TATA AIG ಹೆಲ್ತ್ ಇನ್ಶೂರೆನ್ಸ್ - TATA AIG ಮೆಡಿಪ್ರೈಮ್ ಇನ್ಶೂರೆನ್ಸ್ ಪಾಲಿಸಿ ಆನ್ಲೈನಿನಲ್ಲಿ ಖರೀದಿಸಿ ಅಥವಾ ರಿನೀವ್ ಮಾಡಿ
image

TATA AIG ಹೆಲ್ತ್ ಇನ್ಶೂರೆನ್ಸ್ - ಮೆಡಿ ಪ್ರೈಮ್

ಮೇಲ್ನೋಟ

Tata AIG ಮೆಡಿ ಪ್ರೈಮ್ ಪಾಲಿಸಿಯೊಂದಿಗೆ ಯಾವುದೇ ವೈದ್ಯಕೀಯ ತುರ್ತುಸ್ಥಿತಿಯ ವಿರುದ್ಧ ನಿಮ್ಮ ಇಡೀ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಮೂಲಕ ಮನಃ ಶಾಂತಿಯನ್ನು ಪಡೆಯಿರಿ. ಪಾರದರ್ಶಕ ಮತ್ತು ನಗದು ರಹಿತ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಸ್ಪತ್ರೆ ದಾಖಲಾತಿ, ಡೇ ಕೇರ್ ಚಿಕಿತ್ಸೆ, ಮತ್ತು ಒಳ-ರೋಗಿಯ ಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತದೆ.

  • ಒಳ ರೋಗಿಯ ಚಿಕಿತ್ಸೆ

    ಕೋಣೆ ಬಾಡಿಗೆ, ICU, ಶುಶ್ರೂಷೆ, ಔಷಧಿಗಳು ಮತ್ತು ಡ್ರಗ್‌ಗಳು ಒಳ-ರೋಗಿಯ ಚಿಕಿತ್ಸೆಯ ವೆಚ್ಚಗಳ ಮೇಲೆ ಉಪ-ಮಿತಿಗಳಿಲ್ಲ.

  • ಆಸ್ಪತ್ರೆಗೆ ಸೇರಿಸುವ ವೆಚ್ಚಗಳನ್ನು ಕವರ್ ಮಾಡುತ್ತದೆ

    ಆಸ್ಪತ್ರಗೆ ಸೇರುವ 30 ದಿನಗಳ ಮುಂಚೆಯೆ ಉಂಟಾಗುವ ವೈದ್ಯಕೀಯ ವೆಚ್ಚಗಳು ಮತ್ತು ಆಸ್ಪತ್ರಗೆ ಸೇರಿದ ನಂತರ 60 ದಿನಗಳಿಗೆ ಉಂಟಾಗುವ ವೈದ್ಯಕೀಯ ವೆಚ್ಚಗಳು ಭರಿಸಲಾಗುತ್ತದೆ.

  • ಡೇ-ಕೇರ್ ಚಿಕಿತ್ಸೆಗಳು

    24 ಗಂಟೆಗಳಷ್ಟು ಆಸ್ಪತ್ರೆ ದಾಖಲೀಕರಣ ಅಗತ್ಯವಿಲ್ಲದ 140 ವಿವಿಧ ಡೇಕೇರ್ ಚಿಕಿತ್ಸೆಗಳಿಗೆ ಪಾವತಿ ಮಾಡಲು ಈ ಪಾಲಿಸಿ ಬಳಸಿ.

  • ನಗದುರಹಿತ ಆಸ್ಪತ್ರೆ ಸೇರಿಸುವಿಕೆ

    ಭಾರತದಾದ್ಯಂತದ 3000 + ಆಸ್ಪತ್ರೆಗಳ ಪ್ರಬಲ ನೆಟ್ವರ್ಕ್‍ನಲ್ಲಿ ನಗದುರಹಿತ ಸೌಲಭ್ಯವನ್ನು ಪಡೆಯಿರಿ.

  • ಎಲ್ಲಾ ವೈದ್ಯಕೀಯ ಅವಶ್ಯಕತೆಗಳು ಕವರ್ ಆಗುತ್ತವೆ

    ಈ ಪಾಲಿಸಿಯಡಿ, ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೊಪತಿಗಳನ್ನು ಒಳಗೊಂಡು ಎಲ್ಲ ರೀತಿಯ ಚಿಕಿತ್ಸೆಗಳನ್ನು ಕವರ್ ಮಾಡಿ.

  • ಡೊಮಿಸಿಲಿಯರಿ ಚಿಕಿತ್ಸೆ

    ಪಾಲಿಸಿದಾರರು ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಅಥವಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ವೆಚ್ಚವನ್ನು ಈ ಪಾಲಿಸಿಯು ಒಳಗೊಳ್ಳುತ್ತದೆ.

  • ಅಂಗಾಂಗ ದಾನ

    ಅಂಗಾಂಗ ಕಸಿಗೆ ದೇಣಿಗೆದಾರರಿಂದ ಅಂಗವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವ ವೆಚ್ಚವನ್ನೂ ಈ ಪಾಲಿಸಿಯು ಒಳಗೊಳ್ಳುತ್ತದೆ.

  • ದಂತ ಚಿಕಿತ್ಸೆ

    ಅಪಘಾತದ ಕಾರಣದಿಂದ ಅವಶ್ಯಕವಾದ ದಂತ ಚಿಕಿತ್ಸೆಯು ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತದೆ.

  • ಜೀವಮಾನದ ನವೀಕರಣ

    ನಿಮ್ಮ ಪಾಲಿಸಿಯ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿ ಆಜೀವ ನವೀಕರಣವನ್ನು ಪಡೆಯಿರಿ.

  • ಪೂರ್ವ ಅಸ್ತಿತ್ವದಲ್ಲಿರುವ ರೋಗಗಳು

    ಪಾಲಿಸಿಯು 4 ವರ್ಷಗಳ ಕಾಯುವ ಅವಧಿಯ ನಂತರ ಪೂರ್ವ ಅಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಳ್ಳುತ್ತದೆ.

  • ತುರ್ತು ಆಂಬ್ಯುಲೆನ್ಸ್ ಕವರ್ ಮಾಡಲ್ಪಟ್ಟಿದೆ

    ಪ್ರತಿ ಆಸ್ಪತ್ರೆ ಸೇರಿಸುವಿಕೆಗೆ ರೂ. 2, 500 ವರೆಗೆ ತುರ್ತು ಆಂಬುಲೆನ್ಸ್ ವೆಚ್ಚವನ್ನು ಕವರ್ ಮಾಡುತ್ತದೆ.

  • ಫ್ರೀ ಲುಕ್ ಅವಧಿ

    ಪಾಲಿಸಿಯ ನಿಯಮ ಮತ್ತು ಷರತ್ತುಗಳ ಮರುನೋಟಕ್ಕಾಗಿ ಪಾಲಿಸಿಯನ್ನು ಪಡೆದ ದಿನಾಂಕದಿಂದ 15 ದಿನಗಳನ್ನು ಪಡೆಯಿರಿ.

  • ತೆರಿಗೆ ಪ್ರಯೋಜನ

    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 D ಅಡಿಯಲ್ಲಿ ಈ ಪಾಲಿಸಿಯ ಪಾವತಿಸಿದ ಪ್ರೀಮಿಯಂಗಾಗಿ ರೂ. 30, 000 ವರೆಗಿನ ತೆರಿಗೆ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಅರ್ಹತೆ

Tata AIG ಮೆಡಿ ಪ್ರೈಮ್‌ನ ಅರ್ಹತೆ ಮಾನದಂಡವು ಈ ಕೆಳಗಿನಂತಿವೆ:


• ಕಿರಿಯರಿಗೆ ಪ್ರವೇಶದ ಕನಿಷ್ಠ ವಯಸ್ಸು 91 ದಿನಗಳು ಮತ್ತು ವಯಸ್ಕರಿಗೆ 18 ವರ್ಷಗಳು ಆಗಿರುತ್ತವೆ.
• ಕಿರಿಯರಿಗೆ ಪ್ರವೇಶದ ಗರಿಷ್ಠ ವಯಸ್ಸು 21 ಮತ್ತು ವಯಸ್ಕರಿಗೆ 65 ವರ್ಷಗಳು ಆಗಿದೆ.
• ಇನ್ಶೂರೆನ್ಸ್ ಮೊತ್ತವು ರೂ. 2 ಲಕ್ಷದಿಂದ ರೂ. 10 ಲಕ್ಷದ ನಡುವೆ ಇರಬೇಕು.
• ಪಾಲಿಸಿಯ ಅವಧಿಯು 1 ಅಥವಾ 2 ವರ್ಷಗಳಾಗಬಹುದು.
• ವಯಸ್ಸಿನ ಆಧಾರದ ಮೇಲೆ ಪ್ರೀಮಿಯಂ ಲೆಕ್ಕ ಹಾಕಲಾಗುತ್ತದೆ.

ಅದು ಹೇಗೆ ಕೆಲಸ ಮಾಡುತ್ತದೆ

TATA AIG ಮೆಡಿ ಪ್ರೈಮ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ವಿವರಣೆ ಇಲ್ಲಿದೆ:

ಹಂತ 1 :

ಯೋಜಿತವಾಗಿ ಆಸ್ಪತ್ರೆಗೆ ದಾಖಲಾಗುವುದಕ್ಕೆ 48 ಗಂಟೆಗಳ ಮುಂಚಿತವಾಗಿ ಅಥವಾ ತುರ್ತುಪರಿಸ್ಥಿತಿಯ ಶಸ್ತ್ರಚಿಕಿತ್ಸೆಯ 24 ಗಂಟೆಗಳ ಒಳಗೆ TATA AIG ಗೆ ತಿಳಿಸಿ.

ಹಂತ 2 :

ಚಿಕಿತ್ಸೆ ಪಡೆದುಕೊಳ್ಳಿ.

ಹಂತ 3 :

ಇದು ನೆಟ್ವರ್ಕ್ ಆಸ್ಪತ್ರೆಯಾಗಿದ್ದರೆ ನಗದು-ರಹಿತ ಸೌಲಭ್ಯವನ್ನು ಪಡೆಯಿರಿ.

ಹಂತ 4 :

ನೆಟ್ವರ್ಕ್ ಅಲ್ಲದ ಆಸ್ಪತ್ರೆಯಾಗಿದ್ದರೆ, ಆನ್ಲೈನ್ನಲ್ಲಿ ಅಥವಾ ಫೋನ್ ಮೂಲಕ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ನಿಮ್ಮ ಹಕ್ಕನ್ನು ನೋಂದಾಯಿಸಿ.