ಆಗಾಗ ಕೇಳುವ ಪ್ರಶ್ನೆಗಳು

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ನಾನು ಹೇಗೆ ಖರೀದಿಸಬಹುದು?

ಬಜಾಜ್ ಫಿನ್‌ಸರ್ವ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಥರ್ಡ್-ಪಾರ್ಟಿ ಅಪ್ಲಿಕೇಶನ್ ಆನ್ಲೈನ್‌‌‌ನಲ್ಲಿ ಪ್ರಾರಂಭಿಸಿ. ನಿಮ್ಮ ವಿವರಗಳನ್ನು ಒದಗಿಸಿ ಮತ್ತು ನಿಮ್ಮ ಯೋಜನೆ ಆಯ್ಕೆ ಮಾಡಿ ಮತ್ತು ತಕ್ಷಣವೇ ಅನುಮೋದನೆ ಪಡೆದುಕೊಳ್ಳಿ.

ಅಪಾಯದ ಅಂಶಗಳು, ನಿಯಮಗಳು ಮತ್ತು ಷರತ್ತುಗಳು ಮತ್ತು ಹೊರಗಿಡುವಿಕೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಸೇಲ್‌‌ನ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಪ್ರಾಡಕ್ಟ್ ಸೇಲ್ಸ್ ಬ್ರೋಶರನ್ನು ಎಚ್ಚರಿಕೆಯಿಂದ ಓದಿ.

ನಾನು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಏಕೆ ತೆಗೆದುಕೊಳ್ಳಬೇಕು?

ಥರ್ಡ್ ಪಾರ್ಟಿ ಹಾನಿಗಳಿಗೆ ಪಾವತಿಸುವುದು ದೊಡ್ಡ ವೆಚ್ಚವಾಗಬಹುದು. ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದುವುದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಮತ್ತು ಅಪಘಾತದ ಸಂದರ್ಭದಲ್ಲಿ ಇದು ಹಣಕಾಸಿನ ಸುರಕ್ಷತೆಯನ್ನು ಒದಗಿಸುತ್ತದೆ. ಗಾಯಗೊಂಡ ವ್ಯಕ್ತಿಗೆ ಪರಿಹಾರ, ಅಂಗವಿಕಲತೆ, ಥರ್ಡ್ ಪಾರ್ಟಿಯ ಸಾವು ಅಥವಾ ವೆಹಿಕಲ್ ಅಥವಾ ಆಸ್ತಿಗೆ ಉಂಟಾದ ನಷ್ಟ ಸಂದರ್ಭದಲ್ಲಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾವತಿಸುತ್ತದೆ.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಕಡ್ಡಾಯವೇ?

ಹೌದು. ಭಾರತದಲ್ಲಿ ಮೋಟರ್ ವೆಹಿಕಲ್ಸ್ ಕಾಯ್ದೆ 1988 ಅಡಿಯಲ್ಲಿ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯ.

ಅಪಘಾತದ ನಂತರ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ನಾನು ಯಾವಾಗ ಆರಂಭಿಸಬೇಕು?

ಆದಷ್ಟು ಬೇಗ. ಅಪಘಾತದ ದಿನಾಂಕದಿಂದ 60 ದಿನಗಳಲ್ಲಿ ನೀವು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮ ಕ್ಲೈಮ್ ಫೈಲ್ ಮಾಡಬಹುದು.