ಉಳಿತಾಯ ವೆರ್ಸಸ್ ಹೂಡಿಕೆ

ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುವುದಕ್ಕೆ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಎರಡು ಸಮಾನ ಮಹತ್ವದ್ದಾಗಿದೆ. ಎರಡನ್ನೂ ಒಟ್ಟಾಗಿಯೇ ಸಾಮಾನ್ಯವಾಗಿ ಬಳಸುತ್ತಿದ್ದರೂ, ಈ ಎರಡೂ ನಿಬಂಧನೆಗಳ ನಡುವೆ ಹಲವಾರು ಭಿನ್ನತೆಗಳಿವೆ. ಈ ನಿಯಮಗಳ ನಡುವಿನ ವ್ಯತ್ಯಾಸಗಳನ್ನು ವಿವರವಾಗಿ ನೋಡೋಣ.


ಉಳಿತಾಯ ಎಂದರೇನು?

ನಿಮ್ಮ ಎಲ್ಲ ಖರ್ಚುಗಳನ್ನು ಪೂರೈಸಿದ ನಂತರ ನಿಮ್ಮ ಕೈಯಲ್ಲಿ ಉಳಿದಿರುವ ಬಾಕಿ ಮೊತ್ತವು ಉಳಿತಾಯವಾಗಿದೆ. ಖರ್ಚುಗಳಿಗೆ ಕೊನೆ ಇಲ್ಲದಾಗ, ನಿಮ್ಮ ಗಳಿಕೆಯಲ್ಲಿ ಒಂದಿಷ್ಟು ಭಾಗವನ್ನು ಉಳಿತಾಯವಾಗಿಟ್ಟುಕೊಳ್ಳುವುದು ಸೂಕ್ತವಾಗಿದೆ. ಕಡ್ಡಾಯ ಉಳಿತಾಯದ ಹವ್ಯಾಸದಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಉತ್ತಮ ಮೊತ್ತವನ್ನು ಉಳಿಸಲು ನೆರವಾಗುತ್ತದೆ. ನೀವು ಉಳಿತಾಯ ಮಾಡುವ ಗುರಿಗಾಗಿ ಒಂದು ಶೆಡ್ಯೂಲನ್ನು ಸಿದ್ಧಪಡಿಸಿಕೊಳ್ಳಬಹುದು ಮತ್ತು ಇದನ್ನು ಕಾರು ಖರೀದಿ ಅಥವಾ ರಜಾ ವಿಹಾರಕ್ಕೆ ಬಳಸಿಕೊಳ್ಳಬಹುದು. ಅಂತಹ ಸಂದರ್ಭಗಳಲ್ಲಿ ನಿಮ್ಮ ಹೂಡಿಕೆಗಳನ್ನು ಬಳಸುವುದು ಉತ್ತಮ ಆಯ್ಕೆ.

ನಿಮ್ಮ ಅಲ್ಪಾವಧಿಯ ಗುರಿಗಳನ್ನು ಪೂರೈಸಲು ಉಳಿತಾಯವು ಸೂಕ್ತವಾಗಿದೆ. ಇಲ್ಲಿ ಬಹುತೇಕ ರಿಸ್ಕ್ ಇರುವುದಿಲ್ಲ ಮತ್ತು ನೀವು ಸಹ ಲಿಕ್ವಿಡಿಟಿಯನ್ನು ಆನಂದಿಸುತ್ತೀರಿ. ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಒಂದು ಮೊತ್ತವನ್ನು ಡೆಪಾಸಿಟ್ ಮಾಡಿದಾಗ, ಬ್ಯಾಂಕ್ ದಿವಾಳಿಯಾಗದ ಹೊರತು ಮೊತ್ತವು ಸುರಕ್ಷಿತವಾಗಿದೆ ಎಂದು ನಿಮಗೆ ಭರವಸೆ ನೀಡಬಹುದು. ಉಳಿತಾಯದೊಂದಿಗಿನ ಏಕೈಕ ನ್ಯೂನತೆಯೆಂದರೆ ಬಡ್ಡಿ ದರವು ತುಂಬಾ ಕಡಿಮೆಯಾಗಿದೆ.ಹೂಡಿಕೆ ಮಾಡುವುದು ಎಂದರೇನು?

ಹೂಡಿಕೆಯಲ್ಲಿ ಆದಾಯವನ್ನು ಗಳಿಸುವುದಕ್ಕಾಗಿ ಸ್ಟಾಕ್‌ಗಳು, ಬಾಂಡ್‌ಗಳು, ಪ್ರಾಪರ್ಟಿ ಮುಂತಾದವುಗಳಂಥ ಸ್ವತ್ತುಗಳಲ್ಲಿ ಫಂಡ್‍ಗಳನ್ನು ಡಿಪ್ಲಾಯ್ ಮಾಡುವುದು. ಕೆಲವು ಹೂಡಿಕೆದಾರರು ರಿಸ್ಕ್ ನಿಂದ ದೂರವಿರುತ್ತಾರೆ, ಇನ್ನು ಕೆಲವರು ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸುತ್ತಾರೆ ಮತ್ತು ಅತ್ಯಧಿಕ ಲಾಭ ಗಳಿಸಲು ಹೆಚ್ಚು ಅಪಾಯ ತೆಗೆದುಕೊಳ್ಳಲು ಬಯಸುತ್ತಾರೆ.

ಅಲ್ಪಾವಧಿ ಹೂಡಿಕೆಯು ಕಡಿಮೆ ಲಾಭ ನೀಡುತ್ತದೆ, ದೀರ್ಘಾವಧಿ ಹೂಡಿಕೆಯು ನಿಮಗೆ ಉತ್ತಮ ಲಾಭ ನೀಡುತ್ತದೆ. ಭೂಮಿ/ ಕಟ್ಟಡದಲ್ಲಿ ಹೂಡಿಕೆ ಮಾಡುವುದು (ಸಮಂಜಸವಾದ ಆಸ್ತಿ) ದೀರ್ಘಾವಧಿಯಲ್ಲಿ ನಿಮಗೆ ಉತ್ತಮ ಲಾಭವನ್ನು ನೀಡುತ್ತದೆ.

ಉಳಿತಾಯ ವೆರ್ಸಸ್ ಹೂಡಿಕೆ: ಎರಡೂ ಅಗತ್ಯವಿದೆಯೇ?

ಹೌದು. ಎರಡೂ ಕೂಡಾ ಆರ್ಥಿಕವಾಗಿ ನಿಮ್ಮ ಭವಿಷ್ಯದ ಭದ್ರತೆ ಅಗತ್ಯ. ಮೊತ್ತ ಮೊದಲನೇಯದಾಗಿ, ನಿಮ್ಮ ಗೃಹಕೃತ್ಯ ಹಾಗೂ ಇತರ ವೆಚ್ಚಗಳನ್ನು ಪೂರೈಸಲು ನಿಮಗೆ ಹಣಕಾಸು ಬೇಕಾಗುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಹಣ ಅತ್ಯಾವಶ್ಯವಾಗಿ ಬೇಕಾಗುತ್ತದೆ. ನಿಮ್ಮ ಹಣವನ್ನು ಹೂಡಿಕೆ ಮಾಡುವ ಮೊದಲು ನೀವು ಉಳಿತಾಯ ಸಂಗ್ರಹ ಮಾಡಿಟ್ಟುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ದೀರ್ಘಕಾಲೀನ ಗುರಿಗಳನ್ನು ಪೂರೈಸಲು ಇದು ಸೂಕ್ತವಾಗಿದೆ. ಅದಾಗ್ಯೂ, ವಿವೇಕದಿಂದ ಮಾಡದಿದ್ದರೆ, ಅದು ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ನಿಮ್ಮ ಉಳಿತಾಯವನ್ನು ಕಳೆದುಕೊಳ್ಳಬಹುದು.

ಪ್ರಮುಖ ವತ್ಯಾಸಗಳು

ಉಳಿತಾಯ ಹೂಡಿಕೆ
ಅಲ್ಪಾವಧಿಯ ಗುರಿಗಳ ಸಾಧನೆ ಅಲ್ಪಾವಧಿಯ ಗುರಿಗಳ ಸಾಧನೆ
ಕಡಿಮೆ ಲಾಭಗಳು ಹೆಚ್ಚು ಲಾಭಗಳು
ಮೌಲ್ಯದಲ್ಲಿ ಯಾವುದೇ ಬೆಳವಣಿಗೆ ಇಲ್ಲ ನಿಮ್ಮ ಹಣ ಬೆಳೆಯಲು ಸಹಾಯ ಮಾಡುತ್ತದೆ
ಲಿಕ್ವಿಡಿಟಿಯಲ್ಲಿ ಉತ್ತಮ, ಸುಲಭವಾಗಿ ಕಣ ಪಡೆಯಬಹುದು ಕಡಿಮೆ ಸಮಯದಲ್ಲಿ ಹೂಡಿಕೆಗಳನ್ನು, ವಿಶೇಷವಾಗಿ ದೀರ್ಘಾವಧಿ ಹೂಡಿಕೆಗಳನ್ನು ನೀವು ಆಯ್ದುಕೊಂಡಿದ್ದಲ್ಲಿ, ಅವುಗಳನ್ನು ಲಿಕ್ವಿಡೇಟ್ ಮಾಡುವುದು ಕಷ್ಟವಾಗಿರುತ್ತದೆ
ಸುರಕ್ಷಿತ ಮತ್ತು ಸುಭದ್ರ ಹೆಚ್ಚಿನ ಬಂಡವಾಳ ಹೂಡಿಕೆಗಳು ಮಾರುಕಟ್ಟೆ ಶಕ್ತಿಗಳಿಂದ ಪ್ರಭಾವಿತವಾದ ಅಂತರ್ಗತ ಅಪಾಯಗಳಿಂದ ಬರುತ್ತವೆ
ಹಣವು ಸೇವಿಂಗ್ಸ್ ಅಕೌಂಟ್/ ಶಾರ್ಟ್ ಟರ್ಮ್ ಡೆಪಾಸಿಟ್‌ಗಳಲ್ಲಿ ಇರಿಸಲ್ಪಡುತ್ತದೆ ಹಣವನ್ನು ಷೇರುಗಳು, ಷೇರುಗಳು, ಬಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಹೂಡಲಾಗುತ್ತದೆ
ಉಳಿತಾಯಗಳ ಮೇಲೆ ಯಾವುದೇ ತೆರಿಗೆ ಇಲ್ಲ ಹೂಡಿಕೆಯಲ್ಲಿನ ಆದಾಯಕ್ಕೆ ತೆರಿಗೆ ಅನ್ವಯವಾಗುತ್ತದೆ

ನಿಮಗೆ ಅಪಾಯಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ನೀವು ನಿಮ್ಮ ಹಣವನ್ನು FD ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಫಿಕ್ಸೆಡ್ ಡೆಪಾಸಿಟ್‌ಗಳು ಖಚಿತ ಆದಾಯಗಳನ್ನು ಒದಗಿಸುವ ಅತ್ಯಂತ ಸುರಕ್ಷಿತ ಹೂಡಿಕೆ ಸಾಧನಗಳಲ್ಲಿ ಒಂದಾಗಿವೆ. ಹೆಚ್ಚಿನ ಬಡ್ಡಿದರವನ್ನು ಒದಗಿಸುವ ಬ್ಯಾಂಕ್‌ಗಳು ಮತ್ತು NBFC ಗಳನ್ನು ಹುಡುಕಿ, ಅವುಗಳ FD ಯೋಜನೆಯಲ್ಲಿ ನಿಮ್ಮ ಉಳಿತಾಯದ ಒಂದು ಭಾಗವನ್ನು ಹಾಕಿ. ಸೇವಿಂಗ್ ಅಕೌಂಟ್‌ಗಿಂತಲೂ ಬಜಾಜ್ ಫೈನಾನ್ಸ್ FD ಗಳು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತವೆ.
ಅಪಾಯವಿಲ್ಲದ ಹೂಡಿಕೆಯ ಆಯ್ಕೆಗಳನ್ನು ಪ್ರಾರಂಭಿಸಲು ಇದು ತೀರಾ ಮುಂಚೆಯೊ ಅಥವಾ ತೀರಾ ತಡವೊ ಅಲ್ಲ. ಇಂದೇ ಆರಂಭಿಸಿ ಮತ್ತು ನಿಮ್ಮ ಹಣ ಬೆಳೆಯಲು ಅನುವು ಮಾಡಿ.

ನಿಮ್ಮ ಗುರಿಗೆ ಮಾರ್ಗದರ್ಶಿಯಾಗಲು, ನಿಮ್ಮ ಹಣಕಾಸು ಸ್ಥಿತಿಗೆ ಮತ್ತು ಅಪಾಯಗಳನ್ನು ತಡೆಯಲು ಉಳಿತಾಯ ಅಥವಾ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿರಬಹುದು. ನೀವು ಸಾಕಷ್ಟು ಉಳಿತಾಯವನ್ನು ಮಾಡಿದ, ಹೆಚ್ಚಿನ ಮೌಲ್ಯದ ಲೋನ್‌ಗಳನ್ನು ಪಾವತಿಸಿದ, ಮತ್ತು ನಿಮ್ಮ ನಿವೃತ್ತಿಯ ಜೀವನವನ್ನು ಸುರಕ್ಷಿತಗೊಳಿಸಿದ ನಂತರ ಅಪಾಯಕಾರಿ ಹೂಡಿಕೆ ಉಪಕರಣಗಳಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯವಾಗಿರುತ್ತದೆ. ಈ ಅಂಶಗಳ ಬಗ್ಗೆ ಚೆನ್ನಾಗಿ ಕಾಳಜಿ ವಹಿಸಿದ ನಂತರ, ನೀವು ಬುದ್ಧಿವಂತಿಕೆಯಿಂದ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದು ಮತ್ತು ಅದನ್ನು ಬೆಳೆಸಿಕೊಳ್ಳಬಹುದು.

ನಿಮ್ಮ ಹಣವನ್ನು FD ಯಲ್ಲಿ ಹೂಡಲು ಬಯಸುವಿರಾ? ಆನ್ಲೈನ್‌ನಲ್ಲಿ FD ಅಕೌಂಟ್ ಹೇಗೆ ತೆರೆಯುವುದು ಎಂದು ಪರಿಶೀಲಿಸಿ ಅಥವಾ ಯಾವುದೇ ಪ್ರಶ್ನೆಗಳಿದ್ದರೆ ಬಜಾಜ್ ಫೈನಾನ್ಸ್ ಕಸ್ಟಮರ್ ಕೇರನ್ನು ನೇರವಾಗಿ ಸಂಪರ್ಕಿಸಿ.