ಡಿಮ್ಯಾಟ್ ಅಕೌಂಟ್‍ಗೆ ಅರ್ಹತಾ ಮಾನದಂಡಗಳು

  • Nationality

    ರಾಷ್ಟ್ರೀಯತೆ

    ವ್ಯಕ್ತಿಯು ಭಾರತದಲ್ಲಿ ವಾಸಿಸುತ್ತಿರುವ ನಾಗರಿಕರಾಗಿರಬೇಕು

  • Age

    ವಯಸ್ಸು

    ವ್ಯಕ್ತಿಯು 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿರಬೇಕು

ಡಿಮ್ಯಾಟ್ ಅಕೌಂಟ್‍ಗೆ ಅಗತ್ಯವಿರುವ ದಾಖಲೆಗಳು

ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು, ನೀವು ಈ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗುತ್ತದೆ:

  • Identity proof

    ಗುರುತಿನ ಪುರಾವೆ

    ಪ್ಯಾನ್ ಕಾರ್ಡ್ ಕಡ್ಡಾಯ (ಕಾರ್ಡ್ ಮೇಲೆ ನಿಮ್ಮ ಫೋಟೋ ಮತ್ತು ಸಹಿ ಕಾಣಬೇಕು)

  • Address proof (any one of these)

    ವಿಳಾಸದ ಪುರಾವೆ (ಇವುಗಳಲ್ಲಿ ಯಾವುದಾದರೂ ಒಂದು)

    ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಹಿಂದಿನ 3 ತಿಂಗಳ ಬ್ಯಾಂಕ್ ಅಕೌಂಟ್ ಸ್ಟೇಟ್‍‍ಮೆಂಟ್‍ಗಳು

  • Income proof (any one of these)

    ಆದಾಯದ ಪುರಾವೆ (ಇವುಗಳಲ್ಲಿ ಯಾವುದಾದರೂ ಒಂದು)

    6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್, ನೆಟ್-ವರ್ತ್ ಸರ್ಟಿಫಿಕೇಟ್, 3 ತಿಂಗಳ ಸಂಬಳದ ಸ್ಲಿಪ್‌ಗಳು, ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸ್ಟೇಟ್ಮೆಂಟ್, ಡಿಮ್ಯಾಟ್ ಹೋಲ್ಡಿಂಗ್ ಸ್ಟೇಟ್ಮೆಂಟ್ ಅಥವಾ ಹೋಲ್ಡಿಂಗ್ ರಿಪೋರ್ಟ್

  • Signature on white paper

    ಬಿಳಿ ಕಾಗದದಲ್ಲಿ ಸಹಿ

    ಬಿಳಿ ಕಾಗದದಲ್ಲಿ ಸಹಿ ಮಾಡಿ ಮತ್ತು ಅದರ ಚಿತ್ರವನ್ನು ತೆಗೆದುಕೊಳ್ಳಿ (ಸಹಿಯು ನಿಮ್ಮ ಪ್ಯಾನ್ ಕಾರ್ಡಿನಲ್ಲಿರುವ ಒಂದಕ್ಕೆ ಹೊಂದಿಕೆಯಾಗಬೇಕು)
  • Bank proof (any one of these)

    ಬ್ಯಾಂಕ್ ಪುರಾವೆ (ಇವುಗಳಲ್ಲಿ ಯಾವುದಾದರು ಒಂದು)

    ಕಳೆದ 6 ತಿಂಗಳ ರದ್ದುಗೊಂಡ ಚೆಕ್, ಪಾಸ್‌ಬುಕ್, ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್‌ಗಳು

  • Photograph

    ಫೋಟೋ

    ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿದೆ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಅಗತ್ಯವಾಗಿ ಬೇಕಾಗುತ್ತದೆ. ಡಿಮ್ಯಾಟ್ ಅಕೌಂಟ್ ಡಿಜಿಟಲ್ ವಿಧಾನದಲ್ಲಿ ಷೇರುಗಳನ್ನು ಸಂಗ್ರಹಿಸುತ್ತದೆ ಮತ್ತು ನಷ್ಟ, ಕಳ್ಳತನ, ಫೋರ್ಜರಿ ಇತ್ಯಾದಿಗಳಂತಹ ಫಿಸಿಕಲ್ ಷೇರು ಪ್ರಮಾಣಪತ್ರಗಳೊಂದಿಗೆ ಸಂಬಂಧಿಸಿದ ಅಪಾಯವನ್ನು ನಿವಾರಿಸುತ್ತದೆ. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಗಳು ಒಂದು ಅಕೌಂಟನ್ನು ತೆರೆಯಲು 100% ಡಿಜಿಟಲ್ ಪ್ರಕ್ರಿಯೆಯನ್ನು ಒದಗಿಸುತ್ತವೆ, ಆದ್ದರಿಂದ ನೀವು ಡಾಕ್ಯುಮೆಂಟ್‌ಗಳ ಸಾಫ್ಟ್ ಕಾಪಿಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಅವುಗಳನ್ನು ಆನ್ಲೈನಿನಲ್ಲಿ ಸಲ್ಲಿಸಬಹುದು.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಡಿಮ್ಯಾಟ್ ಅಕೌಂಟ್‍ನಲ್ಲಿ ನನ್ನ ವಿಳಾಸ ಬದಲಾಯಿಸಬಹುದೆ?

ಹೌದು, ನೀವು ನಿಮ್ಮ ವಿಳಾಸವನ್ನು ಡಿಮ್ಯಾಟ್ ಅಕೌಂಟ್‌ನಲ್ಲಿ ಮಾರ್ಪಾಡು ಮಾಡಬಹುದು. ಅದಕ್ಕಾಗಿ, ನೀವು ಅಕೌಂಟ್ ಮಾಡಿಫಿಕೇಶನ್ ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಬೇಕು ಮತ್ತು ಬದಲಾವಣೆಯ ಸಾಕ್ಷಿಗಾಗಿ ಅಗತ್ಯ ದಾಖಲೆಗಳ ಜೊತೆಗೆ ಅದನ್ನು ನಿಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್‍ಗೆ (ಡಿಪಿ) ಸಲ್ಲಿಸಬೇಕು. ಬದಲಾವಣೆ ಮಾಡುವ ಮುನ್ನ, ಡಿಪಿಯವರು ನಿಮ್ಮ ಕೋರಿಕೆಯನ್ನು ಪರಿಶೀಲಿಸುತ್ತಾರೆ.

ಡಿಮ್ಯಾಟ್ ಅಕೌಂಟ್ ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವೇ?

ಡಿಮ್ಯಾಟ್ ಅಕೌಂಟ್ ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಆದರೆ, ಡಿಮ್ಯಾಟ್ ಅಕೌಂಟ್ ತೆರೆಯುವಾಗ ಅದನ್ನು ವಿಳಾಸದ ಪುರಾವೆಯಾಗಿ ಸಲ್ಲಿಸಬಹುದು. ಡಿಮ್ಯಾಟ್ ಅಕೌಂಟ್ ತೆರೆಯಲು ವಿಳಾಸದ ಪುರಾವೆಯಾಗಿ ಸಲ್ಲಿಸಬಹುದಾದ ಇತರ ದಾಖಲೆಗಳೆಂದರೆ ವೋಟರ್ ಐಡಿ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ಇತ್ತೀಚಿನ 3 ತಿಂಗಳ ಯುಟಿಲಿಟಿ ಬಿಲ್ ಮತ್ತು ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್‍ಮೆಂಟ್.

ಡಿಮ್ಯಾಟ್ ಅಕೌಂಟ್‍ಗೆ ಯಾರು ಅರ್ಹರಾಗಿರುತ್ತಾರೆ?

18 ವರ್ಷ ಮೇಲ್ಪಟ್ಟ ಹಾಗೂ ಭಾರತದ ನಿವಾಸಿಯಾಗಿರುವ ಯಾವುದೇ ವ್ಯಕ್ತಿಯು ಡಿಮ್ಯಾಟ್ ಅಕೌಂಟ್ ತೆರೆಯಬಹುದು, ಅವರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಹೊಂದಿರಬೇಕು. ಬ್ಯಾಂಕ್ ಅಕೌಂಟ್ ನೋಂದಣಿಗೆ ಪ್ಯಾನ್ ಕಾರ್ಡ್, ವಿಳಾಸದ ಪುರಾವೆ ಮತ್ತು ರದ್ದುಗೊಳಿಸಿದ ಚೆಕ್‌ನ ಪ್ರತಿಯನ್ನು ಒದಗಿಸಬೇಕು. ಮೂಲ ಪ್ರತಿಯನ್ನು ಬ್ರೋಕರೇಜ್‌ಗೆ ತೋರಿಸಬೇಕು (ಡೆಪಾಸಿಟರಿ ಪಾರ್ಟಿಸಿಪೆಂಟ್).

ನಾನು ಆದಾಯದ ಪುರಾವೆ ಇಲ್ಲದೆ ಡಿಮ್ಯಾಟ್ ಅಕೌಂಟ್ ತೆರೆಯುವುದು ಹೇಗೆ?

ಹೌದು, ಆದಾಯದ ಪುರಾವೆಯಿಲ್ಲದೆ ಡಿಮ್ಯಾಟ್ ಅಕೌಂಟ್ ತೆರೆಯಬಹುದು, ಏಕೆಂದರೆ ಅದು ಕಡ್ಡಾಯವಲ್ಲ. ಡಿಮ್ಯಾಟ್ ಅಕೌಂಟ್ ತೆರೆಯಲು ಈ ದಾಖಲೆಗಳು ಬೇಕಾಗುತ್ತವೆ.

  • ಪ್ಯಾನ್ ಕಾರ್ಡ್
  • ವಿಳಾಸದ ಪುರಾವೆ - ನಿಮ್ಮ ಹೆಸರಿನಲ್ಲಿರುವ ಎಲೆಕ್ಟ್ರಿಸಿಟಿ ಬಿಲ್, ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಇತ್ಯಾದಿ.
  • ರದ್ದುಗೊಂಡ ಚೆಕ್ ಅಥವಾ ಬ್ಯಾಂಕ್ ಅಕೌಂಟ್ ವಿವರಗಳ ಪ್ರತಿ

ಹೀಗಾಗಿ, ನೀವು ಗೃಹಿಣಿ ಅಥವಾ ಮೈನರ್ ಆಗಿದ್ದಲ್ಲಿ (ಇಲ್ಲಿ 18 ವರ್ಷ) - ಯಾವುದೇ ಆದಾಯದ ಪುರಾವೆ ಇಲ್ಲದೆ ನಿಮ್ಮ ಹೆಸರಿನಲ್ಲಿ ಡಿಮ್ಯಾಟ್ ಅಕೌಂಟ್ ತೆರೆಯಬಹುದು. ಆದರೆ, ನಿಮ್ಮ ಖರ್ಚಿನ ಮಾದರಿ ಮತ್ತು ತೆರಿಗೆ ಸಲ್ಲಿಸುವ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿದೆ.

ಡಿಮ್ಯಾಟ್ ಅಕೌಂಟ್‍ಗೆ ಪ್ಯಾನ್ ಕಾರ್ಡ್ ಕಡ್ಡಾಯವೇ?

ಹೌದು, ಸೆಬಿ ಹೇಳಿಕೆಯಂತೆ ಎಲ್ಲಾ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಡಿಮ್ಯಾಟ್ ಖಾತೆ ತೆರೆಯಲು ಅದು ಬೇಕೇ ಬೇಕು. ಜೊತೆಗೆ, ಹೂಡಿಕೆದಾರರ ಹೋಲ್ಡಿಂಗ್ ಅನ್ನು ಅವರ ಆದಾಯ ತೆರಿಗೆ ಫೈಲಿಂಗ್‌ ಜೊತೆಗೆ ಹೊಂದಿಕೆಯಾಗುವ ವಿಶಿಷ್ಟ ಗುರುತಾಗಿ ಟ್ರ್ಯಾಕ್ ಮಾಡಲು ಪ್ಯಾನ್ ಕಾರ್ಡ್ ಒಂದು ದಾರಿಯಾಗಿದೆ.. ಹೀಗಾಗಿ, ನೀವು ಮೈನರ್ ಅಥವಾ ಗೃಹಿಣಿಯಾಗಿದ್ದರೂ, ನಿಮ್ಮ ಬಳಿ ಮಾನ್ಯ ಪ್ಯಾನ್ ಕಾರ್ಡ್ ಇದ್ದರೆ ನೀವು ಡಿಮ್ಯಾಟ್ ಅಕೌಂಟ್ ತೆರೆಯಬಹುದು ಮತ್ತು ಹೂಡಿಕೆ ಮಾಡಲು ಆರಂಭಿಸಬಹುದು.

ಡಿಮ್ಯಾಟ್ ಅಕೌಂಟ್‍ಗೆ ರದ್ದುಗೊಂಡ ಚೆಕ್ ಕಡ್ಡಾಯವೇ?

ಹೌದು, ಡಿಮ್ಯಾಟ್ ಅಕೌಂಟ್ ತೆರೆಯಲು ರದ್ದುಗೊಳಿಸಿದ ಚೆಕ್ ಕಡ್ಡಾಯ, ಏಕೆಂದರೆ ಮಾರಾಟದ ವಹಿವಾಟುಗಳ ಆದಾಯಕ್ಕೆ ಅಕೌಂಟ್ ವಿವರಗಳು ಬೇಕಾಗುತ್ತವೆ. ಅಲ್ಲದೆ, ನೀವು ಸ್ಟಾಕ್‌ಗಳನ್ನು ಆರ್ಡರ್ ಮಾಡಿದಾಗ, ಎಕ್ಸ್‌ಚೇಂಜ್‌ನಲ್ಲಿ ಸ್ಟಾಕ್ ಖರೀದಿಸುವ ಮೊದಲು ಹಣವನ್ನು ಡೆಬಿಟ್ ಮಾಡಬೇಕಾಗುತ್ತದೆ. ಹೀಗಾಗಿ, ಫಾರ್ಮ್‌ನಲ್ಲಿರುವ ಅನುಮೋದಿತ ರದ್ದಾದ ಚೆಕ್, ಸ್ಟಾಕ್ ಟ್ರಾನ್ಸಾಕ್ಷನ್ ಆಗುವಾಗ ಡಿಪಾಸಿಟರಿ ಪಾರ್ಟಿಸಿಪೆಂಟ್‍ ನಿಮ್ಮ ಅಕೌಂಟ್‍‍ನಿಂದ ಹಣವನ್ನು ಡೆಬಿಟ್ ಮಾಡಲು ಅಥವಾ ಅದಕ್ಕೆ ಕ್ರೆಡಿಟ್ ಮಾಡಲು ನೆರವಿಗೆ ಬರುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ