ಆ್ಯಪ್‌ ಡೌನ್ಲೋಡ್ ಮಾಡಿ ಫೋಟೋ

ಬಜಾಜ್ ಫಿನ್‌ಸರ್ವ್‌ ಅಪ್ಲಿಕೇಶನ್

ಕ್ರೆಡಿಟ್ ಕಾರ್ಡ್

ಕ್ರೆಡಿಟ್ ಕಾರ್ಡ್ ಪಾವತಿ : ಬಿಲ್ ಡೆಸ್ಕ್

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ

ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಹಲವು ಪಾವತಿ ವಿಧಾನಗಳ ಮೂಲಕ ಸುಲಭವಾಗಿ ಮಾಡಿ. ಕಡೆಯ ದಿನಾಂಕದ ಒಳಗೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‍ಗಳನ್ನು NEFT, NACH, ನೆಟ್ ಬ್ಯಾಂಕಿಂಗ್, RBL MyCard ಆ್ಯಪ್ ಇಲ್ಲವೇ ಬಿಲ್ ಡೆಸ್ಕ್ ಮೂಲಕ ಸುಳುವಾಗಿ ಮಾಡಿ.
ಆನ್‌ಲೈನ್ ಕ್ರೆಡಿಟ್ ಕಾರ್ಡ್ ಪಾವತಿ ಸೌಲಭ್ಯದಿಂದ, ಯಾವಾಗಲಾದರೂ ಎಲ್ಲಿಯಾದರೂ ಬಾಕಿ ಮೊತ್ತವನ್ನು ಕಟ್ಟಬಹುದು. ನಿಮಗೆ ಬೇಕಾಗಿರುವುದು ಕೆಲಸ ಮಾಡುತ್ತಿರುವ ಇಂಟರ್ನೆಟ್ ಸಂಪರ್ಕ. ಬಾಕಿ ಮೊತ್ತವನ್ನು ಕೂಡಲೆ ಪಾವತಿಸಲು, ನೀವು ಇದಕ್ಕೆಂದೇ ಮೀಸಲಾದ ಮೊಬೈಲ್ ಅಪ್ಲಿಕೇಶನ್, ನೆಟ್ ಬ್ಯಾಂಕಿಂಗ್ ಇತ್ಯಾದಿಗಳನ್ನು ಬಳಸಬಹುದು. ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ನೀವು ಕ್ರೆಡಿಟ್ ಕಾರ್ಡ್‍ನ ಬಾಕಿ ಮೊತ್ತವನ್ನು ಪಾವತಿಸಬಹುದು ಹಾಗೂ ಯಶಸ್ವಿ ಪಾವತಿಯ ನೋಟಿಫಿಕೇಶನ್‍ಗಳನ್ನು ಕೂಡಲೆ ಪಡೆಯಬಹುದು.
ನೀವು ಆನ್‌ಲೈನ್ ವಿಧಾನಗಳನ್ನು ಬಳಸಲು ಬಯಸದಿದ್ದರೆ, ಚೆಕ್ ಮೂಲಕ ಕೂಡ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯನ್ನು ಮಾಡಬಹುದು. ನಿಮ್ಮ ಬಜಾಜ್ ಫಿನ್‌ಸರ್ವ್ RBL ಬ್ಯಾಂಕ್ ಸೂಪರ್‌ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಕೆಲವು ಅನುಕೂಲಕರ ವಿಧಾನಗಳನ್ನು ನೋಡೋಣ.
 

Methods to Pay Bajaj Finserv Credit Card Bill

 • RBL MyCard ಆ್ಯಪ್‍ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು RBL ಮೈಕಾರ್ಡ್ ಮೊಬೈಲ್ ಅಪ್ಲಿಕೇಶನ್ ಬಳಸಿ ಸುಲಭವಾಗಿ ಮಾಡಿ. ನಿಮ್ಮ ಅಕೌಂಟ್‍ನ್ನು ನೀವು ನಿರ್ವಹಿಸಿ, ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪರಿಶೀಲಿಸಿ. ಮತ್ತು ಮತ್ತೊಂದು ಬ್ಯಾಂಕ್ ಅಕೌಂಟನ್ನು ಬಳಸಿಕೊಂಡು ತಕ್ಷಣವೇ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಪಾವತಿಸಿ.

  ನೀವು ಇನ್ನೂ RBL ಮೈಕಾರ್ಡ್ ಮೊಬೈಲ್ ಅಪ್ಲಿಕೇಶನ್‍ಗೆ ನೋಂದಣಿಯಾಗಿಲ್ಲವೇ? ಈಗ ಡೌನ್ಲೋಡ್ ಮಾಡಿ, ಇದು ಸರಳ, ಸುಲಭ ಮತ್ತು ಅನುಕೂಲಕರವಾಗಿದೆ. 5607011 ಗೆ ಮೈಕಾರ್ಡ್ ಎಂದು SMS ಮಾಡಿ ಅಥವಾ Google Play ಮತ್ತು App Store ನಿಂದ ಡೌನ್ಲೋಡ್ ಮಾಡಿ.

 • ಬಿಲ್ ಡೆಸ್ಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿಯನ್ನು ತಕ್ಷಣವೇ ನಿಮ್ಮ ಕಾರ್ಡ್ ಔಟ್ ಸ್ಟ್ಯಾಂಡಿಂಗ್ ಪಾವತಿಸಲು ಇತರ ಬ್ಯಾಂಕ್ ಅಕೌಂಟ್‌ಗಳನ್ನು ಬಳಸಿ ಮತ್ತು ತಕ್ಷಣವೇ ನಿಮ್ಮ ಪಾವತಿಯ ದೃಢೀಕರಣವನ್ನು ಸ್ವೀಕರಿಸಿ.

  ಕ್ವಿಕ್ ಬಿಲ್ ಬಳಸಿ, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಆನ್ಲೈನ್ನಲ್ಲಿ ಪಾವತಿಸಿ.

 • NEFT ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  ಯಾವುದೇ ಬ್ಯಾಂಕಿನೊಂದಿಗೆ ನಿಮ್ಮ ಅಕೌಂಟ್ ಬಳಸಿಕೊಂಡು ಆನ್ಲೈನ್‌ಲ್ಲಿ ನಿಮ್ಮ ಬಜಾಜ್ ಫಿನ್‌ಸರ್ವ್‌ RBL ಬ್ಯಾಂಕ್ ಕ್ರೆಡಿಟ್ ಕಾರ್ಡ್ ಪಾವತಿಯನ್ನು ಮಾಡಿ

  NEFT ಪಾವತಿಯನ್ನು ಮಾಡುವಾಗ ಕೆಳಗಿನ ಪಾವತಿದಾರ ವಿವರಗಳನ್ನು ಆಯ್ಕೆಮಾಡಿ:

  ಪಾವತಿದಾರರ ಹೆಸರು- ಇದು ನಿಮ್ಮ ಸೂಪರ್ ಕಾರ್ಡನಲ್ಲಿ ಕಂಡುಬರುವಂತೆ
  ಪಾವತಿದಾರರ ಅಕೌಂಟ್ ಸಂಖ್ಯೆ-ಸೂಪರ್ ಕಾರ್ಡ್ 16- ಡಿಜಿಟ್ ಸಂಖ್ಯೆಗಳು
  ಬ್ಯಾಂಕ್ ಹೆಸರು - RBL ಬ್ಯಾಂಕ್
  IFSC ಕೋಡ್ - RATN0CRCARD
  ಬ್ರಾಂಚ್ ಲೋಕೇಷನ್ - NOC ಗೋರೆಗಾಂವ್, ಮುಂಬೈ

 • NACH ಸೌಲಭ್ಯದ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  ನಿಮ್ಮ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್ ಕಾರ್ಡ್ ನ NACH ಸೌಲಭ್ಯಕ್ಕೆ ನೋಂದಣಿ ಮಾಡಿ ಮತ್ತು ಪ್ರತಿ ತಿಂಗಳು ಕ್ರೆಡಿಟ್ ಕಾರ್ಡ್ ಪಾವತಿ ಮಾಡುವ ತೊಂದರೆಯನ್ನು ದೂರಮಾಡಿ. ನಿಮ್ಮ ಸೂಪರ್ ಕಾರ್ಡ್ ಬಳಕೆಯ NACH ಸೌಲಭ್ಯಕ್ಕೆ ಯಾವುದೇ ಬ್ಯಾಂಕಿನಿಂದ ನಿಮ್ಮ ಈಗಿನ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ. ಫಾರಂನಲ್ಲಿ ನೀಡಿದ ವಿಳಾಸದ ಮೂಲಕ ಫಾರಂ ಅನ್ನು ನಮಗೆ ಸಲ್ಲಿಸುವ ಮೂಲಕ ನೋಂದಾಯಿಸಿಕೊಳ್ಳಿ. ಫಾರಂ ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

 • ನೆಟ್ ಬ್ಯಾಂಕಿಂಗ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  ನಿಮ್ಮ ಸೂಪರ್ ಕಾರ್ಡ್‍ಗೆ ಪಾವತಿಸಲು ನಿಮ್ಮ ಅಸ್ತಿತ್ವದಲ್ಲಿರುವ RBL ಬ್ಯಾಂಕ್ ಅಕೌಂಟ್‌ಗೆ ನೀವು ಆನ್ಲೈನ್ ನೆಟ್ ಬ್ಯಾಂಕಿಂಗ್ ಆಯ್ಕೆಯನ್ನು ಬಳಸಬಹುದು.

  ಒಂದು RBL ಕ್ರೆಡಿಟ್ ಕಾರ್ಡ್ ಲಾಗಿನ್ ಮಾಡಲು ಮತ್ತು ಪಾವತಿ ಮಾಡಲು, ಇಲ್ಲಿ ಕ್ಲಿಕ್ ಮಾಡಿ

 • ಚೆಕ್ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ

  Please make the cheque in favor of Bajaj Finserv RBL Bank SuperCard <16 Digit Card No.>

ಕ್ರೆಡಿಟ್ ಕಾರ್ಡ್ ಪಾವತಿ FAQ ಗಳು

ನೀವು ಬಾಕಿ ಉಳಿಕೆಯ ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸಿದರೆ ಏನಾಗುವುದು?

ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಕನಿಷ್ಠ ಬಾಕಿ ಮೊತ್ತವನ್ನು ಪಾವತಿಸುವುದರಿಂದ ನೀವು ಕಾರ್ಡಿನ ಮೇಲಿನ ದಂಡ ಶುಲ್ಕವನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದರೂ, ನಿಮ್ಮನ್ನು ದೊಡ್ಡ ಮೊತ್ತದ ಪಾವತಿಯಲ್ಲಿರುವಂತೆ ಮಾಡಿ, ಮುಂದಿನ ತಿಂಗಳ ಬಿಲ್‌‌ನಲ್ಲಿ ಬಾಕಿ ಉಳಿದ ಮೊತ್ತದ ಸೇರ್ಪಡೆಯಾಗುತ್ತದೆ.

ಇದು ಬಾಕಿ ಮೊತ್ತದ ಮೇಲೆ ಕೂಡ ಬಡ್ಡಿಗಳನ್ನು ಆಕರ್ಷಿಸುತ್ತದೆ ಮತ್ತು ನಿಮ್ಮ CIBIL ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.

ನನ್ನ ಕ್ರೆಡಿಟ್ ಕಾರ್ಡ್‍ನ ಬಾಕಿ ಉಳಿಕೆಯ ಪೂರ್ತಿ ಮೊತ್ತವನ್ನು ಪಾವತಿಸಬೇಕೇ?

ಗಮನಾರ್ಹ ಪ್ರಯೋಜನಗಳನ್ನು ಆನಂದಿಸಲು ಪ್ರತಿ ತಿಂಗಳು ಒಟ್ಟು ಮೊತ್ತ ಬಾಕಿಯನ್ನು ಪಾವತಿಸಲು ಎಂದಿಗೂ ಶಿಫಾರಸ್ಸು ಮಾಡಲಾಗುವುದು.

 • ಬಾಕಿ ಉಳಿದ ಹಣದ ಮೇಲೆ ದೊಡ್ಡ ಬಡ್ಡಿಗಳನ್ನು ಸಂದಾಯ ಮಾಡುವುದರಿಂದ ನಿಮ್ಮನ್ನು ರಕ್ಷಿಸುತ್ತದೆ.
 • ನಿಮ್ಮ CIBIL ಸ್ಕೋರ್ ಅನ್ನು ಅಧಿಕಗೊಳಿಸಿ ಮತ್ತು ಕ್ರೆಡಿಟ್ ರಿಪೋರ್ಟ್ ಅನ್ನು ಬಲಪಡಿಸಿ.
 • ನಿಮ್ಮ ಈಗಿನ ಸಾಲಗಳನ್ನು ಪೂರ್ಣಗೊಳಿಸುತ್ತದೆ ಮತ್ತು ಹೊಸ ಖರ್ಚುಗಳಿಗೆ ಕ್ರೆಡಿಟ್ ಲಿಮಿಟ್ ಅನ್ನು ತೆರೆಯುತ್ತದೆ.

ನನ್ನ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ನಾನು ಹೇಗೆ ಪಾವತಿಸಬಹುದು?

ಬಜಾಜ್ ಫಿನ್‌ಸರ್ವ್ ವಿವಿಧ ಪಾವತಿ ವಿಧಾನದ ಮೂಲಕ ಸಮಯಕ್ಕೆ ಸರಿಯಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌‌ಗಳನ್ನು ಪಾವತಿಸಲು ಅನುಕೂಲತೆ ಕಲ್ಪಿಸುತ್ತದೆ. ಇವುಗಳಿಂದ ಆಯ್ಕೆ ಮಾಡಿ - ನೆಟ್ ಬ್ಯಾಂಕಿಂಗ್ NEFT, ಚೆಕ್ ಪಾವತಿ, NACH ಸೌಲಭ್ಯ, ಬಿಲ್ ಡೆಸ್ಕ್ ಅಥವಾ RBL ಮೈಕಾರ್ಡ್ ಆ್ಯಪ್‌.

ನನ್ನ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ನಾನು ಯಾವಾಗ ಪಾವತಿಸಬೇಕು?

ಕ್ರೆಡಿಟ್ ಕಾರ್ಡ್ ಬಿಲ್ ಜನರೇಟ್ ಆದ ಮೇಲೆ, ಪ್ರತಿ ತಿಂಗಳ ಕೊನೆಯ ಪಾವತಿ ದಿನಾಂಕದ ಒಳಗೆ ಯಾವುದೇ ಸಮಯದಲ್ಲಿ ನೀವು ಪಾವತಿ ಮಾಡಬಹುದು. ಆ ರೀತಿ ಮಾಡಲು ವಿಫಲರಾದಲ್ಲಿ ಅನಗತ್ಯವಾಗಿ ಹೆಚ್ಚುವರಿ ಬಡ್ಡಿಯನ್ನು ಆಹ್ವಾನಿಸಿದಂತಾಗುತ್ತದೆ.

ಬಡ್ಡಿಯನ್ನು ತಪ್ಪಿಸಲು ನನ್ನ ಕ್ರೆಡಿಟ್ ಕಾರ್ಡ್‌ ಖಾತೆಗೆ ನಾನು ಎಷ್ಟು ಪಾವತಿಸಬೇಕು?

ಕ್ರೆಡಿಟ್ ಕಾರ್ಡ್ ಬಾಕಿ ಉಳಿಕೆ ಮೇಲಿನ ಬಡ್ಡಿಗಳನ್ನು ತಪ್ಪಿಸಲು ಕೊನೆಯ ದಿನಾಂಕದ ಮೊದಲು ಬಾಕಿ ಉಳಿಕೆಯ ಒಟ್ಟು ಮೊತ್ತವನ್ನು ಪಾವತಿಸುವುದು ಉತ್ತಮ ಮಾರ್ಗ.

ತಡವಾಗಿ ಪಾವತಿಸಿದಾಗ, ನಿಮ್ಮ ಕ್ರೆಡಿಟ್ ಸ್ಕೋರ್, ಎಷ್ಟು ಪಾಯಿಂಟ್‍ಗಳಷ್ಟು ಕಡಿಮೆಯಾಗುತ್ತದೆ?

ತಡವಾದ ಪಾವತಿ ಕಾರಣದಿಂದ ಕ್ರೆಡಿಟ್ ಸ್ಕೋರ್‌‌ ನಿಲ್ಲಲು ಅನೇಕ ಕಾರಣಗಳನ್ನು ಅವಲಂಬಿಸಿದ್ದು, ತಡವಾಗಿ ಪಾವತಿ ಮಾಡಿದ ದಿನಗಳ ಸಂಖ್ಯೆಯನ್ನು ಕೂಡ ಒಳಗೊಳ್ಳುತ್ತದೆ.

 • ಒಂದು ದಿನದ ವಿಳಂಬ ಸಾಮಾನ್ಯವಾಗಿ ಕ್ರೆಡಿಟ್ ರೆಕಾರ್ಡಿನಲ್ಲಿ ದಾಖಲಾಗುವುದಿಲ್ಲ.
 • 30 ರಿಂದ 60 ದಿನಗಳ ವಿಳಂಬ ಪಾವತಿ ಮಾಡುವವರೆಗೆ ಒಮ್ಮೊಮ್ಮೆ ರೆಕಾರ್ಡ್ ಆಗುತ್ತದೆ.
 • 30 ಮತ್ತು 60 ದಿನಗಳಲ್ಲಿ ಆಗಾಗ್ಗೆ ಮಾಡುವ ಕಂತು ತಪ್ಪಿಸುವಿಕೆ ನಿಮ್ಮ CIBIL ಸ್ಕೋರ್‌‌ನ ಡ್ಯಾಮೇಜಿಗೆ ಕಾರಣವಾಗುತ್ತದೆ.
 • ನೀವು 90 ರಿಂದ ಅಧಿಕ ದಿನಗಳ ಕಾಲ ವಿಳಂಬವಾದರೆ, ಇದು 7 ವರ್ಷಗಳವರೆಗೆ ನಿಮ್ಮ ಕ್ರೆಡಿಟ್ ರೆಕಾರ್ಡ್‌‌ಗಳಿಗೆ ಅಡ್ಡಿ ಮಾಡುತ್ತದೆ.
ಅನುಕೂಲಕರ ವಿಧಾನದಲ್ಲಿ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿ ಮಾಡಿ ಮತ್ತು ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ಕಾರ್ಡ್ ಪ್ರಯೋಜನಗಳನ್ನು ಆನಂದಿಸಿ.

ಒಂದು ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮುಂಚಿತವಾಗಿ ಪಾವತಿ ಮಾಡಿದರೆ ಏನಾಗುತ್ತದೆ?

ಕ್ರೆಡಿಟ್ ಕಾರ್ಡ್ ಬಿಲ್‌‌ನ ಮುಂಚಿತ ಪಾವತಿ ಅನೇಕ ಪ್ರಯೋಜನಗಳಾದ ಬಡ್ಡಿ ಶುಲ್ಕಗಳ ತಪ್ಪಿಸುವಿಕೆ, ಮುಂದಿನ ಟ್ರಾನ್ಸಾಕ್ಷನ್‌‌ಗಳಿಗೆ ನಿಮ್ಮ ಕ್ರೆಡಿಟ್ ಲೈನ್‌‌ಗಳನ್ನು ಮುಕ್ತಗೊಳಿಸುವುದು ಮತ್ತು ಕ್ರೆಡಿಟ್ ಸ್ಕೋರ್‌‌ಗಳನ್ನು ಸುಧಾರಿಸಲು ಸಹಾಯವನ್ನು ಮಾಡುತ್ತದೆ. ಬಾಕಿ ಉಳಿಕೆಗಳ ಮುಂಚಿತ ಪಾವತಿ ಕಾರ್ಡ್‌‌ದಾರರಿಗೆ ಗ್ರೇಸ್ ಅವಧಿ ಜತೆಗೆ ಕ್ರೆಡಿಟ್ ಮಿತಿಯ ಗರಿಷ್ಠ ಬಳಕೆಯ ಅನುವು ಮಾಡಿಕೊಡುತ್ತದೆ.

ಪಾವತಿ ಮಾಡಿದ ನಂತರ ನಾನು ಧೃಢೀಕರಣವನ್ನು ಹೇಗೆ ಪಡೆದುಕೊಳ್ಳುತ್ತೇನೆ?

ನಿಮ್ಮ ಬಜಾಜ್ ಫಿನ್‌‌ಸರ್ವ್ RBL ಬ್ಯಾಂಕ್ ಸೂಪರ್‌‌ಕಾರ್ಡಿನ ಪಾವತಿ ಮಾಡಿದ ನಂತರ, ನಿಮ್ಮ ನೋಂದಾಯಿತ ಮೇಲ್ ಐಡಿ ಮತ್ತು ಫೋನ್ ನಂಬರಿಗೆ ನೀವು ಪಾವತಿ ಧೃಢೀಕರಣವನ್ನು ಸ್ವೀಕರಿಸುತ್ತೀರಿ. ನೀವು ಎಕ್ಸ್‌‌ಪೀರಿಯಾದಲ್ಲಿ ಆ್ಯಪ್‌ ನೋಟಿಫಿಕೇಶನ್‌‌ಗಳನ್ನು ಕೂಡ ಸ್ವೀಕರಿಸುತ್ತೀರಿ.
ಒಂದು ವೇಳೆ ನೀವು ಆಫ್ಲೈನ್ ವಿಧಾನಗಳಾದ ಚೆಕ್‌‌ಗಳಲ್ಲಿ ಪಾವತಿಗಳನ್ನು ಮಾಡಿದರೆ, ಚೆಕ್ ಕ್ಲಿಯರೆನ್ಸ್ ಬಗ್ಗೆ ನೀವು SMS ಅನ್ನು ಸ್ವೀಕರಿಸಲಿದ್ದೀರಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರಲ್ಲಿ SMS ಸ್ವೀಕರಿಸುವ ಮೂಲಕ ಮತ್ತು ಆ್ಯಪ್‌ ನೋಟಿಫಿಕೇಶನ್ ಮುಖಾಂತರ ತಿಳಿಯುತ್ತೀರಿ.

ಮುಂಚಿತ ಅನುಮೋದಿತ ಆಫರ್