ನಿಮಗಾಗಿ ವಿಶೇಷ ಆಫರ್‌ಗಳು
-
ಇನ್ಸ್ಟಾ ಇಎಂಐ ಕಾರ್ಡ್
ರೂ. 2 ಲಕ್ಷದವರೆಗಿನ ಮಿತಿಯೊಂದಿಗೆ -
ಪರ್ಸನಲ್ ಲೋನ್
35 ಲಕ್ಷದವರೆಗೆ -
ಡಾಕ್ಟರ್ ಲೋನ್
ರೂ. 55 ಲಕ್ಷದವರೆಗೆ ಲೋನ್ ಪಡೆಯಿರಿ -
ಗೋಲ್ಡ್ ಲೋನ್
ರೂ. 5,000 ರಿಂದ ರೂ. 2 ಕೋಟಿಯವರೆಗೆ
ನಿಮ್ಮ ಕ್ರೆಡಿಟ್ ಸ್ಕೋರ್ ಪಡೆಯಲು ನಿಮ್ಮ ವಿವರಗಳನ್ನು ಹಂಚಿಕೊಳ್ಳಿ

ಆಗಾಗ ಕೇಳುವ ಪ್ರಶ್ನೆಗಳು
ನಿಮ್ಮ CIBIL ಸ್ಕೋರ್ ಮೂರು ಡಿಜಿಟ್ ಸಂಖ್ಯೆಯಾಗಿದ್ದು, ಇದು 300 ರಿಂದ 900 ವರೆಗಿನ ಶ್ರೇಣಿಯಲ್ಲಿ ಇರುತ್ತದೆ, ಇದು ನಿಮ್ಮ ಕ್ರೆಡಿಟ್ ಅರ್ಹತೆಯ ಅಳತೆಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ನಿಮ್ಮ ಸಿಬಿಲ್ ವರದಿಯಲ್ಲಿ ಕಂಡುಬಂದ ವಿವರಗಳನ್ನು ಪರಿಗಣಿಸಿದ ನಂತರ ಕ್ರೆಡಿಟ್ ಸ್ಕೋರನ್ನು ಪಡೆಯಲಾಗುತ್ತದೆ, ಇದನ್ನು ಟ್ರಾನ್ಸ್ಯೂನಿಯನ್ ಸಿಬಿಲ್ ದಾಖಲೆಯಾಗಿ ನಿರ್ವಹಿಸಲಾಗುತ್ತದೆ.
ನಿಮಗೆ ಅನುಮೋದನೆ ನೀಡುವ ಮೊದಲು ಲೋನನ್ನು ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಪರಿಶೀಲಿಸಲು ನಿಮ್ಮ CIBIL ಸ್ಕೋರ್ ಅನ್ನು ನಿಮ್ಮ ಸಾಲದಾತರು ಪರಿಶೀಲಿಸುತ್ತಾರೆ. ನೀವು 900 ಕ್ರೆಡಿಟ್ ಸ್ಕೋರ್ಗೆ ಹತ್ತಿರವಾಗಿದ್ದರೆ, ನಿಮ್ಮ ಲೋನಿಗೆ ಸುಲಭವಾಗಿ ಅನುಮೋದನೆ ಪಡೆಯುವ ಸಾಧ್ಯತೆಗಳು ಉತ್ತಮವಾಗಿರುತ್ತವೆ. ಒಂದು ವೇಳೆ ಸ್ಕೋರ್ 300 ಗೆ ಹತ್ತಿರವಿದ್ದರೆ ಅದನ್ನು ಕಳಪೆ ಎಂದು ಪರಿಗಣಿಸಲಾಗುತ್ತದೆ.
ಹೆಚ್ಚಿನ ಸಾಲದಾತರಿಗೆ, ಪರ್ಸನಲ್ ಲೋನನ್ನು ನೀಡಲು ಬೇಕಾದ ಕನಿಷ್ಠ CIBIL ಸ್ಕೋರ್ 750 ಆಗಿದೆ. ಹೆಚ್ಚಿನ CIBIL ಸ್ಕೋರ್ ಹೊಂದಿರುವುದು ನಿಮ್ಮ ಪರ್ಸನಲ್ ಲೋನ್ ಮೇಲೆ ಉತ್ತಮ ಡೀಲ್ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಕಡಿಮೆ ಸ್ಕೋರ್ ಹೊಂದಿದಲ್ಲಿ, ನಿಮ್ಮ ಹಣಕಾಸು ಸಹಾಯ ಪಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಭಾರತದಲ್ಲಿ ಹೋಮ್ ಲೋನ್ ಗೆ ಅಪ್ಲೈ ಮಾಡಲು ಬೇಕಾದ ಕನಿಷ್ಠ ಸಿಬಿಲ್ ಸ್ಕೋರ್ ಸಾಲದಾತರ ಪ್ರಕಾರ ಬದಲಾಗುತ್ತದೆ. ಒಬ್ಬರಿಗೆ ಕಟ್-ಆಫ್ ಪಾಯಿಂಟ್ 700 ಆಗಿರಬಹುದು, ಆದರೆ ಅದು ಇನ್ನೊಬ್ಬರಿಗೆ 650 ಆಗಿರಬಹುದು. 650 ರಿಂದ 749 ವರೆಗಿನ ಸ್ಕೋರ್ಗಳನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ ಮತ್ತು 750 ಮತ್ತು ಅದಕ್ಕಿಂತ ಹೆಚ್ಚಿನ ಸ್ಕೋರ್ಗಳನ್ನು 'ಅತ್ಯುತ್ತಮ' ಎಂದು ಪರಿಗಣಿಸಲಾಗುತ್ತದೆ.' ಮತ್ತೊಂದೆಡೆ, ಸಾಲದಾತರು ನಿಜವಾದ ಮೊತ್ತವನ್ನು ನಿರ್ಧರಿಸುತ್ತಾರೆ.
ಉತ್ತಮ CIBIL ಸ್ಕೋರ್ ನಿರ್ವಹಿಸಲು ನೀವು ಬಳಸಬಹುದಾದ ಕೆಲವು ಸರಳ ಸಲಹೆಗಳು ಇಲ್ಲಿವೆ:
- ಉತ್ತಮ ಟ್ರ್ಯಾಕ್ ರೆಕಾರ್ಡ್ ನಿರ್ಮಿಸಲು ಸಮಯಕ್ಕೆ ಸರಿಯಾಗಿ ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸಿ
- ನಿಮ್ಮ ಕ್ರೆಡಿಟ್ ಕಾರ್ಡನ್ನು ಸರಿಯಾಗಿ ನಿರ್ವಹಿಸಿ, ಪಾವತಿ ರಿಮೈಂಡರ್‌ಗಳನ್ನು ಸೆಟ್ ಮಾಡಿ ಮತ್ತು ನಿಮ್ಮ ಬಳಕೆಯನ್ನು ಸೀಮಿತಗೊಳಿಸಿ
- ದೀರ್ಘ ಲೋನ್ ಅವಧಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ, ನಿಮಗೆ ಸಾಧ್ಯವಾದಾಗ ಭಾಗಶಃ ಮುಂಪಾವತಿ ಮಾಡಲು ಪ್ರಯತ್ನಿಸಿ
ಒಂದು ವೇಳೆ ನೀವು ಕಳಪೆ CIBIL ಸ್ಕೋರ್ ಹೊಂದಿದ್ದರೆ, ಅದನ್ನು ಸುಧಾರಿಸುವ ಅನೇಕ ದಾರಿಗಳಿವೆ. ಇಲ್ಲಿ ಕೆಲವು ಸಲಹೆಗಳಿವೆ:
- ಸದ್ಯಕ್ಕೆ ಲೋನ್ ಪಡೆಯುವ ಅವಶ್ಯಕತೆ ಇಲ್ಲವೆಂಬುದು ಖಚಿತ ಎಂಬುದನ್ನು ಹೊರತುಪಡಿಸಿ ಲೋನಿಗೆ ಕೋ-ಸೈನರ್ ಆಗುವುದನ್ನು ತಪ್ಪಿಸಿ
- ಸಿಕ್ಕಾಪಟ್ಟೆ ಲೋನ್ ಪಡೆದುಕೊಳ್ಳಬೇಡಿ
- ನಿಮ್ಮ ಎಲ್ಲಾ EMI ಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್ಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿ
- ನಿಮ್ಮ ಲೋನ್ಗಳನ್ನು ನಿರ್ವಹಣೆ ಮಾಡಲು ಅಗತ್ಯವಿರುವಾಗ ಡೆಟ್ ಕನ್ಸೊಲಿಡೇಶನ್ ಲೋನ್ಗಳನ್ನು ಬಳಸಿ
- ಸಾಲ ಪಡೆಯುವಾಗ ಎಚ್ಚರಿಕೆಯಿಂದ ಇರಿ ಮತ್ತು ಯಾವಾಗಲೂ ಸರಿಯಾದ ಮರುಪಾವತಿ ಯೋಜನೆಯನ್ನು ಹೊಂದಿರಿ
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಇತರ ಕೆಲವು ಸರಳ ಮಾರ್ಗಗಳು ಇಲ್ಲಿವೆ.
ನೀವು ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ಉಚಿತವಾಗಿ ನಿಮ್ಮ CIBIL ಸ್ಕೋರ್ ಪರಿಶೀಲಿಸಬಹುದು (ಯಾವುದೇ ಗ್ರಾಹಕ ಲಾಗಿನ್ ಅಥವಾ ನೋಂದಣಿ ಅಗತ್ಯವಿಲ್ಲ).
ನೀವು ಈ ಮೂರು ಸರಳ ಹಂತಗಳನ್ನು ಅನುಸರಿಸಬೇಕಾಗುತ್ತದೆ:
ಹಂತ 1: ನಿಮ್ಮ ಬಗ್ಗೆ ಕೆಲವು ಮೂಲಭೂತ ಮಾಹಿತಿಯನ್ನು ಹಂಚಿಕೊಳ್ಳಿ
ಹಂತ 2: ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಗೆ ಕಳುಹಿಸಲಾದ OTP ಯನ್ನು ಖಚಿತಪಡಿಸುವ ಮೂಲಕ ನಿಮ್ಮ ಗುರುತನ್ನು ಪರಿಶೀಲಿಸಿ
ಹಂತ 3: ನಿಮ್ಮ CIBIL ಸ್ಕೋರ್ ಮತ್ತು ರಿಪೋರ್ಟನ್ನು ಪರಿಶೀಲಿಸಿ.
ಇದು ಉಚಿತ ಇರುತ್ತದೆ ಮತ್ತು ಇದು ತುಂಬಾ ಸುಲಭವಾಗಿದೆ. ಮತ್ತು ಅತ್ಯುತ್ತಮವಾದುದು?? ಬಜಾಜ್ ಫಿನ್‌ಸರ್ವ್ ವೆಬ್‌ಸೈಟ್‌ನಲ್ಲಿ ನಿಮ್ಮ CIBIL ಸ್ಕೋರ್ ಪರಿಶೀಲಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ!
ನೀವು ನಿಮ್ಮ CIBIL ಸ್ಕೋರ್ ಪರಿಶೀಲಿಸಿದಾಗ, ಇದನ್ನು "ಮೆದು ವಿಚಾರಣೆ" ಎಂದು ಪರಿಗಣಿಸಲಾಗುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೆಗಟಿವ್ ಪರಿಣಾಮವನ್ನು ಬೀರುವುದಿಲ್ಲ. ಆದರೆ, ಸಾಲದಾತರು ಅಥವಾ ಕ್ರೆಡಿಟ್ ಕಾರ್ಡ್ ವಿತರಕರು CIBIL ಗೆ ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಲು ಕೋರಿದರೆ(ಸಾಮಾನ್ಯವಾಗಿ ಅವರು ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಕುರಿತು ನಿಮ್ಮನ್ನು ಪರಿಗನಿಸುತ್ತಿದ್ದಾಗ), ಅದನ್ನು 'ಕಠಿಣ ವಿಚಾರಣೆ' ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ರಿಪೋರ್ಟ್‌ನ ವಿಚಾರಣೆ ವಿಭಾಗದಲ್ಲಿ ಕಠಿಣ ವಿಚಾರಣೆಗಳನ್ನು ದಾಖಲಿಸಲಾಗುತ್ತದೆ.
ಅನೇಕ ಕಠಿಣ ವಿಚಾರಣೆಗಳು, ಕಡಿಮೆ ಅವಧಿಯಲ್ಲಿ ಪದೆಪದೆ ಮಾಡಿದರೆ ಅದನ್ನು, "ಕ್ರೆಡಿಟ್ ಹಂಗ್ರಿ ಬಿಹೇವಿಯರ್" ಎಂದು ಕರೆಯಲಾಗುತ್ತದೆ ಮತ್ತು ನಿಮ್ಮ ಕ್ರೆಡಿಟ್ ಸ್ಕೋರಿಗೆ ತೊಂದರೆ ಆಗಬಹುದು. ಆದರೆ ಕನಿಷ್ಠ ವರ್ಷಕ್ಕೊಮ್ಮೆ, ಸಾಫ್ಟ್ ವಿಚಾರಣೆಯನ್ನು, ಪ್ರಮುಖ ಹಣಕಾಸಿನ ಅಭ್ಯಾಸ ಎಂದು ಪರಿಗಣಿಸಲಾಗುತ್ತದೆ.
ನಿಮಗೆ ಗೊತ್ತಿರಬಹುದು, ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಅಳೆಯುತ್ತದೆ. ಹಲವಾರು ಕಾರಣಗಳಿಗಾಗಿ ನಿಮ್ಮ ಸ್ಕೋರ್ ಪರಿಶೀಲಿಸುವುದನ್ನು ನಿಮ್ಮ ಸಾಲದಾತರು ಆಯ್ಕೆ ಮಾಡುತ್ತಾರೆ,
ಒಳಗೊಂಡು:
- ನಿಮ್ಮ ಕ್ರೆಡಿಟ್ ರೆಕಾರ್ಡ್ ಮತ್ತು ಇತಿಹಾಸವನ್ನು ಪರಿಶೀಲಿಸಲು
- ಲೋನ್ ಮರುಪಾವತಿ ಮಾಡುವಲ್ಲಿ ನಿಮ್ಮ ಸಾಮರ್ಥ್ಯ
- ನಿಮ್ಮ ಕ್ರೆಡಿಟ್ ಬ್ಯಾಲೆನ್ಸ್ ರಿವ್ಯೂ ಮಾಡಲು ಮತ್ತು ನಿಮ್ಮ ಪ್ರೊಫೈಲ್ ರಿಸ್ಕ್ ಲೆವೆಲ್ ಅನ್ನು ಅಂದಾಜಿಸಲು
- ಸಾಲದಾತರ ಲೋನ್ ಅರ್ಹತಾ ಮಾನದಂಡಗಳನ್ನು ನೀವು ತಲುಪಿದ್ದೀರಾ ಎಂಬುದನ್ನು ಗುರುತಿಸಲು
- ನಿಮಗೆ ಸೂಕ್ತವಾದ ಲೋನ್ ಮೊತ್ತ ಮತ್ತು ಬಡ್ಡಿ ದರವನ್ನು ತಲುಪಲು
ಆದ್ದರಿಂದ, ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಹಣಕಾಸಿನ ಆರೋಗ್ಯವನ್ನು ನಿರ್ವಹಿಸಲುಸಹಾಯ ಮಾಡುವ ಪ್ರಮುಖ ಸಾಧನವಾಗಿದೆ.
ಕಡಿಮೆ ಬಡ್ಡಿ ದರದಲ್ಲಿ ಅಪೇಕ್ಷಿತ ಲೋನ್ ಮೊತ್ತಗಳನ್ನು ಪಡೆಯಲು ಕಡಿಮೆ ಸಿಬಿಲ್ ಸ್ಕೋರ್ ಸಾಲಗಾರರಿಗೆ ಅಡೆತಡೆಯಾಗುತ್ತದೆ. ಆದಾಗ್ಯೂ, ಬಳಕೆದಾರರು ತಮ್ಮ ಸಿಬಿಲ್ ವರದಿಯನ್ನು ಖರೀದಿಸಬಹುದು. ನಿಮ್ಮ ಸಿಬಿಲ್ ವರದಿಯಿಂದ, ನೀವು ಬಯಸಿದಾಗ ನಿಮ್ಮ ಸಿಬಿಲ್ ಸ್ಕೋರನ್ನು ಪರಿಶೀಲಿಸಬಹುದು. ಅದಕ್ಕಾಗಿ, ನೀವು ಕೆಲವು ಹಂತಗಳನ್ನು ಅನುಸರಿಸಬೇಕು.
ಸಿಬಿಲ್ ವರದಿಯು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕುಗಳು ನೀಡಿದಂತೆ ನಿಮ್ಮ ಕ್ರೆಡಿಟ್ ಇತಿಹಾಸವನ್ನು ಹೊಂದಿದೆ. ಅಲ್ಲದೆ, ನೀವು ನಿಮ್ಮ ಸಿಬಿಲ್ ಸ್ಕೋರ್ ಮತ್ತು ಇತರ ಹಣಕಾಸಿನ ನಡತೆಯ ಕುರಿತು ಅಕ್ಸೆಸ್ ಪಡೆಯಬಹುದು. ನಿಮ್ಮ ಸಿಬಿಲ್ ವರದಿಯನ್ನು ಪಡೆಯಲು, ಬಳಕೆದಾರರು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕು. ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಬಳಕೆದಾರರಿಗೆ ವಿವಿಧ ಚಂದಾದಾರಿಕೆ ಪ್ಯಾಕೇಜ್‌ಗಳನ್ನು ಒದಗಿಸುತ್ತವೆ. ಆಯಾ ಏಜೆನ್ಸಿಗೆ ಚಂದಾದಾರಿಕೆ ಕೋರಿಕೆಯನ್ನು ಮಾಡಿ ಮತ್ತು ಅವರು ನಿಮಗೆ ಮೇಲ್ ಕಳುಹಿಸುತ್ತಾರೆ.
ನಂತರ, ನೀವು ನಿಮ್ಮ ಸಿಬಿಲ್ ವರದಿಯನ್ನು ಖರೀದಿಸಲು ಬಯಸಿದರೆ, ನೀವು ಏಜೆನ್ಸಿಯಿಂದ ಮೇಲ್ ಡೌನ್ಲೋಡ್ ಮಾಡಬೇಕಾಗುತ್ತದೆ. ನಂತರ ಮೇಲ್‌ನಲ್ಲಿ ಲಗತ್ತಿಸಲಾದ ಫಾರ್ಮಿನಲ್ಲಿ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ. ನಿಮ್ಮ ಪಾರ್ಮ್‌ನೊಂದಿಗೆ ನಿಮ್ಮ ಪ್ರಮುಖ ಕೆವೈಸಿ ಡಾಕ್ಯುಮೆಂಟ್‌ಗಳು ಮತ್ತು ಕೋರಲಾದ ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ ಅನ್ನು ನೀವು ಒದಗಿಸಬೇಕು.
ಬಳಕೆದಾರರು ತಮ್ಮ ಸಿಬಿಲ್ ಸ್ಕೋರ್, ಹಣಕಾಸಿನ ಸ್ಥಿತಿ ಮುಂತಾದ ಯಾವುದೇ ಉದ್ದೇಶಕ್ಕಾಗಿ ತಮ್ಮ ಸಿಬಿಲ್ ವರದಿಗೆ ಭೇಟಿ ನೀಡಬಹುದು. ಆದಾಗ್ಯೂ, ಒಮ್ಮೆ ಚಂದಾದಾರಿಕೆ ಅವಧಿ ಮುಗಿದ ನಂತರ, ಬಳಕೆದಾರರು ಈ ವರದಿಗೆ ಅಕ್ಸೆಸ್ ಹೊಂದಿರುವುದಿಲ್ಲ ಮತ್ತು ಅವರ ಚಂದಾದಾರಿಕೆಯನ್ನು ನವೀಕರಿಸಬೇಕಾಗುತ್ತದೆ.
ಕ್ರೆಡಿಟ್ ಸ್ಕೋರ್, ಕ್ರೆಡಿಟ್ ರೇಟಿಂಗ್ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಸಾಮಾನ್ಯವಾಗಿ ಪರ್ಯಾಯವಾಗಿ ಬಳಸಲಾಗುತ್ತದೆ. ಆದಾಗ್ಯೂ, ಅವುಗಳು ಬೇರೆ ಬೇರೆ ಅರ್ಥವನ್ನು ಹೊಂದಿದೆ.
ಕ್ರೆಡಿಟ್ ರಿಪೋರ್ಟ್ ಬಳಕೆದಾರರು ಮಾಡಿದ ಎಲ್ಲಾ ಕ್ರೆಡಿಟ್ ಲೈನ್‌ಗಳು ಮತ್ತು ಪಾವತಿಗಳ ವಿವರವಾದ ಪಟ್ಟಿಯನ್ನು ವಿವರಿಸುತ್ತದೆ. ಇದು ಈ ಮಾಹಿತಿಯನ್ನು ಒಳಗೊಂಡಿರುತ್ತದೆ:
- ಬಳಕೆದಾರರ ವೈಯಕ್ತಿಕ ಡೇಟಾ
- ಕ್ರೆಡಿಟ್ ಕಾರ್ಡಿನ ಸಾಲದ ಮೊತ್ತವನ್ನು ಒಳಗೊಂಡಿರುವ ಮುಚ್ಚಿದ ಮತ್ತು ತೆರೆದ ಲೋನ್ ಅಕೌಂಟ್‌ಗಳ ವಿವರವಾದ ಪಟ್ಟಿ
- ಬಳಕೆದಾರರಿಂದ ಕ್ರೆಡಿಟ್ ವಿಚಾರಣೆ
- ಫೋರ್‌ಕ್ಲೋಸರ್‌ಗಳು, ದಿವಾಳಿತನಗಳು, ನಾಗರಿಕ ದಾವೆಗಳ ಮೇಲೆ ತೀರ್ಪುಗಳು ಇತ್ಯಾದಿಗಳ ಸಾರ್ವಜನಿಕ ದಾಖಲೆ.
ಪ್ರತಿ ಕ್ರೆಡಿಟ್ ರಿಪೋರ್ಟ್‌ನಲ್ಲಿ ಕ್ರೆಡಿಟ್ ಸ್ಕೋರ್ ಇರುತ್ತದೆ.
ಕ್ರೆಡಿಟ್ ಸ್ಕೋರ್ 300 ರಿಂದ 900 ವರೆಗಿನ ಮೂರು ಅಂಕಿಯ ಸಂಖ್ಯೆಯಾಗಿದೆ ಮತ್ತು ಇದು ಕ್ರೆಡಿಟ್ ರಿಪೋರ್ಟ್‌ನಲ್ಲಿ ಒಳಗೊಂಡಿದೆ. ಎಲ್ಲಾ ರೀತಿಯ ಸಾಲದಾತರಿಗೆ ಸಾಲಗಾರರ ಕ್ರೆಡಿಟ್ ಅರ್ಹತೆಯನ್ನು ಸಾಬೀತುಪಡಿಸುವುದರಿಂದ ಕ್ರೆಡಿಟ್ ಸ್ಕೋರ್ ಪ್ರಮುಖವಾಗಿದೆ. ಬಳಕೆದಾರರ ಹಣಕಾಸಿನ ಚಟುವಟಿಕೆಗಳನ್ನು ಅವಲಂಬಿಸಿ ಸ್ಕೋರ್ ಮೇಲೆ ಮತ್ತು ಕೆಳಗೆ ಹೋಗುತ್ತದೆ.
ಕ್ರೆಡಿಟ್ ರೇಟಿಂಗ್ ಎಂಬುದು ಅರ್ಜಿದಾರರ ಕ್ರೆಡಿಟ್ ಅರ್ಹತೆಯ ಪ್ರಮಾಣೀಕೃತ ತಪಾಸಣೆಯಾಗಿದೆ, ಅದನ್ನು ಕ್ರೆಡಿಟ್ ರೇಟಿಂಗ್ ಎಂದು ಕರೆಯಲಾಗುತ್ತದೆ. ಲೋನ್ ಪಡೆಯಲು ಬಯಸುವ ಯಾವುದೇ ಘಟಕವು ಕ್ರೆಡಿಟ್ ರೇಟಿಂಗ್ ತಪಾಸಣೆಗಳಿಗೆ ಜವಾಬ್ದಾರರಾಗಿರುತ್ತದೆ, ವ್ಯಕ್ತಿ, ಸಂಸ್ಥೆ, ಸಾರ್ವಭೌಮ ಸರ್ಕಾರ ಅಥವಾ ರಾಜ್ಯ ಪ್ರಾಂತೀಯ ಪ್ರಾಧಿಕಾರಗಳು.
ಆಸ್ತಿ ಮೇಲಿನ ಲೋನ್ ಪಡೆಯಲು, ನೀವು ಹೆಚ್ಚಿನ ಕ್ರೆಡಿಟ್ ಸ್ಕೋರ್‌ನೊಂದಿಗೆ ಅಪ್ಲೈ ಮಾಡಲು ಶಿಫಾರಸು ಮಾಡಲಾಗಿದೆ, ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚು. ಇದು ಆಸ್ತಿ ಮೇಲಿನ ಲೋನ್ ಬಡ್ಡಿ ದರಗಳನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಲೇಖನಗಳು

CIBIL ಸ್ಕೋರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದೆಲ್ಲವೂ
ಇನ್ನಷ್ಟು ಓದಿರಿ
ಕ್ರೆಡಿಟ್ ಸ್ಕೋರ್ ಎಂದರೇನು
ಇನ್ನಷ್ಟು ಓದಿರಿ
ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಿಸಲು ನಿಮಗೆ ಸಹಾಯ ಮಾಡುವ 5 ಅಭ್ಯಾಸಗಳು
ಇನ್ನಷ್ಟು ಓದಿರಿ
ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸುವುದು ಹೇಗೆ
ಇನ್ನಷ್ಟು ಓದಿರಿ