image

ಬಜಾಜ್ ಫಿನ್‌ಸರ್ವ್‌ ವಾಲೆಟ್

ಫೀಚರ್‌ಗಳು ಮತ್ತು ಪ್ರಯೋಜನಗಳು

ಸರಣಿ ಪ್ರಯೋಜನಗಳ ಆಫರ್‌‌ಗಳೊಂದಿಗೆ, ಬಜಾಜ್ ಫಿನ್‌ಸರ್ವ್‌ ವಾಲೆಟ್ ಆ್ಯಪ್‌ ಪಾವತಿಸಲು ಇರುವ ಜಾಣ ಮಾರ್ಗವೊಂದೇ ಅಲ್ಲ, ಡಿಜಿಟಲ್ EMI ನೆಟ್ವರ್ಕ್ ಕಾರ್ಡ್ ಕೂಡ ಹೌದು. ತಕ್ಷಣದ ಬಿಲ್ ಪಾವತಿಗಳು, ಟಿಕೆಟ್ ಬುಕಿಂಗ್, ಡೀಲ್‌‌ಗಳು ಮತ್ತು ಆಫರ್‌ಗಳಂತಹ ವಾಲೆಟ್ಟಿನ ಎಲ್ಲಾ ಕಾರ್ಯಗಳನ್ನು ನೀವು ಪಡೆಯುತ್ತೀರಿ, ಇದರೊಂದಿಗೆ ನಿಮ್ಮ EMI ನೆಟ್ವರ್ಕ್ ಕಾರ್ಡಿಗೆ ಡಿಜಿಟಲ್ ರೀತಿಯಲ್ಲಿ ಅಕ್ಸೆಸ್ ಪಡೆಯುವ ಅರ್ಹತೆ, ನಿಮ್ಮ ಎಲ್ಲಾ ಖರೀದಿಗಳಿಗೆ ಬಡ್ಡಿ-ಮುಕ್ತ EMI ಗಳೊಂದಿಗೆ ಪಾವತಿ ಮಾಡುವ ಅವಕಾಶ ಪಡೆಯಿರಿ.

 • ಡಿಜಿಟಲ್ EMI ನೆಟ್ವರ್ಕ್ ಕಾರ್ಡ್

  ನಿಮ್ಮ ಲೋನಿನ ಸಂಬಂಧಿತ ವಿವರಗಳನ್ನು ಆನ್ಲೈನಿನಲ್ಲಿ ಟ್ರ್ಯಾಕ್ ಮಾಡುವುದರ ಮೂಲಕ ಮತ್ತು ನಿಮ್ಮ ನೆಚ್ಚಿನ ಉತ್ಪನ್ನಗಳಾದ ac, TV, ಫ್ರಿಜ್ ಸ್ಮಾರ್ಟ್ ಫೋನ್ ವಾಷಿಂಗ್ ಮೆಷಿನ್ , ಲ್ಯಾಪ್ ಟಾಪ್, ಏರ್ ಕೂಲರ್ ಮತ್ತು ಹೆಚ್ಚಿನವುಗಳನ್ನು ಬಡ್ಡಿ ಮುಕ್ತ EMI ಗಳೊಂದಿಗೆ ಸುರಕ್ಷಿತವಾಗಿ ವಹಿವಾಟು ನಡೆಸಲು EMI ನೆಟ್ವರ್ಕ್ ಕಾರ್ಡಿನ ಡಿಜಿಟಲ್ ಅಕ್ಸೆಸ್ ಪಡೆಯಿರಿ.

 • ವನ್-ಸ್ಟಾಪ್ ಪಾವತಿ ಉದ್ದೇಶ

  Mobikwik ಮರ್ಚೆಂಟ್ ನೆಟ್ವರ್ಕ್‌ನ 2 ಮಿಲಿಯನ್ ಸ್ಟೋರ್‌ಗಳಲ್ಲಿ ವಾಲೆಟ್ ಅಪ್ಲಿಕೇಶನ್ ಅನ್ನು ಅಂಗೀಕರಿಸಲಾಗುತ್ತದೆ. ಆದ್ದರಿಂದ, ನೀವು ನಿಮ್ಮ ಬಿಲ್‌ಗಳನ್ನು ಪಾವತಿಸಬಹುದು, ಟಿಕೆಟ್‌ಗಳನ್ನು ಬುಕ್ ಮಾಡಬಹುದು ಮತ್ತು ಒಂದು ಬಟನ್ ಟಚ್ ಮೂಲಕ ಸುಲಭವಾಗಿ ಮತ್ತು ತಡೆರಹಿತವಾಗಿ ಪಾವತಿಗಳನ್ನು ಸಂಗ್ರಹಿಸಬಹುದು.

 • ಡೆಬಿಟ್ ಮತ್ತು ಕ್ರೆಡಿಟ್ ಸೌಲಭ್ಯ

  ನಿಮ್ಮ ಅನುಕೂಲಕ್ಕೆ ತಕ್ಕಂತೆ, ಬಜಾಜ್ ಫಿನ್‌ಸರ್ವ್‌ ವಾಲೆಟ್ ಅನ್ನು ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಸೌಲಭ್ಯದ ವಾಲೆಟ್ ಆಗಿ ಬಳಸಬಹುದು.

 • ಸಿಂಗಲ್ ವಿಂಡೋ ನೋಟ

  ನಿಮ್ಮ ಕಾರ್ಡ್ ವಿವರಗಳು ಮತ್ತು ಹಿಂದಿನ ಟ್ರಾನ್ಸಾಕ್ಷನ್‌ಗಳ ಪೂರ್ಣ ನೋಟವನ್ನು ಒಂದೇ ವಿಂಡೋದಲ್ಲಿ ನೋಡಿ.

 • ವಿಶೇಷವಾದ ಆಫರ್‌ಗಳು

  ಬಜಾಜ್ ಫಿನ್‌ಸರ್ವ್‌ ಗ್ರಾಹಕರು ವಿಶೇಷ ಒಪ್ಪಂದಗಳು ಮತ್ತು ಕೊಡುಗೆಗಳನ್ನು ಹತ್ತಿರವೇ ಇರುವ ಪಾಲುದಾರ ಅಂಗಡಿಗಳ ವಿವರಗಳೊಂದಿಗೆ ಪಡೆಯಬಹುದು.

 • ಹೆಚ್ಚಿದ ಭದ್ರತೆ

  ನಿಮ್ಮ EMI ನೆಟ್ವರ್ಕ್ ಕಾರ್ಡ್ ಕಳ್ಳತನವಾದರೆ, ನಿಮ್ಮ ಕಾರ್ಡ್ ಅನ್ನು ಬ್ಲಾಕ್ ಅಥವಾ ಅನ್‌ಬ್ಲಾಕ್ ಮಾಡುವ ಸುಲಭ ದಾರಿಗಳೊಂದಿಗೆ ವಂಚನೆಯ ವಿರುದ್ಧ ಹೆಚ್ಚುವರಿ ಭದ್ರತೆಯನ್ನು ಪಡೆಯಿರಿ.

 • ಕಸ್ಟಮೈಜ್ ಮಾಡಿದ ಸೇವೆಗಳು

  ವಿತರಕರು ಮತ್ತು ಅಂಗಡಿಗಳಿಗೆ ಅಕ್ಸೆಸ್ ಪಡೆಯಿರಿ ಮತ್ತು ನಿಮ್ಮ ಸ್ಥಳ ಹಾಗೂ ಆದ್ಯತೆಗಳಿಗೆ ಅನುಗುಣವಾಗಿರುವ ಉತ್ಪನ್ನಗಳು ಹಾಗೂ ಬ್ರಾಂಡ್‌‌ಗಳಿಗೆ ದೃಢವಾದ ಸರ್ಚ್ ಎಂಜಿನ್‌ ಪಡೆಯಿರಿ.

ವಾಲೆಟ್‌‌ಗಾಗಿ ಫೀಸ್‌ಗಳು ಮತ್ತು ಶುಲ್ಕಗಳು (ಇನ್ಸ್ಟಾ ಕ್ರೆಡಿಟ್)

ಫೋರ್‌ಕ್ಲೋಸರ್ ಶುಲ್ಕಗಳು (1ನೇ EMI ಪಾವತಿಯ ನಂತರ ಮಾತ್ರ) ದಿನಾಂಕದ ಪ್ರಕಾರ ಬಾಕಿ ಉಳಿದ ಲೋನ್ ಮೊತ್ತದ ಮೇಲೆ 2% ಜೊತೆಗೆ ಅನ್ವಯವಾಗುವ ತೆರಿಗೆಗಳು.
ಡಾಕ್ಯುಮೆಂಟ್/ಸ್ಟೇಟ್ಮೆಂಟ್ ಶುಲ್ಕಗಳು ಅಕೌಂಟ್ ಸ್ಟೇಟ್ಮೆಂಟ್/ಮರುಪಾವತಿ ಶೆಡ್ಯೂಲ್/ಫೋರ್‌ಕ್ಲೋಸರ್ ಲೆಟರ್/ನೋ ಡ್ಯೂಸ್ ಸರ್ಟಿಫಿಕೇಟ್/ಬಡ್ಡಿ ಪ್ರಮಾಣಪತ್ರ/ಡಾಕ್ಯುಮೆಂಟ್‌ಗಳ ಪಟ್ಟಿ. ಗ್ರಾಹಕರ ಪೋರ್ಟಲ್ - ಎಕ್ಸ್‌ಪೀರಿಯಗೆ ಯಾವ ವೆಚ್ಚಗಳಿಲ್ಲದೇ ಲಾಗಿನ್ ಮಾಡಿ ನಿಮ್ಮ ಇ-ಸ್ಟೇಟ್ಮೆಂಟ್‌ಗಳು/ಪತ್ರಗಳು/ಪ್ರಮಾಣಪತ್ರಗಳನ್ನು ಡೌನ್ಲೋಡ್ ಮಾಡಿ. ನಿಮ್ಮ ಸ್ಟೇಟ್ಮೆಂಟ್‌‌ಗಳು/ಪತ್ರಗಳು/ಪ್ರಮಾಣಪತ್ರಗಳು/ಡಾಕ್ಯುಮೆಂಟ್‌ಗಳ ಪಟ್ಟಿಯ ಹಸ್ತ ಪ್ರತಿಯನ್ನು ನಮ್ಮ ಯಾವುದೇ ಶಾಖೆಗಳಿಂದ ಪ್ರತಿ ಸ್ಟೇಟ್ಮೆಂಟ್/ಪತ್ರ/ಪ್ರಮಾಣಪತ್ರಕ್ಕೆ ರೂ. 50 (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು) ಶುಲ್ಕದಲ್ಲಿ ಪಡೆಯಬಹುದು.
ಮರುಪಾವತಿ ಇನ್ಸ್ಟ್ರುಮೆಂಟ್‌‌ಗಳ ಶುಲ್ಕಗಳು ಮರುಪಾವತಿ ಸಾಧನ(ಗಳು) ಅಪ್ರಾಮಾಣಿಕವಾಗಿರುವುದರಿಂದ ಡಿಫಾಲ್ಟ್ ಆದ ಸಂದರ್ಭದಲ್ಲಿ, ಪ್ರತಿ ತಿಂಗಳಿಗೆ/ಪ್ರತಿ ಡೀಫಾಲ್ಟಿಗೆ ರೂ. 450 (ತೆರಿಗೆಗಳು ಸೇರಿದಂತೆ) ಶುಲ್ಕವನ್ನು ನಿಮ್ಮ ಅಕೌಂಟಿನಿಂದ ಡೆಬಿಟ್ ಮಾಡಲಾಗುತ್ತದೆ.
ಬಡ್ಡಿದರ ಇನ್ಸ್ಟಾ ಕ್ರೆಡಿಟ್ ರೂ. 5000 - ವರ್ಷಕ್ಕೆ 28%
ಇನ್ಸ್ಟಾ ಕ್ರೆಡಿಟ್ ರೂ. 7000 - ವರ್ಷಕ್ಕೆ 19%
ಇನ್ಸ್ಟಾ ಕ್ರೆಡಿಟ್ ರೂ.10000- ವರ್ಷಕ್ಕೆ 13%
ದಂಡದ ಬಡ್ಡಿ ಮಾಸಿಕ ಕಂತು/EMI ಪಾವತಿಯಲ್ಲಿ ಯಾವುದೇ ವಿಳಂಬವು, ಡೀಫಾಲ್ಟ್ ದಿನಾಂಕದಿಂದ ಮಾಸಿಕ ಕಂತು/EMI ಸ್ವೀಕರಿಸುವವರೆಗೆ ಮಾಸಿಕ ಕಂತು/EMI ಬಾಕಿ ಮೇಲೆ ಪ್ರತಿ ತಿಂಗಳಿಗೆ 4% ದರದಲ್ಲಿ ದಂಡದ ಬಡ್ಡಿಯನ್ನು ಆಕರ್ಷಿಸುತ್ತದೆ.  ರೀಸೆಂಟ್ಲಿ ಅಪ್ಡೇಟ್‌ ಆಗಿದೆ

“ಗಮನಿಸಿ: ಕೇರಳ ರಾಜ್ಯದ ಎಲ್ಲಾ ಶುಲ್ಕಗಳ ಮೇಲೆ ಹೆಚ್ಚುವರಿ ಸೆಸ್ ಅನ್ವಯವಾಗುತ್ತದೆ.“

ಅಪ್ಲೈ ಮಾಡುವುದು ಹೇಗೆ

ಬಜಾಜ್ ಫಿನ್‌ಸರ್ವ್‌ ವಾಲೆಟ್ ಆ್ಯಪ್‌ನಲ್ಲಿ ನಿಮ್ಮ ಡಿಜಿಟಲ್ EMI ನೆಟ್ವರ್ಕ್ ಕಾರ್ಡನ್ನು ಕ್ಸೆಸ್ ಮಾಡಲು, ನೀವು ಈ ಸರಳ ಹಂತಗಳನ್ನು ಪಾಲಿಸಬೇಕು:

ಹಂತ 1

Google PlayStore ಅಥವಾ Apple ಆ್ಯಪ್ ಸ್ಟೋರ್‌ನಿಂದ ಬಜಾಜ್ ಫಿನ್‌ಸರ್ವ್‌ ವಾಲೆಟ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ.

ಹಂತ 2

ಆ್ಯಪ್‌ ಅನ್ನು ಇನ್ಸ್ಟಾಲ್ ಮಾಡಿ ಮತ್ತು ಬಜಾಜ್ ಫಿನ್‌ಸರ್ವ್‌ನಲ್ಲಿ ನೋಂದಾಯಿಸಲಾದ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ.

ಹಂತ 3

ನಿಮ್ಮ ಮೊಬೈಲ್ ನಂಬರಿಗೆ ಕಳುಹಿಸಲಾದ ಒನ್-ಟೈಮ್ ಪಾಸ್ವರ್ಡ್ (OTP) ನಮೂದಿಸಿ.

ಹಂತ 4

OTP ಪರಿಶೀಲನೆಯ ನಂತರ 'ಇನ್ನಷ್ಟು ತಿಳಿಯಿರಿ' ಬಟನ್ ಕ್ಲಿಕ್ ಮಾಡಿ

ಹಂತ 5

ಬಜಾಜ್ ಫಿನ್‌ಸರ್ವ್‌‌ನೊಂದಿಗೆ ನೋಂದಾಯಿಸಿದಂತೆ ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ.

 

ಒಮ್ಮೆ ನೀವು ಈ ಹಂತಗಳನ್ನು ಪೂರ್ಣಗೊಳಿಸಿದರೆ, ನಿಮ್ಮ ಡಿಜಿಟಲ್ EMI ನೆಟ್ವರ್ಕ್ ಕಾರ್ಡನ್ನು ಅಕ್ಸೆಸ್ ಮಾಡಲು ಸಾಧ್ಯವಾಗುತ್ತದೆ ಮತ್ತು ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ಟ್ರಾನ್ಸಾಕ್ಷನ್ ಮಾಡಲು ಸಾಧ್ಯವಾಗುತ್ತದೆ.