ಕರೆ, SMS, ಇ-ಮೇಲ್ ಮೂಲಕ ನಮ್ಮನ್ನು ತಲುಪಿ ಅಥವಾ ನಮ್ಮ ಬ್ರಾಂಚ್ ಆಫೀಸಿಗೆ ಭೇಟಿ ನೀಡಿ.

Contact Us FAQ

ಆಗಾಗ ಕೇಳುವ ಪ್ರಶ್ನೆಗಳು

ರೆಸಲ್ಯೂಶನ್ ಪ್ಲಾನ್ ಎಂದರೇನು?

• Covid- ಸಾಂಕ್ರಾಮಿಕ ರೋಗದ ಕಾರಣದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಮಂಡಳಿಯ ಎಲ್ಲಾ ಗ್ರಾಹಕರೂ ಹಣಕಾಸು ಒತ್ತಡವನ್ನು ಅನುಭವಿಸುತ್ತಿದ್ದು, ಆ ಕಾರಣಕ್ಕೆ RBI ರೆಸಲ್ಯೂಶನ್ ಪ್ಲಾನ್ ಅನ್ನು ನೀಡುತ್ತಿದೆ.

• ಉತ್ತಮ ಮರುಪಾವತಿ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮತ್ತು BFL ನೀತಿಯ ಪ್ರಕಾರ ಅರ್ಹತೆ ಪಡೆದಿರುವ ತೊಂದರೆಗೊಳಗಾದ ಗ್ರಾಹಕರಿಗೆ ಇದನ್ನು ನೀಡಲಾಗುತ್ತದೆ.

• ಉತ್ಪಾದನಾ ಸಾಮರ್ಥ್ಯಗಳಿಗೆ ಹೋಲಿಸಿದರೆ ಹಣದ ಹರಿವು ಅಸಮರ್ಪಕವಾಗುವುದರಿಂದ ಸಾಲದ ಹೊರೆಯು ಹೆಚ್ಚಿ ಅದು ವ್ಯವಹಾರದ ದೀರ್ಘಕಾಲೀನ ಕಾರ್ಯಸಾಧ್ಯತೆಯ ಮೇಲೆ ಪರಿಣಾಮ ಬೀರಬಹುದಾಗಿದ್ದು, ಗ್ರಾಹಕರ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವುದು ರೆಸಲ್ಯೂಶನ್ ಪ್ಲಾನ್‌ನ ಉದ್ದೇಶವಾಗಿದೆ. ಲೋನ್ EMI ಮೊತ್ತವನ್ನು ಕಡಿಮೆ ಮಾಡುವ ಮತ್ತು ಲೋನ್ ಅವಧಿಯನ್ನು ವಿಸ್ತರಿಸುವ ಮೂಲಕ ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿ ಗ್ರಾಹಕರಿಗೆ ಸಹಾಯ ಮಾಡಲಾಗುವುದು.
• ನಿಗದಿತ ಷರತ್ತುಗಳಿಗೆ ಒಳಪಟ್ಟು ಮಾಲೀಕತ್ವ ಮತ್ತು ಪರ್ಸನಲ್ ಲೋನ್‌ಗಳಲ್ಲಿ ಬದಲಾವಣೆಗಳಿಲ್ಲದೆ ಅರ್ಹ ಕಾರ್ಪೋರೇಟ್‌ಗಳು ರೆಸಲ್ಯೂಶನ್ ಪ್ಲಾನ್ ಅನ್ನು ಪಡೆಯಬಹುದು.
• ಅರ್ಹ ಗ್ರಾಹಕರಿಗೆ ರೆಸಲ್ಯೂಶನ್ ಪ್ಲಾನ್‌ ನೀಡುವುದು ಪ್ಲಾನ್‌ಗೆ ಸಂಬಂಧಿಸಿದ ನಿಯಮ ಮತ್ತು ಷರತ್ತುಗಳು/ ದಾಖಲಾತಿಗಳ ಸ್ವೀಕಾರ ಮತ್ತು ಅನುಸರಣೆಗೆ ಒಳಪಟ್ಟಿರುತ್ತದೆ

ಬಜಾಜ್ ಫೈನಾನ್ಸ್ ಲಿಮಿಟೆಡ್ ("BFL") ತನ್ನ ಗ್ರಾಹಕರಿಗೆ ರೆಸಲ್ಯೂಶನ್ ಪ್ಲಾನ್ ನೀಡುತ್ತಿದೆಯೇ?

ಇಲ್ಲ. COVID-19-related ಒತ್ತಡದ ರೆಸಲ್ಯೂಶನ್ ಫ್ರೇಮ್‌ವರ್ಕ್ ಕುರಿತು RBI ಮಾರ್ಗಸೂಚಿಗಳ ಪ್ರಕಾರ, ಆಗಸ್ಟ್ 6 2020 ರಂದು ಘೋಷಿಸಲಾಗಿದೆ, ಇದು ಗ್ರಾಹಕರಿಗೆ ಪ್ರಯೋಜನಗಳನ್ನು ಪಡೆಯಲು ಒನ್-ಟೈಮ್ ರೆಸಲ್ಯೂಶನ್ ಪ್ಲಾನ್ ಆಗಿತ್ತು ಮತ್ತು 31ನೇ ಡಿಸೆಂಬರ್ 2020 ರಂದು ಕೊನೆಗೊಂಡಿದೆ.

ಫೆಬ್ರವರಿ, 29, 2020 ನಂತರ ಲಾಕ್‌ಡೌನ್ ಅವಧಿಯಲ್ಲಿ ಮಂಜೂರಾದ ಹೊಸ ಲೋನ್‌ಗಳಿಗೆ ರೆಸಲ್ಯೂಶನ್ ಪ್ಲಾನ್ ಅನ್ವಯವಾಗುತ್ತದೆಯೇ?

ಇಲ್ಲ. RBI ಮಾರ್ಗಸೂಚಿಗಳ ಪ್ರಕಾರ, ಪ್ರಮಾಣಿತ' ಎಂದು ವರ್ಗೀಕರಿಸಲ್ಪಟ್ಟ ಆದರೆ ಲೋನ್ ನೀಡುವ ಸಂಸ್ಥೆಯೊಂದಿಗೆ ಮಾರ್ಚ್ 1, 2020 ರಂತೆ 30 ದಿನಗಳಿಗಿಂತ ಹೆಚ್ಚು ದಿನಗಳವರೆಗೆ ಡೀಫಾಲ್ಟ್ ಆಗಿರದ ಅಕೌಂಟ್‌ಗಳು ಮಾತ್ರ ಈ ಚೌಕಟ್ಟಿನ ಅಡಿಯಲ್ಲಿ ರೆಸಲ್ಯೂಶನ್‌ಗೆ ಅರ್ಹವಾಗಿರುತ್ತವೆ.

ನಾನು ರೆಸಲ್ಯೂಶನ್ ಪ್ಲಾನ್ ಅನುಷ್ಠಾನಕ್ಕಾಗಿ ಅಪ್ಲೈ ಮಾಡಿದರೆ ನನ್ನ ಕ್ರೆಡಿಟ್ ಬ್ಯೂರೋ ರೆಕಾರ್ಡ್‌‌ಗಳ ಮೇಲೆ ಪರಿಣಾಮ ಬೀರುತ್ತದೆಯೇ?

• ನೀವು ರೆಸಲ್ಯೂಶನ್ ಪ್ಲಾನ್ ಪಡೆದಿದ್ದರೆ, ರೆಸಲ್ಯೂಶನ್ ಪ್ಲಾನ್ ವಿವರಗಳೊಂದಿಗೆ ನಿಮ್ಮ ಕ್ರೆಡಿಟ್ ಬ್ಯೂರೋ ರೆಕಾರ್ಡ್‌ಗಳನ್ನು ಅಪ್ಡೇಟ್ ಮಾಡಲಾಗಿದೆ.

ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿ ನೀವು ಸಹಾಯವನ್ನು ಪಡೆದಿದ್ದೀರಿ ಎಂಬ ಸಂಗತಿ ನಿಮ್ಮ ಬ್ಯೂರೋ ರೆಕಾರ್ಡ್‌‌ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದಾಗ್ಯೂ, ಪ್ರತಿ ಘಟಕದ ಕ್ರೆಡಿಟ್ ಪಾಲಿಸಿಯು ಭಿನ್ನವಾಗಿರುವುದರಿಂದ, ಇತರ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳು ಹೇಗೆ ಅದನ್ನು ಪರಿಗಣಿಸಬಹುದು ಎಂಬುದರ ಬಗ್ಗೆ BFL ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ.

ರೆಸಲ್ಯೂಶನ್ ಪ್ಲಾನಿನ ನನ್ನ ಕೋರಿಕೆಯನ್ನು ಅಂಗೀಕರಿಸಲಾಗಿದ್ದರೆ ಸಂವಹನ ಕಳುಹಿಸಲಾಗಿದೆಯೇ?

• ನೀವು ರೆಸಲ್ಯೂಶನ್ ಪ್ಲಾನಿಗೆ ಅಪ್ಲೈ ಮಾಡಿದ್ದರೆ ನಿಮ್ಮ ನೋಂದಾಯಿತ ಮೊಬೈಲ್ ನಂಬರಿನಲ್ಲಿ ನೀವು ಸಂವಹನವನ್ನು ಸ್ವೀಕರಿಸುತ್ತೀರಿ. ನಮ್ಮ ಗ್ರಾಹಕ ಪೋರ್ಟಲ್ ಎಕ್ಸ್‌ಪೀರಿಯಗೆ ಭೇಟಿ ನೀಡುವ ಮೂಲಕ ನೀವು ಇಲ್ಲಿ <https://customer-login.bajajfinserv.in/Customer?Source=raiserequest> ಸ್ಥಿತಿಯನ್ನು ಕೂಡ ಪರಿಶೀಲಿಸಬಹುದು ಮತ್ತು ಈ ಪ್ಲಾನ್ ಅಡಿಯಲ್ಲಿ ಬುಕ್ ಮಾಡಲಾದ ಅಸ್ತಿತ್ವದಲ್ಲಿರುವ ಅಥವಾ ಹೊಸ ಲೋನಿಗೆ ನಿಮ್ಮ ಪರಿಷ್ಕೃತ ಮರುಪಾವತಿಯ ವೇಳಾಪಟ್ಟಿಯನ್ನು ನೋಡಬಹುದು.

ರೆಸಲ್ಯೂಶನ್ ಪ್ಲಾನ್‌ನಲ್ಲಿ ನಾನು ಹೆಚ್ಚುವರಿಯಾಗಿ ಪಾವತಿಸಬೇಕಾದ ಬಡ್ಡಿ ದರ ಎಷ್ಟು?

• ಗೃಹೋಪಯೋಗಿ ವಸ್ತುಗಳ ಲೋನ್‌ಗಳಿಗೆ, ಪ್ರತಿ ಲೋನಿಗೆ ತಿಂಗಳಿಗೆ 1% ಶುಲ್ಕವಿತ್ತು. ವಿಧಿಸಲಾದ ಮೊತ್ತವು ಅಂದಾಜು ಮೊತ್ತವನ್ನು ಪ್ರತಿನಿಧಿಸುತ್ತದೆ. ಪರಿಷ್ಕೃತ ಪಾವತಿ ಯೋಜನೆ (ರೆಸಲ್ಯೂಶನ್ ಪ್ಲಾನ್) ಅಡಿಯಲ್ಲಿ ವಿಸ್ತರಿತ ಕಾಲಾವಧಿಗೆ ವಾರ್ಷಿಕ ಬಡ್ಡಿ ದರ 24%. ಪರ್ಸನಲ್ ಲೋನ್, ಬಿಸಿನೆಸ್ ಲೋನ್ ಮತ್ತು ವೃತ್ತಿಪರ ಲೋನ್‌ಗಳಿಗೆ ಬಡ್ಡಿ ಶುಲ್ಕಗಳು ಒಂದೇ ಆಗಿರುತ್ತವೆ.

ಒಂದು ಬಾರಿ ಅಪ್ಲೈ ಮಾಡಿದ ನಂತರ ನಾನು ರೆಸಲ್ಯೂಶನ್ ಪ್ಲಾನ್‌ನಿಂದ ಹೊರಗೆ ಉಳಿಯಬಹುದೇ?

• ಇಲ್ಲ. ಆಯ್ಕೆ ಮಾಡಿದ ಆಫರ್‌ಗಳ ಆಧಾರದ ಮೇಲೆ ನಿಮ್ಮ ಲೋನ್‌ಗಳಿಗೆ ರೆಸಲ್ಯೂಶನ್ ಪ್ಲಾನ್ ಅನುಷ್ಠಾನವನ್ನು ಒಮ್ಮೆ ನೀವು ಆರಿಸಿಕೊಂಡರೆ, ನಂತರ ನೀವು ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

ನನ್ನ ಲೋನ್‌ಗಳ ಮೇಲೆ, ಮೊರಟೋರಿಯಂ ಸಮಯದಲ್ಲಿ ಬಡ್ಡಿಯನ್ನು ಈಗಾಗಲೇ ಲೆಕ್ಕ ಹಾಕಲಾಗಿದೆ, ಅದನ್ನು ಮನ್ನಾ ಮಾಡಲಾಗುತ್ತದೆಯೇ?

ಇಲ್ಲ. ಈಗಾಗಲೇ ಪಡೆದ ಮೊರಟೋರಿಯಂ ಅವಧಿಯಲ್ಲಿ ಲೋನ್ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದಿಲ್ಲ.

ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿ ಬದಲಾಯಿಸಲಾದ ಲೋನ್ ಅನ್ನು ಭಾಗಶಃ ಮುಂಪಾವತಿ ಮಾಡಲು ಅಥವಾ ಫೋರ್‌ಕ್ಲೋಸ್ ಮಾಡಲು ಏನಾದರೂ ಹೆಚ್ಚುವರಿ ಶುಲ್ಕಗಳಿವೆಯೇ?

• For Personal Loans and Business and Professional loans, charges may be applicable for Part Payment or Foreclosure basis Terms and Conditions of existing loans.
• For Consumer Durable loans there are no charges for Part Payment or Foreclosure (CD loans converted into PL- RMPL, there are no foreclosure charges applicable)

ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿನ ಲೋನ್‌ಗಳಿಗೆ ಫೋರ್‌ಕ್ಲೋಸರ್ ಮತ್ತು ಭಾಗಶಃ ಮುಂಗಡ ಪಾವತಿಗೆ ಲಾಕ್ ಇನ್ ಅವಧಿ ಎಷ್ಟು?

• ಕನಿಷ್ಠ ಒಂದು (1) EMI ಸೈಕಲ್ ಪೂರ್ಣಗೊಳಿಸದ ಹೊರತು ರೆಮಿಡಿಯಲ್ PL ಫೋರ್‌ಕ್ಲೋಸರ್‌‌ಗೆ ಅನುಮತಿ ಇಲ್ಲ ಮತ್ತು ಗ್ರಾಹಕರು ಅಂತಹ EMI ಅನ್ನು ನಿಖರವಾಗಿ ಪಾವತಿಸಿರಬೇಕು.
• ಇತರ ರೆಸಲ್ಯೂಶನ್ ಪ್ಲಾನ್‌ಗಳಲ್ಲಿ ಫೋರ್‌ಕ್ಲೋಸರ್ ಮತ್ತು ಭಾಗಶಃ ಮುಂಪಾವತಿಯ ಲಾಕ್ ಇನ್ ಅವಧಿಯನ್ನು ಆರಂಭಿಕ ಲೋನ್‌ಗಳಿಗಾಗಿ ಗ್ರಾಹಕರು ಸಹಿ ಮಾಡಿದ / ಅಂಗೀಕರಿಸಿದ ಲೋನ್ ಡಾಕ್ಯುಮೆಂಟ್‌ಗಳಿಂದ ನಿಯಂತ್ರಿಸಲಾಗಿದೆ.

ನಾನು ಅಂತಹ ಲೋನ್‌ಗಳಿಗೆ ಮುಂಗಡ EMI ಗಳನ್ನು ಅಥವಾ ಭಾಗಶಃ ಮುಂಗಡ ಪಾವತಿ ಮಾಡಬಹುದೇ?

• Covid-19 ಪ್ಯಾಂಡೆಮಿಕ್ ಕಾರಣದಿಂದಾಗಿ ಉಂಟಾದ ತಾತ್ಕಾಲಿಕ ಅಡೆತಡೆಯಿಂದಾಗಿ ನಿಮ್ಮ ಅನುಕೂಲಕ್ಕಾಗಿ ರೆಸಲ್ಯೂಶನ್ ಪ್ಲಾನನ್ನು ಸಕ್ರಿಯಗೊಳಿಸಲಾಗಿದೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಲೋನ್‌ನ ನಿಯಮಗಳ ಪ್ರಕಾರ ಯಾವುದೇ ಮುಂಗಡ EMI ಪಾವತಿ ಅಥವಾ ಭಾಗಶಃ ಮುಂಗಡ ಪಾವತಿ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ.

ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿ ಮೊರಟೋರಿಯಂಗೆ ಗರಿಷ್ಠ ಕಾಲಾವಧಿ ಎಷ್ಟು?

• ಕಂಪನಿಯ ಸ್ವಂತ ವಿವೇಚನೆಯಿಂದ 24 ತಿಂಗಳವರೆಗಿನ ಪರ್ಸನಲ್, ಗ್ರಾಹಕ ಮತ್ತು ಇತರ ಲೋನ್‌ಗಳಿಗೆ.

ರೆಸಲ್ಯೂಶನ್ ಪ್ಲಾನ್ ಅನುಷ್ಠಾನಗೊಂಡ ತಕ್ಷಣವೇ ನನ್ನ EMI ಆರಂಭವಾಗುತ್ತದೆಯೇ ಅಥವಾ ರೆಸಲ್ಯೂಶನ್ ಪ್ಲಾನ್ ನಂತರ ಮೊರಟೋರಿಯಂ ಅವಧಿ ಇರುತ್ತದೆಯೇ?

• ರೆಸಲ್ಯೂಶನ್ ಪ್ಲಾನ್ ಪ್ರಕಾರ ನಿಮಗೆ ಮೊರಟೋರಿಯಂ ವಿಸ್ತರಣೆ ಅನುಮೋದನೆಯಾಗದ ಹೊರತು ರೆಸಲ್ಯೂಶನ್ ಪ್ಲಾನ್ ಅನುಷ್ಠಾನಗೊಂಡ ತಕ್ಷಣ ನಿಮ್ಮ EMI ಪ್ರಾರಂಭವಾಗುತ್ತದೆ.

ರೆಸಲ್ಯೂಶನ್ ಪ್ಲಾನ್ ಕಾರಣದಿಂದ ಅಸ್ತಿತ್ವದಲ್ಲಿರುವ ನನ್ನ ಲೋನ್ ಆಫರ್ ಮೇಲೆ ಪರಿಣಾಮ ಉಂಟಾಗುತ್ತದೆಯೇ?

ಅಸ್ತಿತ್ವದಲ್ಲಿರುವ ಆಫರ್ ಅನ್ನು BFL ನ ಆಂತರಿಕ ಪಾಲಿಸಿಯ ಪ್ರಕಾರ ಪರಿಗಣಿಸಲಾಗುತ್ತದೆ.

ಒಂದು ವೇಳೆ, ನನ್ನ ಹಿಂದಿನ ಲೋನ್‌ಗಳು ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿ ಕವರ್ ಆಗುತ್ತಿದ್ದರೆ, ನಾನು ಹೊಸ ಲೋನ್‌ಗೆ ಅಪ್ಲೈ ಮಾಡಬಹುದೇ?

• BFL ನ ಆಂತರಿಕ ರಿಸ್ಕ್ ಪಾಲಿಸಿಯ ಆಧಾರದ ಮೇಲೆ ಕಾಲಕಾಲಕ್ಕೆ ಜನರೇಟ್ ಆಗುವ ಭವಿಷ್ಯದ ಆಫರ್‌ಗಳ ಮೇಲೆ ಇದು ಅವಲಂಬಿತವಾಗಿರುತ್ತದೆ.

ಅಸ್ತಿತ್ವದಲ್ಲಿರುವ ಲೋನ್ (CIP) ಮೇಲೆ EMI ಪಾವತಿಸುವಾಗ ರೆಸಲ್ಯೂಶನ್ ಪ್ಲಾನ್ ಅಡಿಯಲ್ಲಿ ಲೋನ್‌ಗಳನ್ನು ಹೇಗೆ ಪರಿಗಣಿಸಲಾಗುತ್ತದೆ?(CIP)?

• ಪ್ರಸ್ತುತ ಲೋನ್ ಪ್ರಕ್ರಿಯೆಯ ಪ್ರಕಾರ ಇದನ್ನು ಅದೇ ರೀತಿಯಲ್ಲಿ ನಿರ್ವಹಿಸಲಾಗುತ್ತದೆ. ಹೊಸ ಲೋನ್ ಬುಕಿಂಗ್ ನಂತರ ಕ್ಲಿಯರೆನ್ಸ್ ಕಾರಣದಿಂದ ಹಳೆಯ ಲೋನ್‌ಗೆ ಯಾವುದೇ ಹೆಚ್ಚುವರಿ EMI ಡೆಬಿಟ್ ಆದರೆ, ಅದನ್ನು ಹೊಸ ಲೋನ್ ಜೊತೆಗೆ ಸರಿ ಹೊಂದಿಸಲಾಗುತ್ತದೆ.

ನಾನು ರೆಸಲ್ಯೂಶನ್ ಪ್ಲಾನ್ ಆಫರ್ ಅನ್ನು ಆಯ್ಕೆ ಮಾಡಿದರೆ ನನ್ನ EMI ಕಾರ್ಡ್ ಬ್ಲಾಕ್ ಆಗುತ್ತದೆಯೇ?

• ಒಂದು ವೇಳೆ ನೀವು ರೆಸಲ್ಯೂಶನ್ ಪ್ಲಾನ್ ಅನುಷ್ಠಾನವನ್ನು ಆಯ್ಕೆ ಮಾಡಿದರೆ, ನಿಮ್ಮ EMI ಕಾರ್ಡ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ ನಿಮ್ಮ ಲೋನ್‌ನ ಮರುಪಾವತಿಯ ಆಧಾರದ ಮೇಲೆ ಅದನ್ನು ಅನ್‌ಬ್ಲಾಕ್ ಮಾಡಲಾಗುತ್ತದೆ.

RBL ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್ ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಬಜಾಜ್ ಫೈನಾನ್ಸ್ ಲಿಮಿಟೆಡ್‌ನ (BFL) ಎಲ್ಲಾ ಪ್ರಾಡಕ್ಟ್‌ಗಳಿಗೆ ಇದು ಅನ್ವಯವಾಗುತ್ತದೆಯೇ?

• ಇದು FD ಮೇಲಿನ ಲೋನ್, ಗೋಲ್ಡ್ ಲೋನ್ ಮತ್ತು ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಬಾಕಿ ಇರುವ ಲೋನ್‌ಗಳನ್ನು ಹೊರತುಪಡಿಸಿ BFL ನೊಂದಿಗೆ ಅಸ್ತಿತ್ವದಲ್ಲಿರುವ ಲೋನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಸ್ಪಷ್ಟತೆಗಾಗಿ, RBL ಬ್ಯಾಂಕ್ ಮತ್ತು BFL ಕೋ-ಬ್ರ್ಯಾಂಡೆಡ್ ಕ್ರೆಡಿಟ್ ಕಾರ್ಡ್‌ಗೆ ರೆಸಲ್ಯೂಶನ್ ಪ್ಲಾನ್ ಅನ್ವಯಿಸುವುದಿಲ್ಲ.

ರೆಸಲ್ಯೂಶನ್ ಪ್ಲಾನ್ ಅಪ್ಲಿಕೇಶನ್ ಸಂದರ್ಭದಲ್ಲಿ ನನ್ನ ಬಜಾಜ್ ಫಿನ್‌ಸರ್ವ್‌ EMI ನೆಟ್ವರ್ಕ್ ಕಾರ್ಡ್ ಯಾವಾಗ ಅನ್‌ಬ್ಲಾಕ್ ಆಗುತ್ತದೆ?

ರೆಸಲ್ಯೂಶನ್ ಪ್ಲಾನ್ ಮತ್ತು/ಅಥವಾ ಚಾಲ್ತಿಯಲ್ಲಿರುವ BFL ಪಾಲಿಸಿಯ ಪ್ರಕಾರ ಲೋನ್ ಅನ್ನು ಸಂಪೂರ್ಣವಾಗಿ ಮರುಪಾವತಿಸಿದ ನಂತರ.

ನಮ್ಮ ಸಾಮಾಜಿಕ ಚಾನಲ್‌ಗಳು

ಸಾಮಾಜಿಕ ಮಾಧ್ಯಮದಲ್ಲಿ ನಮ್ಮೊಂದಿಗೆ ಸಂಪರ್ಕಿಸಿ ಮತ್ತು ನಮ್ಮ ಇತ್ತೀಚಿನ ಸುದ್ದಿ ಮತ್ತು ಆಫರ್‌ಗಳಿಗಾಗಿ ಅಪ್‌ಡೇಟ್ ಆಗಿರಿ