ಫೋಟೋ

> >

ಹೆಲ್ತ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಆಗಾಗ ಕೇಳುವ ಪ್ರಶ್ನೆಗಳು

ಮೆಡಿಕಲ್ ಇನ್ಶೂರೆನ್ಸ್ ವಿಳಾಸ ಬದಲಾವಣೆಯ ಪ್ರಕ್ರಿಯೆ ಏನು?

ನೀವು ಸರಳ ಕಾಗದದ ಮೇಲೆ ಇನ್ಶೂರೆನ್ಸ್ ಕಂಪನಿಗೆ ವಿನಂತಿಯನ್ನು ಪತ್ರ ನೀಡುವ ಮೂಲಕ ವಿಳಾಸವನ್ನು ಬದಲಿಸಬಹುದು ಮತ್ತು ಇನ್ಶೂರೆನ್ಸ್ ಕಂಪನಿಯು ಅನುಮೋದನೆಯನ್ನು ರವಾನಿಸುತ್ತದೆ ಮತ್ತು ನಿಮಗೆ ಅದೇ ಪ್ರತಿಯನ್ನು ನೀಡುತ್ತದೆ. ನಿಮ್ಮ TPA ಗೆ ಅದೇ ರೀತಿಯ ಸಂದೇಶವನ್ನು ಕಳುಹಿಸಲು ನೆನಪಿಡಿ, ಇದರಿಂದಾಗಿ ಅವರು ತಮ್ಮ ಡಾಕ್ಯುಮೆಂಟ್‌ಗಳಲ್ಲಿ ಅದೇ ಪ್ರತಿಯನ್ನು ಸೇರಿಸಿಕೊಳ್ಳಬಹುದು.

ನನಗೆ ಹೆಲ್ತ್ ಇನ್ಶೂರೆನ್ಸ್ ಏಕೆ ಬೇಕು?

ಹೆಲ್ತ್ ಕೇರ್ ದುಬಾರಿಯಾಗಿದೆ. ತಾಂತ್ರಿಕ ಬೆಳವಣಿಗೆಗಳು, ಹೊಸ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳು ಆರೋಗ್ಯದ ವೆಚ್ಚವನ್ನು ಹೆಚ್ಚಿಸಿವೆ. ಈ ಹೆಚ್ಚಳವನ್ನು ಗ್ರಾಹಕರು ಭರಿಸುವುದು ಅಗತ್ಯವಾಗಿದೆ, ಇದರಿಂದಾಗಿ ಚಿಕಿತ್ಸೆಯು ಹಲವರ ಕೈಗೆಟುಕುತ್ತಿಲ್ಲ.
ಹೆಲ್ತ್ ಇನ್ಶೂರೆನ್ಸ್ ಈ ಅಡೆತಡೆಗಳನ್ನು ಇಲ್ಲವನ್ನಾಗಿಸುತ್ತದೆ ಹೀಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಆತಂಕಮುಕ್ತರಾಗಬಹುದು. ಹಠಾತ್ ತೀವ್ರ ಅಪಘಾತ ಉಂಟಾದಲ್ಲಿ ಅಥವಾ ನಾಳೆಯೇ ಅನಾರೋಗ್ಯಪೀಡಿತರಾದಲ್ಲಿ ನೀವು ಮಾಡಬೇಕಾದ ಎಲ್ಲಾ ವೈದ್ಯಕೀಯ ವೆಚ್ಚಗಳ ಬಗ್ಗೆ ಒಂದು ಬಾರಿ ಯೋಚಿಸಿ. ಇನ್ಶೂರ್ ಮಾಡದ ವ್ಯಕ್ತಿಗಳು ಈ ರಿಸ್ಕಿನಲ್ಲೇ ಬದುಕುತ್ತಿರುತ್ತಾರೆ. ಹೆಲ್ತ್ ಇನ್ಶೂರೆನ್ಸ್ ನಿಮ್ಮನ್ನು ಈ ರಿಸ್ಕಿನಿಂದ ಕಾಪಾಡುತ್ತದೆ. ಇದು ಅಗತ್ಯವಾಗಿ ಬೇಕಾದ ಹಣಕಾಸಿನ ನೆಮ್ಮದಿಯನ್ನು ನೀಡುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಡಿ ಅಡಿಯಲ್ಲಿ ನೀವು ತೆರಿಗೆ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳುತ್ತೀರಿ.

ಹೆಲ್ತ್ ಇನ್ಶೂರೆನ್ಸ್/ ಮೆಡಿಕ್ಲೈಮ್ ಎಂದರೇನು?

ಹೆಲ್ತ್ ಇನ್ಶೂರೆನ್ಸ್/ ಮೆಡಿಕ್ಲೈಮ್ ವೈದ್ಯಕೀಯ ವೆಚ್ಚಗಳ ವಿರುದ್ಧ ರಕ್ಷಣೆ ನೀಡುತ್ತದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಇನ್ಶೂರರ್ ಮತ್ತು ನಿರ್ದಿಷ್ಟ ವ್ಯಕ್ತಿಗತ/ ಗುಂಪಿನ ನಡುವಿನ ಒಪ್ಪಂದವಾಗಿದೆ, ಇದರಲ್ಲಿ ನಿರ್ದಿಷ್ಟ ಪ್ರೀಮಿಯಂನಲ್ಲಿ ನಿರ್ದಿಷ್ಟ ಹೆಲ್ತ್ ಇನ್ಶೂರೆನ್ಸ್ ಒದಗಿಸಲು ಇನ್ಶೂರರ್ ಒಪ್ಪುತ್ತಾರೆ. ಹೆಲ್ತ್ ಇನ್ಶೂರರ್ ಸಾಮಾನ್ಯವಾಗಿ ನೇರ ಪಾವತಿ (ನಗದು ರಹಿತ ಸೌಲಭ್ಯ) ಅಥವಾ ಅನಾರೋಗ್ಯ ಮತ್ತು ಗಾಯಗಳಿಗೆ ಸಂಬಂಧಿಸಿದ ಖರ್ಚುಗಳನ್ನು ಮರುಪಾವತಿಸುತ್ತಾರೆ.

ನಾನು ಈಗಾಗಲೇ ಹೆಲ್ತ್ ಇನ್ಶೂರೆನ್ಸ್ ಹೊಂದಿದ್ದೇನೆ ಮತ್ತು ವಿಮಾ ಮೊತ್ತ ಹೆಚ್ಚಿಸಲು ಬಯಸುತ್ತೇನೆ, ನಾನು ಏನು ಮಾಡಬೇಕು

ನೀವು ಸೂಪರ್ ಟಾಪ್ ಅಪ್ ಯೋಜನೆಯನ್ನು ತೆಗೆದುಕೊಳ್ಳಬಹುದು ಮತ್ತು ನೀವು ಇನ್ಶೂರೆನ್ಸ್ ಮಾಡಿದ ಮೊತ್ತವನ್ನು ನಿಮ್ಮಿಚ್ಛೆಯಂತೆ ಹೆಚ್ಚಿಸಬಹುದು.

ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಹೆಲ್ತ್ ಪಾಲಿಸಿ ಹೊಂದಬಹುದೇ?

ಹೌದು. ಆದರೆ ಪ್ರತಿ ಕಂಪನಿಯು ನಷ್ಟ, ಹೊಣೆಗಾರಿಕೆ, ಪರಿಹಾರ, ವೆಚ್ಚಗಳು ಅಥವಾ ಖರ್ಚುಗಳ ಮೌಲ್ಯಮಾಪನ ಅನುಪಾತವನ್ನು ಪಾವತಿಸುತ್ತದೆ. ಉದಾ: ಒಬ್ಬ ವ್ಯಕ್ತಿಯು X ಕಂಪನಿಯಿಂದ ರೂ. 1 ಲಕ್ಷಕ್ಕೆ ಹೆಲ್ತ್ ಇನ್ಶೂರೆನ್ಸ್ ಹೊಂದಿದ್ದರೆ, Y ಕಂಪನಿಯಿಂದ 1 ಲಕ್ಷ ಹೆಲ್ತ್ ಇನ್ಶೂರೆನ್ಸ್ ಮಾಡಿದ್ದರೆ, ಕ್ಲೈಮ್ ಸಂದರ್ಭದಲ್ಲಿ ಪ್ರತಿ ಪಾಲಿಸಿಯು SI ವರೆಗೆ 50:50 ಅನುಪಾತದಲ್ಲಿ ಪಾವತಿಸುತ್ತದೆ.

ಒಟ್ಟುಗೂಡಿಸಿದ ಬೋನಸ್ ಎಂದರೇನು?

ಪ್ರತಿ ಕ್ಲೈಮ್ ರಹಿತ ವರ್ಷಕ್ಕೆ ನಿರ್ದಿಷ್ಟ ಮೊತ್ತದಿಂದ ಇನ್ಶೂರ್ಡ್ ಮೊತ್ತವನ್ನು ಹೆಚ್ಚಿಸುವುದು, ಇದು ನಿರ್ದಿಷ್ಟ ಗರಿಷ್ಠ ಮೊತ್ತಕ್ಕೆ ಒಳಪಟ್ಟಿರುತ್ತದೆ. ಒಟ್ಟಾರೆ ಬೋನಸ್‍ಗಳನ್ನು ಪಡೆಯಲು ಯಾವುದೇ ಹಣವನ್ನು ಮುರಿದುಕೊಳ್ಳದೆ ಪಾಲಿಸಿಯನ್ನು ನವೀಕರಿಸಬೇಕು ಎಂಬುದು ನೆನಪಿಡಬೇಕಾದ ಒಂದು ಪ್ರಮುಖ ಅಂಶವಾಗಿದೆ.

ಮೊದಲೇ ಅಸ್ತಿತ್ವದಲ್ಲಿರುವ ರೋಗಗಳು ಯಾವುದು?

ಕಂಪನಿಯಿಂದ ಅವನ/ಅವಳ ಹೆಲ್ತ್ ಪಾಲಿಸಿ ಪಡೆದ 48 ತಿಂಗಳುಗಳ ಒಳಗೆ ಇನ್ಶೂರರ್ ಯಾವುದೇ ಪರಿಸ್ಥಿತಿ, ಕಾಯಿಲೆ, ಅಥವಾ ಗಾಯ, ಅಥವಾ ಸಂಬಂಧಿತ ಸ್ಥಿತಿಗಳ ಕಾರಣದಿಂದ ಚಿಹ್ನೆಗಳು, ಲಕ್ಷಣಗಳನ್ನು ಹೊಂದಿದ್ದರೆ ಮತ್ತು/ಅಥವಾ ಅದಕ್ಕಾಗಿ ತಪಾಸಣೆಗೆ ಒಳಪಟ್ಟರೆ, ವೈದ್ಯಕೀಯ ಸಲಹೆ/ಚಿಕಿತ್ಸೆಗೆ ಒಳಗಾದರೆ ಅದು ಕವರ್ ಆಗುತ್ತದೆ. ಮೊದಲೇ ಇರುವ ರೋಗಗಳನ್ನು ಪಾಲಿಸಿಯ ಪ್ರಾರಂಭದಿಂದ ಗರಿಷ್ಠ ನಾಲ್ಕು ವರ್ಷಗಳ ನಂತರ ಕವರ್ ಮಾಡಲಾಗುತ್ತದೆ.

ಜನರು ಇವನ್ನೂ ಪರಿಗಣಿಸಿದ್ದಾರೆ

ಟೂ ವೀಲರ್ ಇನ್ಶೂರೆನ್ಸ್

ತಿಳಿಯಿರಿ

ದ್ವಿ ಚಕ್ರ ವಾಹನ ಇನ್ಶೂರೆನ್ಸ್ -ನಿಮ್ಮ ದ್ವಿ ಚಕ್ರ ವಾಹನಕ್ಕೆ ಸಮಗ್ರ ಇನ್ಶೂರೆನ್ಸ್

ಅಪ್ಲೈ
ಕಾರ್ ಇನ್ಶೂರೆನ್ಸ್

ತಿಳಿಯಿರಿ

ಕಾರ್ ಇನ್ಶೂರೆನ್ಸ್ - ಥರ್ಡ್ ಪಾರ್ಟಿ ಕವರೇಜ್ ಜತೆಗೆ ನಿಮ್ಮ ಕಾರಿಗೆ ಒಟ್ಟಾರೆ ಇನ್ಶೂರೆನ್ಸನ್ನು ಪಡೆಯಿರಿ

ಅಪ್ಲೈ
ಲೈಫ್ ಇನ್ಶೂರೆನ್ಸ್

ತಿಳಿಯಿರಿ

ಲೈಫ್ ಇನ್ಶೂರೆನ್ಸ್ - ವೈದ್ಯಕೀಯ ತುರ್ತಿನಿಂದಾಗಿ ಉಂಟಾದ ಖರ್ಚುಗಳ ಮೇಲೆ ರಕ್ಷಣೆ

ಅಪ್ಲೈ
ಪಾಕೆಟ್ ಇನ್ಶೂರೆನ್ಸ್

ಪಾಕೆಟ್ ಇನ್ಶೂರೆನ್ಸ್ - ನಿಮ್ಮನ್ನು ನೀವು ಮತ್ತು ಪ್ರತಿನಿತ್ಯ ನಿಮ್ಮ ಮೌಲ್ಯಯುತ ವಸ್ತುಗಳನ್ನು ಅಪಾಯದಿಂದ ಸುರಕ್ಷಿತವಾಗಿರಿಸಿಕೊಳ್ಳಿ

ತಿಳಿಯಿರಿ