image

ಇಂಜಿನಿಯರ್ ಲೋನ್‌ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಆಗಾಗ ಕೇಳುವ ಪ್ರಶ್ನೆಗಳು

ನಾನು ಪಡೆಯಬಹುದಾದ ಗರಿಷ್ಠ ಮೊತ್ತವೆಷ್ಟು?

ಬಜಾಜ್ ಫಿನ್‌ಸರ್ವ್‌ ಜತೆಗೆ ನೀವು ರೂ. 3 ಲಕ್ಷದಿಂದ ರೂ. 30 ಲಕ್ಷದವರೆಗೆ ಇಂಜಿನಿಯರ್ ಲೋನ್ ಪಡೆಯಬಹುದು.

ನನ್ನ ಲೋನ್‌ ಮರುಪಾವತಿ ಮಾಡುವುದು ಹೇಗೆ?

ನೀವು ECS ಮೂಲಕ ನಿಮ್ಮ ಲೋನನ್ನು ಮರುಪಾವತಿ ಮಾಡಬಹುದು.

ನೀವು ಮರುಪಾವತಿ ಮಾಡಲು ಎಲೆಕ್ಟ್ರಾನಿಕ್ ಕ್ಲಿಯರಿಂಗ್ಸರ್ವಿಸ್ (ECS) ಸಹ ಬಳಸಬಹುದು. ECS ಮೂಲಕ EMI ಮೊತ್ತವು ನಿಮ್ಮ ಬ್ಯಾಂಕ್ ಅಕೌಂಟ್‌ನಿಂದ ನಿಮ್ ಲೋನ್ ಅಕೌಂಟಿಗೆ ಎಲೆಕ್ಟ್ರಾನಿಕ್ ಮಾದರಿಯಲ್ಲಿ ವರ್ಗಾವಣೆಯಾಗುತ್ತದೆ.

ಇಂತಹ ಪಾವತಿಗಳನ್ನು ಮಾಡಲು, ನೀವು ಬಜಾಜ್ ಫಿನ್‌ಸರ್ವ್‌ನಿಂದ ಡೆಬಿಟ್ ಅಥವಾ ಕ್ರೆಡಿಟ್‌‌ಗಳನ್ನು ಅನುಮತಿಸಲು ನಿಮ್ಮ ಬ್ಯಾಂಕ್‌ಗೆ ಅಧಿಕಾರ ನೀಡಬೇಕು.

ಎಂಜಿನಿಯರ್ ಲೋನ್‌ಗಳಿಗೆ ಅವಧಿಯ ವ್ಯಾಪ್ತಿಯೆಷ್ಟು?

ಬಜಾಜ್ ಫಿನ್‌ಸರ್ವ್‌ 60 ತಿಂಗಳುಗಳವರೆಗೆ ಹೊಂದಿಕೊಳ್ಳುವ ಲೋನ್ ಮರುಪಾವತಿಯ ಅವಧಿಯನ್ನು ಒದಗಿಸುತ್ತದೆ.

ನಾನು ಹೇಗೆ ಪ್ರಾರಂಭಿಸಬೇಕು?

ನೀವು www.bajajfinserv.in ನಲ್ಲಿ ಅಪ್ಲೈ ಮಾಡುವ ಮೂಲಕ ಲೋನನ್ನು ಪಡೆಯಬಹುದು

ಸರಳವಾಗಿ ಇಲ್ಲಿ ಸಣ್ಣ ಫಾರ್ಮ್ ಭರ್ತಿ ಮಾಡಿ ಅಥವಾ ER ಎಂದು 9773633633 ಗೆ SMS ಮಾಡಿ, ಮತ್ತು ನಮ್ಮ ಪ್ರತಿನಿಧಿ ಆದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತಾರೆ.''

ಪ್ರಕ್ರಿಯೆಯು ಸರಳವಾಗಿದೆ ಮತ್ತು ಇದನ್ನು 4 ಸರಳ ಹಂತಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.

ನಾವು ಮನೆಬಾಗಿಲಿಗೇ ಸೇವೆ ನೀಡುತ್ತೇವೆ. ನಮಗೆ 1800 209 4151ಯಲ್ಲಿ ಕರೆ ಮಾಡಿ.. ನಾವು ಆದಷ್ಟು ಬೇಗ ನಿಮ್ಮನ್ನು ಸಂಪರ್ಕಿಸುತ್ತೇವೆ.

ನನ್ನ ಅಸ್ತಿತ್ವದಲ್ಲಿರುವ ಲೋನನ್ನು ಲೈನ್ ಆಫ್ ಕ್ರೆಡಿಟ್‌ ಆಗಿ ಹೇಗೆ ಪರಿವರ್ತಿಸಬೇಕು?

ನೀವು ನಿಮ್ಮ ಈಗಿರುವ ಲೋನನ್ನು ಲೈನ್ ಆಫ್ ಕ್ರೆಡಿಟ್ ಆಗಿ ಸುಲಭವಾಗಿ ಪರಿವರ್ತಿಸಿಕೊಳ್ಳಬಹುದು.

ತಿದ್ದುಪಡಿಯಾದ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ನೀವು ಷರತ್ತುಗಳಿಗೆ ಒಪ್ಪಿದಾಗ, ನಿಮ್ಮ ಮೊಬೈಲ್ ನಂಬರ್ ನಿಮ್ಮ ಬ್ಯಾಂಕ್ ಅಕೌಂಟ್ ನಂಬರನ್ನು ನಮಗೆ ಒದಗಿಸಿ.

ಎಲ್ಲಾ ಸಂಬಂಧಿತ ಮಾಹಿತಿಯೊಂದಿಗೆ ನೀವು ಒಂದು ವೆಲ್‌ಕಮ್ ಕಿಟ್ ಅನ್ನು ಪಡೆಯುತ್ತೀರಿ.

ನಂತರ ನೀವು ನಿಮ್ಮ ಬ್ಯಾಂಕ್ ಅಕೌಂಟ್ ಮೂಲಕ ಭಾಗಶಃ ಪಾವತಿ ಮಾಡಬಹುದು.

ನಿಮ್ಮ ಕ್ರೆಡಿಟ್ ಪ್ರಮಾಣವನ್ನು ಕಡಿಮೆ ಮಾಡಲು, ನೀವು ನಮ್ಮ ಗ್ರಾಹಕ ಪೋರ್ಟಲ್‌ನಲ್ಲಿ ವಿನಂತಿ ಮಾಡಬಹುದು.

ಲೋನ್‌ ಮೊತ್ತವನ್ನು ನಿಮಗೆ ನೀಡಿದ ನಂತರ, ನೀವು ನಮ್ಮಿಂದ ಸ್ವೀಕೃತಿಗಳ ಸರಣಿಯನ್ನು ಪಡೆಯುತ್ತೀರಿ.

ಬಡ್ಡಿ ದರವು ಫಿಕ್ಸೆಡ್ ಆಗಿದೆಯೇ ಅಥವಾ ಫ್ಲೋಟಿಂಗ್ ಆಗಿದೆಯೇ?

ಎರಡು ರೀತಿಯ ಬಡ್ಡಿದರಗಳು ಇವೆ - ಸ್ಥಿರ ಬಡ್ಡಿದರ ಮತ್ತು ಹೊಂದಿಕೊಳ್ಳುವ ಬಡ್ಡಿ ದರ.

ಫಿಕ್ಸೆಡ್ ದರಗಳು ಅವಧಿಯಲ್ಲಿ ಬದಲಾಗುವುದಿಲ್ಲ.

ಬಡ್ಡಿದರಗಳು ಅತ್ಯುತ್ತಮ ದರದ ಬದಲಾವಣೆಯೊಂದಿಗೆ ಬದಲಾಗುತ್ತವೆ.

ಬಜಾಜ್ ಫಿನ್‌ಸರ್ವ್‌ ಫಿಕ್ಸೆಡ್ ಬಡ್ಡಿ ದರದಲ್ಲಿ ಇಂಜಿನಿಯರ್ ಲೋನನ್ನು ನೀಡುತ್ತದೆ.

ಲೋನ್ ಪ್ರಕ್ರಿಯೆಯಲ್ಲಿ ನನಗೆ ಯಾವ ರೀತಿಯ ಫೀಗಳು ಮತ್ತು ಶುಲ್ಕಗಳನ್ನು ವಿಧಿಸಲಾಗುತ್ತದೆ?

ಲೋನ್‌ ಮೇಲೆ ವಿಧಿಸಲಾಗುವ ವಿವಿಧ ರೀತಿಯ ಫೀಗಳು ಮತ್ತು ಶುಲ್ಕಗಳು (ಅನ್ವಯಿಸಿದರೆ ಮಾತ್ರ) ಹೀಗಿವೆ

ಬಿಸಿನೆಸ್ ಮತ್ತು ಪ್ರೊಫೆಶನಲ್ ಲೋನಿಗೆ ಅನ್ವಯವಾಗುವ ಬಡ್ಡಿ ದರವು ಕ್ರೆಡಿಟ್ ಸ್ಕೋರ್ ಆಧರಿಸಿ ಬದಲಾಗುತ್ತದೆ, ಆ ಕ್ರೆಡಿಟ್ ಸ್ಕೋರ್ ಯಾವ ಮಿತಿಯಿಲ್ಲದೇ ಹಲವಾರು ವೇರಿಯೇಬಲ್‌ಗಳಾದ ಗ್ರಾಹಕ ವಿವರಗಳು, ಲೋನ್ ಪಾವತಿಸದೇ ಇರುವಿಕೆ, ಮತ್ತು ಇನ್ನೂ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ವೇರಿಯೇಬಲ್‌ಗಳನ್ನು ಕಂಪನಿ ಸೆಗ್ಮೆಂಟೇಶನ್ ಅನಲಿಸಿಸ್‌ ಮೆಟೀರಿಯಲ್ ರಿಸ್ಕ್ ಎಂದು ಪರಿಗಣಿಸಲಾಗುತ್ತದೆ. ಈ ಮೇಲಿನದ್ದು ಹಿಂದಿನ ಪೋರ್ಟ್‌ಫೋಲಿಯೋ ಮತ್ತು ಅನುಭವ ಆಧರಿಸಿ ಆಗಾಗ ಬದಲಾಗುವಂತಹದ್ದು ಮತ್ತು ಕಾಲಕಾಲಕ್ಕೆ ಮಾರ್ಪಡುವಂತಹದ್ದು ಆಗಿರುತ್ತದೆ, ಆದ್ದರಿಂದ ಬದಲಾವಣೆಗೆ ಒಳಪಡುತ್ತದೆ.

BPI (ವ್ಯತ್ಯಾಸದ ಅವಧಿಯ ಬಡ್ಡಿ) ಯು ಪ್ರತಿ ತಿಂಗಳ 15 ರ ನಂತರ ವಿತರಣೆಯಾಗುವ ಸಂದರ್ಭದಲ್ಲಿ ಅನ್ವಯವಾಗುತ್ತದೆ. BPI ಅನ್ನು ವಿತರಣೆಯ ದಿನಾಂಕದಿಂದ ತಿಂಗಳ ಉಳಿದ ದಿನಗಳಿಗೆ ಪ್ರೋ-ರೇಟಾ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಇದು ಏಕೆಂದರೆ EMI ಗಳು ಲೋನ್ ಬುಕಿಂಗಿನ ಎರಡನೇ ತಿಂಗಳಿಂದ ಆರಂಭವಾಗುತ್ತವೆ. 1 ನೇ ತಿಂಗಳನ್ನು ಉಚಿತ ಅವಧಿ ಎಂದು ಪರಿಗಣಿಸಲಾಗುತ್ತದೆ, ಆಗ ಗ್ರಾಹಕರಿಗೆ ಯಾವುದೇ ಬಡ್ಡಿ ಅಥವಾ EMI ಗಳನ್ನು ವಿಧಿಸಲಾಗುವುದಿಲ್ಲ.

ಪ್ರಕ್ರಿಯೆ ಶುಲ್ಕ ಗ್ರಾಹಕರ ಲೋನ್ ಅಪ್ಲಿಕೇಶನ್ನಿನ ಆರಂಭಿಕ ಹಂತದಿಂದ ಕೊನೆಯ ಹಂತದವರೆಗಿನ ಪ್ರಕ್ರಿಯೆಗಾಗಿ ವಿಧಿಸುವ ಫೀಸ್ ಶುಲ್ಕದ ಮೊತ್ತ.

ಫೋರ್‌‌ಕ್ಲೋಸರ್ ಶುಲ್ಕಗಳು ಲೋನ್ ಅವಧಿ ಪೂರೈಸುವ ಮುನ್ನವೇ ಲೋನ್ ಅಕೌಂಟನ್ನು ಮುಚ್ಚಲು ಬಯಸುವ ಗ್ರಾಹಕರಿಂದ ಪಡೆಯಲಾಗುವ ಶುಲ್ಕ.

ಸ್ಟ್ಯಾಂಪ್ ಡ್ಯೂಟಿ ರಾಜ್ಯ ಸರ್ಕಾರ ಸೂಚಿಸಿದ ಮೊತ್ತದಂತೆ ಗ್ರಾಹಕನಿಗೆ ವಿಧಿಸುವ ಸರ್ಕಾರದ ಶುಲ್ಕಗಳು. ದಯವಿಟ್ಟು ಗಮನಿಸಿ ಸ್ಟ್ಯಾಂಪ್ ಡ್ಯೂಟಿ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ ಆಗುವುದು.

ಸರಕು ಮತ್ತು ಸೇವಾ ತೆರಿಗೆ ಸರ್ಕಾರವು ಸೂಚಿಸಿದ ಹಾಗೆ ಮತ್ತು ಅನ್ವಯಿಸುವ ಹಾಗೆ.

ಬೌನ್ಸ್ ಶುಲ್ಕಗಳು ಗ್ರಾಹಕ ನೀಡಿದ PDC ಗಳಿಗೆ ಬ್ಯಾಂಕಿನಿಂದ ಮನ್ನಣೆ ಸಿಗದಿದ್ದಾಗ, ECS ಅಥವಾ ಯಾವುದೇ ಇತರೆ ಮರುಪಾವತಿ ವಿಧಾನ ವಾಪಸ್ಸಾದಾಗ ಅಥವಾ ಮನ್ನಣೆ ಸಿಗದಿದ್ದಾಗ ದಂಡವಾಗಿ ವಿಧಿಸುವ ಶುಲ್ಕದ ಮೊತ್ತ.

ದಂಡದ ಮೇಲಿನ ಬಡ್ಡಿ ತಿಂಗಳ ಕಂತು ಪಾವತಿಸುವಲ್ಲಿ ವಿಳಂಬವಾದರೆ ಸಾಲಗಾರನು ಸಾಲದಾತನಿಗೆ ದಂಡದ ರೂಪದಲ್ಲಿ ನೀಡುವ ಹೆಚ್ಚುವರಿ ಬಡ್ಡಿಯ ಹಣ.

ಮುಂಪಾವತಿ ಶುಲ್ಕ ನಿಗದಿತ ಮರುಪಾವತಿಯ ದಿನಾಂಕಕ್ಕೆ ಮೊದಲೇ ಲೋನನ್ನು ಭಾಗಶಃ ಅಥವಾ ಪೂರ್ತಿಯಾಗಿ ಅಸಲಿನ ಬಡ್ಡಿಯನ್ನೂ ಸೇರಿಸಿ ಅಸಲು ಮೊತ್ತವನ್ನು ಮರುಪಾವತಿ ಮಾಡಿದಲ್ಲಿ ಈ ದಂಡವನ್ನು ವಿಧಿಸಲಾಗುವುದು.