ಫೋಟೋ

> >

ಟೂ ವೀಲರ್ ಇನ್ಶೂರೆನ್ಸ್ ಆಗಾಗ ಕೇಳುವ ಪ್ರಶ್ನೆಗಳು

ಆಗಾಗ ಕೇಳುವ ಪ್ರಶ್ನೆಗಳು

ಟೂ ವ್ಹೀಲರ್ ಇನ್ಶೂರೆನ್ಸ್‌ಗಳ ವಿಧಗಳು ಯಾವುವು?

ಎರಡು ವಿಧದ ಟೂ ವೀಲರ್ ಇನ್ಶೂರೆನ್ಸ್ ಇದೆ - ಕಾಂಪ್ರಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್ ಮತ್ತು ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್. ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಹೊಂದಿರುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಆದರೂ, ಕಾಂಪ್ರಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸನ್ನು ಹೆಚ್ಚು ಶಿಫಾರಸು ಮಾಡಲಾಗಿದೆ.

ಟೂ- ವೀಲರ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ?

ಇನ್ಶೂರೆನ್ಸ್ ಮಾಡಿಸಲಾದ ಟೂ-ವೀಲರ್‌‌ಗೆ ಹಾನಿ/ ನಷ್ಟ, ಥರ್ಡ್-ಪಾರ್ಟಿಗೆ ಹಣಕಾಸಿನ ಸಹಾಯ ಮತ್ತು ಸವಾರರು/ ಮಾಲೀಕರಿಗೆ ಆಕ್ಸಿಡೆಂಟ್ ಕವರ್ ಇವೆಲ್ಲವೂ ಕಾಂಪ್ರಹೆನ್ಸಿವ್ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಆಗುತ್ತದೆ.‌.

ಬೈಕ್ ಇನ್ಶೂರೆನ್ಸ್ ನವೀಕರಿಸುವುದು ಹೇಗೆ?

ಇಂದಿನ ದಿನಗಳಲ್ಲಿ ಬೈಕ್ ಇನ್ಶೂರೆನ್ಸ್ ನವೀಕರಿಸುವುದು ಬಹಳ ಸುಲಭ. ನಿಮ್ಮ ಪಾಲಿಸಿಯ ಮುಕ್ತಾಯ ದಿನಾಂಕದ ಬಗ್ಗೆ ಮುಂಚಿತವಾಗಿ ನಿಮಗೆ ತಿಳಿಸಲಾಗುವುದು. ಇನ್ಶೂರರ್‌‌ಗಳ ವೆಬ್‌ಸೈಟ್‍ಗೆ ಭೇಟಿ ನೀಡುವ ಮೂಲಕ ಮತ್ತು ಪ್ರೀಮಿಯಂ ಪಾವತಿಸುವ ಮೂಲಕ ನೀವು ನಿಮ್ಮ ಬೈಕ್ ಇನ್ಶೂರೆನ್ಸ್‌ ಅನ್ನು ಆನ್ಲೈನಿನಲ್ಲಿ ನವೀಕರಿಸಬಹುದು. ನೀವು ಇದನ್ನು ಆಫ್‌ಲೈನಿನಲ್ಲಿ ನವೀಕರಿಸಲು ಬಯಸಿದರೆ- ಶಾಖೆಗೆ ಭೇಟಿ ನೀಡಬಹುದು ಅಥವಾ ಕಸ್ಟಮರ್ ಕೇರ್ ಟೀಮ್‍ ಗೆ ಕರೆ ಮಾಡಬಹುದು.

ಬೈಕ್ ಇನ್ಶೂರೆನ್ಸ್‌ನ್ನು ಆನ್‌ಲೈನಿನಲ್ಲಿ ಪಾವತಿಸುವುದು ಹೇಗೆ?

ಬೈಕ್ ಇನ್ಶೂರೆನ್ಸ್ ಪಾವತಿ ಕೆಲವು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಮೊಬೈಲ್ ವಾಲೆಟ್ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಆನ್ಲೈನಿನಲ್ಲಿ ನೀವು ಪಾವತಿಸಬಹುದು.

ಟೂ ವೀಲರ್ ಇನ್ಶೂರೆನ್ಸ್‌‌ಗೆ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಟೂ- ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಪ್ರತಿ ಪಾಲಿಸಿದಾರರಿಗೆ ಬದಲಾಗಬಹುದು. ಇದು ಬೈಕ್ ಮಾಡೆಲ್ ಮತ್ತು ತಯಾರಿಕೆ, ಉತ್ಪಾದಕ ವರ್ಷ, ಇಂಜಿನ್ ಸಾಮರ್ಥ್ಯ, ಭೌಗೋಳಿಕ ಸ್ಥಳ, ಬೈಕ್ ಮಾಲೀಕನ ವಯಸ್ಸು, ಆ್ಯಂಟಿ ಥೆಫ್ಟ್ ಡಿವೈಸ್ ಇನ್‍ಸ್ಟಾಲೇಶನ್ ಮತ್ತು ಸ್ವಯಂಪ್ರೇರಣೆಯಿಂದ ಕಡಿತಕ್ಕೆ ಒಳಗಾಗಬಹುದಾದ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುತ್ತವೆ.

ನೋ ಕ್ಲೈಮ್ ಬೋನಸ್ ಎಂದರೇನು?

ಪಾಲಿಸಿ ಅವಧಿಗೆ ಯಾವುದೇ ಕ್ಲೈಮ್ ಮಾಡದಿದ್ದರೆ ಇನ್ಶೂರೆನ್ಸ್ ಕಂಪನಿಯಿಂದ ನೋ ಕ್ಲೈಮ್ ಬೋನಸ್ ಅಥವಾ NCB ಅನ್ನು ನೀಡಲಾಗುತ್ತದೆ.

ನನ್ನ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಪಡೆಯುವುದು?

ಪಾಲಿಸಿ ಖರೀದಿಸುವಾಗ ಪಡೆದುಕೊಳ್ಳುವ ಇನ್ಶೂರೆನ್ಸ್ ಸರ್ಟಿಫಿಕೇಟ್‌‌ನಲ್ಲಿ ನೀವು ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿ ನಂಬರ್ ನೋಡಬಹುದು. ನೀವು ಇನ್ಶೂರರ್‌‌ನಿಂದ ಸ್ವೀಕರಿಸುವ ನಿಯಮಿತ ವಿವರಗಳ ಇಮೇಲ್‌‌ಗಳು, ಪತ್ರ ನಿಮ್ಮ ಬೈಕ್ ಪಾಲಿಸಿ ನಂಬರನ್ನು ಒಳಗೊಂಡಿರುತ್ತದೆ. ನೀವು ಬೈಕ್ ಇನ್ಶೂರೆನ್ಸ್ ಡಾಕ್ಯುಮೆಂಟನ್ನು ಕಳೆದುಕೊಂಡರೆ, ನೀವು FIR ಫೈಲ್ ಮಾಡಬಹುದು ಮತ್ತು ಡುಪ್ಲಿಕೇಟ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟಿಗೆ ಅಪ್ಲೈ ಮಾಡಬಹುದು.

ನನ್ನ ಈಗಿನ ಪಾಲಿಸಿಯಲ್ಲಿ ಹೊಸ ಟೂ- ವೀಲರನ್ನು ನೋಂದಣಿ ಮಾಡಬಹುದೇ?

ಹೌದು, ಹೊಸ ಟೂ- ವೀಲರನ್ನು ನಿಮ್ಮ ಪ್ರಸ್ತುತ ಟೂ-ವೀಲರ್‌ ಪಾಲಿಸಿಯಲ್ಲಿ ಹಳೆಯದನ್ನು ಬದಲಾಯಿಸುವ ಮೂಲಕ ನೋಂದಾಯಿಸಬಹುದು.

ನಾನು ಕಾಲಾವಧಿಯಲ್ಲಿ ಟೂ ವೀಲರ್ ಪಾಲಿಸಿ ರದ್ದು ಮಾಡಬಹುದೇ?

ಹೌದು, ಪಾಲಿಸಿ ಅವಧಿ ಸಮಯದಲ್ಲಿ ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ರದ್ದುಗೊಳಿಸಬಹುದು. ಆದರೆ, ನೀವು ಇನ್ನೊಂದು ಟೂ-ವೀಲರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಿರುವುದನ್ನು ಸಾಬೀತುಪಡಿಸಲು ನೀವು ಪೂರಕ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು ಅಥವಾ RTO ನಿಂದ ನಿಮ್ಮ ದ್ವಿಚಕ್ರ ವಾಹನಗಳ ನೋಂದಣಿ ರದ್ದಾಗಿರುವುದನ್ನು ತೋರಿಸಬೇಕು.

ತಪಾಸಣೆ ಇಲ್ಲದೆ ನಾನು ಟೂ- ವೀಲರ್ ಇನ್ಶೂರೆನ್ಸ್ ಪಡೆಯುತ್ತೇನೆಯೇ?

ಹೌದು, ನೀವು ಟೂ ವೀಲರ್ ವಾಹನ ಇನ್ಶೂರೆನ್ಸ್ ಆನ್ಲೈನಿನಲ್ಲಿ ಖರೀದಿಸಿದರೆ, ತಪಾಸಣೆ ಅಗತ್ಯವಿಲ್ಲ.

ಜನರು ಇವನ್ನೂ ಪರಿಗಣಿಸಿದ್ದಾರೆ

ಲೈಫ್ ಇನ್ಶೂರೆನ್ಸ್

ತಿಳಿಯಿರಿ

ಲೈಫ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತಿನಿಂದಾಗಿ ಉಂಟಾದ ಖರ್ಚುಗಳ ಮೇಲೆ ರಕ್ಷಣೆ

ಅಪ್ಲೈ
ಮೋಟಾರ್ ಇನ್ಶೂರೆನ್ಸ್

ತಿಳಿಯಿರಿ

ಮೋಟರ್ ಇನ್ಶೂರೆನ್ಸ್ - ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್‌‌ನೊಂದಿಗೆ ನಿಮ್ಮ ಕಾರು ಅಥವಾ 2- ವ್ಹೀಲರ್‌‌ಗೆ ರಕ್ಷಣೆ

ಅಪ್ಲೈ
ಹೆಲ್ತ್ ಇನ್ಶೂರೆನ್ಸ್

ತಿಳಿಯಿರಿ

ಹೆಲ್ತ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತು ಅಗತ್ಯತೆಗಳಿಂದ ಉಂಟಾಗುವ ವೆಚ್ಚಗಳಿಂದ ರಕ್ಷಣೆ

ಅಪ್ಲೈ
ಕಾರ್ ಇನ್ಶೂರೆನ್ಸ್

ತಿಳಿಯಿರಿ

ಕಾರ್ ಇನ್ಶೂರೆನ್ಸ್ - ಥರ್ಡ್ ಪಾರ್ಟಿ ಕವರೇಜ್ ಜತೆಗೆ ನಿಮ್ಮ ಕಾರಿಗೆ ಒಟ್ಟಾರೆ ಇನ್ಶೂರೆನ್ಸನ್ನು ಪಡೆಯಿರಿ

ಅಪ್ಲೈ