ಫೋಟೋ

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸನ್ನು ಆನ್‌ಲೈನ್‌ನಲ್ಲಿ ಖರೀದಿಸಿ

ಮೇಲ್ನೋಟ: ಕಮರ್ಷಿಯಲ್ ಕಾರ್ ಇನ್ಶೂರೆನ್ಸ್

ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅನ್ನು ಟ್ಯಾಕ್ಸಿ ಇನ್ಶೂರೆನ್ಸ್ ಎಂದು ಕೂಡ ಕರೆಯಲಾಗುತ್ತದೆ ಮತ್ತು ವಾಣಿಜ್ಯ ವಾಹನಗಳಿಗೆ ಹಾನಿ ಅಥವಾ ನಷ್ಟವನ್ನು ಕವರ್ ಮಾಡಬಹುದು. ನಿಮ್ಮ ವ್ಯಾಪಾರವು ಟ್ಯಾಕ್ಸಿಗಳಂತಹ ಅನೇಕ ಕಮರ್ಷಿಯಲ್ ವಾಹನಗಳನ್ನು ನಡೆಸುತ್ತಿದ್ದರೆ - ನೀವು ಕಮರ್ಷಿಯಲ್ ವಾಹನಗಳಿಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯಬೇಕು. ಈ ವಿಧಾನ ಕಾರ್ ಇನ್ಶೂರೆನ್ಸ್ನಿಮ್ಮ ವಾಣಿಜ್ಯ ವಾಹನಗಳಿಗೆ ಕಳ್ಳತನ, ನಷ್ಟ ಅಥವಾ ಹಾನಿ ಸಂದರ್ಭ ಸಮಗ್ರ ಕವರೇಜ್ ನೀಡಿ ನಿಮ್ಮ ಬಿಸಿನೆಸ್ ಅನ್ನು ಮುನ್ನಡೆಸುತ್ತದೆ. ಯಾವುದೇ ವಾಣಿಜ್ಯ ವಾಹನಕ್ಕೆ ನಷ್ಟ ಅಥವಾ ಹಾನಿಯಾದ ಸಂದರ್ಭ ನಿಮ್ಮ ಪಾಕೆಟ್‌ನಿಂದ ಪಾವತಿಸುವುದು ದೊಡ್ಡ ಮಟ್ಟದ ಬಿಸಿನೆಸ್ ವೆಚ್ಚವಾಗಬಹುದು. ಹೀಗಾಗಿ, ಪ್ರತಿ ಬಿಸಿನೆಸ್ ಮಾಲೀಕರು ಸಮಗ್ರ ಟ್ಯಾಕ್ಸಿ ಕಾರ್ ಇನ್ಶೂರೆನ್ಸ್ ಹೊಂದುವುದನ್ನು ಆಯ್ಕೆ ಮಾಡುತ್ತಾರೆ.

ಕಮರ್ಷಿಯಲ್ ಟ್ಯಾಕ್ಸಿ ಇನ್ಶೂರೆನ್ಸ್ ಒಂದೇ ಟ್ಯಾಕ್ಸಿಗಳಿಂದ ಹಿಡಿದು ಟ್ಯಾಕ್ಸಿಗಳ ಗುಂಪಿನವರೆಗೆ ಎಲ್ಲದಕ್ಕೂ ಕವರ್ ನೀಡುತ್ತದೆ. ಒಂದೇ ಷರತ್ತೆಂದರೆ - ವಾಹನಗಳನ್ನು ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸುತ್ತಿರಬೇಕು.

ಬೇರೆ ಎಲ್ಲದರಂತೆಯೇ, ನಿಮ್ಮ ಮನೆಯ ಅಥವಾ ಕಛೇರಿಯ ಸೌಕರ್ಯದಿಂದ ನೀವು ಆನ್‌ಲೈನ್‌ನಲ್ಲಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸನ್ನು ಖರೀದಿಸಬಹುದು.


ಕಮರ್ಷಿಯಲ್ ಕಾರಿನ ವಿಧಗಳು ಅಥವಾ ಟ್ಯಾಕ್ಸಿ ಇನ್ಶೂರೆನ್ಸ್

ಎರಡು ವಿಧದ ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಅಥವಾ ಟ್ಯಾಕ್ಸಿ ಇನ್ಶೂರೆನ್ಸ್‌ಗಳಿವೆ:

1. ಥರ್ಡ್-ಪಾರ್ಟಿ ಇನ್ಶೂರೆನ್ಸ್ ಕವರ್

ಥರ್ಡ್ ಪಾರ್ಟಿ ಇನ್ಶೂರೆನ್ಸನ್ನು ಹೊಣೆಗಾರಿಕೆ ಮಾತ್ರದ ಕವರ್ ಎಂದೂ ಕರೆಯಲಾಗುತ್ತದೆ ಮತ್ತು ಮೋಟರ್ ವಾಹನಗಳ ಕಾಯ್ದೆ 1988 ಅಡಿಯಲ್ಲಿ ಇದು ಕಡ್ಡಾಯವಾಗಿದೆ.
ಪ್ರತಿ ಕಮರ್ಷಿಯಲ್ ವಾಹನ ಅಥವಾ ಟ್ಯಾಕ್ಸಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಹೊಂದಿರಬೇಕು ಇದು ಇನ್ಶೂರ್ ಆದ ಕಮರ್ಷಿಯಲ್ ವಾಹನದಿಂದ ಥರ್ಡ್ ಪಾರ್ಟಿಗೆ ಉಂಟಾದ ಹಾನಿಗಳನ್ನು ಕವರ್ ಮಾಡುತ್ತದೆ. ಹಾನಿಯು ಥರ್ಡ್-ಪಾರ್ಟಿ ವಾಹನ, ಆಸ್ತಿ ಅಥವಾ ವ್ಯಕ್ತಿಗೆ ಆಗಿರಬಹುದು. ಒಂದು ವೇಳೆ ವ್ಯಕ್ತಿಯು ಇನ್ಶೂರ್ ಮಾಡಿದ ಕಮರ್ಷಿಯಲ್ ವಾಹನದಿಂದ ಗಾಯಗೊಂಡು ಅಥವಾ ಮರಣ ಹೊಂದಿದರೆ - ಈ ಇನ್ಶೂರೆನ್ಸ್ ನಷ್ಟ ಅಥವಾ ಪರಿಹಾರವನ್ನು ಪಾವತಿಸುತ್ತದೆ.

2. ಸಮಗ್ರ ಇನ್ಶೂರೆನ್ಸ್ ಕವರ್

ಹೆಸರೇ ಸೂಚಿಸುವಂತೆ, ಸಮಗ್ರ ಇನ್ಶೂರೆನ್ಸ್ ರಕ್ಷಣೆಯು ಹೊಣೆಗಾರಿಕೆಯನ್ನು ಮಾತ್ರ ನೀಡುವ ಕವರ್‌ಗಿಂತ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ಇದು ಆಯ್ಕೆಯ ಇನ್ಶೂರೆನ್ಸ್ ಕವರ್‌ ಆಗಿದ್ದರೂ, ಇದನ್ನು ಎಲ್ಲಾ ಕಮರ್ಷಿಯಲ್ ವಾಹನಗಳಿಗೆ ಆಯ್ಕೆ ಮಾಡಿಕೊಳ್ಳಲು ಶಿಫಾರಸು ಮಾಡಲಾಗುತ್ತದೆ. ಅದು ಇವುಗಳನ್ನು ಒಳಗೊಂಡಿರುತ್ತದೆ:

• ಅಪಘಾತಗಳು, ನೈಸರ್ಗಿಕ ಅಥವಾ ಮಾನವ-ನಿರ್ಮಿತ ವಿಪತ್ತುಗಳಿಂದಾಗಿ ಇನ್ಶೂರೆನ್ಸ್ ಮಾಡಲ್ಪಟ್ಟ ಟ್ಯಾಕ್ಸಿ ಅಥವಾ ಕಮರ್ಷಿಯಲ್ ಕಾರಿನ ನಷ್ಟ, ಹಾನಿ ಅಥವಾ ಕಳ್ಳತನ.
• ಇನ್ಶೂರೆನ್ಸ್ ಮಾಡಿದ ಕಮರ್ಷಿಯಲ್ ವಾಹನ ಮಾಲೀಕರಿಗೆ ವೈಯಕ್ತಿಕ ಅಪಘಾತ ರಕ್ಷಣೆ.
• ಪ್ರಯಾಣಿಕರಿಗೆ ಅಥವಾ ಪಾವತಿಸಿದ ಚಾಲಕರಿಗೆ ಹೆಚ್ಚುವರಿ ಕವರೇಜನ್ನು ಖರೀದಿಸಬಹುದು.
• ಯಾವುದೇ ಮೂರನೇ ಪಕ್ಷದ ಆಕಸ್ಮಿಕ ಸಾವು, ಗಾಯ ಅಥವಾ ಆಸ್ತಿ ಹಾನಿ.
 

ಕಮರ್ಷಿಯಲ್ ಕಾರು ಅಥವಾ ಟ್ಯಾಕ್ಸಿ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಪ್ರಯೋಜನಗಳು

 • 1. ಕಾನೂನಿನಿಂದ ಆವೃತ

  ಭಾರತೀಯ ರಸ್ತೆಗಳ ಮೇಲೆ ಚಲಾಯಿಸಲಾಗುವ ಎಲ್ಲಾ ಕಮರ್ಷಿಯಲ್ ವಾಹನಗಳಿಗೆ ಇನ್ಶೂರೆನ್ಸ್ ಹೊಂದುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಹಾಗಾಗಿ, ಕನಿಷ್ಠ ಥರ್ಡ್ ಪಾರ್ಟಿ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸನ್ನು ಖರೀದಿಸುವುದರ ಮೂಲಕ, ನೀವು ಕಾನೂನು ಪಾಲಿಸುತ್ತೀರಿ.

  2. ಸಮಗ್ರ ಕವರೇಜ್

  ಒಂದು ಸಮಗ್ರ ಕಮರ್ಷಿಯಲ್ ಇನ್ಶೂರೆನ್ಸ್ ಜೊತೆಗೆ ನಿಮ್ಮ ಕಮರ್ಷಿಯಲ್ ವಾಹನಕ್ಕೆ ಉಂಟಾಗುವ ನಷ್ಟ, ಕಳ್ಳತನ ಅಥವಾ ಹಾನಿಗೆ ನೀವು ಕವರ್ ನೀಡಬಹುದು. ನೀವು ಯಾವುದೇ ಮೂರನೇ ಪಕ್ಷದ ಹೊಣೆಗಾರಿಕೆಗಳು ಮತ್ತು ಕಮರ್ಷಿಯಲ್ ಕಾರಿನ ಮಾಲೀಕರಿಗೆ ಅಪಘಾತ ರಕ್ಷಣೆಗಾಗಿ ಕವರ್ ಪಡೆಯಬಹುದು. ಕೆಲವು ಆ್ಯಡ್-ಆನ್‌ಗಳೊಂದಿಗೆ, ನಿಮ್ಮ ಪಾವತಿಸಿದ ಚಾಲಕರು ಮತ್ತು ಪ್ರಯಾಣಿಕರಿಗೂ ನೀವು ಕವರೇಜನ್ನು ಖರೀದಿಸಬಹುದು.

  3. ತುಂಬಾ ಹಣ ಖರ್ಚು ಮಾಡಬೇಡಿ

  ಕಮರ್ಷಿಯಲ್ ವಾಹನವನ್ನು ದುರಸ್ತಿ ಮಾಡುವುದು ದೊಡ್ಡ ಬಿಸಿನೆಸ್ ವೆಚ್ಚವಾಗಬಹುದು. ಕಮರ್ಷಿಯಲ್ ವಾಹನಕ್ಕೆ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟವು ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಅಡ್ಡಿಯಾಗದಿರಲಿ. ಬದಲಾಗಿ, ಅಪಘಾತದಿಂದ ಉಂಟಾಗುವ ದುರಸ್ತಿ ವೆಚ್ಚಗಳು ಮತ್ತು ಹಣಕಾಸಿನ ಭಾಧ್ಯತೆಗಳನ್ನು ಇನ್ಶೂರೆನ್ಸ್ ಕವರ್‌ನಿಂದ ಪೂರೈಸಿ.

  4. ಬ್ಯಾಂಕ್ ಲೋನ್‌ಗಳಿಗೆ ಕವರ್

  ಹೆಚ್ಚಿನ ಕಮರ್ಷಿಯಲ್ ವಾಹನಗಳನ್ನು ಬ್ಯಾಂಕ್ ಲೋನ್‌ಗಳಲ್ಲಿ ಖರೀದಿಸಲಾಗುತ್ತದೆ. ಸಮಗ್ರವಾದ ಕಮರ್ಷಿಯಲ್ ಕಾರು ಅಥವಾ ಟ್ಯಾಕ್ಸಿ ಇನ್ಶೂರೆನ್ಸ್ ಜೊತೆಗೆ, ನಿಮ್ಮ ವಾಹನಕ್ಕೆ ಒಟ್ಟು ನಷ್ಟವಾದಲ್ಲಿ ಅಥವಾ ಅದು ಕಳುವಾದಲ್ಲಿ ನೀವು ನಿಮ್ಮ ಲೋನನ್ನು ಭದ್ರಪಡಿಸಬಹುದು.

  5. ನಿಮ್ಮ ಉದ್ಯೋಗಿಗಳು ಮತ್ತು ಗ್ರಾಹಕರನ್ನು ರಕ್ಷಿಸಿ

  ನಿಮ್ಮ ಟ್ಯಾಕ್ಸಿ ಬಿಸಿನೆಸ್ ನಡೆಸಲು ನೀವು ಪಾವತಿಸುವ ಚಾಲಕರನ್ನು ಬಳಸಿದ್ದರೆ, ಅವರನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ. ಅಪಘಾತವಾದಲ್ಲಿ ಕಮರ್ಷಿಯಲ್ ಕಾರ್ ಇನ್ಶೂರೆನ್ಸ್ ಚಾಲಕರು ಮತ್ತು ಪ್ರಯಾಣಿಕರ ಗಾಯಗಳು ಅಥವಾ ಸಾವುಗಳಿಗೆ ಕವರ್ ನೀಡುತ್ತದೆ. ಈ ಕವರೇಜನ್ನು ಆ್ಯಡ್-ಆನ್ ಕವರ್‌ನೊಂದಿಗೆ ಖರೀದಿಸಬಹುದು.