ಐವೇರ್ ಅಶ್ಯೂರ್ - ಮೇಲ್ನೋಟ

ನಿಮ್ಮ ಕನ್ನಡಕ ಕಳೆದುಕೊಳ್ಳುವುದು ಅಥವಾ ಅದು ಅನಿರೀಕ್ಷಿತವಾಗಿ ತುಂಡಾಗುವುದರಿಂದ ಅದು ನಿತ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಕನ್ನಡಕಗಳು ದುಬಾರಿಯಾಗಿರುವುದರಿಂದ, ನಿಮ್ಮ ಕನ್ನಡಕಗಳು ಅಥವಾ ಸನ್‌ ಗ್ಲಾಸ್‌ಗಳಿಗೆ ರಕ್ಷಣಾ ಪ್ರೊಟೆಕ್ಷನ್ ಪ್ಲಾನ್ ಹೊಂದಿರುವುದು ತುಂಬಾ ಮುಖ್ಯವಾಗಿದೆ. ಬಜಾಜ್ ಫಿನ್‌ಸರ್ವ್‌ನ ಐವೇರ್ ಅಶ್ಯೂರ್ ಪ್ಲಾನ್, ಆಕಸ್ಮಿಕವಾಗಿ ಕಳೆದುಕೊಳ್ಳುವಿಕೆ, ಹಾನಿ, ಕಳ್ಳತನ ಮತ್ತು ಬೆಂಕಿ ಅವಘಡದಿಂದ ಆಗುವ ನಿಮ್ಮ ಅಮೂಲ್ಯವಾದ ಕನ್ನಡಕದ ನಷ್ಟವನ್ನು ಭರಿಸುತ್ತದೆ.

ಈ ಪ್ಲಾನ್ ಅಡಿಯಲ್ಲಿ, ನಿಮ್ಮ ದುಬಾರಿ ಫ್ರೇಮ್‌ಗಳು ಮತ್ತು ಲೆನ್ಸ್‌ಗಳು ಕೂಡ ಒಳಪಟ್ಟಿರುವುದರಿಂದ, ನೀವು ಅವುಗಳನ್ನು ತ್ವರಿತವಾಗಿ ಸರಿಪಡಿಸಿಕೊಳ್ಳಬಹುದು ಅಥವಾ ಬದಲಾಯಿಸಿಕೊಳ್ಳಬಹುದು, ಹೀಗಾಗಿ ನೀವು ಅನಾನುಕೂಲತೆ ಎದುರಿಸುವುದಿಲ್ಲ. ಆದ್ದರಿಂದ, ಬಜಾಜ್ ಫಿನ್‌ಸರ್ವ್‌ನಿಂದ ಈ ಕನ್ನಡಕದ ಪ್ರೊಟೆಕ್ಷನ್ ಪ್ಲಾನ್ ಅನ್ನು, ಯಾವಾಗಲೂ ಸ್ಪಷ್ಟವಾದ ದೃಷ್ಟಿಗಾಗಿ ಕನ್ನಡಕಗಳು ಅಥವಾ ಸನ್‌ಗ್ಲಾಸ್‌ಗಳನ್ನು ಧರಿಸುವ ಪ್ರತಿ ವ್ಯಕ್ತಿ ಹೊಂದಿರಬೇಕು.

 • ಐವೇರ್ ಅಶ್ಯೂರ್ - ಫೀಚರ್‌ಗಳು ಮತ್ತು ಪ್ರಯೋಜನಗಳು

 • ಹೆಚ್ಚು ಮೊತ್ತದ ಇನ್ಸೂರೆನ್ಸ್ ಕವರ್ ಪಡೆಯಲಾಗಿದೆ

  ಹೆಚ್ಚು ಮೊತ್ತದ ಇನ್ಸೂರೆನ್ಸ್ ಕವರ್ ಪಡೆಯಲಾಗಿದೆ:

  ಐವೇರ್ ಅಶ್ಯೂರ್ ಯೋಜನೆಯು ಕೇವಲ ರೂ.799 ಗೆ ₹ 40,000 ವರೆಗಿನ ಖರ್ಚನ್ನು ಭರಿಸುತ್ತದೆ. ಈ ಯೋಜನೆಯು ಕನ್ನಡಕಗಳಿಗೆ ರೂ. 15,000 ವರೆಗಿನ ಕವರೇಜ್‌ನೊಂದಿಗೆ ಪೂರಕ ಇನ್ಶೂರೆನ್ಸ್ ಅನ್ನು ಒಳಗೊಂಡಿದೆ.

 • ಬಹು ಪಾವತಿ ಆಯ್ಕೆಗಳು

  ಬಹು ಪಾವತಿ ಆಯ್ಕೆಗಳು:

  ನೆಟ್ ಬ್ಯಾಂಕಿಂಗ್, ಮೊಬೈಲ್ ವಾಲೆಟ್‌‌ಗಳು, UPI, ಡೆಬಿಟ್ ಕಾರ್ಡ್‌‌ಗಳು ಅಥವಾ ಕ್ರೆಡಿಟ್ ಕಾರ್ಡ್‌‌ಗಳ ಮೂಲಕ ನಿಮಗೆ ಅನುಕೂಲವಾಗುವೆಡೆಯಿಂದ ನೀವು ಸುಲಭವಾಗಿ ಪ್ರೀಮಿಯಂ ಅನ್ನು ಪಾವತಿಸಬಹುದು.

 • ಸುಲಭ ಮತ್ತು ತೊಂದರೆ ಇಲ್ಲದ ಕ್ಲೈಮ್ ಪ್ರಕ್ರಿಯೆ

  ಸುಲಭ ಮತ್ತು ತೊಂದರೆ ಇಲ್ಲದ ಕ್ಲೈಮ್ ಪ್ರಕ್ರಿಯೆ:

  ಟೆಲಿಫೋನ್/ಫ್ಯಾಕ್ಸ್/ಇಮೇಲ್/SMS/ಪೋಸ್ಟ್ ಮೂಲಕ ನಿಮ್ಮ ಕನ್ನಡಕದಲ್ಲಿ ತೊಂದರೆ ಉಂಟಾದ 7 ದಿನಗಳ ಒಳಗೆ ಯಾವುದೇ ಅಡೆತಡೆಗಳಿಲ್ಲದೆ ಈ ಪ್ಲಾನ್ ಅಡಿಯಲ್ಲಿ ನೀವು ಕವರೇಜಿಗೆ ಕ್ಲೈಮ್ ಮಾಡಬಹುದು,.

 • ಒಂದು ಫೋನ್ ಕರೆಯೊಂದಿಗೆ ಕ್ರೆಡಿಟ್/ಡೆಬಿಟ್ ಕಾರ್ಡುಗಳನ್ನು ಬ್ಲಾಕ್ ಮಾಡಿ

  ಒಂದು ಫೋನ್ ಕರೆಯೊಂದಿಗೆ ಕ್ರೆಡಿಟ್/ಡೆಬಿಟ್ ಕಾರ್ಡುಗಳನ್ನು ಬ್ಲಾಕ್ ಮಾಡಿ:

  ನೀವು ಒಂದು ವೇಳೆ ನಿಮ್ಮೆಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಕಳೆದುಕೊಂಡಿದ್ದರೆ, ಇನ್ಶೂರರ್‌ಗೆ ಒಂದು ಕರೆ ಮಾಡುವ ಮೂಲಕ ಅವುಗಳನ್ನು ಬ್ಲಾಕ್ ಮಾಡಲು, ಐವೇರ್ ಅಶ್ಯೂರ್ ಯೋಜನೆಯು ಅನುವು ಮಾಡಿಕೊಡುತ್ತದೆ.

 • ತುರ್ತು ಪ್ರಯಾಣ ಸಹಾಯ

  ತುರ್ತು ಪ್ರಯಾಣ ಸಹಾಯ:

  ನಿಮ್ಮ ಪ್ರಯಾಣದಲ್ಲಿ ನೀವು ಎಲ್ಲಿಯಾದರೂ ಸಿಕ್ಕಿಹಾಕಿಕೊಂಡಂತಹ ಸಂದರ್ಭದಲ್ಲಿ, ಭಾರತದಲ್ಲಾದರೆ ನೀವು ರೂ 20000ವರೆಗೆ ಮತ್ತು ವಿದೇಶದಲ್ಲಾದರೆ ರೂ. 40,000ವರೆಗೆ ತುರ್ತು ಹಣಕಾಸಿನ ನೆರವನ್ನು ಪಡೆಯಬಹುದು.

 • ತುರ್ತು ರಸ್ತೆಬದಿಯ ನೆರವು

  ತುರ್ತು ರಸ್ತೆಬದಿಯ ನೆರವು:

  ನಿಮ್ಮ ವಾಹನ ಕೆಟ್ಟು ನಿಂತಾಗ, ಟೈರ್ ಪಂಕ್ಚರ್ ಆದಾಗ ಅಥವಾ ಬ್ಯಾಟರಿ ಸಮಸ್ಯೆ ಆದಂತಹ ಸಂದರ್ಭದಲ್ಲಿ ಐವೇರ್‌ ಅಶ್ಯೂರ್ಡ್ ಪ್ಲಾನಿನಲ್ಲಿ ನೀವು ತುರ್ತು ರಸ್ತೆಬದಿಯ ನೆರವನ್ನು ಪಡೆಯಬಹುದು. ಈ ಸೇವೆಯನ್ನು ಭಾರತದ 400 ಸ್ಥಳಗಳಲ್ಲಿ ಪಡೆಯಬಹುದು.

 • ಐವೇರ್ ಅಶ್ಯೂರ್ ಪ್ಲಾನಿನಲ್ಲಿ ಏನು ಕವರ್ ಆಗುತ್ತದೆ?

 • ಹಾನಿ ಮತ್ತು ನಷ್ಟದ ವಿರುದ್ಧ ರಕ್ಷಣೆ:

  ಹಾನಿ ಮತ್ತು ನಷ್ಟದ ವಿರುದ್ಧ ರಕ್ಷಣೆ:

  ನಿಮ್ಮ ಕನ್ನಡಕಗಳು/ಸನ್‌ಗ್ಲಾಸ್‌ಗಳ ಮೇಲೆ ಯಾರಾದರೂ ಆಕಸ್ಮಿಕವಾಗಿ ಕುಳಿತುಕೊಂಡರೆ ಮತ್ತು ಫ್ರೇಮ್ ಅನ್ನು ಒಡೆದರೆ, ಅಥವಾ ನೀವು ಅದನ್ನು ಫ್ಲೋರ್‌ನಲ್ಲಿ ಅನಿರೀಕ್ಷಿತವೆಂಬಂತೆ ಬೀಳಿಸಿಕೊಂಡರೆ, ಈ ಯೋಜನೆಯು ನಿಮ್ಮ ಕನ್ನಡಕಕ್ಕೆ ಅತ್ಯುತ್ತಮ ಹಣಕಾಸಿನ ಕವರೇಜನ್ನು ನೀಡುತ್ತದೆ.

 • ಕಳ್ಳತನ ಮತ್ತು ದರೋಡೆಗಾಗಿ ಕವರೇಜ್:

  ಕಳ್ಳತನ ಮತ್ತು ದರೋಡೆಗಾಗಿ ಕವರೇಜ್:

  ನಿಮ್ಮ ಕನ್ನಡಕಗಳ ಕಳ್ಳತನ, ಕನ್ನ ಹಾಕುವುದು ಅಥವಾ ದರೋಡೆಯಿಂದಾಗಿ ಉಂಟಾದ ಹಣಕಾಸಿನ ನಷ್ಟವನ್ನು ಕನ್ನಡಕಗಳು ಮತ್ತು ಸನ್‌‌ಗ್ಲಾಸ್‌‌ಗಳ ಮೇಲಿನ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ.

 • ಕಳ್ಳತನ ಮತ್ತು ದರೋಡೆಗಾಗಿ ಕವರೇಜ್:

  ಬೆಂಕಿ, ಕಲಹ ಮತ್ತು ಮುಷ್ಕರ ಸಂದರ್ಭದಲ್ಲಿ ಕವರೇಜ್:

  ಈ ಪ್ಲಾನ್ ಬೆಂಕಿ, ಗಲಭೆ, ಸ್ಟ್ರೈಕ್ ಮತ್ತು ಯಾವುದೇ ಇತರ ಆಕಸ್ಮಿಕ ಕಾರಣದಿಂದಾಗಿ ಉಂಟಾದ ನಷ್ಟ ಅಥವಾ ಹಾನಿಯಿಂದ ನಿಮ್ಮ ಕನ್ನಡಕಗಳನ್ನು ರಕ್ಷಿಸುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಹಾನಿಗೊಳಗಾದ ಕನ್ನಡಕಗಳ ದುರಸ್ತಿ ಅಥವಾ ಬದಲಾವಣೆ ಮಾಡಿದ ವೆಚ್ಚವನ್ನು ಇನ್ಶೂರರ್ ಪಾವತಿಸುತ್ತಾರೆ.

 • ಐವೇರ್ ಅಶ್ಯೂರ್‌‌ನಲ್ಲಿ ಏನು ಕವರ್ ಆಗುವುದಿಲ್ಲ?

 • 1 ವರ್ಷಕ್ಕಿಂತ ಹಳೆಯ ಕನ್ನಡಕ

  1 ವರ್ಷಕ್ಕಿಂತ ಹಳೆಯ ಕನ್ನಡಕ:

  ಇನ್ವಾಯ್ಸ್ ದಿನಾಂಕದ ಪ್ರಕಾರ ಒಂದು ವರ್ಷಕ್ಕಿಂತ ಹಳೆಯ ಕನ್ನಡಕಗಳನ್ನು ಯೋಜನೆಯಡಿ ಕವರ್ ಮಾಡಲಾಗುವುದಿಲ್ಲ.

 • ಸಾಮಾನ್ಯ ಬಳಕೆಯಿಂದ ಉಂಟಾದ ಹಾನಿಗಳು

  ಸಾಮಾನ್ಯ ಬಳಕೆಯಿಂದ ಉಂಟಾದ ಹಾನಿಗಳು:

  ಸಾಮಾನ್ಯ ಬಳಕೆಯಿಂದಾಗಿ ನಿಮ್ಮ ಕನ್ನಡಕಗಳಿಗೆ ಉಂಟಾದ ಹಾನಿಗಳನ್ನು ಈ ಯೋಜನೆಯಡಿ ಕವರ್ ಮಾಡಲಾಗುವುದಿಲ್ಲ.

 • ಬಳಕೆದಾರರ ಕಡೆಯ ಅಜಾಗರೂಕತೆ:

  ಬಳಕೆದಾರರ ಕಡೆಯ ಅಜಾಗರೂಕತೆ:

  ನಿಮ್ಮ ಕಡೆಯಿಂದಾದ ತಪ್ಪಾದ ರೀತಿಯ ನಿರ್ವಹಣೆ ಅಥವಾ ಅಜಾಗರೂಕತೆಯಿಂದ ಕಳೆದುಕೊಂಡ ಕನ್ನಡಕಗಳು/ಸನ್‌ಗ್ಲಾಸ್‌ಗಳ ನಷ್ಟ ಅಥವಾ ಹಾನಿಯನ್ನು ಈ ಯೋಜನೆಯಡಿ ಕವರ್ ಮಾಡಲಾಗುವುದಿಲ್ಲ.

  ಕವರೇಜ್ ಮತ್ತು ಹೊರಗಿಡುವಿಕೆಗಳ ಬಗ್ಗೆ ವಿವರವಾಗಿ ತಿಳಿಯಲು, ಇಲ್ಲಿ ಕ್ಲಿಕ್ ಮಾಡುವ ಮೂಲಕ ದಯವಿಟ್ಟು ಉತ್ಪನ್ನದ ಬ್ರೋಶರನ್ನು ಓದಿ

ಐವೇರ್ ಅಶ್ಯೂರ್ ಪ್ಲಾನ್ ಅನ್ನು ಖರೀದಿಸುವುದು ಹೇಗೆ ?

ಐವೇರ್ ಅಶ್ಯೂರ್ ಬೆಲೆ

ಪಾಲಿಸಿಯ ಅವಧಿ 1 ವರ್ಷ
ಪ್ರೀಮಿಯಂ ಕೇವಲ ರೂ. 799 ನಲ್ಲಿ ರೂ. 15,000 ವರೆಗೆ ಇನ್ಶೂರ್ ಮಾಡಲಾದ ಮೊತ್ತ
ಕಳೆಯಬಹುದಾದದ್ದು ರೂ. 15,000 ವರೆಗೆ – ರೂ. 500

ಬಜಾಜ್ ಫಿನ್‌ಸರ್ವ್‌ ಐವೇರ್ ಅಶ್ಯೂರ್ ಪ್ಲಾನನ್ನು ಖರೀದಿಸುವ ಪ್ರಕ್ರಿಯೆ ಸುಲಭ ಮತ್ತು ಸರಳವಾಗಿದೆ. ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟಿನಿಂದ ಯೋಜನೆಯನ್ನು ಖರೀದಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

ಹಂತ 1: ನಿಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ ಮತ್ತು ಮೊಬೈಲ್ ನಂಬರ್ ನಂತಹ ಎಲ್ಲಾ ಸಂಬಂಧಿತ ಮಾಹಿತಿಯೊಂದಿಗೆ ಆನ್ಲೈನ್ ಅಪ್ಲಿಕೇಶನ್ ಫಾರಂ ಭರ್ತಿ ಮಾಡಿ.

ಹಂತ 2: ನಿಮ್ಮ ಫೋನ್ ನಂಬರಿಗೆ ಪಡೆದ OTP ನಮೂದಿಸುವ ಮೂಲಕ ನಿಮ್ಮ ಗುರುತಿನ ದೃಢೀಕರಣ ಮಾಡಿ.

ಹಂತ 3: ಮೊಬೈಲ್ ವಾಲೆಟ್, ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್, ಮೊಬೈಲ್ ವಾಲೆಟ್ ಅಥವಾ ಇತರ ಯಾವುದೇ ಆದ್ಯತೆಯ ಪಾವತಿ ವಿಧಾನವನ್ನು ಬಳಸಿಕೊಂಡು ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಐವೇರ್ ಅಶ್ಯೂರ್ ಪ್ಲಾನ್‌ಗಾಗಿ ಇಳಿಕೆ ಚಾರ್ಟ್

ಕನ್ನಡಕದ ವಯಸ್ಸು % ಕುಸಿತ
0-3 ತಿಂಗಳು 10%
3-6 ತಿಂಗಳು 20%
6-9 ತಿಂಗಳು 30%
9 - 12 ತಿಂಗಳು 40%
12-18 ತಿಂಗಳು 50%
18 ತಿಂಗಳಿಗಿಂತ ಹೆಚ್ಚು 65%

ಐವೇರ್ ಅಶ್ಯೂರ್ ಪ್ಲಾನ್ - ಕ್ಲೈಮ್ ಪ್ರಕ್ರಿಯೆ

ನಿಮ್ಮ ಕನ್ನಡಕಕ್ಕೆ ಯಾವುದೇ ರೀತಿಯ ನಷ್ಟ ಅಥವಾ ಹಾನಿಯಾದ ಸಂದರ್ಭದಲ್ಲಿ, ನೀವು ಇನ್ಶೂರರ್‌‌ನೊಂದಿಗೆ ಕ್ಲೇಮ್ ಮಾಡಬಹುದು. ಈ ಕೆಳಗಿನ ಯಾವುದೇ ವಿಧಾನಗಳ ಮೂಲಕ ಕನ್ನಡಕಗಳ ನಷ್ಟ ಅಥವಾ ಹಾನಿಯನ್ನು ಕಂಡುಹಿಡಿಯಲು ಕ್ಲೈಮ್ 24 ಗಂಟೆಗಳ ಒಳಗೆ ತಿಳಿಸಬೇಕು:

1. ತುರ್ತು ಟ್ರಾವೆಲ್ ನೆರವನ್ನು ಪಡೆಯಲು

• 1800-419-4000 ಗೆ ಕರೆ ಮಾಡಿ (ಟೋಲ್-ಫ್ರೀ ನಂಬರ್), ಅಥವಾ
feedback@cppindia.com ಗೆ ಇಮೇಲ್ ಬರೆಯಿರಿ


2. ಐವೇರ್ ಸಂಬಂಧಿತ ಕ್ಲೈಮ್‌ಗಳಿಗಾಗಿ:

• 18002667780 ಅಥವಾ 1800-22-9966 ಗೆ ಕರೆ ಮಾಡಿ (ಹಿರಿಯ ನಾಗರಿಕರ ಪಾಲಿಸಿದಾರರಿಗೆ ಮಾತ್ರ), ಅಥವಾ
• 5616181 ಕ್ಕೆ ‘CLAIMS’ ಎಂದು SMS ಮಾಡಿ

 

ಐವೇರ್ ಅಶ್ಯೂರ್ ಪ್ಲಾನ್ ಕ್ಲೈಮ್ ಅನ್ನು ಸಲ್ಲಿಸಲು ಬೇಕಾದ ದಾಖಲೆಗಳು

 
 • ಸರಿಯಾಗಿ ತುಂಬಿದ ಮತ್ತು ಸಹಿ ಮಾಡಲಾದ ಕ್ಲೇಮ್ ಫಾರಂ
 • ಗ್ರಾಹಕರಿಂದ ಘಟನೆಯ ವರದಿ
 • ಕನ್ನಡಕದ ಮೂಲ ಬಿಲ್‌‌ಗಳು/ಇನ್ವಾಯ್ಸ್‌‌ಗಳು
 • ಬೆಂಕಿ ನಷ್ಟದ ಸಂದರ್ಭದಲ್ಲಿ, ಫೈರ್ ಬ್ರಿಗೇಡಿನಿಂದ ವರದಿಯ ಪ್ರತಿ
 • ಕಳ್ಳತನ ಅಥವಾ ದೋಚಿದ ಸಂದರ್ಭದಲ್ಲಿನ FIR ಪ್ರತಿ
 • ಇವುಗಳ ಹೊರತಾಗಿ, ಕ್ಲೇಮ್ ಸೆಟಲ್ಮೆಂಟ್ ಸಂದರ್ಭದಲ್ಲಿ ಕೆಲವು ಇತರೆ ಡಾಕ್ಯುಮೆಂಟ್‌‌ಗಳು ಕೂಡ ಅಗತ್ಯವಿರಬಹುದು.
 

ಕ್ಲೇಮ್ ಸೆಟಲ್ಮೆಂಟ್

 

ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌‌ಗಳನ್ನು ಸಲ್ಲಿಸಿದ ನಂತರ ಮತ್ತು ಸರ್ವೇ/ ತನಿಖಾ ವರದಿ ಸಲ್ಲಿಸಿದ ನಂತರ, ಕ್ಲೈಮ್ ಇಲಾಖೆಯು ನಿಗದಿತ ಸಮಯದಲ್ಲಿ ಕ್ಲೈಮ್ ಅನ್ನು ಸೆಟಲ್ ಮಾಡುತ್ತದೆ.
ಈ ಕೆಳಗಿನ ಯಾವುದೇ ರೀತಿಯಲ್ಲಿ ಪಾವತಿಯನ್ನು ಕಳುಹಿಸಲಾಗುವುದು:

 • NEFT
 • ಸಿಸ್ಟಮ್ ಚೆಕ್

ಸೂಚನೆ: ರದ್ದುಪಡಿಸಿದ ಚೆಕ್ ಮತ್ತು ಇಎಫ್‌ಟಿ ಮ್ಯಾಂಡೇಟ್ ಫಾರಂನ ಪ್ರತಿ ಇಎಫ್‌ಟಿ ಸೆಟಲ್ಮೆಂಟಿಗೆ ಅಗತ್ಯವಿದೆ.

 

ನಮ್ಮನ್ನು ಸಂಪರ್ಕಿಸಿ

 

ಪಾಲಿಸಿಗೆ ಸಂಬಂಧಿಸಿದ ಯಾವುದೇ ವಿಚಾರಣೆಗಳು ಅಥವಾ ಕಳಕಳಿಗೆ, ದಯವಿಟ್ಟು pocketservices@bajajfinserv.in. ಗೆ ಇಮೇಲ್ ಕಳುಹಿಸುವ ಮೂಲಕ ನಮ್ಮನ್ನು ಸಂಪರ್ಕಿಸಿ