ನೀವು ಹೋಮ್ ಲೋನ್ಗೆ ಅಪ್ಲಿಕೇಶನ್ ಸಲ್ಲಿಸುವಾಗ, ಅಲ್ಲಿ ಕೆಲವು ನಿಯಮಗಳು ಮತ್ತು ನಿಬಂಧನೆಗಳಿರುತ್ತವೆ, ಲೋನ್ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ವಲ್ಪ ಸುಲಭವಾಗಿಸಲು ಅವುಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ:
1. ಹೋಮ್ ಲೋನ್ ಮಂಜೂರಾತಿ ಪ್ರಕ್ರಿಯೆಯು ಪ್ರಗತಿಯಲ್ಲಿರುವಾಗ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದನ್ನು ತಡೆಗಟ್ಟಲು ಪ್ರಸ್ತುತವಿರುವ EMI ಗಳು ಅಥವಾ ಕ್ರೆಡಿಟ್ ಕಾರ್ಡ್ ಡ್ಯೂಗಳ ಪಾವತಿಗಳನ್ನು ವಿಳಂಬಗೊಳಿಸಬೇಡಿ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಮಾತ್ರ ಹೋಮ್ ಲೋನ್ಗಳಲ್ಲಿ ಅತ್ಯುತ್ತಮ ಕೊಡುಗೆಗಳನ್ನು ನೀಡಲಾಗುತ್ತದೆ.
2. ನಿಮಗಾಗಿ ಅತ್ಯುತ್ತಮ ಲೋನ್ ಆಯ್ಕೆಯನ್ನು ಆರಿಸಿ. ನಿಮಗೆ ಯಾವ ಹೋಮ್ ಲೋನ್ ಬಡ್ಡಿ ದರವು ಸರಿಹೊಂದುತ್ತದೆ ಎಂಬುದನ್ನು ಹೋಲಿಸಿ ನೋಡಿ, ತಿಳಿದುಕೊಳ್ಳಿ. ನೀವು ಪ್ರತಿ ತಿಂಗಳು ಒಂದು ಸ್ಥಿರ ಬಜೆಟನ್ನು ನಿರ್ವಹಿಸಲು ಬಯಸಬಹುದು, ಆದ್ದರಿಂದ ನೀವು ಒಂದು ಸ್ಥಿರ ಬಡ್ಡಿ ದರ ಮತ್ತು ಅವಧಿಯನ್ನು ಆರಿಸಬಹುದು.
3. ನೀವು ಕಂಪನಿಯಿಂದ ಎಷ್ಟು ಲೋನ್ ಮೊತ್ತವನ್ನು ಲೋನ್ ತೆಗೆದುಕೊಳ್ಳಬಹುದು ಎಂಬುದನ್ನು ಪರಿಶೀಲಿಸಲು ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಬಳಸಿ.
4. ಹೋಮ್ ಲೋನ್ಗೆ ಅಗತ್ಯವಾದ ನಿಮ್ಮ ವೈಯಕ್ತಿಕ ಮತ್ತು ಹಣಕಾಸಿನ ಡಾಕ್ಯುಮೆಂಟ್ಗಳನ್ನು ಸಿದ್ಧವಾಗಿಟ್ಟುಕೊಳ್ಳಿ, ಏಕೆಂದರೆ ಲೋನ್ಗೆ ಅಪ್ಲಿಕೇಶನ್ ಸಲ್ಲಿಸುವಾಗ ನಿಮಗೆ ಅವುಗಳು ಅಗತ್ಯವಾಗುತ್ತವೆ.
5. ಡೌನ್ ಪೇಮೆಂಟ್ ಹೆಚ್ಚಾದಷ್ಟು ನಿಮಗೆ ಒಳ್ಳೆಯದು. ನೀವು ಆರಂಭದ ಡೌನ್ ಪೇಮೆಂಟ್ಗಾಗಿ ಉಳಿತಾಯ ಮಾಡಲು ಆರಂಭಿಸಬೇಕು, ಏಕೆಂದರೆ ಅದು ನೀವು ಖರೀದಿಸಲು ಬಯಸುವ ಮನೆಯ ಒಟ್ಟು ಖರ್ಚಿನ 2.5% ರಿಂದ 25% ನಷ್ಟಿರಬಹುದು.
6. ನಿಮ್ಮ ಸಾಲದಾತ ಕಂಪನಿಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ. ಅದು ನಿಮ್ಮ ಲೋನ್ ಮಂಜೂರಾತಿಗೆ ನೆರವಾಗುತ್ತದೆ. ಅದನ್ನು ಮಾಡುವ ಒಂದು ಮಾರ್ಗವೆಂದರೆ ನಿಮ್ಮ ಸಾಲದಾತರ ಯಾವುದೇ ಪ್ರಶ್ನೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದು.