ಎಂಜಿನಿಯರ್ ಲೋನ್‌ ಅರ್ಹತಾ ಮಾನದಂಡ

ನಿಮ್ಮ ವೈವಿಧ್ಯಮಯ ಹಣಕಾಸು ಅಗತ್ಯಗಳನ್ನು ಪೂರೈಸಲು ನೆರವಾಗಲೆಂದು ಬಜಾಜ್ ಫಿನ್‌ಸರ್ವ್ ₹ 2 ಕೋಟಿ ವರೆಗೆ ಆಸ್ತಿಯ ಮೇಲಿನ ಎಂಜಿನಿಯರ್ ಲೋನನ್ನು ನಿಮಗೆ ಒದಗಿಸುತ್ತದೆ. ಕಡಿಮೆ engineer loan ಅರ್ಹತಾ ಮಾನದಂಡಗಳು ಮತ್ತು ದಾಖಲೆಪತ್ರಗಳೊಂದಿಗೆ, ನೀವು ಸುಲಭವಾಗಿ ಈ ಲೋನಿಗೆ ಅಪ್ಲೈ ಮಾಡಬಹುದು. ಈ ಸುರಕ್ಷಿತ ಲೋನ್‌ಗಳು ಅಂತಿಮ ಬಳಕೆಗೆ ಯಾವುದೇ ನಿರ್ಬಂಧವಿಲ್ಲದೆ ಬರುವುದರಿಂದ, ನೀವು ಅವುಗಳನ್ನು ವೈಯಕ್ತಿಕ ಮತ್ತು ವೃತ್ತಿಪರ ಫಂಡಿನ ಅಗತ್ಯಗಳಿಗಾಗಿ ಪಡೆಯಬಹುದು.

ಕೆಳಗೆ ತಿಳಿಸಲಾದ ಅರ್ಹತಾ ಮಾನದಂಡ ಪೂರೈಸುವ ಮೂಲಕ ಎಂಜಿನಿಯರ್‌‌‌ಗಳಿಗಾಗಿನ ಈ ಹಣಕಾಸಿಗೆ ಅಪ್ಲೈ ಮಾಡಿ.

ಎಂಜಿನಿಯರ್‌ಗಳಿಗೆ ಆಸ್ತಿಯ ಮೇಲೆ ಲೋನ್ - ಅರ್ಹತಾ ಮಾನದಂಡಗಳು

ಬಜಾಜ್ ಫಿನ್‌ಸರ್ವ್ ಎಂಜಿನಿಯರ್ ಲೋನನ್ನು ಪಡೆಯಲು ನಿಮ್ಮ ವಯಸ್ಸು, ರಾಷ್ಟ್ರೀಯತೆ, ಆದಾಯ ಮೂಲ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಅರ್ಹತೆಯನ್ನು ನೀವು ಪೂರೈಸಬೇಕು.

ವಿದ್ಯಾರ್ಹತೆ

ನೀವು -

 • ಮಾನ್ಯತೆ ಪಡೆದ ಎಂಜಿನಿಯರಿಂಗ್ ಪದವಿ ಹೊಂದಿರಬೇಕು.
 • ಲೋನ್‌ಗೆ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಕೆಲಸದಲ್ಲಿರಬೇಕು.

ಉದ್ಯೋಗ ಸ್ಥಿತಿ

ಯಾವ ಬಗೆಯ ಕೆಲಸದಲ್ಲಿರುವಿರಿ ಎನ್ನುವುದರ ಪ್ರಕಾರ ಅರ್ಹತೆ ಈ ಕೆಳಗಿನಂತಿರುತ್ತದೆ –

 • ಸ್ವಯಂ-ಉದ್ಯೋಗಿ ಎಂಜಿನಿಯರ್ – ಅಪ್ಲಿಕೇಶನ್ ದಿನಾಂಕದಿಂದ ಕನಿಷ್ಠ ಪಕ್ಷ 3 ವರ್ಷಗಳ ಬಿಸಿನೆಸ್ ಹಿನ್ನೆಲೆಯನ್ನು ಹೊಂದಿರಲೇಬೇಕು.
 • ಸಂಬಳ ಪಡೆಯುವ ಎಂಜಿನಿಯರ್ – ಸಲಹೆಗಾರನಾಗಿ ಅಥವಾ ಅಥವಾ ಇತರೆ ಯಾವುದೇ ಉದ್ಯೋಗದ ಹುದ್ದೆಯೊಂದಿಗೆ ಕನಿಷ್ಠ ಪಕ್ಷ 5 ವರ್ಷಗಳು ಕೆಲಸ ಮಾಡಿದ ಅನುಭವ.

ವಯಸ್ಸು

ಎಂಜಿನಿಯರ್‌‌ಗಳಿಗೆ ಪರ್ಸನಲ್ ಹಣಕಾಸು ಪಡೆದುಕೊಳ್ಳಲು ಎಂಜಿನಿಯರ್ 25 ಮತ್ತು 65 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.

ಆಸ್ತಿಯ ಮೇಲೆ ಎಂಜಿನಿಯರ್ ಲೋನ್ - ಬೇಕಾಗಿರುವ ದಾಖಲೆಪತ್ರಗಳು

ಎಂಜಿನಿಯರ್ ಲೋನ್ ಅರ್ಹತಾ ಮಾನದಂಡವನ್ನು ಪೂರೈಸುವುದರೊಂದಿಗೆ, ಒಬ್ಬ ಎಂಜಿನಿಯರ್ ಕ್ಲೇಮ್ ಅನ್ನು ಬೆಂಬಲಿಸುವ ಡಾಕ್ಯುಮೆಂಟ್‌‌ಗಳೊಂದಿಗೆ ಅರ್ಹತೆಯನ್ನು ಮಾನ್ಯವಾಗುವಂತೆ ಮಾಡಬೇಕು. ಅವುಗಳು ಈ ರೀತಿಯಾಗಿವೆ –

 • ಗುರುತಿನ ಪುರಾವೆ.
 • ವಿಳಾಸದ ಪುರಾವೆ.
 • ಉದ್ಯೋಗದ ಪುರಾವೆ.
 • ಮಾರ್ಕ್ ಶೀಟ್ ಜೊತೆಗೆ ಪದವಿ ಪ್ರಮಾಣಪತ್ರ.
 • ತೆರಿಗೆದಾರರಾಗಿ ಸರ್ಕಾರದೊಂದಿಗೆ ನಿಮ್ಮ ನೋಂದಣಿಗೆ ಪುರಾವೆಯಾಗಿ PAN ಕಾರ್ಡ್.
 • ಅಡಮಾನದ ದಾಖಲೆಗಳು.

ಅದರ ಜತೆಗೆ, ಒಂದು ವೇಳೆ ನೀವು ಸಂಬಳ ಪಡೆಯುವ ಎಂಜಿನಿಯರ್ ಆಗಿದ್ದರೆ ನೀವು ಈ ಡಾಕ್ಯುಮೆಂಟ್‌‌ಗಳನ್ನು ಕೂಡ ಹೊಂದಿರಬೇಕು –
 

 • ಅವಶ್ಯಕತೆ ಇದ್ದಲ್ಲಿ ಸಲಹೆಗಾರ ಎಂಜಿನಿಯರ್‌ಗೆ ಉದ್ಯೋಗದ ಪತ್ರ ಬೇಕಾಗಬಹುದು.
 • ಇತ್ತೀಚಿನ ಸಂಬಳದ ಸ್ಲಿಪ್‌ಗಳು.

ಸ್ವಯಂ ಉದ್ಯೋಗಿ ಎಂಜಿನಿಯರ್‌ಗಳಿಗೆ, ಅಗತ್ಯವಿರುವ ಹೆಚ್ಚುವರಿ ದಾಖಲೆಗಳು ಇಂತಿವೆ –
 

 • ಕಂಪನಿಯ ನೋಂದಣಿ ದಾಖಲೆ ಪತ್ರಗಳು.
 • ಅನುಭವದ ಪ್ರಮಾಣಪತ್ರ.
 • 3ವರ್ಷ ಹಳೆಯ ವ್ಯಾಪಾರ ಎಂಬುದಕ್ಕೆ ಬೆಂಬಲಿತ ದಾಖಲೆಗಳು.

ಅರ್ಜಿಗೆ ಅಗತ್ಯವಾದ ಎಂಜಿನಿಯರ್ ಲೋನ್‌ ದಾಖಲೆಗಳ ಪ್ರಾಥಮಿಕ ಪಟ್ಟಿಯನ್ನು ಇದು ಮುಕ್ತಾಯಗೊಳಿಸುತ್ತದೆ. ಅಗತ್ಯವಿದ್ದಾಗ ಸಾಲದ ಅನುಮೋದನೆಗೆ ಕೆಲವು ಹೆಚ್ಚುವರಿ ದಾಖಲೆಗಳನ್ನು ಒದಗಿಸಲು ನಿಮ್ಮನ್ನು ಕೇಳಬಹುದು.

ಎಂಜಿನಿಯರ್ ಲೋನ್‌ನ ಅರ್ಹತಾ ಮಾನದಂಡಗಳು ಮತ್ತು ಅವಶ್ಯಕತೆ ಇರುವ ದಾಖಲೆಗಳ ಕುರಿತು ಈ ವಿವರದೊಂದಿಗೆ, ನೀವು ಎಂಜಿನಿಯರ್‌ಗೆ ಆಸ್ತಿಯ ಮೇಲೆ ಲೋನ್‌ಗೆ ಅರ್ಜಿ ಸಲ್ಲಿಸಲು ಮುಂದುವರಿಯಬಹುದು. ಅಪ್ಲಿಕೇಶನ್ ವಿಧಾನವನ್ನು ಸುಲಭವಾಗಿ ಪೂರ್ಣಗೊಳಿಸಲು ಇಂಜಿನಿಯರ್ ಲೋನ್‌ಗಾಗಿ ಅಪ್ಲೈ ಮಾಡುವುದು ಹೇಗೆ ಎಂಬುದರ ಹಂತಗಳನ್ನು ತಿಳಿಯಿರಿ.

ಅಭಿನಂದನೆಗಳು! ನೀವು ಮುಂಚಿತ-ಅನುಮೋದಿತ ಪರ್ಸನಲ್ ಲೋನ್/ಟಾಪ್-ಅಪ್ ಆಫರ್ ಹೊಂದಿದ್ದೀರಿ.