ಹೆಸರೇ ಸೂಚಿಸುವಂತೆ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಎಂದರೆ ಅಸಲು, ಬಡ್ಡಿ ಮತ್ತು ಅವಧಿಯ ಆಧಾರದಲ್ಲಿ ಹೋಮ್ ಲೋನ್ಗೆ ನಿಮ್ಮ ಮಾಸಿಕ ಪಾವತಿಯನ್ನು ಲೆಕ್ಕ ಹಾಕಲು ನೆರವಾಗುವ ಒಂದು ಸಾಧನವಾಗಿದೆ. ನೀವು ಈ ಮೊತ್ತಗಳನ್ನು ಹೋಮ್ ಲೋನ್ EMI ಕ್ಯಾಲ್ಕುಲೇಟರ್ಗೆ ಹಾಕಿದಾಗ, ಅದು ಕೆಲವೇ ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನೀವು ಈ ಸಾಧನವನ್ನು ಹೋಮ್ ಲೋನ್ ಪಡೆಯುವ ಸಾಮರ್ಥ್ಯವನ್ನು ನಿರ್ಣಯಿಸಲು, ನಿಮ್ಮ ಮನೆ ಖರೀದಿಗೆ ಬಜೆಟ್ಅನ್ನು ನಿರ್ಧರಿಸಲು ಹಾಗೂ ಮರುಪಾವತಿಗೆ ನಿಮ್ಮ ಹಣಕಾಸನ್ನು ಸಿದ್ಧಗೊಳಿಸಲೂ ಬಳಸಬಹುದು.
ಹಾಗಾಗಿ, ಬಜಾಜ್ ಫಿನ್ಸರ್ವ್ನ ಹೋಮ್ ಲೋನ್ EMI ಕ್ಯಾಲ್ಕುಲೇಟರ್ ಬಳಸಿಕೊಂಡು EMI ಗಳನ್ನು ಹೇಗೆ ಲೆಕ್ಕ ಹಾಕಬಹುದು ಎಂಬುದನ್ನು ನೋಡಿ.
ಉದಾಹರಣೆಗಾಗಿ, ನೀವು ಅಸಲು ರೂ. 90 ಲಕ್ಷ, ಅವಧಿ 240 ತಿಂಗಳು ಮತ್ತು ಬಡ್ಡಿ ದರ 11% ಎಂದು ನಮೂದಿಸುತ್ತೀರೆಂದು ಊಹಿಸೋಣ. ನಂತರ ನೀವು 'ಎಂಟರ್' ಒತ್ತಿದಾಗ, ನೀವು ಪ್ರತಿ ತಿಂಗಳು EMI ಆಗಿ ಪಾವತಿಸಬೇಕಾದ ಮೊತ್ತ ರೂ. 92,897 ಎಂದು ಅದು ತಕ್ಷಣ ತೋರಿಸುತ್ತದೆ. ಅಲ್ಲದೆ ನಿಮ್ಮ ಒಟ್ಟು ಬಡ್ಡಿ ಪಾವತಿಯು ರೂ. 1,32,95,247 ಮತ್ತು ನೀವು ಮಾಡಬೇಕಾದ ಒಟ್ಟು ಮರುಪಾವತಿಯು ರೂ. 2,22,95,247 ಆಗಿರುತ್ತದೆಂದೂ ಅದು ತೋರಿಸುತ್ತದೆ.
ನಂತರ ನಿಮಗೆ ಅನುಕೂಲಕರವಾದ ಅಸಲು, ಬಡ್ಡಿ ದರ ಮತ್ತು ಅವಧಿಯ ಕಾಂಬಿನೇಶನನ್ನು ಪಡೆಯುವವರೆಗೆ ನೀವು ಬಯಸಿದಷ್ಟು ಬಾರಿ ಮಾನದಂಡಗಳನ್ನು ಬಹುದು.
ನೀವು EMI ಕ್ಯಾಲ್ಕುಲೇಟರ್ ಹೇಗೆ ಬಳಸಬಹುದೆಂದು ತಿಳಿದುಕೊಂಡಿರಿ. ಈಗ ನೀವು ಯಾವಾಗ EMI ಪಾವತಿಗಳನ್ನು ಮಾಡಲು ಆರಂಭಿಸಬೇಕೆಂದು ನೋಡೋಣ.
EMI ಪಾವತಿಗಳು ಯಾವಾಗ ಆರಂಭವಾಗುತ್ತವೆ?
ನಿಮ್ಮ ಲೋನ್ ಮಂಜೂರಾಗಿ ನಿಮಗೆ ವಿತರಣೆಯಾದ ನಂತರ ತಕ್ಷಣವೇ ನೀವು EMI ಗಳನ್ನು ಪಾವತಿಸಲು ಆರಂಭಿಸಬೇಕಾಗುತ್ತದೆ. ಸಾಮಾನ್ಯವಾಗಿ ಸಾಲದಾತರು ಸೂಚಿಸಿದಂತೆ ನೀವು ಪ್ರತಿ ತಿಂಗಳು ಒಂದು ನಿಗದಿತ ದಿನಾಂಕದೊಳಗೆ EMI ಪಾವತಿಸಬೇಕಾಗುತ್ತದೆ. ಉದಾಹರಣೆಗಾಗಿ, ನಿಮ್ಮ ಲೋನ್ ತಿಂಗಳ 25 ರಂದು ವಿತರಣೆಯಾಗಿದ್ದಲ್ಲಿ ಮತ್ತು ನಿಮ್ಮ EMI ದಿನಾಂಕವನ್ನು ಪ್ರತಿ ತಿಂಗಳ 5 ರಂದು ನಿಗದಿಗೊಳಿಸಿದ್ದಲ್ಲಿ, ಮೊದಲ ತಿಂಗಳು EMI ಅನ್ನು 25 ರಿಂದ 5 ರವರೆಗೆ ಲೆಕ್ಕ ಹಾಕಲಾಗುತ್ತದೆ. ಮುಂದಿನ ತಿಂಗಳು, ನೀವು ಸಂಪೂರ್ಣ EMI ಅನ್ನು 5 ರಂದು ಅಥವಾ ಅದಕ್ಕಿಂತ ಮೊದಲು ಪಾವತಿಸುತ್ತೀರಿ. ನಿಮಗೆ ಹಣವನ್ನು ಹೊಂದಿಸಲು ಸುಲಭವಾಗಲು, ಬಜಾಜ್ ಫಿನ್ಸರ್ವ್ನಂತಹ ಕೆಲವು ಸಾಲದಾತರು 3 EMI ಹಾಲಿಡೇಯನ್ನು ನಿಮ್ಮ
ಹೋಮ್ ಲೋನ್ ಮೇಲೆ ಒದಗಿಸುತ್ತಾರೆ. ಅಂತಹ ಲೋನನ್ನು ಆರಿಸಬಹುದು ಮತ್ತು EMI -ರಹಿತ ಅವಧಿಯ ಪ್ರಯೋಜನ ಪಡೆಯಬಹುದು.
ನೀವು ಹೋಮ್ ಲೋನ್ ತೆಗೆದುಕೊಳ್ಳಲು ಯೋಜಿಸುವಾಗ, EMI ಕ್ಯಾಲ್ಕುಲೇಟರ್ ಬಳಸುವುದನ್ನು ಮರೆಯಬೇಡಿ. ಅದು ನಿಮಗೆ ಹೆಚ್ಚು ಸಮರ್ಥನೀಯ ಲೋನನ್ನು ಗುರುತಿಸಲು ಮತ್ತು ಮುಂಚಿತವಾಗಿ ಮರುಪಾವತಿಯನ್ನು ಯೋಜಿಸಲು ನೆರವಾಗುತ್ತದೆ, ಆ ಮೂಲಕ ನಿಮ್ಮ ಲೋನ್ ತೆಗೆದುಕೊಳ್ಳುವ ಅನುಭವವನ್ನು ಸಲೀಸಾ ಮತ್ತು ಸರಾಗವಾಗಿ ಮಾಡುತ್ತದೆ.