ನಿಮ್ಮ ಟರ್ಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ ಫ್ಲೆಕ್ಸಿ ಲೋನಿಗೆ ಬದಲಾಯಿಸುವ ಪ್ರಯೋಜನಗಳು

ಟರ್ಮ್ ಲೋನ್‌ಗಳು, ಫ್ಲೆಕ್ಸಿ ಲೋನ್‌ಗಳು ಮತ್ತು ಟರ್ಮ್ ಲೋನಿನಿಂದ ಫ್ಲೆಕ್ಸಿ ಪರ್ಸನಲ್ ಲೋನಿಗೆ ಬದಲಾಯಿಸುವ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ.
ನಿಮ್ಮ ಟರ್ಮ್ ಲೋನನ್ನು ಬಜಾಜ್ ಫಿನ್‌ಸರ್ವ್‌ ಫ್ಲೆಕ್ಸಿ ಲೋನಿಗೆ ಬದಲಾಯಿಸುವ ಪ್ರಯೋಜನಗಳು
5 ನಿಮಿಷದ ಓದು
22 ಮಾರ್ಚ್ 2023

ಬಜಾಜ್ ಫೈನಾನ್ಸ್ ಮೂರು ರೀತಿಯ ಪರ್ಸನಲ್ ಲೋನ್‌ಗಳನ್ನು ಒದಗಿಸುತ್ತದೆ - ಟರ್ಮ್ ಲೋನ್, ಫ್ಲೆಕ್ಸಿ ಟರ್ಮ್ ಲೋನ್ ಮತ್ತು ಫ್ಲೆಕ್ಸಿ ಹೈಬ್ರಿಡ್ ಲೋನ್.

ಫ್ಲೆಕ್ಸಿ ಲೋನ್‌ಗಳೊಂದಿಗೆ, ನೀವು ನಿಮ್ಮ ಮಂಜೂರಾದ ಲೋನ್ ಮಿತಿಯಿಂದ ಹಣವನ್ನು ವಿತ್‌ಡ್ರಾ ಮಾಡಬಹುದು ಮತ್ತು ನಿಮ್ಮ ಬಳಿ ಹೆಚ್ಚುವರಿ ಹಣವಿದ್ದಾಗ ಮುಂಗಡ ಪಾವತಿ ಮಾಡಬಹುದು. ಇದಕ್ಕೆ ತದ್ವಿರುದ್ಧವಾಗಿ, ಟರ್ಮ್ ಲೋನ್ ಒಂದು ನಿಯಮಿತ ಪರ್ಸನಲ್ ಲೋನ್ ಆಗಿದ್ದು, ಇಲ್ಲಿ ನೀವು ನಿಗದಿತ ಅವಧಿಗೆ ಲೋನ್ ಪಡೆಯುತ್ತೀರಿ ಮತ್ತು ಅದನ್ನು ನಿಗದಿತ ಇಎಂಐ ಗಳ ರೂಪದಲ್ಲಿ ಮರುಪಾವತಿಸುತ್ತೀರಿ. ಆರಂಭಿಕ ಅವಧಿಯಲ್ಲಿ ಹೆಚ್ಚಿನ ಇಎಂಐ ಗಳನ್ನು ಪಾವತಿಸುವ ಹೊರೆಯನ್ನು ಕಡಿಮೆ ಮಾಡಲು ನೀವು ಬಯಸಿದರೆ, ಫ್ಲೆಕ್ಸಿ ಹೈಬ್ರಿಡ್ ಲೋನ್ ಉತ್ತಮ ಆಯ್ಕೆಯಾಗಿದೆ. ಮಂಜೂರಾದ ಮಿತಿಯಿಂದ ಅನೇಕ ವಿತ್‌ಡ್ರಾವಲ್‌ಗಳನ್ನು ಮಾಡುವ ಅನುಕೂಲವನ್ನು ಕೂಡ ನೀವು ಪಡೆಯುತ್ತೀರಿ. ಪರ್ಸನಲ್ ಲೋನ್ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಲೋನಿನ ಇಎಂಐ ಮೊತ್ತವನ್ನು ನೀವು ಪರಿಶೀಲಿಸಬಹುದು

ಬಜಾಜ್ ಫಿನ್‌ಸರ್ವ್‌ ಫ್ಲೆಕ್ಸಿ ಲೋನಿಗೆ ಬದಲಾಯಿಸುವ ಕೆಲವು ಪ್ರಯೋಜನಗಳು ಇಲ್ಲಿವೆ:

  • ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ

ನಿಮ್ಮ ಪ್ರಸ್ತುತ ಟರ್ಮ್ ಲೋನಿನ ಅದೇ ಬಡ್ಡಿ ದರದಲ್ಲಿ ಫ್ಲೆಕ್ಸಿ ಪರ್ಸನಲ್ ಲೋನ್ ಪ್ರಯೋಜನವನ್ನು ಪಡೆಯಿರಿ.

  • ನಿಮ್ಮ ಇಎಂಐ ಗಳನ್ನು ಕಡಿಮೆ ಮಾಡಿ

ಫ್ಲೆಕ್ಸಿ ಹೈಬ್ರಿಡ್ ಲೋನಿನೊಂದಿಗೆ, ಆರಂಭಿಕ ಅವಧಿಗೆ ಬಡ್ಡಿಯನ್ನು ಮಾತ್ರ ಇಎಂಐ ಗಳಾಗಿ ಪಾವತಿಸಿ ಮತ್ತು ನಿಮ್ಮ ಮಾಸಿಕ ಇಎಂಐ ಮೊತ್ತವನ್ನು ಅರ್ಧದವರೆಗೆ ಕಡಿಮೆ ಮಾಡಿ.

  • ವಿತ್‌ಡ್ರಾ ಮಾಡಿ ಮತ್ತು ಸುಲಭವಾಗಿ ಭಾಗಶಃ-ಮುಂಗಡ ಪಾವತಿ ಮಾಡಿ

ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಲಭ್ಯವಿರುವ ಮಿತಿಯೊಳಗೆ ಭಾಗಶಃ-ಮುಂಪಾವತಿ ಮತ್ತು ವಿತ್‌ಡ್ರಾ ಮಾಡುವ ಆಯ್ಕೆಯನ್ನು ಪಡೆಯಿರಿ.

  • ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಬಡ್ಡಿಯನ್ನು ಪಾವತಿಸಿ

ಫ್ಲೆಕ್ಸಿ ಲೋನ್‌ಗಳೊಂದಿಗೆ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ಪಾವತಿಸುವ ಅವಕಾಶವನ್ನು ಹೊಂದಿದ್ದೀರಿ, ಒಟ್ಟು ಮಂಜೂರಾದ ಮೊತ್ತದ ಮೇಲೆ ಅಲ್ಲ.

  • ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ.

ಯಾವುದೇ ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಸಲ್ಲಿಸದೆ ನಿಮ್ಮ ಲೋನ್ ಅನ್ನು ಫ್ಲೆಕ್ಸಿ ಪರ್ಸನಲ್ ಲೋನ್ ಆಗಿ ಪರಿವರ್ತಿಸಿ.

  • ತೊಂದರೆ ರಹಿತ ಆನ್ಲೈನ್ ಪ್ರಕ್ರಿಯೆ.

ಕೆಲವೇ ಕ್ಲಿಕ್‌ಗಳಲ್ಲಿ ಸರಳ ಆನ್ಲೈನ್ ಪ್ರಕ್ರಿಯೆಯೊಂದಿಗೆ ಬದಲಾವಣೆಯನ್ನು ಆರಂಭಿಸಿ.

ಟರ್ಮ್ ಲೋನಿನಿಂದ ಫ್ಲೆಕ್ಸಿ ಲೋನ್ ಹೇಗೆ ಭಿನ್ನವಾಗಿದೆ?

ನೀವು ನಿಯಮಿತ ಮರುಪಾವತಿ ಯೋಜನೆಯೊಂದಿಗೆ ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ, ನಿಮ್ಮಇಎಂಐ ಗಳು ಅಸಲು ಮತ್ತು ಬಡ್ಡಿ ಎರಡನ್ನೂ ಒಳಗೊಂಡಿರುತ್ತವೆ. ಇಎಂಐಗಳಾಗಿ ನೀವು ಪಾವತಿಸುವ ಮೊತ್ತವು ನಿಮ್ಮ ಟರ್ಮ್ ಲೋನಿನ ಸಂಪೂರ್ಣ ಅವಧಿಗೆ ಪ್ರತಿ ತಿಂಗಳು ಒಂದೇ ಆಗಿರುತ್ತದೆ. ನೀವು ಬಯಸಿದಾಗ ನಿಮ್ಮ ಲೋನನ್ನು ಭಾಗಶಃ ಮುಂಪಾವತಿ ಮಾಡಬಹುದು, ಆದರೆ ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಆದರೆ, ನೀವು ಬಜಾಜ್ ಫಿನ್‌ಸರ್ವ್ ಫ್ಲೆಕ್ಸಿ ಪರ್ಸನಲ್ ಲೋನನ್ನು ಆಯ್ಕೆ ಮಾಡಿದಾಗ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಲೋನ್ ಮೊತ್ತವನ್ನು ವಿತ್‌ಡ್ರಾ ಮಾಡುವ ಮತ್ತು ಭಾಗಶಃ-ಮುಂಪಾವತಿ ಮಾಡುವ ಫ್ಲೆಕ್ಸಿಬಿಲಿಟಿಯನ್ನು ನೀವು ಪಡೆಯುತ್ತೀರಿ.
ಇಲ್ಲಿ, ನೀವು ವಿತ್‌ಡ್ರಾ ಮಾಡಿದ ಮೊತ್ತದ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

ಅಪ್ಲೈ

ಹಕ್ಕುತ್ಯಾಗ

ನಮ್ಮ ವೆಬ್‌ಸೈಟ್ ಮತ್ತು ಸಂಬಂಧಿತ ವೇದಿಕೆಗಳು/ವೆಬ್‌ಸೈಟ್‌ಗಳಲ್ಲಿ ಒಳಗೊಂಡಿರುವ ಅಥವಾ ಲಭ್ಯವಿರುವ ಮಾಹಿತಿ, ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಅಪ್ಡೇಟ್ ಮಾಡಲು ಕಾಳಜಿವಹಿಸುತ್ತಿರುವ ಸಂದರ್ಭದಲ್ಲಿ, ಮಾಹಿತಿಯನ್ನು ಅಪ್ಡೇಟ್ ಮಾಡುವಾಗ ಅಜಾಗರೂಕ ತಪ್ಪುಗಳು ಅಥವಾ ಟೈಪೋಗ್ರಾಫಿಕಲ್ ದೋಷಗಳು ಅಥವಾ ವಿಳಂಬಗಳು ಸಂಭವಿಸಬಹುದು. ಈ ಸೈಟ್‌ನಲ್ಲಿ ಮತ್ತು ಸಂಬಂಧಿತ ವೆಬ್ ಪೇಜ್‌ಗಳಲ್ಲಿ ಒಳಗೊಂಡಿರುವ ಮೆಟೀರಿಯಲ್ ರೆಫರೆನ್ಸ್ ಮತ್ತು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಇರುತ್ತವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ ಆಯಾ ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದ ವಿವರಗಳು ಚಾಲ್ತಿಯಲ್ಲಿರುತ್ತವೆ. ಇದರಲ್ಲಿರುವ ಮಾಹಿತಿಯ ಆಧಾರದಲ್ಲಿ ಕ್ರಮ ಕೈಗೊಳ್ಳುವ ಮೊದಲು ಚಂದಾದಾರರಿಗೆ ಮತ್ತು ಬಳಕೆದಾರರಿಗೆ ವೃತ್ತಿಪರ ಸಲಹೆಯನ್ನು ಸಲ್ಲಿಸಬೇಕು. ಸಂಬಂಧಿತ ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ ಮತ್ತು ಅನ್ವಯವಾಗುವ ನಿಯಮ ಮತ್ತು ಷರತ್ತುಗಳನ್ನು ನೋಡಿದ ನಂತರ ದಯವಿಟ್ಟು ಯಾವುದೇ ಪ್ರಾಡಕ್ಟ್ ಅಥವಾ ಸೇವೆಗೆ ಸಂಬಂಧಿಸಿದಂತೆ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಿ. ಒಂದು ವೇಳೆ ಯಾವುದೇ ತೊಂದರೆಗಳು ಕಂಡುಬಂದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಮೇಲೆ ಕ್ಲಿಕ್ ಮಾಡಿ.

*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ