ICRA ಮಾನದಂಡಗಳು ಮತ್ತು ಫಿಕ್ಸೆಡ್ ಡೆಪಾಸಿಟ್‌ ಮೇಲೆ ಅದರ ಪರಿಣಾಮ

ಡೆಟ್ ಉಪಕರಣದಲ್ಲಿ ಹೂಡಿಕೆ ಮಾಡುವ ಮೊದಲು, ಒಳಗೊಂಡಿರುವ ಅಪಾಯದ ಪ್ರಮಾಣವನ್ನು ನೀವು ನಿರ್ಧರಿಸಬೇಕು. ಈ ಅಪಾಯಗಳ ಅರಿವಿನಿಂದಾಗಿ ನೀವು ಚುರುಕಾದ ಹೂಡಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು, ನಷ್ಟಗಳನ್ನು ತಪ್ಪಿಸುವ ಮೂಲಕ, ಮತ್ತು ನಿಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಲಾಭದ ಗಳಿಕೆಯನ್ನು ಪಡೆಯಬಹುದು.
ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ನೀವು ಹೂಡಿಕೆ ಮಾಡಲು ಪ್ರಾರಂಭವಾಗುವ ಮೊದಲು ಹೂಡಿಕೆ ಮಾಡಲು ಉತ್ತಮ ಹಣಕಾಸುದಾರರ ಬಗ್ಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಸಹಾಯ ಮಾಡುತ್ತದೆ. ಇನ್ವೆಸ್ಟ್‌ಮೆಂಟ್ ಇನ್ಫಾರ್ಮೇಷನ್ ಆಂಡ್ ಕ್ರೆಡಿಟ್ ರೇಟಿಂಗ್ ಏಜೆನ್ಸಿ ಆಫ್ ಇಂಡಿಯಾ ಲಿಮಿಟೆಡ್ ಎಂದು ಕರೆಯಲ್ಪಡುತ್ತಿದ್ದ ICRA , ಅಂತಹ ಒಂದು ಕ್ರೆಡಿಟ್ ರೇಟಿಂಗ್ ಸಂಸ್ಥೆಯಾಗಿದೆ.
1991 ರಲ್ಲಿ ಪ್ರಮುಖ ಬಂಡವಾಳಗಾರರಿಂದ ಸ್ಥಾಪಿತವಾದ ICRA ಸ್ವತಂತ್ರ ಮತ್ತು ವೃತ್ತಿಪರ ಬಂಡವಾಳ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ.
 

ICRA ರೇಟಿಂಗ್‌ನ ಪಾತ್ರ ಏನು?

ICRA ಕ್ರೆಡಿಟ್ ರೇಟಿಂಗ್‌ಗಳು ಬಂಡವಾಳ ಹೂಡಿಕೆದಾರರ ಸಾಪೇಕ್ಷ ಸಾಮರ್ಥ್ಯವನ್ನು ತಮ್ಮ ಬಡ್ಡಿಯ ಪಾವತಿ ಜವಾಬ್ದಾರಿಗಳನ್ನು ಮತ್ತು ಅಸಲು ಮರುಪಾವತಿಗಳನ್ನು ಅಪಾಯದ ಪ್ರಕಾರದ ಮೇಲೆ ಅಭಿಪ್ರಾಯವನ್ನು ರೂಪಿಸುವಲ್ಲಿ ಸಹಾಯ ಮಾಡುತ್ತವೆ. ICRA ಯ ರೇಟಿಂಗ್‌ಗಳೊಂದಿಗೆ, ವಿತರಕರು ಸಲಕರಣೆಗಳ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸಬಹುದು, ಮತ್ತು ಠೇವಣಿದಾರರು ಮತ್ತು ಸಾಲಗಾರರಿಗೆ ಲೋನಿನ ಮೇಲಿನ ಮೊತ್ತದ ಸುರಕ್ಷತೆಯ ಬಗ್ಗೆ ಪಕ್ಷಪಾತವಿಲ್ಲದ ಅಭಿಪ್ರಾಯವನ್ನು ನೀಡುತ್ತಾರೆ.

ICRA ಕ್ರೆಡಿಟ್ ರೇಟಿಂಗ್‌ಗಳು ಹಲವಾರು ರೀತಿಯಲ್ಲಿ ಲಾಭದಾಯಕವಾಗಿದೆ. ಅವುಗಳನ್ನು ವಿನ್ಯಾಸಗೊಳಿಸಿರುವುದು:
     • ಸಂಸ್ಥೆಗಳಿಗೆ ಮತ್ತು ವೈಯಕ್ತಿಕ ಹೂಡಿಕೆದಾರರು ಅಥವಾ ಸಾಲದಾತರಿಗೆ ಮಾರ್ಗದರ್ಶನ ಮತ್ತು ಶಿಕ್ಷಣ ನೀಡಲು
     • ಸಾಲಪಡೆಯುವವರ ಹಾಗೂ ಸಾಲನೀಡುವವರ ನಡುವೆ ಹೂಡಿಕೆ ಮಾಡುವ ಸಾರ್ವಜನಿಕರಿಂದ ಹೆಚ್ಚಿನ ವ್ಯಾಪ್ತಿಯಲ್ಲಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ಹಣಕಾಸು ಹಾಗೂ ಬಂಡವಾಳ ಮಾರುಕಟ್ಟೆಗೆ ಪ್ರವೇಶವನ್ನು ಹೊಂದುವುದು
     • ಹಣಕಾಸಿನ ಮಾರುಕಟ್ಟೆಗಳಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವುದು
     • ಮಧ್ಯವರ್ತಿಗಳಿಗೆ ನಿಧಿಸಂಗ್ರಹಣೆ ಪ್ರಕ್ರಿಯೆಗಳನ್ನು ಸುಲಭಗೊಳಿಸುವುದು

ಲೋನಿನ ಉಪಕರಣಗಳ ಬಗ್ಗೆ ಪಕ್ಷಪಾತವಿಲ್ಲದ ಮತ್ತು ಸ್ಪಷ್ಟವಾದ ಅಭಿಪ್ರಾಯವನ್ನು ಪಡೆದಾಗ, ವಿತರಕರು ತಮ್ಮ ಸಾಧನಗಳ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸಬಹುದು, ಇದರಿಂದಾಗಿ ತಮ್ಮ ಹಣಕಾಸಿನ ಸ್ಥಿತಿಯನ್ನು ಮಾರುಕಟ್ಟೆಯಲ್ಲಿ ಎತ್ತರಕ್ಕೆ ಕೊಂಡೊಯ್ಯಬಹುದು.

ICRA ರೇಟಿಂಗ್‌ ಪಡೆಯಲು ಇರುವ ಮಾನದಂಡವೇನು?

ಆಸ್ತಿ ಗುಣಮಟ್ಟವು ಹಣಕಾಸುದಾರರ ಆಸ್ತಿ ಬಂಡವಾಳವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಮತ್ತು ಅವರ ಗ್ರಾಹಕರ ಕ್ರೆಡಿಟ್ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ. ICRA ರೇಟಿಂಗ್‌ಗಳು ಡೆಪಾಸಿಟ್‌ ಮಾಡುವವರಿಗೆ ಸರಿಯಾದ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ, ಫಂಡಿನ ಹೆಚ್ಚಿನ ಮಟ್ಟದ ಸುರಕ್ಷತೆಯನ್ನು ಸೂಚಿಸುವ ಭರವಸೆಯ ಪಾತ್ರವನ್ನು ನಿಭಾಯಿಸುತ್ತದೆ.
ಹಲವಾರು ವಿಷಯಗಳ ಬಗ್ಗೆ ಮಾಹಿತಿ ಲಭ್ಯತೆಯನ್ನು ಒಳಗೊಂಡಂತೆ ವಿಶ್ಲೇಷಣೆಯನ್ನು ಮಾಡಬೇಕು ಮತ್ತು ವ್ಯವಸ್ಥಾಪಕರೊಂದಿಗೆ ಪರಸ್ಪರ ಸಂವಾದ ಮಾಡಬೇಕು.
ಫಿಕ್ಸೆಡ್‌ ಡೆಪಾಸಿಟ್‌ಗಳ ರೇಟಿಂಗ್‌ಗಳಿಗಾಗಿ ICRA ರೇಟಿಂಗ್‌ ಸಿಸ್ಟಮನ್ನು ಇಲ್ಲಿ ನೋಡಿ:

ಶ್ರೇಣಿ ಅರ್ಥ
MAAA ಅತಿ ಹೆಚ್ಚಿನ ಕ್ರೆಡಿಟ್‌ ಗುಣಮಟ್ಟ
MAA ಹೆಚ್ಚಿನ ಕ್ರೆಡಿಟ್‌ ಗುಣಮಟ್ಟ
MA ಸಾಕಷ್ಟು ಕ್ರೆಡಿಟ್‌ ಗುಣಮಟ್ಟ
MB ಅಸಮರ್ಪಕ ಕ್ರೆಡಿಟ್ ಗುಣಮಟ್ಟ
MC ಅಪಾಯದ ಕ್ರೆಡಿಟ್ ಗುಣಮಟ್ಟ
MD ಕೆಳಮಟ್ಟದ ಕ್ರೆಡಿಟ್‌ ಗುಣಮಟ್ಟ
ICRA ಕ್ರೆಡಿಟ್‌ ರೇಟಿಂಗ್‌ಗಳು ಸುರಕ್ಷತೆಯ ಅಳತೆಯಾಗಿದೆ. ನಿಮಗೆ ಇದನ್ನು ಉಪಯೋಗಿಸುವುದರಿಂದ ನಿಮಗೆ ದೊರೆಯಬೇಕಾದ ಪಾವತಿಗಳು ಸರಿಯಾದ ಸಮಯಕ್ಕೆ ದೊರೆಯುವುದೆಂಬ ಭರವಸೆಯನ್ನು ನೀಡುತ್ತದೆ. ನಿಮಗೆ ಮಾಹಿತಿಯು ದೊರೆಯುವುದರಿಂದ ಹೂಡಿಕೆಯ ಸಾಧನಗಳು ದಾರಿತಪ್ಪುವ ಸಂಭವನೀಯತೆಯನ್ನು ಕುರಿತಾಗಿ ಅಭಿಪ್ರಾಯವನ್ನು ಬೆಳೆಸಿಕೊಳ್ಳಬಹುದು.

ICRA ರೇಟಿಂಗ್‌ಗಳು ಠೇವಣಿದಾರರ ಮೇಲೆ ಪ್ರಭಾವ ಬೀರುವುದೇ?

ಫಿಕ್ಸೆಡ್ ಡೆಪಾಸಿಟ್‌ಗಳು ಸಾಮಾನ್ಯವಾಗಿ, ಸುರಕ್ಷಿತ ಹೂಡಿಕೆಯ ಸಲಕರಣೆಗಳು, ಇದು ನಿಗದಿತ ಅವಧಿಯವರೆಗೆ ಸ್ಥಿರವಾದ ಆದಾಯವನ್ನು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಕೆಲವೊಮ್ಮೆ, ಬಂಡವಾಳಗಾರರು ಹೆಚ್ಚಿನ ಬಡ್ಡಿಯ ಆಮಿಷ ತೋರಿಸಿ ಹೂಡಿಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದಾಗ್ಯೂ ಇದು ಹೆಚ್ಚಿನ ಅಪಾಯವನ್ನು ಒಡ್ಡುತ್ತದೆ, ಇಲ್ಲಿ ಹೂಡಿಕೆದಾರರು ತಾವು ಹೂಡಿದ ಹಣವನ್ನು ಕಳೆದುಕೊಳ್ಳುತ್ತಾರೆ.
ಆದಾಗ್ಯೂ, ICRA ಯ ಪಕ್ಷಪಾತವಿಲ್ಲದ ಕ್ರೆಡಿಟ್ ರೇಟಿಂಗ್ ತಿಳಿದುಕೊಂಡು, ನಿಮ್ಮ ನಿಧಿಯ ಸುರಕ್ಷತೆಯನ್ನು ನೀವು ನಿರ್ಧರಿಸಬಹುದು, ಮತ್ತು ಸರಿಯಾದ ಬಂಡವಾಳಗಾರರನ್ನು ಹುಡುಕಬಹುದು. ICRA ಹೆಚ್ಚಿನ ಸುರಕ್ಷತೆಯ ರೇಟಿಂಗ್ ಪ್ರಕಾರ ನೀವು ರೇಟಿಂಗ್‌ಗಳನ್ನು ಹೋಲಿಕೆ ಮಾಡಬಹುದು, ಮತ್ತು ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿರುವ ಅತ್ಯುತ್ತಮ ಹಣಕಾಸುದಾರರನ್ನು ಆಯ್ಕೆ ಮಾಡಬಹುದು.
 

ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ICRA ನೀಡಿರುವ ರೇಟಿಂಗ್‌ ಏನು?

ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ಗಳು‌ ICRA ದಿಂದ MAAA (ಸ್ಥಿರ) ರೇಟಿಂಗನ್ನು ಹೊಂದಿದೆ, ಅತ್ಯಧಿಕ ಸುರಕ್ಷತೆ ಮತ್ತು ಕಡಿಮೆ ಹೂಡಿಕೆಯ ಅಪಾಯವನ್ನು ಸೂಚಿಸುತ್ತದೆ. ಹಾಗೂ CRISIL ರಿಂದ FAAA/ಸ್ಥಿರತೆಯ ದರವನ್ನು ಹೊಂದಿದೆ. ಹೀಗಾಗಿ ಬಜಾಜ್‌ ಫೈನಾನ್ಸ್‌ನಲ್ಲಿ FD ಹೂಡಿಕೆಯನ್ನು ಮಾಡಲು ಇದೂ ಒಂದು ಕಾರಣವಾಗಿದೆ.

CRISIL ಮತ್ತು ICRA ನಿಂದ ಉನ್ನತ ರೇಟಿಂಗ್‌ ಹೊಂದಿರುವ ಬಜಾಜ್ ಫೈನಾನ್ಸ್ ತನ್ನ ಠೇವಣಿದಾರರಿಗೆ ಹಲವಾರು ಅನುಕೂಲಗಳನ್ನು ನೀಡುತ್ತಿದೆ. ಕೆಲವು ಅನುಕೂಲಗಳು ಈ ರೀತಿಯಾಗಿದೆ:
     • ಹೆಚ್ಚಿನ ಬಡ್ಡಿ ದರಗಳು – ಬಜಾಜ್ ಫೈನಾನ್ಸ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಬಡ್ಡಿದರವನ್ನು ಒದಗಿಸುತ್ತಿದೆ, ಆದ್ದರಿಂದ ಅದು ಆದ್ಯತೆಯ ಬಂಡವಾಳಗಾರನಾಗಿದೆ. ಜೊತೆಗೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ
      ಬಜಾಜ್ ಫೈನಾನ್ಸ್ FD ಗಳು 0.25% ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ ದರ.
     • ಕನಿಷ್ಠ ಡೆಪಾಸಿಟ್‌ನ ಮೊತ್ತ ರೂ.25,000 –ನೀವು ಬಜಾಜ್ ಫೈನಾನ್ಸ್‌ ಫಿಕ್ಸೆಡ್ ಡೆಪಾಸಿಟ್‌ಗಳನ್ನು ಕೇವಲ ರೂ. 25,000 ಹೂಡಿಕೆಯೊಂದಿಗೆ ಪ್ರಾರಂಭಿಸಬಹುದು.
     • ಅನುಕೂಲಕರ ಕಾಲಾವಧಿ – ಬಜಾಜ್ ಫೈನಾನ್ಸ್‌ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಿ ನೀವು ನಿಮ್ಮ ಅವಧಿಯನ್ನು ಸುಲಭವಾಗಿ ಆರಿಸಿಕೊಳ್ಳಬಹುದು
     • ನಿಯತ ಅಂತರದಲ್ಲಿ ಪಾವತಿಸುವ ಆಯ್ಕೆಗಳಿವೆ –ಬಜಾಜ್ ಫೈನಾನ್ಸ್ FD ಗಳಲ್ಲಿ ಹೂಡಿಕೆ ಮಾಡುವಾಗ ನೀವು ಕೇವಲ ಆವರ್ತಕ ಬಡ್ಡಿಯನ್ನು ಪಡೆಯುವುದನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುವುದಿಲ್ಲ, ಆದರೆ ನೀವು ಈ ಆವರ್ತನ ಅವಧಿಯನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆರಿಸಿಕೊಳ್ಳಬಹುದು.

ಬಜಾಜ್ ಫೈನಾನ್ಸ್ ಫಿಕ್ಸೆಡ್‌ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದನ್ನು ಆರಂಭಿಸಿ, ಮತ್ತು ಖಚಿತವಾದ ಪ್ರತಿಫಲವನ್ನು ಅನುಕೂಲಗಳನ್ನು ಪಡೆಯಿರಿ. ನಿಮಗೆ ಹೊಂದಿಕೊಳ್ಳುವ ಅವಧಿಗೆ ಸುಲಭವಾದ ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸುವಿಕೆ ಹಾಗೂ ಸ್ಥಿರವಾದ ಆದಾಯವನ್ನು ಪಡೆಯಿರಿ.

ಇನ್ನೂ ಅನುಮಾನವೇ? ಪರೀಕ್ಷಿಸಿ ಗ್ರಾಹಕ ಪೋರ್ಟಲ್ ಮತ್ತು ಹೂಡಿಕೆದಾರರ ಪಕ್ಷಪಾತವಿಲ್ಲದ ರಿವ್ಯೂಗಳನ್ನು ಓದಿ ಅಥವಾ ನೇರವಾಗಿ ಸಂಪರ್ಕಿಸಿ ಬಜಾಜ್ ಫೈನಾನ್ಸ್ ಕಸ್ಟಮರ್ ಕೇರ್.