ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನದ ಲೋನ್ ಅರ್ಹತಾ ಮಾನದಂಡಗಳು

ಇಲ್ಲಿ ವಿವರಿಸಲಾದ ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ, ಬಜಾಜ್ ಫಿನ್‌ಸರ್ವ್‌ನಿಂದ ಟೂ ವೀಲರ್ ಮತ್ತು ಥ್ರೀ ವೀಲರ್ ಲೋನ್ ಪಡೆಯುವುದು ತುಂಬಾ ಸುಲಭ:

  • ನೀವು 21 ರಿಂದ (ಅರ್ಜಿ ಸಲ್ಲಿಸುವ ಸಮಯದಲ್ಲಿ) 65 ರೊಳಗಿನ (ಲೋನ್ ಅವಧಿಯ ಕೊನೆಯಲ್ಲಿ) ವಯಸ್ಸಿನವರಾಗಿರಬೇಕು
  • ನೀವು ಕನಿಷ್ಠ 1 ವರ್ಷದಿಂದ ಈ ನಗರದಲ್ಲಿ ವಾಸಿಸುತ್ತಿರಬೇಕು
  • ನೀವು ಕನಿಷ್ಠ 1 ವರ್ಷಗಳವರೆಗೆ ಉದ್ಯೋಗಿಯಾಗಿರಬೇಕು
  • ನೀವು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಲ್ಯಾಂಡ್‌ಲೈನ್ ನಂಬರ್ ಹೊಂದಿರಬೇಕು

ಟೂ ವೀಲರ್ ಮತ್ತು ಥ್ರೀ ವೀಲರ್ ಲೋನ್‌ಗಳಿಗೆ ಬೇಕಾದ ಡಾಕ್ಯುಮೆಂಟ್‌ಗಳು

ಟೂ ವೀಲರ್ ಮತ್ತು ಥ್ರೀ ವೀಲರ್ ವಾಹನದ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು ಕನಿಷ್ಠವಾಗಿವೆ. ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು:

  • ಗುರುತಿನ ಪುರಾವೆ: ಪಾಸ್‌ಪೋರ್ಟ್, ವೋಟರ್ ಐಡಿ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ.
  • ವಿಳಾಸದ ಪುರಾವೆ: ಪಾಸ್‌ಪೋರ್ಟ್, ಬಾಡಿಗೆ ಒಪ್ಪಂದ, ದೂರವಾಣಿ ಬಿಲ್, ಗ್ಯಾಸ್ ಕನೆಕ್ಷನ್ ಬಿಲ್, ರೇಷನ್ ಕಾರ್ಡ್ ಇತ್ಯಾದಿ.
  • ಆದಾಯದ ಪುರಾವೆ: ಅರ್ಜಿದಾರರ ಪ್ರೊಫೈಲ್ ಆಧಾರದ ಮೇಲೆ, ಇತ್ತೀಚಿನ ಸ್ಯಾಲರಿ ಸ್ಲಿಪ್‌ಗಳು ಮತ್ತು ಇತರ ಸಂಬಂಧಿತ ಡಾಕ್ಯುಮೆಂಟ್‌ಗಳು.

ಸರಳ ಅರ್ಹತಾ ಮಾನದಂಡಗಳನ್ನು ಪೂರೈಸಿ, ಕೆಲವೇ ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ಬಜಾಜ್ ಫಿನ್‌ಸರ್ವ್‌ನಿಂದ ಸುಲಭವಾಗಿ ಟೂ ವೀಲರ್ ಮತ್ತು ಥ್ರೀ ವೀಲರ್ ಲೋನ್ ಪಡೆಯಬಹುದು. ಲೋನ್‌ಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಮತ್ತು ಅವಧಿಯ ಕೊನೆಯಲ್ಲಿ ಗರಿಷ್ಠ 65 ವರ್ಷ ವಯಸ್ಸಾಗಿರಬೇಕು.

ಇದರ ಜೊತೆಗೆ, ನೀವು ಕನಿಷ್ಠ 1 ವರ್ಷದವರೆಗೆ ಉದ್ಯೋಗದಲ್ಲಿರಬೇಕು ಹಾಗೂ ಇತರ ಅಗತ್ಯ ಮಾನದಂಡಗಳನ್ನು ಪೂರೈಸಬೇಕು.

ನೀವು ಅರ್ಹತಾ ಮಾನದಂಡಗಳನ್ನು ಪೂರೈಸಿದ ನಂತರ, ನಿಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಆದಾಯದ ಪುರಾವೆಯಂತಹ ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಅನುಮೋದನೆ ಹಾಗೂ ಡಾಕ್ಯುಮೆಂಟ್ ಪರಿಶೀಲನೆಯ ನಂತರ, ಯಾವುದೇ ವಿಳಂಬವಿಲ್ಲದೇ ನೀವು ಲೋನ್ ಪಡೆಯುತ್ತೀರಿ.

ಇನ್ನಷ್ಟು ಓದಿರಿ ಕಡಿಮೆ ಓದಿ