ಬಜಾಜ್ ಫೈನಾನ್ಸ್ ಉತ್ತಮ ಹೂಡಿಕೆ ಯೋಜನೆಗಳು

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ಈಕ್ವಿಟಿ

ಫಿಕ್ಸೆಡ್ ಡೆಪಾಸಿಟ್ ವೆರ್ಸಸ್ ಈಕ್ವಿಟಿ

ನೀವು ಎಷ್ಟು ಉತ್ತಮವಾಗಿ ಅಪಾಯವನ್ನು ಎದುರಿಸುವಿರಿ? ನಿಮ್ಮ ಹಣ ಕುಸಿತವನ್ನು ಮತ್ತು ಕರಗುವುದನ್ನು ನೋಡಲು ನೀವು ಸಿದ್ದರಿರುವಿರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳು ನೀವು ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಅಥವಾ ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದೇ ಎಂಬುದನ್ನು ತೀರ್ಮಾನಿಸುತ್ತದೆ.

ಯಾರಾದರೂ ನಿಮಗೆ ಕಂಪನಿಯೊಂದರ ಷೇರುಗಳಲ್ಲಿ 2011 ರಲ್ಲಿ ಹಣವನ್ನು ಹೂಡಿಕೆ ಮಾಡಿದರೆ, 2017 ರ ಹೊತ್ತಿಗೆ ವಾರ್ಷಿಕವಾಗಿ ಗುಣಿತವಾಗಿ ಅದು ಗಳಿಸುವ ಬಡ್ಡಿಯು 17% ಆಗುವುದೆಂದು ಹೇಳಿದರೆ ಖಚಿತವಾಗಿಯೂ ಅದು ನಿಮ್ಮ ಕುತೂಹಲವನ್ನು ಹೆಚ್ಚಿಸುವುದು. ಆದರೆ ಮರೆಯಬೇಡಿ, ನೀವು ಈಕ್ವಿಟಿಗಳಲ್ಲಿ ಹಣವನ್ನು ಹೂಡಿಕೆ ಮಾಡುವಾಗ ನೀವು ಗೆಲ್ಲುವಿರೋ ಅಥವಾ ಸೋಲುವಿರೋ ಎಂಬುದು ನಿಮಗೆ ಖಚಿತವಾಗಿ ತಿಳಿಯುವುದಿಲ್ಲ. ಅಂದರೆ ಅದರರ್ಥ ನೀವು ಸಂಪೂರ್ಣವಾಗಿ ಈಕ್ವಿಟಿ ಹೂಡಿಕೆಗಳಿಂದ ದೂರ ಸರಿಯಬೇಕೆ? ಹಾಗೇನು ಇಲ್ಲ,.

ಎಲ್ಲವೂ ನೀವು ಆರ್ಥಿಕ ಹಿಂಜರಿಕೆಯನ್ನು ಎಷ್ಟರ ಮಟ್ಟಿಗೆ ತಡೆದುಕೊಳ್ಳುವಿರಿ ಎಂಬುದರ ಮೇಲೆ ಆಧಾರ ಹೊಂದಿದೆ. ನಿಮಗೆ ಆರ್ಥಿಕ ಕುಸಿತದಿಂದ ಆದ ನಷ್ಟವನ್ನು ತಡೆದುಕೊಳ್ಳುವ ಬೆಂಬಲವಿದ್ದರೆ, ತಮ್ಮ ಉಳಿತಾಯದ ಎಲ್ಲವನ್ನು ಹೂಡಿಕೆ ಮಾಡಿದ ಬೇರೆಯವರಿಗೆ ಹೋಲಿಸಿದರೆ ನೀವು ಮತ್ತೆ ಅದೇ ರೀತಿಯ ಹೂಡಿಕೆಗೆ ಹಿಂದಿರುಗಬಹುದು, ನೀವು ಕಡಿಮೆ ಅಪಾಯವಿರುವ ಹೂಡಿಕೆ ಮಾಡಲು ಅಪೇಕ್ಷಿಸಿದರೆ ಆಗ ನೀವು ಪರಿಗಣಿಸಬಹುದು ಫಿಕ್ಸೆಡ್ ಡೆಪಾಸಿಟ್.

ಇಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಹಾಗೂ ಈಕ್ವಿಟಿಗಳ ನಡುವೆ ಹೋಲಿಕೆ ಮಾಡಲಾಗಿದೆ. ಇದು ನಿಮಗೆ ಸರಿಯಾದ ಆಯ್ಕೆ ಮಾಡಲು ಸಹಾಯ ಮಾಡುತ್ತದೆ:

ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳಿ:

ನಿಮ್ಮ ಹಣವನ್ನು ಇಕ್ವಿಟಿಯಲ್ಲಿ ಹೂಡಿಕೆ ಮಾಡುವಾಗ, ನೀವು ಖಚಿತವಾಗಿ ಯಾವುದನ್ನು ಆಯ್ಕೆ ಮಾಡುತ್ತಿರುವಿರಿ ಎಂಬುದನ್ನು ತಿಳಿದುಕೊಳ್ಳುವುದು ಸಹಾಯಕವಾಗುತ್ತದೆ, ಈ ರೀತಿಯಾಗಿ ಯೋಚಿಸಿ:

ಚದುರಂಗದಾಟದಲ್ಲಿ ವಿವಿಧ ಕಾಯಿಗಳು ಹೇಗೆ ಚಲಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ ಆಟವನ್ನು ನೀವು ಆಡಲು ಸಾಧ್ಯವೇ? ಖಂಡಿತ ಇಲ್ಲ.
ಅಂತೆಯೇ, ಸ್ಟಾಕ್ ಮಾರ್ಕೆಟ್, ಸೂಚ್ಯಂಕಗಳು, ಷೇರು ಬೆಲೆ, ಸಣ್ಣ ಮಾರಾಟ, ಮಿತಿಗಳು ಇತ್ಯಾದಿಗಳಂತಹ ಪದಗಳೊಂದಿಗೆ ನೀವೇ ಪರಿಚಯ ಹೊಂದುವುದು ಮುಖ್ಯವಾಗಿದೆ, ನೀವು ಹೂಡಿಕೆ ಮಾಡುತ್ತಿರುವ ಕಂಪನಿಗಳ ಬಗ್ಗೆ ಸಂಶೋಧನೆ ಮಾಡುವುದಕ್ಕೆ ಸಮಯವನ್ನು ಕಳೆಯಬೇಕು. ಕಂಪನಿಯು ಯಾವ ರೀತಿಯ ಬಿಸಿನೆಸ್ ಅನ್ನು ಹೊಂದಿದೆ? ಬೆಳವಣಿಗೆಗೆ ಅದರ ವ್ಯಾಪ್ತಿ ಏನು? ಈ ನಿಟ್ಟಿನಲ್ಲಿ, ಫಿಕ್ಸೆಡ್ ಡೆಪಾಸಿಟ್‌ಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತವೆ.


ಬಹು ದೂರದವರೆಗೂ ಸಾಗಲು ತಯಾರಾಗಿರಿ:

ಸ್ಟಾಕ್ ಮಾರುಕಟ್ಟೆ ವ್ಯವಹಾರವು ತಾಳ್ಮೆಯಿಲ್ಲದಿರುವವರಿಗೆ ಅಲ್ಲ. ನಿಮ್ಮ ಸ್ನೇಹಿತನ ಸಲಹೆಯ ಆಧಾರದ ಮೇಲೆ ನೀವು ಷೇರುಗಳನ್ನು ಖರೀದಿಸುವ ಮೂಲಕ ಬಹಳಷ್ಟು ಲಾಭವನ್ನು ಪಡೆಯಬಹುದು ಎಂದು ನೀವು ಭಾವಿಸಿದರೆ, ನೀವು ಹೂಡಿಕೆಯನ್ನು ತಪ್ಪಾಗಿ ಮಾಡುವುತ್ತ ವಾಲುತ್ತಿರುವಿರಿ. ನಿಮ್ಮ ಬಂಡವಾಳದಿಂದ ಲಾಭವನ್ನು ಹೊಂದಲು ಸಮಯವು ಹಿಡಿಯುತ್ತದೆ, ಹಾಗೂ ಇದು ಯಾವಾಗ ಸಂಭವಿಸುತ್ತದೆಯೆಂದು ಖಚಿತವಾಗಿ ತಿಳಿಯುವುದಿಲ್ಲ. ಆದ್ದರಿಂದ ನೀವು ಯೋಚಿಸಿ ಅಷ್ಟರವರೆಗೂ ಕಾಯಲು ಸಿದ್ದವಾಗಿರುವಿರಾ ಎಂದು. ಮತ್ತೊಂದೆಡೆ, ಫಿಕ್ಸೆಡ್ ಡೆಪಾಸಿಟ್‌ಗಳು, ನೀವು ಆಯ್ಕೆ ಮಾಡಿದ FD ಪ್ರಕಾರವನ್ನು ಅವಲಂಬಿಸಿ, ನೀವು ಮಾಸಿಕ, ದ್ವಿ-ವಾರ್ಷಿಕವಾಗಿ ಅಥವಾ ವಾರ್ಷಿಕವಾಗಿ ಪ್ರತಿಫಲವನ್ನು ಪಡೆಯುವ ಭರವಸೆ ಇರುತ್ತದೆ. ಅಲ್ಲದೆ ಅದು ಅಲ್ಪಾವಧಿಯ ಅಗತ್ಯಗಳಿಗೆ ಪರಿಹಾರವನ್ನು ನೀಡುತ್ತದೆ.

ಹಳೆಯ ಡಾಕ್ಯುಮೆಂಟ್‌ಗಳನ್ನು ಭವಿಷ್ಯವನ್ನು ಊಹಿಸಲು ಬಳಸಿಕೊಳ್ಳಬೇಡಿ:

ಕಳೆದ ದಶಕದಲ್ಲಿ ಸೆನ್ಸೆಕ್ಸ್ ಹಲವಾರು ಏರಿಳಿತಗಳನ್ನು ಅನುಭವಿಸಿದೆ ಎಂಬ ಅಂಶವು ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಅಸ್ಥಿರವಾದ ಬಿಸಿನೆಸ್‌ ಹೂಡಿಕೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅನಿಶ್ಚಿತತೆಯ ಅಂಶವು ನಿಮ್ಮ ಸ್ವಭಾವಕ್ಕೆ ಹೊಂದದಿದ್ದರೆ, ಸುರಕ್ಷಿತ ಮಾರ್ಗವನ್ನು ಆರಿಸಿಕೊಳ್ಳಿ ಮತ್ತು FD ಗಳಲ್ಲಿ ಹೂಡಿಕೆ ಮಾಡಿ.

ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆಯು ಪ್ರತಿಯೊಬ್ಬರಿಗೂ ಸೂಕ್ತವಲ್ಲ. ಇದಕ್ಕೆ ಮಾರುಕಟ್ಟೆಯ ಬಗ್ಗೆ ಸ್ವಲ್ಪ ತಿಳುವಳಿಕೆ ಮತ್ತು ನಿಮ್ಮ ಹೂಡಿಕೆಯ ಮೇಲೆ ನಿರಂತರ ಮೇಲ್ವಿಚಾರಣೆಯ ಅಗತ್ಯವಿರುತ್ತದೆ. ನೀವು ಸುರಕ್ಷಿತವಾಗಿ ಹೂಡಿಕೆ ಮಾಡಲು ಬಯಸಿದರೆ, ಫಿಕ್ಸೆಡ್‌ ಡೆಪಾಸಿಟ್‌ಗಳಂತಹ ಅಪಾಯ-ಮುಕ್ತ ಸಾಧನಗಳಲ್ಲಿ ಹೂಡಿಕೆ ಮಾಡಿ.

CRISIL ಮತ್ತು ICRA ನಿಂದ ಸ್ಥಿರವಾದ ರೇಟಿಂಗ್‌ಗಳೊಂದಿಗೆ, FD ಗಳ ಮೇಲಿನ ಲಾಭದಾಯಕ ಬಡ್ಡಿ ದರಗಳು ಮತ್ತು ಆನ್ಲೈನ್ ಅಕೌಂಟ್‌ ಪ್ರವೇಶ ಇಂತಹ ಇತರ ವೈಶಿಷ್ಟ್ಯಗಳು, ಬಜಾಜ್ ಫೈನಾನ್ಸ್ ಅದರ ಫಿಕ್ಸೆಡ್ ಡೆಪಾಸಿಟ್‌ಗಳೊಂದಿಗೆ ಹೆಚ್ಚು ಸುರಕ್ಷಿತ ಹೂಡಿಕೆ ಆಯ್ಕೆಯನ್ನು ನೀಡುತ್ತದೆ. ನೀವು ಖಚಿತವಾದ ಆದಾಯ, ಹೆಚ್ಚಿನ ಅನುಕೂಲತೆ ಮತ್ತು ಸ್ಥಿರ ಆದಾಯವನ್ನು ಪಡೆಯಬಹುದು. ಹಿರಿಯ ನಾಗರಿಕರು ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಬಡ್ಡಿದರವನ್ನು ಅಪೇಕ್ಷಿಸಬಹುದು ಅವರ ನಿವೃತ್ತಿಯ ನಂತರ ಆದಾಯವನ್ನು ಬೆಳೆಸಬಹುದು.