ಬಜಾಜ್ ಫೈನಾನ್ಸ್ ಲಿಮಿಟೆಡ್ (BFL), ನೀಡುವ ವಿಸ್ತರಿತ ವಾರಂಟಿ ಪ್ರೋಗ್ರಾಮ್, 12/24/36 ತಿಂಗಳ ಅವಧಿಯಲ್ಲಿ ಅನಿರೀಕ್ಷಿತ ಉತ್ಪಾದನಾ ನ್ಯೂನತೆಗಳು ಅಥವಾ ಕಳಪೆ ಕೆಲಸ ಮಾಡುವಿಕೆಯಿಂದಾಗಿ ಉಂಟಾದ ಗ್ರಾಹಕರ ದಿನಬಳಕೆ ವಸ್ತುಗಳ ರಿಪೇರಿ/ ಬದಲಿಸುವ ವೆಚ್ಚವನ್ನು ಒಳಗೊಳ್ಳುತ್ತದೆ. ಮೇಲಿನ ಪ್ರಾಡಕ್ಟನ್ನು ಗ್ರೂಪ್ ಇನ್ಶೂರೆನ್ಸ್ ಸ್ಕೀಮ್ ಅಡಿಯಲ್ಲಿ ನೀಡಲಾಗುತ್ತದೆ. ಇದರಲ್ಲಿ BFL ಮಾಸ್ಟರ್ ಪಾಲಿಸಿ ಹೋಲ್ಡರ್ ಆಗಿದ್ದು, ಇನ್ಶೂರೆನ್ಸ್ ಕವರೇಜನ್ನು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (BAGIC) ಒದಗಿಸುತ್ತದೆ.
ಪ್ರಶ್ನೆಯ ನಿರ್ದಿಷ್ಟ ಪ್ರಾಡಕ್ಟ್ಗಾಗಿ ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅನ್ವಯಿಸುವ ಅವಧಿಯನ್ನು ಇದು ಉಲ್ಲೇಖಿಸುತ್ತದೆ. ಬಹುಪಾಲು ಗ್ರಾಹಕರ ಗೃಹಬಳಕೆ ವಸ್ತುಗಳಲ್ಲಿ, ಉತ್ಪಾದಕರ ಪ್ರಾಡಕ್ಟ್ ವಾರಂಟಿಯನ್ನು ಸಾಮಾನ್ಯವಾಗಿ 6 ತಿಂಗಳಿನಿಂದ 12 ತಿಂಗಳುಗಳವರೆಗೆ ನೀಡಲಾಗುತ್ತದೆ.
ಒಟ್ಟಾರೆ ಪ್ರಾಡಕ್ಟಿಗೆ ಹೋಲಿಸಿದರೆ ಒಂದು ನಿರ್ದಿಷ್ಟ ಪ್ರಾಡಕ್ಟಿನ ಕೆಲವು ಭಾಗಗಳು ಬೇರೆ ವಾರಂಟಿಯನ್ನು ಹೊಂದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಉದಾಹರಣೆಯಾಗಿ, ಕಂಪ್ರೆಸ್ಸರ್ (ರೆಫ್ರಿಜಿರೇಟರನ ಒಂದು ಭಾಗ) ಸಾಮಾನ್ಯ ವಾರಂಟಿ ಅವಧಿಯು 5 ವರ್ಷಗಳವರೆಗೆ ಇರುತ್ತದೆ, ಆದರೆ ರೆಫ್ರಿಜಿರೇಟರನ ಎಲ್ಲಾ ಇತರ ಭಾಗಗಳಿಗೆ ಸಾಮಾನ್ಯ ವಾರಂಟಿ ಅವಧಿಯು 1 ವರ್ಷವಾಗಿರುತ್ತದೆ. ಅಂತೆಯೇ, ಈ ಸಂದರ್ಭದಲ್ಲಿ 1 ವರ್ಷವನ್ನು ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿ ಎಂದು ಪರಿಗಣಿಸಲಾಗುತ್ತದೆ.
ಪ್ರತಿಯೊಂದು ಕ್ಲೈಮಿಗೆ ಕ್ಲೈಮ್ ಮೊತ್ತದ 10%, ಅಥವಾ ಕನಿಷ್ಠ ರೂ. 500 ಕಡಿತಗೊಳಿಸಲಾಗುತ್ತದೆ;
ವಿಮೆದಾರನ ಕಡೆಯಿಂದ ಉಂಟಾಗುವ ನಷ್ಟ ಅಥವಾ ಹಾನಿ ಉತ್ಪಾದಕರ ಸೂಚನೆಗಳಿಗೆ ಅನುಗುಣವಾಗಿ ಬಳಕೆಯಾಗಿಲ್ಲದಿರುವುದು.;
ಗ್ಯಾರಂಟಿ ಮತ್ತು/ ಅಥವಾ ವಾರಂಟಿ ಅಡಿಯಲ್ಲಿ ವಿಮಾದಾರನ ಆಸ್ತಿಯ ಉತ್ಪಾದಕರಿಗೆ ಅಥವಾ ಹಾನಿ;
ಇನ್ಶೂರೆನ್ಸ್ ಮಾಡಲಾದ ಯಾವುದೇ ಬಳಕೆಯಾಗುವ ಐಟಂನ ಬದಲಾವಣೆಯಲ್ಲಿ ಬ್ಯಾಟರಿಗಳು, ಬಲ್ಬಗಳು, ಪ್ಲಗ್ಗಳು, ಕೇಬಲ್ಗಳು, ರಿಬ್ಬನ್ಗಳು, ಪಟ್ಟಿಗಳು, ಟೇಪ್ಗಳು, ಫ್ಯೂಸ್ಗಳು, ಫಿಲ್ಟರ್ಗಳು, ಟೋನರ್ ಅಥವಾ ಸಾಫ್ಟವೇರ್ಗಳನ್ನು ಒಳಗೊಂಡಿದ್ದು, ಆದಕ್ಕೆ ಮಾತ್ರವೇ ಸೀಮಿತವಾಗಿಲ್ಲ.;
ಇನ್ಶೂರೆನ್ಸ್ ಮಾಡಿದ ಸ್ವತ್ತಿನ ಉತ್ಪಾದಕರಿಂದ ರಿಕಾಲ್ ಮಾಡಲು ಒಳಪಟ್ಟಿರುವ ಭಾಗಗಳ ವಿಫಲತೆ;
ಬೆಂಕಿ, ಕಳ್ಳತನ, ಸ್ಫೋಟ, ನೀರಿನ ಹಾನಿ, ದೇವರ ಕಾರ್ಯಗಳು ಇತ್ಯಾದಿಗಳನ್ನು ಒಳಗೊಂಡಂತೆ ಆದರೆ ಯಾವುದೇ ಬಾಹ್ಯ ಕಾರಣಗಳಿಂದ ಉಂಟಾದ ನಷ್ಟ ಅಥವಾ ಹಾನಿ..;
ಇನ್ಶೂರೆನ್ಸ್ ಮಾಡಿದ ಆಸ್ತಿ ಕಮರ್ಷಿಯಲ್, ಬಾಡಿಗೆ ಅಥವಾ ಲಾಭದ ಉತ್ಪಾದನೆಯ ಉದ್ದೇಶಗಳಿಗೆ ಒಳಪಟ್ಟಿರುತ್ತದೆ.;
ಮತ್ತು ಪಾಲಿಸಿಯ ಪ್ರಕಾರ ಇತರ ನಿರಾಕರಣೆಗಳು.
ವಿಸ್ತರಿತ ವಾರಂಟಿ ಪಾಲಿಸಿ ಖರೀದಿಸುವ ಮುಖ್ಯ ಕಾರಣವೆಂದರೆ ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿ ಮುಗಿದ ನಂತರ ಮೌಲ್ಯಯುತವಾದ ವಸ್ತುಗಳುಗಾಗಿ ಹೆಚ್ಚುವರಿ ರಕ್ಷಣೆಯನ್ನು ಹೊಂದುವುದು.
ಈ ಅವಧಿಯ ಗಡುವು ಮುಗಿದ ನಂತರ, ನಿರ್ದಿಷ್ಟ ಅಪ್ಲೈಯನ್ಸ್ ಹಾಳಾದರೆ ಅದಕ್ಕಾಗಿ ಗ್ರಾಹಕರು ಹೆಚ್ಚಿನ ಮೊತ್ತದ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆದಾಗ್ಯೂ, ನಮ್ಮ ವಿಸ್ತರಿತ ವಾರಂಟಿ ಪ್ರೋಗ್ರಾಮ್ ಸಹಾಯದಿಂದ, ಉತ್ಪಾದಕರ ವಾರಂಟಿ ಅವಧಿಯ ಮುಕ್ತಾಯದ ನಂತರವೂ ನಿಮ್ಮ ಬೆಲೆಬಾಳುವ ವಸ್ತುಗಳಿಗೆ ನೀವು 12/24/36 ತಿಂಗಳವರೆಗೆ ವಾರಂಟಿ ಪಡೆದುಕೊಳ್ಳಬಹುದು.
ಪಾಲಿಸಿ ಅವಧಿಯು ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿಯ ಮುಕ್ತಾಯದ ಸಮಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಮುಂದಿನ 12/24/36 ತಿಂಗಳುಗಳಿಗೆ (ಖರೀದಿಸಿದ ಆಯ್ಕೆಯನ್ನು ಅವಲಂಬಿಸಿ) ಜಾರಿಯಲ್ಲಿರುತ್ತದೆ.
ಉದಾಹರಣೆಗೆ, 01ನೇ ಜನವರಿ, 2014 ರಂದು ಖರೀದಿಸಲಾದ LCD TV ಗೆ 1 ವರ್ಷದ ಉತ್ಪಾದಕರ ಪ್ರಾಡಕ್ಟ್ ವಾರಂಟಿ ಅವಧಿಯೊಂದಿಗೆ 31ನೇ ಡಿಸೆಂಬರ್, 2014. ಕ್ಕೆ ಕೊನೆಗೊಳ್ಳುತ್ತದೆ, ಆಗ 1ನೇ ಜನವರಿ 2015 ರಂದು ವಿಸ್ತರಿತ ಪ್ರಾಡಕ್ಟ್ ವಾರಂಟಿ ಪ್ರಾರಂಭವಾಗುತ್ತದೆ , ಮತ್ತು ಮುಂದಿನ 12/24/36 ತಿಂಗಳುಗಳಿಗೆ ಜಾರಿಯಲ್ಲಿರುತ್ತದೆ ಮತ್ತು 31ನೇ ಡಿಸೆಂಬರ್, 2015 ಕ್ಕೆ ವಾರಂಟಿಯ ಅವಧಿ ಮುಗಿಯುತ್ತದೆ.
ನಿರ್ದಿಷ್ಟ ಗೃಹಬಳಕೆ ವಸ್ತುಗಳ ಇನ್ವಾಯ್ಸ್ ಬೆಲೆಯ ಮೊತ್ತಕ್ಕೆ ಸಮ್ ಇನ್ಶೂರ್ಡ್ ಮೊತ್ತ ಸಮನಾಗಿರುತ್ತದೆ. ನಿರ್ದಿಷ್ಟ ಅಪ್ಲೈಯನ್ಸಿಗೆ ಸಂಬಂಧಿಸಿದಂತೆ ಎಲ್ಲಾ ಕ್ಲೈಮ್ಗಳಿಗಾಗಿ ವಿಸ್ತರಿತ ವಾರಂಟಿ ಪಾಲಿಸಿ ಅವಧಿಯಲ್ಲಿ ವಿಮಾದಾರನ ಗರಿಷ್ಠ ಹೊಣೆಗಾರಿಕೆಯು ಸಮ್ ಇನ್ಶೂರ್ಡ್ ಮೊತ್ತಕ್ಕೆ ಸೀಮಿತವಾಗಿರುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ನಿರ್ದಿಷ್ಟ ಗೃಹಬಳಕೆ ವಸ್ತುಗಳ ಮಾಲೀಕತ್ವದಲ್ಲಿ ಬದಲಾವಣೆಯು ಇದ್ದಲ್ಲಿ ವಿಸ್ತರಿತ ವಾರಂಟಿ ಪಾಲಿಸಿ ಮುಕ್ತಾಯಗೊಳ್ಳುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಇದಲ್ಲದೇ, ಪಾಲಿಸಿಯ ಅವಧಿ ಮುಗಿದ ನಂತರ ಪಾಲಿಸಿಯನ್ನು ನವೀಕರಿಸಲಾಗುವುದಿಲ್ಲ.
ಗ್ರಾಹಕರು ವಿಸ್ತರಿತ ವಾರಂಟಿ ಪ್ರೋಗ್ರಾಮನ್ನು ಆಯ್ಕೆ ಮಾಡುವ ಆಸಕ್ತಿ ಹೊಂದಿದ್ದರೆ, ಅವರು ವಿಸ್ತರಿತ ವಾರಂಟಿ ಪ್ರಪೋಸಲ್ ಫಾರ್ಮನಲ್ಲಿ ಪ್ರಸ್ತಾವದ ರೂಪದಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕು ಮತ್ತು ಅಗತ್ಯವಿರುವ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕು. ಅನಂತರ ಗ್ರಾಹಕರಿಗೆ ವಿಸ್ತರಿತ ವಾರಂಟಿ ಕಿಟ್ ನೀಡಲಾಗುವುದು, ಇದು ಪಾಲಿಸಿ ವರ್ಡಿಂಗ್ಸ್ ಒಳಗೊಂಡಿರುತ್ತದೆ ಮತ್ತು ಪ್ರಪೋಸಲ್ ಫಾರ್ಮನಲ್ಲಿ ತುಂಬಿದ ಕಾರ್ಬೊನೇಟೆಡ್ ಆವೃತ್ತಿಯಾಗಿದೆ. ವಿಸ್ತರಿತ ವಾರಂಟಿ ಪಾಲಿಸಿ ಖರೀದಿಸಿದ ಕೆಲವು ದಿನಗಳೊಳಗೆ, BAGIC ಗ್ರಾಹಕರ ಮೇಲಿಂಗ್ ವಿಳಾಸಕ್ಕೆ (ಪ್ರಪೋಸಲ್ ಫಾರಂನಲ್ಲಿ ತಿಳಿಸಲಾದಂತೆ) ಪಾಲಿಸಿ ಶೆಡ್ಯೂಲನ್ನು ರವಾನಿಸುತ್ತದೆ. ಪಾಲಿಸಿಯ ಶೆಡ್ಯೂಲ್ ಗ್ರಾಹಕರ ವಿಸ್ತರಿತ ವಾರಂಟಿ ಪಾಲಿಸಿಗೆ ಸಂಬಂಧಿಸಿದಂತೆ ಇನ್ಶೂರೆನ್ಸ್ ಮಾಡಲಾದ ವಸ್ತುವಿನ ವಿವರಗಳು, ಸಮ್ ಇನ್ಶೂರ್ಡ್, ಪ್ರೀಮಿಯಂ ಮೊತ್ತ ಇತ್ಯಾದಿಗಳಂತಹ ಅಗತ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ವಿಸ್ತರಿತ ವಾರಂಟಿ ಪಾಲಿಸಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ, ಗ್ರಾಹಕರು BAGIC ಟೋಲ್ ಫ್ರೀ ಹೆಲ್ಪ್ ಲೈನ್ ನಂಬರ್ 1800-209-1021 (ಎಲ್ಲಾ ಮೊಬೈಲ್ ಮತ್ತು ಲ್ಯಾಂಡ್ ಲೈನ್ಗಳಿಂದ ಉಚಿತ ಕರೆಗಳು) ಸಂಪರ್ಕಿಸಬಹುದು. 9 AM ನಿಂದ 9 PM, ವರೆಗೆ, ವಾರದಲ್ಲಿ 7 ದಿನಗಳು.
ಗ್ರಾಹಕರು ಇಮೇಲ್ ಮೂಲಕ ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು - wecare@bajajfinserv.in. ಸಮಗ್ರ ಪ್ರತಿಕ್ರಿಯೆಗಾಗಿ ಎಲ್ಲಾ ವಿಚಾರಣೆಗಳನ್ನು BAGIC ಕಸ್ಟಮರ್ ಕೇರಿಗೆ ಕಳುಹಿಸಲಾಗುವುದು.
ವಿಸ್ತರಿತ ವಾರಂಟಿ ಪಡೆಯಲು, ಗ್ರಾಹಕರು ನಮಗೆ ಟೋಲ್ ಫ್ರೀ ನಂಬರ್ 800-209-1021 ಗೆ ಕರೆ ಮಾಡಬೇಕಾಗುತ್ತದೆ. ಆಗ ಗ್ರಾಹಕರನ್ನು ಉತ್ಪಾದಕರ ಅಧಿಕೃತ ಸರ್ವಿಸ್ ಸೆಂಟರಿಗೆ ಕಳುಹಿಸಲಾಗುವುದು.
ಇಲ್ಲ, ಯಾವುದೇ ಕ್ಲೈಮ್ಗಳ ನಂಬರ್ನ ಮಿತಿಯಿಲ್ಲ. ಕಸ್ಟಮರ್ ಸರ್ವಿಸ್ ಪ್ರತಿನಿಧಿಯು ಕ್ಲೈಮನ್ನು ಪರಿಶೀಲಿಸಿದ ನಂತರ, ಪಾಲಿಸಿ ನಿಯಮ ಮತ್ತು ಷರತ್ತುಗಳ ಪ್ರಕಾರ ಗ್ರಾಹಕರಿಗೆ ರಿಯಂಬರ್ಸ್ ಮಾಡಲಾಗುತ್ತದೆ.