ಫೀಗಳು ಮತ್ತು ಶುಲ್ಕಗಳು

ಷೇರುಗಳಲ್ಲಿ ಟ್ರೇಡಿಂಗ್ ಆರಂಭಿಸಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಹೊಂದಿರುವುದು ಅತ್ಯಗತ್ಯ. ನೀವು ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಸೇವೆಗಳನ್ನು ಪಡೆದಾಗ ನಿರ್ದಿಷ್ಟ ಶುಲ್ಕಗಳು ಅನ್ವಯವಾಗುತ್ತವೆ.

ಬಜಾಜ್ ಫೈನಾನ್ಶಿಯಲ್ ಸೆಕ್ಯೂರಿಟೀಸ್ ಲಿಮಿಟೆಡ್ (ಬಿಎಫ್ಎಸ್ಎಲ್) ಸಬ್‌ಸ್ಕ್ರಿಪ್ಷನ್ ಪ್ಲಾನ್‌ಗಳು

ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟೀಸ್ ಜೊತೆಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ತೆರೆಯಲು, ನೀವು ಮೂರು ಸಬ್‌ಸ್ಕ್ರಿಪ್ಷನ್ ಪ್ಯಾಕ್‌ಗಳಲ್ಲಿ ಒಂದರ ಮೂಲಕ ಸೈನ್ ಅಪ್ ಮಾಡಬಹುದು, ಪ್ರತಿಯೊಂದು ವಿವಿಧ ಬ್ರೋಕರೇಜ್ ದರಗಳನ್ನು ಒದಗಿಸುತ್ತದೆ.

ಬಿಎಫ್‍ಎಸ್‍ಎಲ್‍ನ ಎಲ್ಲ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್‍ ಶುಲ್ಕಗಳ ವಿವರಗಳು ಇಲ್ಲಿವೆ:

ಶುಲ್ಕಗಳ ವಿಧಗಳು

ಫ್ರೀಡಂ ಪ್ಯಾಕ್

ಪ್ರೊಫೆಷನಲ್ ಪ್ಯಾಕ್

ಬಜಾಜ್ ಪ್ರಿವಿಲೇಜ್ ಕ್ಲಬ್

ವಾರ್ಷಿಕ ಸಬ್‌ಸ್ಕ್ರಿಪ್ಷನ್ ಶುಲ್ಕಗಳು

ಮೊದಲ ವರ್ಷ: ಉಚಿತ

ಎರಡನೇ ವರ್ಷದಿಂದ: ರೂ. 431

ರೂ. 2,500

ರೂ. 9,999

ಡಿಮ್ಯಾಟ್ ಎಎಂಸಿ

ಉಚಿತ

ಉಚಿತ

ಉಚಿತ

ಈ ಉತ್ಪನ್ನಗಳನ್ನು ಒಳಗೊಂಡಿದೆ

 • ಇಕ್ವಿಟಿ ಡೆರಿವೇಟಿವ್
 • ಇಕ್ವಿಟಿ
 • ಡಿರೈವೇಟಿವ್
 • ಮಾರ್ಜಿನ್ ಟ್ರೇಡ್ ಫೈನಾನ್ಸಿಂಗ್
 • ಇಕ್ವಿಟಿ
 • ಡಿರೈವೇಟಿವ್
 • ಮಾರ್ಜಿನ್ ಟ್ರೇಡ್ ಫೈನಾನ್ಸಿಂಗ್

ಬ್ರೋಕರೇಜ್ ದರ

 • ಇಕ್ವಿಟಿ ಡೆಲಿವರಿ: 0.10%
 • ಇಕ್ವಿಟಿ ಇಂಟ್ರಾಡೇ ಹಾಗೂ ಫ್ಯೂಚರ್ಸ್ ಆ್ಯಂಡ್ ಆಪ್ಷನ್ಸ್ (ಎಫ್&ಒ): ರೂ. 17/ ಆರ್ಡರ್
 • ಇಕ್ವಿಟಿ ಡೆಲಿವರಿ ಮತ್ತು ಇಂಟ್ರಾಡೇ ಹಾಗೂ ಎಫ್ ಅಂಡ್ ಓ: ₹ 10/ಆರ್ಡರ್
 • ಎಂಟಿಎಫ್‌ ಬಡ್ಡಿದರ: ವರ್ಷಕ್ಕೆ 12%
 • ಇಕ್ವಿಟಿ ಡೆಲಿವರಿ, ಇಂಟ್ರಾಡೇ ಮತ್ತು ಎಫ್‌ ಅಂಡ್ ಓ: ₹ 5/ಆರ್ಡರ್
 • ಎಂಟಿಎಫ್‌ ಬಡ್ಡಿದರ: ವರ್ಷಕ್ಕೆ 8.5%
ಇನ್ನಷ್ಟು ಓದಿರಿ ಕಡಿಮೆ ಓದಿ

ಇಕ್ವಿಟಿ/ಡೆರಿವೇಟಿವ್ ಟ್ರಾನ್ಸಾಕ್ಷನ್ ಶುಲ್ಕಗಳು (ಸಬ್‌ಸ್ಕ್ರಿಪ್ಷನ್ ಮಾಡೆಲ್‌ಗಾಗಿ ಶುಲ್ಕಗಳ ಪಟ್ಟಿ)

ಬ್ರೋಕರೇಜ್ ಶುಲ್ಕಗಳನ್ನು ಹೊರತುಪಡಿಸಿ, ನಿಮ್ಮ ಷೇರು ಮಾರುಕಟ್ಟೆ ವಹಿವಾಟುಗಳ ಮೇಲೆ ಕೆಲವು ಇತರ ಶುಲ್ಕಗಳನ್ನು ಈ ಕೆಳಗಿನಂತೆ ವಿಧಿಸಲಾಗುತ್ತದೆ:

ಡೆಲಿವರಿ ಮತ್ತು ಇಂಟ್ರಾಡೇ ಶುಲ್ಕಗಳು

ಶುಲ್ಕಗಳ ವಿಧಗಳು

ಡೆಲಿವರಿ

ಇಂಟ್ರಾಡೇ

ಟ್ರಾನ್ಸಾಕ್ಷನ್/ಟರ್ನ್ಓವರ್ ಶುಲ್ಕಗಳು

 • ಎನ್‌ಎಸ್‌ಇ - 0.00345%
 • ಬಿಎಸ್ಇ - ಸ್ಕ್ರಿಪ್ ಗ್ರೂಪ್‌ಗೆ ತಕ್ಕಂತೆ ಶುಲ್ಕಗಳು ಬದಲಾಗುತ್ತವೆ
 • ಎನ್‌ಎಸ್‌ಇ - 0.00345%
 • ಬಿಎಸ್ಇ - ಸ್ಕ್ರಿಪ್ ಗ್ರೂಪ್‌ಗೆ ತಕ್ಕಂತೆ ಶುಲ್ಕಗಳು ಬದಲಾಗುತ್ತವೆ

ಕ್ಲಿಯರಿಂಗ್ ಮೆಂಬರ್ ಶುಲ್ಕಗಳು

ಇಲ್ಲ

ಇಲ್ಲ

ಜಿಎಸ್‌ಟಿ

ಬ್ರೋಕರೇಜ್, ಟ್ರಾನ್ಸಾಕ್ಷನ್ ಮತ್ತು ಸಿಎಂ ಶುಲ್ಕಗಳ ಮೇಲೆ 18%

ಬ್ರೋಕರೇಜ್, ಟ್ರಾನ್ಸಾಕ್ಷನ್ ಮತ್ತು ಸಿಎಂ ಶುಲ್ಕಗಳ ಮೇಲೆ 18%

ಎಸ್‌ಟಿಟಿ

ಪ್ರತಿ ಲಕ್ಷಕ್ಕೆ ರೂ. 100 (0.1%)

ಪ್ರತಿ ಲಕ್ಷಕ್ಕೆ ರೂ. 25 (0.025%)

ಸೆಬಿ ಶುಲ್ಕಗಳು

ಟರ್ನ್ಓವರ್ ಮೇಲೆ 0.00005%

ಟರ್ನ್ಓವರ್ ಮೇಲೆ 0.00005%

ಸ್ಟಾಂಪ್ ಡ್ಯೂಟಿ

ಅನ್ವಯವಾಗುವಂತೆ

ಅನ್ವಯವಾಗುವಂತೆ


ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಶುಲ್ಕಗಳು

ಶುಲ್ಕಗಳ ವಿಧಗಳು

ಪ್ಯೂಚರ್ಸ್

ಆಯ್ಕೆಗಳು

ಟ್ರಾನ್ಸಾಕ್ಷನ್/ಟರ್ನ್ಓವರ್ ಶುಲ್ಕಗಳು

 • ಎನ್‌ಎಸ್‌ಇ - 0.0002%
 • ಬಿಎಸ್ಇ - ಸೊನ್ನೆ ಅಥವಾ ಟ್ರೇಡೆಡ್ ಮೌಲ್ಯದ 0.05%
 • ಎನ್‌ಎಸ್‌ಇ - 0.053% (ಪ್ರೀಮಿಯಂ ಮೇಲೆ)
 • ಬಿಎಸ್ಇ - ಸೊನ್ನೆ ಅಥವಾ ಟ್ರೇಡೆಡ್ ಮೌಲ್ಯದ 0.05%

ಕ್ಲಿಯರಿಂಗ್ ಮೆಂಬರ್ ಶುಲ್ಕಗಳು

ಎನ್ಎಸ್ಇ ಮತ್ತು ಬಿಎಸ್ಇ - 0.00025% ಫಿಸಿಕಲ್ ಡೆಲಿವರಿ - 0.10%

ಎನ್ಎಸ್ಇ ಮತ್ತು ಬಿಎಸ್ಇ - 0.00025% ಫಿಸಿಕಲ್ ಡೆಲಿವರಿ - 0.10%

ಜಿಎಸ್‌ಟಿ

ಬ್ರೋಕರೇಜ್, ಟ್ರಾನ್ಸಾಕ್ಷನ್ ಮತ್ತು ಸಿಎಂ ಶುಲ್ಕಗಳ ಮೇಲೆ 18%

ಬ್ರೋಕರೇಜ್, ಟ್ರಾನ್ಸಾಕ್ಷನ್ ಮತ್ತು ಸಿಎಂ ಶುಲ್ಕಗಳ ಮೇಲೆ 18%

ಎಸ್‌ಟಿಟಿ

ರೂ. 50 ಪ್ರತಿ ಲಕ್ಷಕ್ಕೆ (0.05%) ಸೆಲ್ ಸೈಡ್‌ನಲ್ಲಿ ಮಾತ್ರ

ರೂ. 50 ಪ್ರತಿ ಲಕ್ಷಕ್ಕೆ (0.05%) ಸೆಲ್ ಸೈಡ್‌ನಲ್ಲಿ ಮಾತ್ರ

ಸೆಬಿ ಶುಲ್ಕಗಳು

ಟರ್ನ್ಓವರ್ ಮೇಲೆ 0.00005%

ಟರ್ನ್ಓವರ್ ಮೇಲೆ 0.00005%

ಸ್ಟಾಂಪ್ ಡ್ಯೂಟಿ

ಅನ್ವಯವಾಗುವಂತೆ

ಅನ್ವಯವಾಗುವಂತೆ


ಗಮನಿಸಿ:

ಬಿಎಸ್ಇ ಟ್ರಾನ್ಸಾಕ್ಷನ್/ಟರ್ನ್ಓವರ್ ಶುಲ್ಕಗಳ ವಿವರಗಳು

ಡಿಮ್ಯಾಟ್ ಅಕೌಂಟ್ ಶುಲ್ಕಗಳು

ಬಿಎಫ್ಎಸ್ಎಲ್ ಡಿಮ್ಯಾಟ್ ಶುಲ್ಕಗಳು ಇಲ್ಲಿವೆ:

ಶುಲ್ಕಗಳ ವಿಧಗಳು

ಶುಲ್ಕಗಳು

ಅಕೌಂಟ್ ತೆರೆಯುವ ಶುಲ್ಕಗಳು

ಇಲ್ಲ

ವಾರ್ಷಿಕ ನಿರ್ವಹಣಾ ಶುಲ್ಕಗಳು

ಇಲ್ಲ

ಬಿಎಫ್ಎಸ್ಎಲ್‍ನಲ್ಲಿ ಆಫ್-ಮಾರ್ಕೆಟ್ ವರ್ಗಾವಣೆ*

₹ 30 ಅಥವಾ ಟ್ರಾನ್ಸಾಕ್ಷನ್ ಮೌಲ್ಯದ 0.02%, ಯಾವುದು ಹೆಚ್ಚೋ ಅದು + ಅನ್ವಯಿಸುವ ತೆರಿಗೆಗಳು

BFSL ಆಚೆಗಿನ ಆಫ್‌-ಮಾರ್ಕೆಟ್‌ ವರ್ಗಾವಣೆ** ₹ 30 ಅಥವಾ ಟ್ರಾನ್ಸಾಕ್ಷನ್ ಮೌಲ್ಯದ 0.02%, ಯಾವುದು ಹೆಚ್ಚೋ ಅದು + ಅನ್ವಯಿಸುವ ತೆರಿಗೆಗಳು

ಪ್ಲೆಡ್ಜ್/ಅನ್‌ಪ್ಲೆಡ್ಜ್/ಕ್ಲೋಸರ್/ಇನ್‌ವೋಕೇಶನ್ ಶುಲ್ಕಗಳು

ರೂ. 35 + ಅನ್ವಯಿಸುವ ತೆರಿಗೆಗಳು

ಫಿಸಿಕಲ್ ಸಿಎಂಆರ್/ಡಿಐಎಸ್

ಮೊದಲ ಸಿಎಂಆರ್/ಡಿಐಎಸ್ ಕೋರಿಕೆಯು ಉಚಿತವಾಗಿದೆ. ಅದರ ನಂತರ ₹ 50 + ₹ 100 ಕೊರಿಯರ್ ಶುಲ್ಕಗಳು + ಅನ್ವಯಿಸುವ ತೆರಿಗೆಗಳು

ಡಿಮೆಟೀರಿಯಲೈಸೇಶನ್ ಕೋರಿಕೆ ಶುಲ್ಕಗಳು

ಪ್ರತಿ ಕೋರಿಕೆಗೆ ರೂ. 50 + ಪ್ರತಿ ಪ್ರಮಾಣಪತ್ರಕ್ಕೆ ರೂ. 50

ರೀ-ಮೆಟೀರಿಯಲೈಸೇಶನ್ ಕೋರಿಕೆ ಶುಲ್ಕಗಳು

ಪ್ರತಿ ಪ್ರಮಾಣಪತ್ರಕ್ಕೆ ರೂ. 35 ಅಥವಾ 100 ಷೇರುಗಳು ಮತ್ತು ಭಾಗ, ಯಾವುದು ಹೆಚ್ಚೋ ಅದು ಮತ್ತು ಅಕೌಂಟ್ ರಿಡೆಂಪ್ಶನ್ ಸ್ಟೇಟ್‍ಮೆಂಟ್‍ಗೆ ರೂ. 25


ಪ್ರತಿ ಅಂತರರಾಷ್ಟ್ರೀಯ ಸೆಕ್ಯೂರಿಟಿಗಳ ಗುರುತಿನ ಸಂಖ್ಯೆ (ಐಎಸ್ಐಎನ್)ಗೆ *ರೂ. 30 ಅನ್ನು ನಿಮ್ಮ ಡಿಮ್ಯಾಟ್ ಅಕೌಂಟ್‍ನಿಂದ ಡೆಬಿಟ್ ಮಾಡಲಾಗುತ್ತದೆ. ಇದು ಬಿಎಫ್ಎಸ್ಎಲ್ ಡಿಮ್ಯಾಟ್ ಅಕೌಂಟ್ ಆಗಿದ್ದರೆ, ಅನ್ವಯವಾಗುವ ತೆರಿಗೆಗಳ ಜೊತೆಗೆ ಅನ್ವಯವಾಗುವ ಶುಲ್ಕ ರೂ. 30 ಆಗಿದೆ. ಮಾರ್ಕೆಟ್ ಸೇಲ್ ಟ್ರಾನ್ಸಾಕ್ಷನ್ ಸಂದರ್ಭದಲ್ಲಿ, ವಿನಿಮಯಗೊಂಡ ಸೆಕ್ಯೂರಿಟಿಗಳ ಪೇ-ಇನ್‍ಗಾಗಿ ಬಿಎಫ್ಎಸ್ಎಲ್ ಡಿಮ್ಯಾಟ್ ಅಕೌಂಟ್ ಬಳಸಿ ಡೆಲಿವರಿಗಳನ್ನು ಮಾಡಿದಾಗ ಇದು ಅನ್ವಯಿಸುತ್ತದೆ.

**ನಿಮ್ಮ ಡಿಮ್ಯಾಟ್ ಅಕೌಂಟ್‌ನಿಂದ ಐಎಸ್‌ಐಎನ್‌ ಅನ್ನು ಡೆಬಿಟ್ ಮಾಡಿದ ಪ್ರತಿ ಬಾರಿ ಮತ್ತು ಸ್ವೀಕರಿಸುವ ಡಿಮ್ಯಾಟ್ ಅಕೌಂಟ್ ಬಿಎಫ್‌ಎಸ್‌ಎಲ್‌ ಡಿಮ್ಯಾಟ್ ಅಕೌಂಟ್ ಅಲ್ಲದಿದ್ದರೆ ಚಾರ್ಜ್ ಮಾಡಲಾಗುತ್ತದೆ. ಇದರಲ್ಲಿ ಸಿಡಿಎಸ್‌ಎಲ್‌ ಶುಲ್ಕಗಳೂ ಸೇರಿವೆ.

ಪೇಮೆಂಟ್ ಗೇಟ್‌ವೇ ಶುಲ್ಕಗಳು

ಶುಲ್ಕಗಳ ವಿಧಗಳು

ಶುಲ್ಕಗಳು

ನೆಟ್ ಬ್ಯಾಂಕಿಂಗ್

ಪ್ರತಿ ಟ್ರಾನ್ಸಾಕ್ಷನ್‍‍ಗೆ ರೂ. 10 + ಅನ್ವಯಿಸುವ ತೆರಿಗೆಗಳು

ಡೆಬಿಟ್ ಕಾರ್ಡ್

ಪ್ರತಿ ಟ್ರಾನ್ಸಾಕ್ಷನ್‍‍ಗೆ ರೂ. 30 + ಅನ್ವಯಿಸುವ ತೆರಿಗೆಗಳು

ಕ್ರೆಡಿಟ್ ಕಾರ್ಡ್ (Required for opening client’s account; partner onboarding) - 1.40% on transaction value + applicable taxes

ಚೆಕ್ ಬೌನ್ಸ್ ಶುಲ್ಕಗಳು

ಪ್ರತಿ ಬೌನ್ಸ್‌ಗೆ ರೂ. 1,000 + ಅನ್ವಯಿಸುವ ತೆರಿಗೆಗಳು


ಇತರ ಶುಲ್ಕಗಳು ಇಲ್ಲಿವೆ:

 • ಕಾರ್ಯಗತಗೊಳಿಸಿದ ಪ್ರತಿ ಆರ್ಡರ್‌ಗೆ ರೂ. 20 + GST ದರದಲ್ಲಿ ಕರೆ ಮತ್ತು ವ್ಯಾಪಾರ ಶುಲ್ಕಗಳು ಅನ್ವಯಿಸುತ್ತವೆ.
 • ಭೌತಿಕ ಒಪ್ಪಂದ ಪತ್ರಕ್ಕೆ ಕೋರಿಕೆ ಸಲ್ಲಿಸಿದಾಗ, ಪ್ರತಿ ಒಪ್ಪಂದ ಪತ್ರಕ್ಕೆ ರೂ. 50 ಮತ್ತು ಅನ್ವಯಿಸುವ ಕೊರಿಯರ್ ಶುಲ್ಕ ವಿಧಿಸಲಾಗುತ್ತದೆ.
 • ನಿಮ್ಮ ಅಕೌಂಟ್ ಒಂದು ವೇಳೆ ಡೆಬಿಟ್ ಬ್ಯಾಲೆನ್ಸ್‌ನಲ್ಲಿದ್ದರೆ ದಿನಕ್ಕೆ 0.05% ವಿಳಂಬ ಪಾವತಿ ಶುಲ್ಕಗಳು (ಡಿಪಿಸಿ) ಅನ್ವಯವಾಗುತ್ತವೆ.
 • ವಿನಿಮಯದ ಅವಶ್ಯಕತೆಗಳ ಪ್ರಕಾರ, ನಗದು ಘಟಕದ ರೂಪದಲ್ಲಿ 50% ಮಾರ್ಜಿನ್ ನಿರ್ವಹಿಸಬೇಕು. ಯಾವುದೇ ಕೊರತೆಯಿದ್ದಲ್ಲಿ, ಡಿಪಿಸಿ ಶುಲ್ಕ ವಿಧಿಸಲಾಗುತ್ತದೆ.

ಷೇರುಗಳಲ್ಲಿ ಟ್ರೇಡಿಂಗ್ ಮಾಡಲು ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಅತ್ಯಗತ್ಯ; ಆದರೆ, ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಸೇವೆಗಳಿಗೆ ಕೆಲವು ಶುಲ್ಕಗಳು ಅನ್ವಯವಾಗುತ್ತವೆ. ಬಜಾಜ್ ಫೈನಾನ್ಷಿಯಲ್ ಸೆಕ್ಯೂರಿಟಿಸ್ ಲಿಮಿಟೆಡ್ (ಬಿಎಫ್ಎಸ್ಎಲ್) ಡಿಮ್ಯಾಟ್ ಅಕೌಂಟ್ ತೆರೆಯಲು ಬೇರೆಬೇರೆ ಬ್ರೋಕರೇಜ್ ಮೊತ್ತವನ್ನು ಹೊಂದಿರುವ ಮೂರು ಸಬ್‌ಸ್ಕ್ರಿಪ್ಷನ್ ಪ್ಯಾಕ್‌ಗಳನ್ನು ನೀಡುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ

ಆಗಾಗ ಕೇಳುವ ಪ್ರಶ್ನೆಗಳು

ಡಿಮ್ಯಾಟ್ ಅಕೌಂಟ್ ತೆರೆಯುವ ಶುಲ್ಕ ಎಂದರೇನು?

ಇದು ಡಿಮ್ಯಾಟ್ ಅಕೌಂಟ್ ತೆರೆಯಲು ನೀವು ಸ್ಟಾಕ್‌ ಬ್ರೋಕರ್‌ಗೆ ಪಾವತಿಸುವ ಶುಲ್ಕವಾಗಿದೆ. ಫ್ರೀಡಂ ಪ್ಯಾಕ್, ಬಿಗಿನರ್ ಪ್ಯಾಕ್ ಮತ್ತು ಪ್ರೊಫೆಷನಲ್ ಪ್ಯಾಕ್ ಎಂಬ ಮೂರು ಸಬ್‍ಸ್ಕ್ರಿಪ್ಷನ್ ಆಫರ್‌ಗಳನ್ನು ಬಿಎಫ್ಎಸ್ಎಲ್ ಒದಗಿಸುತ್ತದೆ; ಮೂರಕ್ಕೂ ಬೇರೆಬೇರೆ ಬ್ರೋಕರೇಜ್ ಶುಲ್ಕ ಇರುತ್ತದೆ.

ಡಿಮ್ಯಾಟ್ ಎಎಂಸಿ ಎಂದರೇನು?

ಡಿಮ್ಯಾಟ್ ಎಎಂಸಿ ಎಂಬುದು ಡಿಮ್ಯಾಟ್‌ನ ವಾರ್ಷಿಕ ನಿರ್ವಹಣಾ ಶುಲ್ಕವಾಗಿದೆ. ಇದು ಸ್ಟಾಕ್‌ ಬ್ರೋಕರ್‌ ನಿಮ್ಮ ಡಿಮ್ಯಾಟ್ ಅಕೌಂಟ್ ಅನ್ನು ನಿರ್ವಹಿಸಲು ಕೊಡಬೇಕಾದ ಶುಲ್ಕವಾಗಿದೆ. ಸ್ಟಾಕ್‌ ಬ್ರೋಕರ್ ನಿರ್ಧರಿಸುವಂತೆ ವಾರ್ಷಿಕವಾಗಿ ಅಥವಾ ತ್ರೈಮಾಸಿಕವಾಗಿ ಇದನ್ನು ವಿಧಿಸಬಹುದು. ನಿಮ್ಮ ಅಕೌಂಟ್‍ನಲ್ಲಿ ಷೇರುಗಳು ಇದ್ದರೂ ಇರದಿದ್ದರೂ ಡಿಮ್ಯಾಟ್ ಎಎಂಸಿ ಅನ್ವಯವಾಗುತ್ತದೆ. ಇದು ನಿರ್ದಿಷ್ಟವಾಗಿ ಮರುಕಳಿಸುವ ಶುಲ್ಕವಾಗಿದೆ.

ಬ್ರೋಕರೇಜ್ ಶುಲ್ಕ ಎಂದರೇನು?

ಷೇರು ಮಾರುಕಟ್ಟೆಯಲ್ಲಿ ಷೇರು ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಸ್ಟಾಕ್‌ ಬ್ರೋಕರ್ ಶುಲ್ಕ ವಿಧಿಸುತ್ತಾರೆ. ಅಂದರೆ, ಈ ಶುಲ್ಕವನ್ನು ನಿಮ್ಮ ಟ್ರೇಡಿಂಗ್ ಟ್ರಾನ್ಸಾಕ್ಷನ್ ಮೌಲ್ಯದ ಶೇಕಡಾವಾರು ಆಧಾರದ ಮೇಲೆ (ಫುಲ್-ಸರ್ವಿಸ್ ಬ್ರೋಕರ್‌ಗಳು ವಿಧಿಸುತ್ತಾರೆ) ಅಥವಾ ಟ್ರಾನ್ಸಾಕ್ಷನ್ ಮೌಲ್ಯ ಎಷ್ಟೇ ಇದ್ದರೂ ಪ್ರತಿ ಆರ್ಡರ್‌ಗೂ ಸಮನಾದ ಶುಲ್ಕ ವಿಧಿಸಬಹುದು (ಡಿಸ್ಕೌಂಟ್ ಬ್ರೋಕರ್‌ಗಳು ವಿಧಿಸುತ್ತಾರೆ).

ಡಿಮೆಟೀರಿಯಲೈಸೇಶನ್ ಮತ್ತು ರಿ-ಮೆಟೀರಿಯಲೈಸೇಶನ್ ಶುಲ್ಕ ಎಂದರೇನು?

ಡಿಮೆಟೀರಿಯಲೈಸೇಶನ್ ಎಂಬುದು ಭೌತಿಕ ಪ್ರಮಾಣಪತ್ರಗಳನ್ನು ಎಲೆಕ್ಟ್ರಾನಿಕ್ ರೂಪಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಅದರ ವಿರುದ್ಧ ಪದವೇ ರೀ-ಮೆಟೀರಿಯಲೈಸೇಶನ್. ಡೆಪಾಸಿಟರಿ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಷೇರುಗಳನ್ನು ಡಿಮೆಟೀರಿಯಲೈಸ್ ಅಥವಾ ರೀಮೆಟೀರಿಯಲೈಸ್ ಮಾಡಬಹುದು. ಆದರೆ, ನೀವು ಸ್ಟಾಕ್‌ಬ್ರೋಕರ್‌ಗೆ ಡಿಮೆಟೀರಿಯಲೈಸೇಶನ್/ರಿ-ಮೆಟೀರಿಯಲೈಸೇಶನ್‌ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.

ಆಫ್-ಮಾರ್ಕೆಟ್ ಟ್ರಾನ್ಸ್‌ಫರ್ ಶುಲ್ಕ ಎಂದರೇನು?

ಷೇರುಗಳನ್ನು ಸ್ಟಾಕ್ ಎಕ್ಸ್‌ಚೇಂಜ್ ಇಲ್ಲದೆ ಒಂದು ಡಿಮ್ಯಾಟ್ ಅಕೌಂಟ್‍ನಿಂದ ಇನ್ನೊಂದಕ್ಕೆ ವರ್ಗಾಯಿಸುವುದನ್ನು ಆಫ್-ಮಾರ್ಕೆಟ್ ಟ್ರಾನ್ಸ್‌ಫರ್ ಎನ್ನುತ್ತಾರೆ. ಅಂತಹ ವರ್ಗಾವಣೆಗಳನ್ನು ಹಲವು ಕಾರಣಗಳಿಗಾಗಿ ಮಾಡಬಹುದು, ಅಂದರೆ ಒಬ್ಬ ಸ್ಟಾಕ್ ಬ್ರೋಕರ್ ಹೊಂದಿರುವ ಡಿಮ್ಯಾಟ್ ಅಕೌಂಟ್‍ನಿಂದ ಮತ್ತೊಂದಕ್ಕೆ ಷೇರುಗಳನ್ನು ವರ್ಗಾಯಿಸುವುದು, ವ್ಯಕ್ತಿಗಳ ನಡುವೆ ಷೇರುಗಳ ಮಾಲೀಕತ್ವವನ್ನು ವರ್ಗಾಯಿಸುವುದು, ಕುಟುಂಬ ಸದಸ್ಯರಿಗೆ ಷೇರುಗಳನ್ನು ಉಡುಗೊರೆಯಾಗಿ ನೀಡುವುದು, ಇತ್ಯಾದಿ. ಆಫ್-ಮಾರ್ಕೆಟ್ ಷೇರು ವರ್ಗಾವಣೆಯು ಡಿಮ್ಯಾಟ್ ಖಾತೆಗಳ ನಡುವಿನ ಷೇರುಗಳ ಡೆಬಿಟ್ ಮತ್ತು ಕ್ರೆಡಿಟ್ ಅನ್ನು ಒಳಗೊಂಡಿರುತ್ತದೆ, ಇದಕ್ಕೆ ಶುಲ್ಕಗಳು ಅನ್ವಯಿಸುತ್ತವೆ. ಆದ್ದರಿಂದ, ಇದು ಬೇರೆಬೇರೆ ಡೆಪಾಸಿಟರಿ ಪಾರ್ಟಿಸಿಪೆಂಟ್/ಸ್ಟಾಕ್‌ ಬ್ರೋಕರ್‌ಗಳಿಗೆ ಬೇರೆಬೇರೆ ಆಗಿರುತ್ತದೆ.

ಡಿಮ್ಯಾಟ್ ಶುಲ್ಕಗಳನ್ನು ಹೇಗೆ ತಪ್ಪಿಸಬಹುದು?

ಕನಿಷ್ಟಪಕ್ಷ ಮೊದಲ ವರ್ಷವಾದರೂ ಉಚಿತವಾಗಿ ಡಿಮ್ಯಾಟ್ ಅಕೌಂಟ್ ತೆರೆಯಲು ಅನುಕೂಲವಿರುವ ಬೇಸಿಕ್ ಪ್ಲಾನ್ ಆಯ್ಕೆ ಮಾಡುವ ಮೂಲಕ ಡಿಮ್ಯಾಟ್ ಅಕೌಂಟ್ ಶುಲ್ಕಗಳನ್ನು ತಪ್ಪಿಸಬಹುದು. ಈ ಪ್ಯಾಕೇಜ್‍ ಸಾಮಾನ್ಯವಾಗಿ, ಟ್ರೇಡಿಂಗ್ ಅಕೌಂಟ್‍ ಶುಲ್ಕ ಮತ್ತು ನೀವು ಮಾಡಿದ ಯಾವುದೇ ಟ್ರೇಡ್‍ಗಳ ಬ್ರೋಕರೇಜ್ ಶುಲ್ಕವನ್ನು ಒಳಗೊಂಡಿರುತ್ತದೆ. ಬಿಎಫ್ಎಸ್ಎಲ್ ಫ್ರೀಡಂ ಪ್ಯಾಕ್ ಎಂಬುದು ಮೊದಲ ವರ್ಷ ಉಚಿತ ಡಿಮ್ಯಾಟ್ ಅಕೌಂಟ್ ಸೇವೆಯನ್ನು ಒದಗಿಸುವ ಬೇಸಿಕ್ ಪ್ಯಾಕೇಜ್ ಆಗಿದೆ.

ಯಾವುದಾದರೂ ಉಚಿತ ಡಿಮ್ಯಾಟ್ ಅಕೌಂಟ್‌ ಇದೆಯೇ?

ಹೌದು, ಅನೇಕ ಬ್ರೋಕರ್‌ಗಳು ಎಲ್ಲಾ ಸೌಲಭ್ಯ ಮತ್ತು ಫೀಚರ್‌ಗಳನ್ನು ಹೊಂದಿರುವ ಉಚಿತ ಡಿಮ್ಯಾಟ್ ಅಕೌಂಟ್‌ ಒದಗಿಸುತ್ತಾರೆ. ಅಂತಹ ಡಿಮ್ಯಾಟ್ ಅಕೌಂಟ್‌ಗಳು ಮೊದಲ ವರ್ಷದ ಸೇವೆಯು ಉಚಿತವಾಗಿರುವ ಬೇಸಿಕ್ ಪ್ಯಾಕೇಜ್‌ಗಳ ಭಾಗವಾಗಿವೆ. ಎರಡನೇ ವರ್ಷದಿಂದ, ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಬಿಎಫ್ಎಸ್ಎಲ್‌ನ ಫ್ರೀಡಂ ಪ್ಯಾಕ್, ಮೊದಲ ವರ್ಷ ಉಚಿತ ಡಿಮ್ಯಾಟ್ ಅಕೌಂಟ್ ಸೇವೆ ಒದಗಿಸುತ್ತದೆ. ಎರಡನೇ ವರ್ಷದಿಂದ, ₹ 365 + ಜಿಎಸ್‍ಟಿ ಮೊತ್ತದ ಡಿಮ್ಯಾಟ್ ಎಎಂಸಿ ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ನಷ್ಟು ಓದಿರಿ ಕಡಿಮೆ ಓದಿ