ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ತೆರಿಗೆ ಪಾವತಿ ಮಾಡಬೇಕೆ?

ಫಿಕ್ಸೆಡ್ ಡೆಪಾಸಿಟ್‌ (FD): ತೆರಿಗೆಗೆ ಒಳಪಟ್ಟಿದೆಯೇ ಅಥವಾ ತೆರಿಗೆ ಮುಕ್ತವೇ?

ಮೂಲದಲ್ಲಿಯೇ ತೆರಿಗೆ ಕಡಿತ, ಅಥವಾ TDS, ಜನರು ತಮ್ಮ ಪಾವತಿಗಳು, ಸಂಬಳಗಳು, ಫೀಸ್, ಕಮಿಷನ್, ಬಡ್ಡಿ ಅಥವಾ ಯಾವುದೇ ಮೂಲದ ಆದಾಯವನ್ನು ಪಡೆದುಕೊಂಡಾಗ ಬಡ್ಡಿಯನ್ನು ನೇರವಾಗಿ ಕಡಿತಗೊಳಿಸಲಾಗುವುದು, FDಗಳು‌ ತೆರಿಗೆಗೊಳಪಟ್ಟರೂ ಅಥವಾ ಒಳಪಡದಿದ್ದರೂ, ಅದು ಎಲ್ಲರನ್ನೂ ಹಿಂಬಾಲಿಸುತ್ತದೆ ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿದೆ.

ಫಿಕ್ಸೆಡ್‌ ಡೆಪಾಸಿಟ್‌ಗಳಿಂದ ಗಳಿಸಿದ ಬಡ್ಡಿಗೆ ತೆರಿಗೆ ಇದೆ. ನಿಮ್ಮ ಇತರ ಆದಾಯ ಮೂಲಗಳಿಗೆ ವಿಧಿಸಿದಂತೆ ಬಡ್ಡಿಯಿಂದ ಗಳಿಸಿದ ಆದಾಯಕ್ಕೆ ಕೂಡ ಅದೇ ದರದಲ್ಲಿಯೇ ತೆರಿಗೆ ವಿಧಿಸಲಾಗುವುದು. ಅನೇಕ ಸಂದರ್ಭದಲ್ಲಿ, FD ಗಳಿಂದ ಗಳಿಸಿದ ಆದಾಯ ಆದಾಯ ತೆರಿಗೆಯಿಂದ ಹೊರಗುಳಿಯುತ್ತದೆ, ಹೀಗಾದಾಗ ಆದಾಯ ತೆರಿಗೆ ವಿಭಾಗ ನೋಟಿಸ್ ನೀಡುತ್ತದೆ.
ಇಂತಹ ಪರಿಸ್ಥಿತಿಯನ್ನು ತಪ್ಪಿಸಲು, ನಿಮ್ಮ ಹಣಕಾಸುದಾರರ ಪ್ರಕಾರ, ನಿಮ್ಮ ತೆರಿಗೆಗೊಳಪಡುವ ಮೊತ್ತದ ಮಿತಿಯನ್ನು ಆಧರಿಸಿ ನೀವು ನಿಮ್ಮ FD ಯನ್ನು ಇತರ ಮೂಲಗಳಿಂದ ಲಭಿಸಿದ ಆದಾಯವೆಂದು ಘೋಷಿಸಲೇಬೇಕು,.

ನೀವು ಒಂದು ದೊಡ್ಡ ಮೊತ್ತವನ್ನು ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಇರಿಸಿದರೆ ಅದರಿಂದ ಬರುವ ಬಡ್ಡಿಗೂ ಕೂಡ ತೆರಿಗೆ ವಿಧಿಸಲಾಗುತ್ತದೆ. ಬೇರೆ ಇದರ ಆದಾಯಗಳಿಗೆ ಮೂಲದಲ್ಲಿಯೇ ತೆರಿಗೆಯನ್ನು ಮುರಿದುಕೊಳ್ಳಲಾಗುತ್ತದೆ. ಬಡ್ಡಿಯ ಗಳಿಕೆಯನ್ನು ಕೂಡ ಇತರ ಒಟ್ಟು ಮೂಲದಿಂದ ಗಳಿಸುವ ಆದಾಯದಂತೆ ಪರಿಗಣಿಸಲಾಗುವುದು, ಅಂದರೆ ಅದರರ್ಥ ಅದು 0% ರಿಂದ 30%. ವರೆಗೂ ವ್ಯತ್ಯಾಸವಾಗಬಹುದು. ನೀವೇನಾದರೂ 30% ಆದಾಯದ ಪರಿಮಿತಿಯ ಆವರಣದಲ್ಲಿ ಇದ್ದರೆ ನೀವು 30% ರಷ್ಟು ತೆರಿಗೆಯನ್ನು ನಿಮ್ಮ ಫಿಕ್ಸೆಡ್‌ ಡೆಪಾಸಿಟ್‌ ಮೇಲೆ ಗಳಿಸಿದ ಬಡ್ಡಿಗೆ ಪಾವತಿಸಬೇಕಾಗುವುದು. ಆದರೆ, ಬಡ್ಡಿಯು ರೂ. 10,000 ಗಳನ್ನು ಮೀರದಿದ್ದರೆ, ಆಗ ನೀವು ಗಳಿಸಿದ ಬಡ್ಡಿಯ ಮೇಲೆ ನಿಮಗೆ ತೆರಿಗೆ ವಿಧಿಸಲಾಗುವುದಿಲ್ಲ.

ಫಾರಂ 15G ಮತ್ತು ಫಾರಂ 15H ಹೇಗೆ ಸಹಾಯ ಮಾಡುತ್ತದೆ?


ಆದಾಯ ತೆರಿಗೆ ಕಾಯಿದೆ ಸೆಕ್ಷನ್ 194 ಎ ಪ್ರಕಾರ ತಮ್ಮ ಫಿಕ್ಸೆಡ್‌ ಡೆಪಾಸಿಟ್‌ಗಳಿಂದ ರೂ. 10,000 ಹೆಚ್ಚು ಬಡ್ಡಿಯನ್ನು ಪಡೆಯುವ ಜನರು ಆದಾಯ ತೆರಿಗೆ ನೀಡಲು ಬಧ್ದರಾಗಿರುವುದಿಲ್ಲವೋ ಅವರು ಕೂಡ ತೆರಿಗೆಯನ್ನು ಪಾವತಿಸಬೇಕು. ಅಂತಹ ವ್ಯಕ್ತಿಗಳು ಫಾರಂ 15G/15H ತುಂಬಿ TDS ಕಡಿಮೆ ಕಡಿತವನ್ನು ಅಥವಾ ಕಡಿತವೇ ಆಗದಂತೆ ಮಾಡಿಕೊಳ್ಳಬಹುದು.
ಹೇಗೆ ಎಂದು ಇಲ್ಲಿದೆ ನೋಡಿ ಫಾರಂ 15G ಮತ್ತು ಫಾರಂ 15H ‌ಇದರಿಂದ ನಿಮಗೆ ಸಹಾಯ ಆಗಬಹುದು:
 

ಫಾರಂ 15G

– 60 ವರ್ಷ ವಯಸ್ಸಿಗಿಂತ ಕಡಿಮೆಯ ವ್ಯಕ್ತಿಗಳು, 15G ಫಾರಂ ಅನ್ನು ತಮ್ಮ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಬೇಕು.

ಫಾರಂ 15H

– ಹಿರಿಯ ನಾಗರಿಕರು ಈ ಫಾರಂ ಅನ್ನು ಸಲ್ಲಿಸಬೇಕು, ಆದರೆ ಅಂದಾಜು ಒಟ್ಟು ಆದಾಯದ ಮೇಲಿನ ಅಂತಿಮ ತೆರಿಗೆಯು ಹಣಕಾಸಿನ ವರ್ಷದಲ್ಲಿ ಏನೂ ಇಲ್ಲ ಎಂದು ಖಚಿತಪಡಿಸುವುದು ಮುಖ್ಯವಾಗಿದೆ. ಆದಾಗ್ಯೂ, ವರ್ಷದ ಆರಂಭದಲ್ಲಿ ಈ ಎರಡೂ ಫಾರಂ ಸಲ್ಲಿಸುವುದು ಪ್ರಮುಖವಾಗಿದೆ, ಏಕೆಂದರೆ ಒಮ್ಮೆ ಹಣಕಾಸು ಸಂಸ್ಥೆಯು ಕಡಿತಗೊಳಿಸುವ ಬಡ್ಡಿಯನ್ನು ಮರುಪಾವತಿ ಮಾಡುವುದಿಲ್ಲ.

ಬಜೆಟ್‌ 2018 ಪ್ರಕಾರ, ಮೂಲದಲ್ಲಿಯೇ ಕಡಿತಗೊಳಿಸಲಾಗುವ ತೆರಿಗೆಗೆ (TDS) ಗೆ ಕೆಲವು ವಿನಾಯಿತಿಗಳನ್ನು ಬ್ಯಾಂಕ್ ಡೆಪಾಸಿಟ್‌ಗಳಿಗೆ ರೂ. 50,000 ಹೆಚ್ಚಿಸಲಾಗಿದೆ. ಹಿರಿಯ ನಾಗರೀಕರು ರೂ. 50,000 ರವರೆಗೆ ತಮ್ಮ ಫಿಕ್ಸೆಡ್‌ ಡೆಪಾಸಿಟ್‌ಗಳಿಂದ ತೆರಿಗೆ ವಿನಾಯಿತಿಗೆ ವಿನಂತಿಸಿಕೊಳ್ಳಬಹುದು.

ಮತ್ತು ಓದಿ: ನಿಮ್ಮ ನಿವೃತ್ತಿ ಧನವನ್ನು ತೆರಿಗೆಯಿಂದ ಉಳಿಸುವ ಮಾರ್ಗಗಳು