ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪಡೆಯವುದು ಹೇಗೆ?

ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಎಂದರೆ, ಒಂದು ತಿಂಗಳಲ್ಲಿ ನೀವು ಮಾಡುವ ಎಲ್ಲಾ ಟ್ರಾನ್ಸಾಕ್ಷನ್‍ಗಳ ಸ್ಟೇಟ್ಮೆಂಟ್ ಎಂದು.. ಪ್ರತಿ ತಿಂಗಳು, ಸಾಲದಾತನು ಸ್ಟೇಟ್ಮೆಂಟನ್ನು ಕಳಿಸುತ್ತಾನೆ. ನಿಮ್ಮ ಕ್ರೆಡಿಟ್ ಕಾರ್ಡಿನ ಸ್ಟೇಟ್ಮೆಂಟನ್ನು ನೀವು ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ನಲ್ಲೂ ನೋಡಬಹುದು. ತಿಂಗಳ ಸ್ಟೇಟ್‍ಮೆಂಟ್ ಅನ್ನು ನಿಯಮಿತವಾಗಿ ನೋಡುತ್ತಿರಬೇಕು. ಯಾವುದೇ ಅನಧಿಕೃತ ಇಲ್ಲವೇ ಅನುಮಾನಾಸ್ಪದ ಟ್ರಾನ್ಸಾಕ್ಷನ್ ಗಮನಕ್ಕೆ ಬಂದರೆ, ಕೂಡಲೆ ಬ್ಯಾಂಕನ್ನು ಸಂಪರ್ಕಿಸಬೇಕು.

ಆನ್‍ಲೈನ್‍ನಲ್ಲಿ ಕ್ರೆಡಿಟ್ ಕಾರ್ಡ್ ಸ್ಟೇಟ್‍ಮೆಂಟ್ ನೋಡುವುದು ಹೇಗೆ:

 

 • ನೆಟ್ ಬ್ಯಾಂಕಿಂಗ್ ಅಕೌಂಟ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ
  Your net banking account is another place you can access your RBL credit card statement. Simply log in to your account, view the report and download it. If you are not registered for online banking services, enter your 16-digit credit card number to sign up. After this, you may proceed with the RBL credit card statement download
 • ಇ ಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ:
  ಬಜಾಜ್ ಫಿನ್‍ಸರ್ವ್, ನಿಮ್ಮ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಕೂಡ ನಿಮ್ಮ ನೋಂದಣಿಯಾದ ಈಮೇಲ್ ವಿಳಾಸಕ್ಕೆ ಕಳಿಸುತ್ತದೆ. ಅದನ್ನು ಈಮೇಲ್‍ನಲ್ಲಿ ಪಡೆದು, ಕೆಲವೇ ಕ್ಲಿಕ್‍ಗಳಿಂದ ಎಲ್ಲಾ ವಿವರಗಳನ್ನು ನೋಡಿ.

 

ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಆಫ್‍ಲೈನ್‍ ಮೂಲಕ ಹೇಗೆ ನೋಡಬಹುದು:

ಪರ್ಯಾಯವಾಗಿ, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಅನ್ನು ಆಫ್ಲೈನಿನಲ್ಲಿ ಕೂಡ ಪರೀಕ್ಷಿಸಬಹುದು. ಹೀಗೆ ಮಾಡಲು ಕೆಳಗೆ ನೀಡಲಾದ ವಿಧಾನಗಳನ್ನು ಅನುಸರಿಸಿ.

 
 • ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ಮತ್ತು ಪೋಸ್ಟ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಸ್ವೀಕರಿಸಿ
  ಈ ವಿಧಾನದಿಂದ, ಆಫ್‍ಲೈನ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಹೇಗೆ ಪಡೆಯುವುದು ಎಂಬ ನಿಮ್ಮ ಚಿಂತೆಗೆ ಮಂಗಳ ಹಾಡಿ. ಅಂಚೆಯ ಮೂಲಕ ನಿಮ್ಮ ಮನೆಗೆ ಸ್ಟೇಟ್ಮೆಂಟ್ ತರಿಸಿಕೊಳ್ಳಲು, ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ, ಅಲ್ಲಿನ ಪ್ರತಿನಿಧಿಯ ನೆರವು ಪಡೆಯಿರಿ.
 • SMS ಮೂಲಕ ಸೈನ್ ಅಪ್ ಆಗುವುದರೊಂದಿಗೆ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ:
  ‘GREEN’ ಎಂದು ಟೈಪ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಿಂದ 5607011 ಕ್ಕೆ SMS ಮಾಡಿ. ಈ ಆಫ್ಲೈನ್ ಪ್ರಕ್ರಿಯೆ ನಿಮ್ಮ ಕ್ರೆಡಿಟ್ ಕಾರ್ಡಿಗೆ ಇ ಸ್ಟೇಟ್ಮೆಂಟ್ ಸೇವೆಯನ್ನು ಸಕ್ರಿಯಗೊಳಿಸುತ್ತದೆ.. ಒಂದು ಬಾರಿ ನೀವು ಮೆಸೇಜ್ ಕಳುಹಿಸಿದ ನಂತರ, ಪ್ರಕ್ರಿಯೆ ಚಾಲನೆಗೊಳ್ಳುತ್ತದೆ, ಮತ್ತು 48 ಗಂಟೆಗಳ ಒಳಗೆ ನೀವು ಅನುಮೋದನೆ ಪಡೆಯುತ್ತೀರಿ. ಈ ಸಕ್ರಿಯಗೊಳಿಸುವಿಕೆಯೊಂದಿಗೆ, ಈ ಬಿಲ್ಲಿಂಗ್ ಸೈಕಲ್‌‌ನಿಂದ ನೀವು ನಿಮ್ಮ ಇ ಸ್ಟೇಟ್ಮೆಂಟನ್ನು ಪರಿಶೀಲಿಸಬಹುದು.

 

ಈ ಕೆಳಗಿನ ವಿವರಗಳನ್ನು ತಿಳಿದುಕೊಳ್ಳಲು ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟನ್ನು ಓದಿ:

 • ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ, ಕಟ್ಟಲು ಬಾಕಿಯಿರುವ ಒಟ್ಟು ಮೊತ್ತ ಹಾಗೂ ಕಟ್ಟಬೇಕಾದ ಕನಿಷ್ಠ ಮೊತ್ತ.
 • ಪಾವತಿಯ ಕಡೆಯ ದಿನಾಂಕ.
 • ನಿಮ್ಮ ಲಭ್ಯವಿರುವ ಕ್ರೆಡಿಟ್ ಮಿತಿ.
 • ಮಾಡಿದ ಟ್ರಾನ್ಸಾಕ್ಷನ್‍ಗಳು ಹಾಗೂ ಕಡಿತಗೊಂಡ ತೆರಿಗೆಗಳು.
 • ಈಗಿನ ಬಿಲ್ಲಿಂಗ್ ಅವಧಿಗೆ, RBL ಕ್ರೆಡಿಟ್ ಕಾರ್ಡ್‍ನ ಓಪನಿಂಗ್ ಹಾಗೂ ಕ್ಲೋಸಿಂಗ್ ಬ್ಯಾಲೆನ್ಸ್ ನೋಡುವುದು.
 • ಗಳಿಸಿದ ರಿವಾರ್ಡ್ ಪಾಯಿಂಟ್‍ಗಳು, ರೆಡೀಮ್ ಮಾಡದ ರಿವಾರ್ಡ್ ಪಾಯಿಂಟ್‍ಗಳು ಮುಂತಾದ ವಿವರಗಳು.
 

ಹಾಗಾಗಿ, ಈ ವಿಧಾನಗಳಲ್ಲಿ ಯಾವುದಾದರೊಂದರ ಮೂಲಕ ಆನ್‍ಲೈನ್ ಅಥವಾ ಆಫ್‍ಲೈನ್‍ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟಿಗೆ ಅಕ್ಸೆಸ್ ಪಡೆಯಿರಿ. ಅಗತ್ಯ ವಿವರಗಳನ್ನು ಪರಿಶೀಲಿಸಿ ಮತ್ತು ದಂಡ ಶುಲ್ಕದಿಂದ ತಪ್ಪಿಸಿಕೊಳ್ಳಲು ಗಡುವು ದಿನಾಂಕದ ಒಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳನ್ನು ಮಾಡಿ.

ಮುಂಚಿತ ಅನುಮೋದಿತ ಆಫರ್