಪಾವತಿಗಳಿಗೆ ಸೇರಿಸಲಾಗುತ್ತದೆ.

ನಾನು ಯಾವುದೇ ಡಾಕ್ಯುಮೆಂಟ್‌ಗಳು, ಹೊಸ NACH ಡೆಬಿಟ್ ಮ್ಯಾಂಡೇಟ್ ಅನ್ನು ಸಲ್ಲಿಸಬೇಕಾದ ಅಗತ್ಯವಿದೆಯೇ?

ಕಂಪನಿಗೆ ಅಗತ್ಯವಿರುವಂತೆ ಸಾಲಗಾರರು ಹೊಸ NACH ಡೆಬಿಟ್ ಮ್ಯಾಂಡೇಟನ್ನು ಒದಗಿಸಬೇಕಾಗಬಹುದು

ಮೊರಟೋರಿಯಂ ಅವಧಿಯಲ್ಲಿ ನನ್ನ ಬ್ಯಾಂಕ್ ಅಕೌಂಟಿನಿಂದ ನನ್ನ EMI ಗಳನ್ನು ಡೆಬಿಟ್ ಮಾಡಲಾಗುತ್ತದೆಯೇ?

ಮೊರಟೋರಿಯಂ ಒದಗಿಸಲಾದ ಎಲ್ಲಾ ಲೋನ್‌ಗಳಿಗೆ ನಾವು EMI ಗಳನ್ನು ತಡೆಹಿಡಿಯಲು ಉತ್ತಮ ಪ್ರಯತ್ನ ಮಾಡುತ್ತೇವೆ, ಕಟ್ ಆಫ್ ದಿನಾಂಕದ ಮೊದಲ ಮೊರಟೋರಿಯಂ ಮನವಿಯ ರಸೀದಿ ಮತ್ತು ನಿಮ್ಮ ಮೊರಟೋರಿಯಂ ಕೋರಿಕೆಯ ಅಂಗೀಕಾರವನ್ನು ಇದು ಆಧರಿಸಿರುತ್ತದೆ.

ಮೊರಟೋರಿಯಂ ಅವಧಿಯ EMI ಗಳಿಗೆ ಬೌನ್ಸ್ ಶುಲ್ಕಗಳನ್ನು ವಿಧಿಸಲಾಗುವುದೇ?

• ತಿಂಗಳ 26 ರ ಒಳಗೆ, ಗ್ರಾಹಕರ ಬ್ಯಾಂಕ್ ಅಕೌಂಟಿನಿಂದ EMI ಡೆಬಿಟ್ ಆಗುವ ಮೊದಲು EMI ಮೊರಟೋರಿಯಂ ಆಯ್ಕೆ ಮಾಡುವ ಕೋರಿಕೆಯನ್ನು ಸಲ್ಲಿಸುವ ಗ್ರಾಹಕರಿಗೆ, ಯಾವುದೇ EMI ಬೌನ್ಸ್ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

• ತಿಂಗಳಿಡೀ ತಮ್ಮ ಬಾಕಿಯನ್ನು ಪಾವತಿಸದ ಗ್ರಾಹಕರಿಗೂ ಕೂಡ ಸ್ವಯಂಚಾಲಿತವಾಗಿ ಮೊರಟೋರಿಯಂ ಅನ್ನು ಒದಗಿಸಲು ಪರಿಗಣಿಸಲಾಗುತ್ತದೆ. ಅವರು ಬೌನ್ಸ್ ಶುಲ್ಕಗಳನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ ಆದರೆ ತಡ ಪಾವತಿಯ ದಂಡವನ್ನು ವಿಧಿಸಲಾಗುವುದಿಲ್ಲ. ಲಭ್ಯವಿರುವ ಸಾಮಾನ್ಯ ಕೋರಿಕೆ ಪ್ರಕ್ರಿಯೆಯ ಮೂಲಕ ಅವರು ಭವಿಷ್ಯದ EMI ಗಳಿಗೆ ಮೊರಟೋರಿಯಂ ಅಪ್ಲೈ ಮಾಡಬಹುದು

ಮೊರಟೋರಿಯಂ ಅವಧಿಯ EMI ತಿಂಗಳುಗಳಿಗೆ ತಡವಾದ ಪಾವತಿ ದಂಡವನ್ನು ವಿಧಿಸಲಾಗುವುದೇ?

ಮೊರಟೋರಿಯಂ ನೀಡಲಾದ EMI ತಿಂಗಳಿಗೆ, BFL ಯಾವುದೇ ತಡವಾದ ಪಾವತಿ ಶುಲ್ಕಗಳನ್ನು ವಿಧಿಸುವುದಿಲ್ಲ. ಒಂದು ವೇಳೆ ಯಾವುದೇ ತಡವಾದ ಪಾವತಿ ಶುಲ್ಕಗಳನ್ನು ವಿಧಿಸಲಾದರೆ, ಅದನ್ನು ಮನ್ನಾ ಮಾಡಲಾಗುತ್ತದೆ/ ರದ್ದು ಮಾಡಲಾಗುತ್ತದೆ.

ನಾನು ಮೊರಟೋರಿಯಂಗೆ ಅಪ್ಲೈ ಮಾಡಿದರೆ ನನ್ನ ಕ್ರೆಡಿಟ್ ಬ್ಯೂರೋ ರೆಕಾರ್ಡ್‌‌ಗಳ ಮೇಲೆ ಪರಿಣಾಮ ಬೀರುತ್ತದೆಯೇ?

ಒಂದು ವೇಳೆ ನೀವು ಅರ್ಹರಾಗಿದ್ದರೆ ಮತ್ತು ನೀವು ಮೊರಟೋರಿಯಂ ಪಡೆದುಕೊಂಡಿದ್ದರೆ, ಮೊರಾಟೋರಿಯಂ ಅವಧಿಯಲ್ಲಿ EMI ಗಳನ್ನು ಪಾವತಿಸದಿರುವುದರಿಂದ ನಿಮ್ಮ ಕ್ರೆಡಿಟ್ ಬ್ಯೂರೋ ರೆಕಾರ್ಡ್‌‌ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇದು 01 ಮಾರ್ಚ್ 2020 ಕ್ಕಿಂತ ಮೊದಲು ಕ್ರೆಡಿಟ್ ಬ್ಯೂರೋಗೆ ವರದಿ ಮಾಡಲಾದ ಯಾವುದೇ EMI ಗಳ ಪಾವತಿ ಅಲ್ಲದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ. ಆದಾಗ್ಯೂ, ನೀವು ಮೊರಟೋರಿಯಂ ಸೌಲಭ್ಯವನ್ನು ಪಡೆದುಕೊಂಡಿರುವುದರಿಂದ ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಲಾಗುತ್ತದೆ.

ಸಾಲಗಾರರು ಮೊರಟೋರಿಯಂ ಅವಧಿಯ ನಡುವೆ ಪಾವತಿ ಮಾಡಬಹುದೇ?

ಹಠಾತ್ ಲಾಕ್‌ಡೌನ್ ಕಾರಣದಿಂದಾದ ತಾತ್ಕಾಲಿಕ ಅಡೆತಡೆಯಿಂದಾಗಿ ಇದು ಸಾಲಗಾರರಿಗೆ ನೀಡಲಾದ ಪರಿಹಾರವಾಗಿದೆ. ಆದಾಗ್ಯೂ, ಸಾಲಗಾರರು ಅಸ್ತಿತ್ವದಲ್ಲಿರುವ ಲೋನಿನ ನಿಯಮಗಳ ಪ್ರಕಾರ ಯಾವುದೇ ಮುಂಗಡ EMI ಪಾವತಿಯನ್ನು ಮಾಡಲು ಆಯ್ಕೆಯನ್ನು ಹೊಂದಿದ್ದಾರೆ.

ನನ್ನ ಲೋನ್ ಈಗಾಗಲೇ ಫೆಬ್ರವರಿ 29, 2020 ರಂತೆ NPA ನಲ್ಲಿದ್ದರೆ, ಮೊರಟೋರಿಯಂ ನನಗೆ ಅನ್ವಯವಾಗುತ್ತದೆಯೇ?

ಇಲ್ಲ. ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಈ ರೀತಿಯ ಕೇಸ್ ಅನ್ನು ಕೂಲಂಕುಶವಾಗಿ ಪರಿಶೀಲಿಸುವ ಹಕ್ಕನ್ನು ಕಮಿಟಿ ಹೊಂದಿದೆ.

ಕ್ಯಾಶ್‌ಬ್ಯಾಕ್/ವೌಚರ್‌ಗಳಿಗೆ ಅರ್ಹತೆ ಪಡೆಯಲು ನಾನು ನನ್ನ ಕನ್ಸ್ಯೂಮರ್ ಡ್ಯೂರೇಬಲ್ ಲೋನಿನ 1st 3 EMI ಗಳನ್ನು ಕ್ಲಿಯರ್ ಮಾಡಬೇಕು ಎಂದು ನಾನು ತಿಳಿದುಕೊಂಡಿದ್ದೇನೆ. ನನ್ನ 1ನೇ EMI ಅನ್ನು 2ನೇ ಮಾರ್ಚ್ 2020 ರಂದು ಕ್ಲಿಯರ್ ಮಾಡಲಾಗಿದೆ ಮತ್ತು ನಾನು ಏಪ್ರಿಲ್‌ನಿಂದ ಆಗಸ್ಟ್ ವರೆಗಿನ EMI ಗಳ ಮೊರಟೋರಿಯಂ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಕ್ಯಾಶ್‌ಬ್ಯಾಕ್/ವೌಚರ್‌ಗಳಿಗೆ ನಾನು ಯಾವಾಗ ಅರ್ಹನಾಗುತ್ತೇನೆ?

ಒಂದು ವೇಳೆ ಷರತ್ತುಗಳು ಯಾವುದೇ ಬೌನ್ಸ್ ಇಲ್ಲದೆ 3 EMI ಗಳ ಮರುಪಾವತಿಯನ್ನು ಒಳಗೊಂಡಿದ್ದರೆ, ಮತ್ತು ಗ್ರಾಹಕರು ನಿಷೇಧದ ಅವಧಿಯನ್ನು ಹೊರತುಪಡಿಸಿ ಯಾವುದೇ ಬೌನ್ಸ್ ಇಲ್ಲದೆ 3 EMI ಗಳನ್ನು ಕ್ಲಿಯರ್ ಮಾಡಬೇಕು.

ಈ ಸಂದರ್ಭದಲ್ಲಿ, 1ನೇ EMI 2 ನೇ ಮಾರ್ಚ್ 2020 ರಂದು ಕ್ಲಿಯರ್ ಆಗಿದ್ದು, ಏಪ್ರಿಲ್‌ನಿಂದ ಆಗಸ್ಟ್‌ಗೆ ಮೊರಟೋರಿಯಂ ಆಯ್ಕೆ ಮಾಡಿದರೆ, ಗ್ರಾಹಕರು ಯಾವುದೇ ಆಫರಿಗೆ ಅರ್ಹರಾಗಲು ಉಳಿದ 2 EMI ಗಳನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಕ್ಲಿಯರ್ ಮಾಡಬೇಕು

ಕ್ಯಾಶ್‌ಬ್ಯಾಕ್/ವೌಚರ್‌ಗಳಿಗೆ ಅರ್ಹತೆ ಪಡೆಯಲು ನಾನು ನನ್ನ ಕನ್ಸ್ಯೂಮರ್ ಡ್ಯೂರೇಬಲ್ ಲೋನಿನ 1st 3 EMI ಗಳನ್ನು ಕ್ಲಿಯರ್ ಮಾಡಬೇಕು ಎಂದು ನಾನು ತಿಳಿದುಕೊಂಡಿದ್ದೇನೆ. ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣದಿಂದಾಗಿ 2ನೇ ಮಾರ್ಚ್ 2020 ರಂದು ಬಾಕಿ ಇರುವ ನನ್ನ 1ನೇ EMI ಬೌನ್ಸ್ ಆಗಿದೆ. ಆದಾಗ್ಯೂ, ಮಾರ್ಚ್‌ನಿಂದ ಆಗಸ್ಟ್ ವರೆಗಿನ EMI ಗಳಿಗೆ ನಾನು ಮೊರಟೋರಿಯಂ ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಆಫರಿಗೆ ನಾನು ಅರ್ಹನಾಗುತ್ತೇನೆಯೇ?

ಮಾರ್ಚ್ EMI ಯಾವುದೇ ಗ್ರಾಹಕ ಪ್ರೋಮೋ ಪೂರೈಕೆಗಾಗಿ ಪೂರೈಸುವ ಮಾನದಂಡದ ಅಡಿಯಲ್ಲಿ ಬರುತ್ತಿದ್ದರೆ, ಮತ್ತು EMI ಅನ್ನು ಗ್ರಾಹಕರು ಬೌನ್ಸ್ ಮಾಡಿದರೆ, ನಂತರವೂ ಆತ/ಆಕೆ ಮೊರಟೋರಿಯಂ ಆಯ್ಕೆ ಮಾಡಿಕೊಂಡಿದ್ದರೂ ಕೂಡ ಗ್ರಾಹಕರು ಆಟೋಮ್ಯಾಟಿಕ್ ಆಗಿ ಪ್ರೋಮೋ ಪೂರೈಕೆಗೆ ಅನರ್ಹರಾಗುತ್ತಾರೆ.

ಕ್ಯಾಶ್‌ಬ್ಯಾಕ್/ವೌಚರ್‌ಗಳಿಗೆ ಅರ್ಹತೆ ಪಡೆಯಲು ನಾನು ನನ್ನ ಕನ್ಸ್ಯೂಮರ್ ಡ್ಯೂರೇಬಲ್ ಲೋನಿನ 1st 3 EMI ಗಳನ್ನು ಕ್ಲಿಯರ್ ಮಾಡಬೇಕು ಎಂದು ನಾನು ತಿಳಿದುಕೊಂಡಿದ್ದೇನೆ. ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣದಿಂದಾಗಿ 2ನೇ ಏಪ್ರಿಲ್ 2020 ರಂದು ಬಾಕಿ ಇರುವ ನನ್ನ 1ನೇ EMI ಬೌನ್ಸ್ ಆಗಿದೆ. ಆದಾಗ್ಯೂ ನಾನು ಏಪ್ರಿಲ್‌ನಿಂದ ಆಗಸ್ಟ್ ತಿಂಗಳವರೆಗಿನ EMI ಗಳಿಗೆ ಮೊರಟೋರಿಯಂ ಆಯ್ಕೆ ಮಾಡಿಕೊಂಡಿದ್ದೇನೆ. ಇದನ್ನು ಪಡೆಯಲು ನಾನು ಅರ್ಹನಾಗಿದ್ದೇನೆಯೇ?

ಈ ಸಂದರ್ಭದಲ್ಲಿ, ಗ್ರಾಹಕರು ಏಪ್ರಿಲ್‌ನಿಂದ ಆಗಸ್ಟ್ ತಿಂಗಳ EMI ಗಳಿಗೆ ಮೊರಟೋರಿಯಂ ಆಯ್ಕೆ ಮಾಡಿರುವುದರಿಂದ, ಗ್ರಾಹಕರು ಈ ಆಫರ್‌ಗೆ ಅರ್ಹತೆ ಪಡೆಯಲು ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಯಾವುದೇ ಬೌನ್ಸ್ ಇಲ್ಲದೆ 3 EMI ಗಳನ್ನು ಕ್ಲಿಯರ್ ಮಾಡಬೇಕಾಗುತ್ತದೆ.

ನಮ್ಮ ಸಾಮಾಜಿಕ ಚಾನಲ್‌ಗಳು

ಸಾಮಾಜಿಕ ಮಾಧ್ಯಮದಲ್ಲಿ ನಮ್ಮೊಂದಿಗೆ ಸಂಪರ್ಕಿಸಿ ಮತ್ತು ನಮ್ಮ ಇತ್ತೀಚಿನ ಸುದ್ದಿ ಮತ್ತು ಆಫರ್‌ಗಳಿಗಾಗಿ ಅಪ್‌ಡೇಟ್ ಆಗಿರಿ