ಭಾರತದಲ್ಲಿ ಬ್ಯಾಂಕ್ ಅಲ್ಲದ ಹಣಕಾಸು ಕಂಪನಿಗಳ ಬಗ್ಗೆ

2 ನಿಮಿಷದ ಓದು

ಸಾಮಾನ್ಯವಾಗಿ ಎನ್‌ಬಿಎಫ್‌ಸಿಗಳಾಗಿ ಕರೆಯಲ್ಪಡುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು, ಲೋನ್‌ಗಳು ಮತ್ತು ಮುಂಗಡಗಳು, ಹೈರ್-ಪರ್ಚೇಸ್ ಇನ್ಶೂರೆನ್ಸ್ ಬಿಸಿನೆಸ್, ಬಾಂಡ್‌ಗಳ ಸ್ವಾಧೀನ, ಸ್ಟಾಕ್ ಇತ್ಯಾದಿಗಳಂತಹ ಆಯ್ದ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಹಣಕಾಸು ಸಂಸ್ಥೆಗಳಾಗಿವೆ. ಸಾಲಗಾರರು ತಮ್ಮ ವಸತಿ ಆಸ್ತಿಗಳನ್ನು ನಿರ್ಮಿಸಲು, ಖರೀದಿಸಲು ಅಥವಾ ನವೀಕರಿಸಲು ಎನ್‌ಬಿಎಫ್‌ಸಿಯಿಂದ ಹೋಮ್ ಲೋನ್ ಆಯ್ಕೆ ಮಾಡಬಹುದು. ಈ ಹಣಕಾಸು ಸಂಸ್ಥೆಗಳು ಬ್ಯಾಂಕಿಂಗ್ ಪರವಾನಗಿಯನ್ನು ಹೊಂದಿಲ್ಲ ಆದರೆ ಭಾರತದ ಕಂಪನಿಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ 1934, ಸೆಕ್ಷನ್ 45 I(ಎ) ಅಡಿಯಲ್ಲಿ, ಭಾರತದ ಪ್ರತಿ ಎನ್‌ಬಿಎಫ್‌ಸಿಯ ಕಾರ್ಯನಿರ್ವಹಣೆ ಮತ್ತು ಕೆಲಸಗಳನ್ನು ನಿಯಂತ್ರಿಸುತ್ತದೆ. ಎನ್‌ಬಿಎಫ್‌ಸಿ ಆಗಿ ಕಾರ್ಯನಿರ್ವಹಿಸುವ ಯಾವುದೇ ಕಂಪನಿಯು ಈ ಷರತ್ತುಗಳನ್ನು ಅನುಸರಿಸಬೇಕು:

 • ನಿವ್ವಳ ಮಾಲೀಕತ್ವದ ಫಂಡ್ (ಎನ್‌ಒಎಫ್) ಕನಿಷ್ಠ ರೂ. 200 ಲಕ್ಷ ಆಗಿರಬೇಕು
 • ಕಂಪನಿಯ ನೋಂದಣಿಯು ಕಂಪನಿಗಳ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಇರಬೇಕು

ಬಜಾಜ್ ಫಿನ್‌ಸರ್ವ್ ಭಾರತದ ಅಗ್ರ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದ್ದು, ಇದು 29ನೇ ಅಕ್ಟೋಬರ್, 2007 ರಂದು ಆರ್‌ಬಿಐಯೊಂದಿಗೆ ಬ್ಯಾಂಕಿಂಗ್- ಅಲ್ಲದ ಹಣಕಾಸು ಕಂಪನಿಯಾಗಿ ನೋಂದಾಯಿಸಲ್ಪಟ್ಟಿದೆ. ಇಂದು, ಇದು ಹೋಮ್ ಲೋನ್ ಗಾಗಿ ಇರುವ ಅತ್ಯುತ್ತಮ ಎನ್‌ಬಿಎಫ್‌ಸಿಗಳಲ್ಲಿ ಮತ್ತು ಈ ದೇಶದ ಇತರ ಹಣಕಾಸು ಪ್ರಾಡಕ್ಟ್‌ಗಳ ಶ್ರೇಣಿಯಲ್ಲಿ ಒಂದಾಗಿದೆ.

ಎನ್‌ಬಿಎಫ್‌ಸಿಗಳಿಂದ ಹೋಮ್ ಲೋನ್ ತೆಗೆದುಕೊಳ್ಳುವ ಪ್ರಯೋಜನಗಳು

ಎನ್‌ಬಿಎಫ್‌ಸಿ ಹೋಮ್ ಲೋನ್ ಆಯ್ಕೆ ಮಾಡುವುದು ಈ ಕೆಳಗಿನವುಗಳನ್ನು ಒಳಗೊಂಡಂತೆ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ:

 • ಅನುಮೋದನೆ ಮತ್ತು ವಿತರಣೆಯಲ್ಲಿ ಇನ್ನಷ್ಟು ಫ್ಲೆಕ್ಸಿಬಲ್
  ಎನ್‌ಬಿಎಫ್‌ಸಿಗಳೊಂದಿಗೆ ಹೋಮ್ ಲೋನನ್ನು ಅನುಮೋದಿಸುವ ಪ್ರಕ್ರಿಯೆಯು ಸುಲಭ ಮತ್ತು ಕಡಿಮೆ ಕಠಿಣವಾಗಿದೆ. ಇದಲ್ಲದೆ, ಸಾಲಗಾರರು ತಮ್ಮ ಹಣವನ್ನು ವಿತರಿಸಲು ವಾರಗಳವರೆಗೆ ಕಾಯಬೇಕಾಗಿಲ್ಲ.
 • ಕೆಲವು ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ
  ಇದು ಅಡಮಾನವನ್ನು ಒಳಗೊಂಡ ಸುರಕ್ಷಿತ ಲೋನ್ ಆಗಿರುವುದರಿಂದ, ಡಾಕ್ಯುಮೆಂಟೇಶನ್ ಪ್ರಕ್ರಿಯೆಯು ಸಾಮಾನ್ಯವಾಗಿ ಬಹಳಷ್ಟು ಪೇಪರ್‌ವರ್ಕ್‌ನೊಂದಿಗೆ ದೀರ್ಘವಾಗಿರುತ್ತದೆ. ಆದಾಗ್ಯೂ, ಹೋಮ್ ಲೋನ್‌ನ ಅತ್ಯುತ್ತಮ ಎನ್‌ಬಿಎಫ್‌ಸಿಗಳಿಗೆ ಹಣವನ್ನು ಮಂಜೂರು ಮಾಡಲು ಕನಿಷ್ಠ ಡಾಕ್ಯುಮೆಂಟ್‌ಗಳ ಅಗತ್ಯವಿದೆ.

ಬಜಾಜ್ ಫಿನ್‌ಸರ್ವ್‌ನೊಂದಿಗೆ, ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳೊಂದಿಗೆ ಮಾತ್ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು:

 • ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಕೆವೈಸಿ ಡಾಕ್ಯುಮೆಂಟ್‌ಗಳು
 • ಪಾಸ್ಪೋರ್ಟ್ ಸೈಜಿನ ಫೋಟೋ
 • ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್‌ಗಳು
 • ಇತ್ತೀಚಿಗಿನ ಸಂಬಳದ ಸ್ಲಿಪ್‌‌ಗಳು ಅಥವಾ ಫಾರಂ 16
 • ಬಿಸಿನೆಸ್ ವಿಂಟೇಜ್ ಪುರಾವೆ
 • ಪ್ರಾಪರ್ಟಿ ದಾಖಲೆಗಳು

ನಿಮ್ಮ ಅನನ್ಯ ಸ್ಥಿತಿಯನ್ನು ಅವಲಂಬಿಸಿ ಪ್ರಕ್ರಿಯೆಯ ಸಮಯದಲ್ಲಿ ನೀವು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕಾಗಬಹುದು.

ಎನ್‌ಬಿಎಫ್‌ಸಿಗಳು ತುಲನಾತ್ಮಕವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸಲು ಸುಲಭವಾಗಿವೆ, ಇದರಿಂದಾಗಿ ಹೋಮ್ ಲೋನನ್ನು ಹೆಚ್ಚು ಅಕ್ಸೆಸ್ ಮಾಡಬಹುದು. ಬಜಾಜ್ ಫಿನ್‌ಸರ್ವ್‌ ಹೋಮ್ ಲೋನ್‌ನ ಕೆಲವು ಅವಶ್ಯಕತೆಗಳು ಈ ಕೆಳಗಿನಂತಿವೆ:

 • ವಾಸಿಸುತ್ತಿರುವ ಭಾರತೀಯ ನಾಗರಿಕರಾಗಿರಬೇಕು
 • ಸ್ವಯಂ ಉದ್ಯೋಗಿ ಸಾಲಗಾರರ ಸಂದರ್ಭದಲ್ಲಿ 25 ರಿಂದ 70 ವರ್ಷಗಳ ಒಳಗೆ ವಯಸ್ಸು ಇರಬೇಕು
 • ಸಂಬಳ ಪಡೆಯುವ ಸಾಲಗಾರರ ಸಂದರ್ಭದಲ್ಲಿ 23 ರಿಂದ 62 ವರ್ಷಗಳ ಒಳಗೆ ವಯಸ್ಸು ಇರಬೇಕು
 • ಸಂಬಳ ಪಡೆಯುವ ಅರ್ಜಿದಾರರ ಕನಿಷ್ಠ ಕೆಲಸದ ಅನುಭವ 3 ವರ್ಷಗಳಾಗಿರಬೇಕು
 • ಸ್ವಯಂ ಉದ್ಯೋಗಿ ಅರ್ಜಿದಾರರ ಕನಿಷ್ಠ ಬಿಸಿನೆಸ್ ವಿಂಟೇಜ್ 5 ವರ್ಷಗಳಾಗಿರಬೇಕು

ನೀವು ಪಡೆಯಬಹುದಾದ ಮೊತ್ತವನ್ನು ಮೌಲ್ಯಮಾಪನ ಮಾಡಲು ಬಜಾಜ್ ಫಿನ್‌ಸರ್ವ್‌ನ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಆನ್ಲೈನಿನಲ್ಲಿ ಬಳಸಿ.

ಎನ್‌ಬಿಎಫ್‌ಸಿ ಹೋಮ್ ಲೋನ್ ಬಡ್ಡಿ ದರಗಳು ಇತರ ಹಣಕಾಸು ಸಂಸ್ಥೆಗಳಿಗಿಂತ ತುಲನಾತ್ಮಕವಾಗಿ ಹೆಚ್ಚು ಕೈಗೆಟಕುವಂತಿವೆ. ಹೆಚ್ಚುವರಿಯಾಗಿ, ಇಡಬ್ಲ್ಯುಎಸ್, ಎಲ್ಐಜಿ ಅಥವಾ ಎಂಐಜಿ ವರ್ಗಗಳ ಅಡಿಯಲ್ಲಿ ಸಾಲಗಾರರು ಪಿಎಂಎವೈ ಯೋಜನೆ ಅಡಿಯಲ್ಲಿ ತಮ್ಮ ಹೋಮ್ ಲೋನ್‌ಗಳ ಮೇಲೆ ಬಡ್ಡಿ ಸಬ್ಸಿಡಿಯನ್ನು ಪಡೆಯಬಹುದು.

ಇವುಗಳ ಹೊರತಾಗಿ, ಬಜಾಜ್ ಫಿನ್‌ಸರ್ವ್ ವಿಶ್ವಾಸಾರ್ಹ ಎನ್‌ಬಿಎಫ್‌ಸಿ ಆಗಿರುವುದರಿಂದ ವಿಶೇಷ ಫ್ಲೆಕ್ಸಿ ಲೋನ್ ಸೌಲಭ್ಯವನ್ನು ಒದಗಿಸುತ್ತದೆ, ಇದು ನಿಮ್ಮ ಇಎಂಐಗಳನ್ನು 45% ವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎನ್‌ಬಿಎಫ್‌ಸಿಯಿಂದ ಹೋಮ್ ಲೋನ್ ಪಡೆಯುವಾಗ ನೀವು ಏನನ್ನು ಗಮನದಲ್ಲಿಟ್ಟುಕೊಳ್ಳಬೇಕು?

 • ಲೋನ್ ವೆಚ್ಚವನ್ನು ಮೌಲ್ಯಮಾಪನ ಮಾಡಿ ಮತ್ತು ಇಎಂಐ ಗಳು ಮತ್ತು ಡೌನ್ ಪೇಮೆಂಟ್‌ಗಳು ನಿಮ್ಮ ಬಜೆಟ್‌ನಲ್ಲಿ ಬರುವುದನ್ನು ಖಚಿತಪಡಿಸಿಕೊಳ್ಳಿ. ಅಡಮಾನ ಲೋನ್ ಮೇಲೆ ಡೀಫಾಲ್ಟ್ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಪ್ರೊಫೈಲ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು. ಪ್ರತಿ ತಿಂಗಳು ನಿಖರವಾಗಿ ನಿಮ್ಮ ಕಂತುಗಳನ್ನು ತಿಳಿದುಕೊಳ್ಳಲು ನೀವು ಬಜಾಜ್ ಫಿನ್‌ಸರ್ವ್‌ ಒದಗಿಸುವ ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು
 • ಅತ್ಯುತ್ತಮ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಆಕರ್ಷಕ ಪ್ರಯೋಜನಗಳನ್ನು ಪಡೆಯಲು 750 ಯಷ್ಟು ಉತ್ತಮ ಸಿಬಿಲ್ ಸ್ಕೋರ್ ಹೊಂದಿರಿ
 • ನಿಮ್ಮ ಹಣಕಾಸಿನ ಯೋಜನೆಗಳು ಮತ್ತು ಸಾಮರ್ಥ್ಯಗಳ ಪ್ರಕಾರ ಮರುಪಾವತಿಯ ವೇಳಾಪಟ್ಟಿಯನ್ನು ಆಯ್ಕೆಮಾಡಿ. ದೀರ್ಘ ಅವಧಿಯೊಂದಿಗೆ, ನೀವು ಹೆಚ್ಚಿನ ಬಡ್ಡಿ ದರವನ್ನು ಪಾವತಿಸುತ್ತೀರಿ ಆದರೆ ಕಡಿಮೆ ಇಎಂಐ ಗಳು ಮತ್ತು ಅದಕ್ಕಿಂತ ಹೆಚ್ಚು

ಸರಳ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ಬಜಾಜ್ ಫಿನ್‌ಸರ್ವ್‌ನೊಂದಿಗೆ ರೂ. 5 ಕೋಟಿಯವರೆಗಿನ ಹೋಮ್ ಲೋನಿಗೆ ಆನ್ಲೈನಿನಲ್ಲಿ ಅಪ್ಲೈ ಮಾಡಿ.

ಇನ್ನಷ್ಟು ಓದಿರಿ ಕಡಿಮೆ ಓದಿ